Site icon Vistara News

Mens Wedding Fashion | ವೆಡ್ಡಿಂಗ್‌ ಫ್ಯಾಷನ್‌ನಲ್ಲಿ ಯುವಕರ ಮನಗೆದ್ದ ಬಂದ್ಗಲಾ ಸೂಟ್‌

Mens Wedding Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಂದ್ಗಲಾ ಸೂಟ್‌ ಹಾಗೂ ಡಿಸೈನರ್‌ವೇರ್‌ಗಳು ಈ ಬಾರಿಯ ವೆಡ್ಡಿಂಗ್‌ ಸೀಸನ್‌ನ ಫ್ಯಾಷನ್‌ನಲ್ಲಿ ಯುವಕರ ಮನ ಗೆದ್ದಿವೆ.

ನೋಡಲು ಗ್ರ್ಯಾಂಡ್‌ಲುಕ್‌ ನೀಡುವ ಈ ಡಿಸೈನರ್‌ವೇರ್‌ ಯುವಕರಿಗೆ ರಾಯಲ್‌ ಲುಕ್‌ ನೀಡುವುದರೊಂದಿಗೆ ಮದುವೆ ಮನೆಯಲ್ಲಿ ಒಳ್ಳೆಯ ಇಮೇಜ್‌ ಕ್ರಿಯೇಟ್‌ ಮಾಡುತ್ತವೆ. ಧರಿಸಿದ ಯುವಕರು ಆಕರ್ಷಕವಾಗಿ ಕಾಣುವಂತೆ ಬಿಂಬಿಸುತ್ತವೆ. ಹಾಗಾಗಿ ಇಂದು ಬಹಳಷ್ಟು ಯುವಕರು ಬಂದ್ಗಾಲ ಡಿಸೈನರ್‌ವೇರ್‌ನತ್ತ ಆಕರ್ಷಿತರಾಗುತ್ತಿದ್ದಾರೆ ಎನ್ನುತ್ತಾರೆ ಮಾಡೆಲ್‌, ನಟ ಹರೀಶ್‌ ಮಲ್ಲಯ್ಯ. ಅವರ ಪ್ರಕಾರ, ಮೊದಲೆಲ್ಲಾ ಬಂದ್ಗಾಲ ಕೇವಲ ರಾಯಲ್‌ ಫ್ಯಾಮಿಲಿಯ ಭಾಗವಾಗಿತ್ತು ಮದುಮಗ ಮಾತ್ರ ಈ ಔಟ್‌ಫಿಟ್‌ನಲ್ಲೆ ಕಾಣಿಸಿಕೊಳ್ಳುತ್ತಿದ್ದನು, ಆದರೆ, ಇದೀಗ ಈ ಡಿಸೈನರ್‌ವೇರ್‌ ಇತರೇ ಯುವಕರನ್ನು ಆಕರ್ಷಿಸಿದ್ದು, ಹೊಸ ಟ್ರೆಂಡ್‌ ಹುಟ್ಟು ಹಾಕಿದೆ ಎನ್ನುತ್ತಾರೆ.

ಬಾಲಿವುಡ್‌ ತಾರೆಯರು ಬಂದ್ಗಲಾ ಪ್ರಿಯರು

ಬಾಲಿವುಡ್‌ನ ಬಹುತೇಕ ನಟರು ಬಂದ್ಗಲಾ ಪ್ರಿಯರಾಗಿದ್ದಾರೆ. ಹಿರಿಯ ನಟ ಅನಿಲ್‌ ಕಪೂರ್‌ ಸೇರಿದಂತೆ ಟೈಗರ್‌ ಶ್ರಾಫ್‌ ಕೂಡ ಬಂದ್ಗಲಾ ಪ್ರಿಯರು. ಇನ್ನು ಬಾಲಿವುಡ್‌ನ ಬಹುತೇಕ ಸಿನಿಮಾಗಳಲ್ಲಿ ಬಂದ್ಗಾಲ ಡಿಸೈನರ್‌ವೇರ್‌ ಧರಿಸುವುದು ತೀರಾ ಕಾಮನ್‌. ಈ ಡಿಸೈನರ್‌ವೇರ್‌ಗಳಲ್ಲೆ ಇಡೀ ಮದುವೆಯ ಸನ್ನಿವೇಶಗಳು ನಡೆಯುತ್ತವೆ. ಅಷ್ಟೊಂದು ಪಾಪುಲರ್‌ ಈ ಡಿಸೈನರ್‌ವೇರ್‌ಗಿದೆ. ಅದರಲ್ಲೂ ಖ್ಯಾತ ಡಿಸೈನರ್‌ ಸಭ್ಯಸಾಚಿ ಈ ಬಂದ್ಗಾಲವನ್ನು ಮತ್ತಷ್ಟು ಪಾಪುಲರ್‌ಗೊಳಿಸಿದ್ದಾರೆ. ಯಾಕೆಂದರೆ, ನಮ್ಮ ರಾಷ್ಟ್ರ ಮಾತ್ರವಲ್ಲ, ವಿದೇಶಗಳಲ್ಲೂ ಈ ಡಿಸೈನರ್‌ವೇರ್‌ನ ಪಾಪ್ಯುಲಾರಿಟಿ ಹೆಚ್ಚಾಗಲು ಇವರೇ ಕಾರಣ ಎಂದರೂ ಅತಿಶಯೋಕ್ತಿಯಾಗದು.

ನಾನಾ ವಿನ್ಯಾಸಗಳಲ್ಲಿ ಬಂದ್ಗಲಾ

ಬಂದ್ಗಾಲ ಡಿಸೈನರ್‌ವೇರ್‌ ನಾನಾ ವಿನ್ಯಾಸಗಳಲ್ಲಿ ದೊರೆಯುತ್ತದೆ. ಉದಾಹರಣೆಗೆ., ಬಂದ್ಗಲಾ ವೇಸ್‌ಕೋಟ್‌, ಬಂದ್ಗಲಾ ಸೂಟ್‌ ಹಾಗೂ ಬಂದ್ಗಲಾ ಕೋಟ್‌. ಇವುಗಳಲ್ಲೆ ಮತ್ತಷ್ಟು ವಿನ್ಯಾಸಗಳು ಬಂದಿವೆ. ಇಂದು ಅತಿ ಹೆಚ್ಚು ಟ್ರೆಂಡಿಯಾಗಿರುವುದು ಬಂದ್ಗಲಾ ಸೂಟ್‌ಗಳು ಎನ್ನುತ್ತಾರೆ ಡಿಸೈನರ್‌ ಹರ್ಷ್. ಅವರ ಪ್ರಕಾರ, ವೆಡ್ಡಿಂಗ್‌ ಸೀಸನ್‌ಗಳು ಈ ಬಂದ್ಗಲಾ ಸೂಟ್‌ಗಳು ಟ್ರೆಂಡಿಯಾಗಲು ಕಾರಣ ಎನ್ನುತ್ತಾರೆ.

ಪರ್ಫೆಕ್ಟ್‌ ವೆಡ್ಡಿಂಗ್‌ ಔಟ್‌ಫಿಟ್‌

ಮನೆಯ ಯಾವುದೇ ಮದುವೆಯ ರಿಸೆಪ್ಷನ್‌ಗೆ ಬಂದ್ಗಲಾ ಯುವಕರಿಗೆ ಪರ್ಫೆಕ್ಟ್ ಔಟ್‌ಫಿಟ್‌. ಮದುವೆ ಸಮಾರಂಭಗಳಲ್ಲಿ ಬೆಳಗ್ಗೆ ಸಾಂಪ್ರಾದಾಯಿಕ ಉಡುಪಾದ ಪಂಚೆ ಶಲ್ಯದಲ್ಲಿ ಕಾಣಿಸಿಕೊಂಡರೇ, ನಂತರ ಅಥವಾ ಮೊದಲೇ ನಡೆಯುವ ರಿಸೆಪ್ಷನ್‌ನಲ್ಲಿ ರಾಯಲ್‌ ಇಮೇಜ್‌ ನೀಡುವ ಬಂದ್ಗಲಾ ಕಾಣಿಸಿಕೊಳ್ಳಬಹುದು. ಇದು ಯುವಕರಿಗೆ ಹೇಳಿ ಮಾಡಿಸಿದ ಔಟ್‌ಫಿಟ್‌ ಎನ್ನುತ್ತಾರೆ ಮಾಡೆಲ್‌ ಹರೀಶ್‌ ಮಲ್ಲಯ್ಯ.

ಬಂದ್ಗಲಾ ಡಿಸೈನರ್‌ವೇರ್‌ ಪ್ರಿಯರೇ ಗಮನಿಸಿ

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Jewel Trend | ಟ್ರೆಂಡಿಯಾಯ್ತು ಲಕ್ಷ್ಮಿ ವಿನ್ಯಾಸದ ಆಭರಣ

Exit mobile version