Site icon Vistara News

Mens Fashion | ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಯುವಕರಿಗಾಗಿ ಎಥ್ನಿಕ್‌ ವೇಸ್‌ಕೋಟ್ಸ್‌

Mens Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಯುವಕರಿಗೆ ಸ್ಮಾರ್ಟ್ ಲುಕ್‌ ನೀಡುವ ಪ್ರಿಂಟೆಡ್‌ ಎಥ್ನಿಕ್‌ ವೇಸ್‌ಕೋಟ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.

ನೋಡಲು ಆಕರ್ಷಕವಾಗಿ ಕಾಣುವ ಈ ಎಥ್ನಿಕ್‌ ವೇಸ್‌ಕೋಟ್‌ಗಳು ಪುರುಷರ ವಯೋಮಾನಕ್ಕೆ ಸೂಟ್‌ ಆಗುವಂತೆ ನಾನಾ ವಿನ್ಯಾಸದಲ್ಲಿ ಹಾಗೂ ಡಿಸೈನ್‌ನಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈಗಾಗಲೇ ಸಾಕಷ್ಟು ಫೋಟೋಶೂಟ್‌ಗಳಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮವನ್ನು ಈ ಎಥ್ನಿಕ್‌ ವೇಸ್‌ಕೋಟ್ಸ್‌ ಧರಿಸಿ ಶೂಟ್‌ ಮಾಡಲಾಗುತ್ತಿದೆ. ಅಂದಹಾಗೆ, ಎಥ್ನಿಕ್‌ ಕೋಟ್ಸ್‌ ಈ ಸೀಸನ್‌ನಲ್ಲಿಕೊಂಚ ವಿಭಿನ್ನ ಡಿಸೈನ್‌ ಹಾಗೂ ವಿನ್ಯಾಸದಲ್ಲಿ ರೂಪಾಂತರಗೊಂಡಿರುವುದು ಯುವಕರನ್ನು ಆಕರ್ಷಿಸಲು ಪ್ರಮುಖ ಕಾರಣ. ಇದು ಟೂ ಇನ್‌ ವನ್‌ ಡಿಸೈನ್‌ ಎನ್ನಬಹುದು. ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡಾಗ ಧರಿಸಬಹುದು ಮಾತ್ರವಲ್ಲ, ಹಬ್ಬ ಹಾಗೂ ಸಮಾರಂಭಗಳಲ್ಲಿಯೂ ಧರಿಸಬಹುದು. ಹಾಗಿದೆ ಇವುಗಳ ವಿನ್ಯಾಸ ಎನ್ನುತ್ತಾರೆ ನಟ, ಮಾಡೆಲ್‌ ವಿನಯ್‌ ಸಿಂಧ್ಯಾ.

ಅವರ ಪ್ರಕಾರ, ಇಂದು ಆಯಾ ಸಂದರ್ಭ ಹಾಗೂ ಸಮಾರಂಭಗಳಿಗೆ ಧರಿಸುವಂತಹ ಕಾನ್ಸೆಪ್ಟ್‌ ಹೆಚ್ಚಾಗಿದೆ. ಇನ್ನು ಪುರುಷರು ಕೂಡ ಇದಕ್ಕೆ ಸೂಟ್‌ ಆಗುವಂತೆ ತಮ್ಮ ಡ್ರೆಸ್ಸಿಂಗ್‌ ಹಾಗೂ ಸ್ಟೈಲಿಂಗ್‌ ಬದಲಿಸಿಕೊಳ್ಳುತ್ತಿದ್ದಾರೆ. ಸಭೆ-ಸಮಾರಂಭಗಳಿಗೆ ಡಿಸೆಂಟ್‌ ಹಾಗೂ ಎಲಿಗೆಂಟ್‌ ಲುಕ್‌ ನೀಡುವಂತಹ ಉಡುಪುಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಅವುಗಳಲ್ಲಿ ಎಥ್ನಿಕ್‌ ವೇಸ್‌ಕೋಟ್ಸ್‌ ಕೂಡ ಸೇರಿದೆ. ಈಗಾಗಲೇ ಸಾಕಷ್ಟು ಯುವಕರನ್ನು ಇವು ಸವಾರಿ ಮಾಡುತ್ತಿವೆ ಎನ್ನುತ್ತಾರೆ.

ಕ್ಯಾಶುವಲ್‌ ಉಡುಪಿಗೆ ಮ್ಯಾಚ್‌ ಬೇಡ

ಎಥ್ನಿಕ್‌ ಡಿಸೈನ್‌ನ ವೇಸ್‌ಕೋಟ್‌ಗಳನ್ನು ಕ್ಯಾಶುವಲ್‌ಗೆ ಮ್ಯಾಚ್‌ ಮಾಡಲು ಸಾಧ್ಯವಿಲ್ಲ. ನೋಡಲು ಚೆನ್ನಾಗಿ ಕಾಣುವುದಿಲ್ಲಎಂಬುದು ನೆನಪಿರಲಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಬಿಂದಾಸ್‌ ಆಗಿರುವ ಉಡುಪುಗಳ ಮೇಲೆ ಇವನ್ನು ಧರಿಸಿದಾಗ ನೋಡಲು ಸರಿಯಾಗಿ ಕಾಣುವುದಿಲ್ಲ. ಹಾಗಾಗಿ ಸಿಂಪಲ್‌ ಕುರ್ತಾ, ಜುಬ್ಬಾ ಇಂತವಕ್ಕೆ ಧರಿಸಬಹುದು ಎನ್ನುತ್ತಾರೆ.

ಸಭೆ-ಸಮಾರಂಭಗಳಿಗೆ ಬೆಸ್ಟ್‌ ಉಡುಪು

ಸಭೆ-ಸಮಾರಂಭಗಳಂತಹ ಗ್ರ್ಯಾಂಡ್‌ ಸಮಾರಂಭಗಳಲ್ಲಿಪಾಲ್ಗೊಳ್ಳುವಾಗ ಈ ಎಥ್ನಿಕ್‌ ಪ್ರಿಂಟೆಡ್‌ ವೇಸ್‌ಕೋಟ್‌ಗಳನ್ನು ಡಿಸೈನರ್‌ ಕುರ್ತಾಗಳ ಮೇಲೆ ಮ್ಯಾಚ್‌ ಮಾಡಿ ಧರಿಸಬಹುದು. ಆದರೆ ಕಲರ್ಸ್‌, ಶೇಡ್‌ ಹಾಗೂ ವಿನ್ಯಾಸ ಹೊಂದಬೇಕು. ಟ್ರಯಲ್‌ ನೋಡಿ ನಂತರ ಧರಿಸಿ ಎನ್ನುತ್ತಾರೆ ಸ್ಟೈಲಿಸ್ಟ್‌.

ಸ್ಟೈಲಿಶ್‌ ಎಥ್ನಿಕ್‌ ಕೋಟ್ಸ್‌ ಧರಿಸುವ ಯುವಕರೇ ಈ ವಿಷಯಗಳನ್ನು ಗಮನಿಸಿ.

ಇದನ್ನೂ ಓದಿ| Season Fashion: ಸಿಂಪಲ್‌ ಕುರ್ತಾಗಳಿಗೆ ಹೆಚ್ಚಿದ ಬೇಡಿಕೆ

Exit mobile version