Site icon Vistara News

ಮಿಸೆಸ್‌ ಇಂಡಿಯಾ ಕರ್ನಾಟಕ 2022 ಫ್ಯಾಷನ್‌ ಶೋ: ಏಜ್‌ ಇಸ್‌ ಜಸ್ಟ್‌ ನಂಬರ್‌!

ಬೆಂಗಳೂರು: ಫ್ಯಾಷನ್ ಅನ್ನೋದು ಕಾಲೇಜು ಹುಡುಗಿಯರಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಇಲ್ಲಿ ಮಹಿಳೆಯರು ಸಾಬೀತುಪಡಿಸಿದರು. ಬಹಳಷ್ಟು ಮಹಿಳೆಯರು ಮದುವೆಯಾಗಿ ಮಗುವಾದ ನಂತರ, ತಮ್ಮ ದೈಹಿಕ ಸೌಂದರ್ಯ ನಶಿಸಿಹೋಯ್ತು ಎಂದು ಭಾವಿಸುತ್ತಾರೆ. ಆದರೆ ಈ ಫ್ಯಾಷನ್‌ ಶೋದಲ್ಲಿ ಭಾಗವಹಿಸಿದ್ದ ಮಹಿಳೆಯರು ಎಲ್ಲರಿಗೂ ಮಾದರಿಯಾಗಿದ್ದಾರೆ.

ಮಿಸೆಸ್‌ ಇಂಡಿಯಾ ಡೈರೆಕ್ಟರ್‌ ಪ್ರತಿಭಾ ಸಂಶಿಮಠ್‌ ಅವರು ಆಯೋಜಿಸಿದ್ದ ಮಿಸೆಸ್‌ ಇಂಡಿಯಾ ಕರ್ನಾಟಕ 2022 ಬೆಂಗಳೂರಿನ ಯಲಹಂಕದ ರಾಯಲ್‌ ಆರ್ಕಿಡ್‌ ಹೋಟೇಲ್‌ನಲ್ಲಿ ಅಚ್ಚುಕಟ್ಟಾಗಿ ನಡೆಯಿತು. 22ರಿಂದ 60 ವಯಸ್ಸಿನ ವಿವಾಹಿತ ಮಹಿಳೆಯರಿಗೆ ಏರ್ಪಡಿಸಲಾಗಿದ್ದ ಈ ಫ್ಯಾಷನ್‌ ಶೋದಲ್ಲಿ 30ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು. ಈ ವರ್ಷದ ವಿಶೇಷತೆ ಏನೆಂದರೆ, ಕರ್ನಾಟಕ ಕೈ ಮಗ್ಗದ ಸೀರೆಗಳಿಂದ ತಯಾರಿಸಿದ ವಿವಿಧ ಶೈಲಿಯ ಉಡುಪುಗಳನ್ನು ಧರಿಸಿ ರ‍್ಯಾಂಪ್‌ ವಾಕ್‌ ನಡೆಸಲಾಯಿತು. ಈ ಫ್ಯಾಷನ್‌ ಶೋದಲ್ಲಿ ಪ್ರತಿಯೊಬ್ಬ ಸ್ಪರ್ಧಿಗೆ 3 ಸುತ್ತುಗಳನ್ನು ಆಯೋಜಿಸಲಾಗಿತ್ತು.

ಇಳಕಲ್‌ ಸೀರೆ, ಮೈಸೂರು ಸಿಲ್ಕ್‌, ಗುಳೇದಗುಡ್ಡ ಕಣ, ರೇಶ್ಮೆ ಸೀರೆ, ಕಾಟನ್‌ ಸೀರೆ ಮತ್ತು ಸ್ಕರ್ಟ್‌ ಮೂಲಕ ಕಂಗೊಳಿಸುತ್ತಿದ್ದ ಹೆಂಗಳೆಯರು ಸುಂದರವಾಗಿ ಎಲ್ಲರ ಗಮನ ಸೆಳೆದರು. ಸಾಧನೆಗೆ ವಯಸ್ಸು ಅಡ್ಡಿಯಾಗದು, ಸಾಧಿಸುವ ಛಲವಿದ್ದರೆ ಸಾಕು ಎನ್ನುವುದನ್ನು ಈ ಫ್ಯಾಶನ್‌ ಶೋ ಸಾಬೀತುಪಡಿಸಿತು. ಏಜ್‌ ಇಸ್‌ ಜಸ್ಟ್‌ ನಂಬರ್‌ ಎಂಬ ಸಂದೇಶವನ್ನೂ ಸಾರಿತು.

ಇದನ್ನೂ ಓದಿ: International fashion day | ಭಾರತೀಯ ಟಾಪ್ ಫ್ಯಾಷನ್ ವಿನ್ಯಾಸಕರು

Exit mobile version