ಮಿಸೆಸ್‌ ಇಂಡಿಯಾ ಕರ್ನಾಟಕ 2022 ಫ್ಯಾಷನ್‌ ಶೋ: ಏಜ್‌ ಇಸ್‌ ಜಸ್ಟ್‌ ನಂಬರ್‌! - Vistara News

ಲೈಫ್‌ಸ್ಟೈಲ್

ಮಿಸೆಸ್‌ ಇಂಡಿಯಾ ಕರ್ನಾಟಕ 2022 ಫ್ಯಾಷನ್‌ ಶೋ: ಏಜ್‌ ಇಸ್‌ ಜಸ್ಟ್‌ ನಂಬರ್‌!

ಮದುವೆಯಾಗಿ, ಮಕ್ಕಳಾದರೆ ಜೀವನವೇ ಮುಗಿಯಿತೆಂದು ಯೋಚಿಸುವ ಮಹಿಳೆಯರಿಗೆ ಈ ಫ್ಯಾಷನ್‌ ಶೋ ಹೊಸ ಜೀವನದ ಪಾಠ ಕಲಿಸಿತು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಫ್ಯಾಷನ್ ಅನ್ನೋದು ಕಾಲೇಜು ಹುಡುಗಿಯರಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ಇಲ್ಲಿ ಮಹಿಳೆಯರು ಸಾಬೀತುಪಡಿಸಿದರು. ಬಹಳಷ್ಟು ಮಹಿಳೆಯರು ಮದುವೆಯಾಗಿ ಮಗುವಾದ ನಂತರ, ತಮ್ಮ ದೈಹಿಕ ಸೌಂದರ್ಯ ನಶಿಸಿಹೋಯ್ತು ಎಂದು ಭಾವಿಸುತ್ತಾರೆ. ಆದರೆ ಈ ಫ್ಯಾಷನ್‌ ಶೋದಲ್ಲಿ ಭಾಗವಹಿಸಿದ್ದ ಮಹಿಳೆಯರು ಎಲ್ಲರಿಗೂ ಮಾದರಿಯಾಗಿದ್ದಾರೆ.

ಮಿಸೆಸ್‌ ಇಂಡಿಯಾ ಡೈರೆಕ್ಟರ್‌ ಪ್ರತಿಭಾ ಸಂಶಿಮಠ್‌ ಅವರು ಆಯೋಜಿಸಿದ್ದ ಮಿಸೆಸ್‌ ಇಂಡಿಯಾ ಕರ್ನಾಟಕ 2022 ಬೆಂಗಳೂರಿನ ಯಲಹಂಕದ ರಾಯಲ್‌ ಆರ್ಕಿಡ್‌ ಹೋಟೇಲ್‌ನಲ್ಲಿ ಅಚ್ಚುಕಟ್ಟಾಗಿ ನಡೆಯಿತು. 22ರಿಂದ 60 ವಯಸ್ಸಿನ ವಿವಾಹಿತ ಮಹಿಳೆಯರಿಗೆ ಏರ್ಪಡಿಸಲಾಗಿದ್ದ ಈ ಫ್ಯಾಷನ್‌ ಶೋದಲ್ಲಿ 30ಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು. ಈ ವರ್ಷದ ವಿಶೇಷತೆ ಏನೆಂದರೆ, ಕರ್ನಾಟಕ ಕೈ ಮಗ್ಗದ ಸೀರೆಗಳಿಂದ ತಯಾರಿಸಿದ ವಿವಿಧ ಶೈಲಿಯ ಉಡುಪುಗಳನ್ನು ಧರಿಸಿ ರ‍್ಯಾಂಪ್‌ ವಾಕ್‌ ನಡೆಸಲಾಯಿತು. ಈ ಫ್ಯಾಷನ್‌ ಶೋದಲ್ಲಿ ಪ್ರತಿಯೊಬ್ಬ ಸ್ಪರ್ಧಿಗೆ 3 ಸುತ್ತುಗಳನ್ನು ಆಯೋಜಿಸಲಾಗಿತ್ತು.

ಇಳಕಲ್‌ ಸೀರೆ, ಮೈಸೂರು ಸಿಲ್ಕ್‌, ಗುಳೇದಗುಡ್ಡ ಕಣ, ರೇಶ್ಮೆ ಸೀರೆ, ಕಾಟನ್‌ ಸೀರೆ ಮತ್ತು ಸ್ಕರ್ಟ್‌ ಮೂಲಕ ಕಂಗೊಳಿಸುತ್ತಿದ್ದ ಹೆಂಗಳೆಯರು ಸುಂದರವಾಗಿ ಎಲ್ಲರ ಗಮನ ಸೆಳೆದರು. ಸಾಧನೆಗೆ ವಯಸ್ಸು ಅಡ್ಡಿಯಾಗದು, ಸಾಧಿಸುವ ಛಲವಿದ್ದರೆ ಸಾಕು ಎನ್ನುವುದನ್ನು ಈ ಫ್ಯಾಶನ್‌ ಶೋ ಸಾಬೀತುಪಡಿಸಿತು. ಏಜ್‌ ಇಸ್‌ ಜಸ್ಟ್‌ ನಂಬರ್‌ ಎಂಬ ಸಂದೇಶವನ್ನೂ ಸಾರಿತು.

ಇದನ್ನೂ ಓದಿ: International fashion day | ಭಾರತೀಯ ಟಾಪ್ ಫ್ಯಾಷನ್ ವಿನ್ಯಾಸಕರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Cannes Star Fashion: ಕ್ರಾಪ್‌ ಟುಕ್ಸೆಡೊ ಧರಿಸಿ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿದ ನಟ ಪ್ರತೀಕ್‌ ಬಬ್ಬರ್

ಬಾಲಿವುಡ್‌ ನಟ ಹಾಗೂ ಮಾಡೆಲ್‌ ಪ್ರತೀಕ್‌ ಬಬ್ಬರ್‌ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ (Cannes Star Fashion) ತಾಯಿ ಹಿರಿಯ ನಟಿ ಸ್ಮಿತಾ ಪಾಟೀಲ್‌ ಅವರಿಗೆ ಟ್ರಿಬ್ಯೂಟ್‌ ಅರ್ಪಿಸುವ ಸಲುವಾಗಿ ಬ್ಲ್ಯಾಕ್‌ ಕ್ರಾಪ್‌ ಟುಕ್ಸೆಡೊನಲ್ಲಿ, ಕತ್ತಿಗೆ ಸ್ಕಾರ್ಫ್ ಧರಿಸಿ ಕಾಣಿಸಿಕೊಂಡರು. ಅವರ ಈ ಔಟ್ಫಿಟ್‌ ಸ್ಟೈಲಿಂಗ್‌ ಮಾಡಿರುವ ಮೆನ್ಸ್ ಸ್ಟೈಲಿಸ್ಟ್ ರಾಹುಲ್‌ ಈ ಬಗ್ಗೆ ವಿವರಿಸಿದ್ದಾರೆ.

VISTARANEWS.COM


on

Cannes Star Fashion
ಚಿತ್ರಗಳು: ಪ್ರತೀಕ್‌ ಬಬ್ಬರ್‌, ಬಾಲಿವುಡ್‌ ನಟ, ಮಾಡೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ ನಟ ಹಾಗೂ ಮಾಡೆಲ್‌ ಪ್ರತೀಕ್‌ ಬಬ್ಬರ್‌ (Prateek Babbar) ಬ್ಲ್ಯಾಕ್‌ ಕ್ರಾಪ್‌ ಟುಕ್ಸೆಡೊ/ಸೂಟ್‌ನಲ್ಲಿ, ಕತ್ತಿಗೆ ಸ್ಕಾರ್ಫ್ ಧರಿಸಿ, ರೆಡ್‌ ಕಾರ್ಪೆಟ್‌ ವಾಕ್‌ ಮಾಡಿದ್ದಾರೆ. ಪ್ರತೀಕ್‌ಗೆ ಪ್ರಶಂಸೆ: ಕಾನ್ ಫಿಲ್ಮ್‌ ಫೆಸ್ಟಿವಲ್‌ (Cannes Star Fashion) ಈ ಬಾರಿ ವಾಕ್‌ ಮಾಡಿದ ಭಾರತೀಯ ನಟರ ಪೈಕಿ ಪ್ರತೀಕ್‌, ಅತಿ ಹೆಚ್ಚು ಹ್ಯಾಂಡ್‌ಸಮ್‌ ಆಗಿ ಕಾಣಿಸಿಕೊಂಡಿದ್ದಾರೆ ಎನ್ನುತ್ತಿದ್ದಾರೆ ಫ್ಯಾಷನ್‌ ವಿಮರ್ಶಕರು. ಯಂಗ್‌ & ಎನರ್ಜಿಟಿಕ್‌ ಆಗಿರುವ ಪ್ರತೀಕ್‌ ಈ ಜನರೇಷನ್‌ನ ಹುಡುಗರನ್ನು ಪ್ರತಿಬಿಂಬಿಸಿದ್ದಾರೆ. ತೀರಾ ಸೀರಿಯಸ್‌ ಆಗಿಯೂ ಕಾಣಿಸದೇ, ತೀರಾ ಫಂಕಿಯಾಗಿಯೂ ಕಾಣಿಸದೇ, ಜಂಟಲ್‌ಮೆನ್‌ ಲುಕ್‌ನಲ್ಲಿ ಆಗಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ ಎಂದು ವಿಶ್ಲೇಶಿಸಿದ್ದಾರೆ.

ತಾಯಿ ಸ್ಮಿತಾ ಪಾಟೀಲ್‌ಗೆ ಅರ್ಪಣೆ

ಅಂದಹಾಗೆ, ಪ್ರತೀಕ್‌ ಬಬ್ಬರ್‌ ಅವರು ಇದೇ ಮೊತ್ತ ಮೊದಲ ಬಾರಿಗೆ ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ವಾಕ್‌ ಮಾಡಿದ್ದಾರೆ. ಮೊದಲ ಬಾರಿಯಲ್ಲೆ ಎಲ್ಲರ ಗಮನ ಸೆಳೆದಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ತಾಯಿ ನಟಿ ಸ್ಮಿತಾ ಪಾಟೀಲ್‌ ಅವರಿಗೆ ಟ್ರಿಬ್ಯೂಟ್‌ ಅರ್ಪಿಸುವ ಸಲುವಾಗಿ ಬ್ಲ್ಯಾಕ್‌ ಕ್ರಾಪ್‌ ಟುಕ್ಸೆಡೊ ಅಂದರೇ, ಸೂಟ್‌ ಜೊತೆಗೆ ಕತ್ತಿಗೆ ಸ್ಕಾರ್ಫ್ ಧರಿಸಿ ಕಾಣಿಸಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ ಅವರ ಸ್ಟೈಲಿಸ್ಟ್ ರಾಹುಲ್‌ ವಿಜಯ್‌. ಅವರು ಹೇಳುವಂತೆ, ಫಿಲ್ಮ್ ಫೆಡರೇಷನ್‌ ಆಫ್‌ ಇಂಡಿಯಾ, ಈ ಬಾರಿ ಮತ್ತೊಮ್ಮೆ ಸ್ಕ್ರೀನ್‌ ಮಾಡಿದ ಸ್ಮಿತಾ ಪಾಟೀಲ್‌ ಅವರ ಹಳೆಯ ಚಿತ್ರ ಮನ್ನತ್‌ ಶೋಗಾಗಿ ಪುತ್ರ ಪ್ರತೀಕ್‌ ಈ ಕಾನ್‌ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡಿದ್ದರು. ಇವರೊಂದಿಗೆ ಹಿರಿಯ ನಟ-ನಟಿಯರಾದ, ನಾಸಿರುದ್ದೀನ್‌ ಶಾ ಹಾಗೂ ನಟಿ ರತ್ನಾ ಪಾಠಕ್‌ ಕೂಡ ಸಿನಿಮಾದ ಸ್ಕ್ರೀನಿಂಗ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.

ಪ್ರತೀಕ್‌ ಬ್ಲ್ಯಾಕ್‌ ಕ್ರಾಪ್‌ ಟುಕ್ಸೆಡೊ

ರೋಹಿತ್‌ ಗಾಂಧಿ & ರಾಹುಲ್‌ ಖನ್ನಾ ಜಂಟಿಯಾಗಿ ಡಿಸೈನ್‌ ಮಾಡಿರುವ ಈ ಕಸ್ಟಮೈಸ್ಡ್ ಟುಕ್ಸೆಡೊ ಅಥವಾ ಬ್ಲ್ಯಾಕ್‌ ಸೂಟ್‌, ಪ್ರತೀಕ್‌ ಅವರಿಗೆ ಸಖತ್‌ ಹ್ಯಾಂಡ್‌ಸಮ್‌ ಆಗಿ ಬಿಂಬಿಸಿದೆ. ಇನ್ನು, ಬೋ ಅಥವಾ ಟೈ ಬದಲು ಅವರು ಧರಿಸಿರುವ ವಿಂಟೇಜ್‌ ಸ್ಕಾರ್ಫ್ ಅವರ ಲುಕ್ಕನ್ನು ಮತ್ತಷ್ಟು ಡಿಫರೆಂಟ್‌ ಆಗಿಸಿದೆ. ಇತರರಿಗಿಂತ ವಿಭಿನ್ನವಾಗಿಸಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಇದನ್ನೂ ಓದಿ: Sequins Partywear Fashion: ಪಾರ್ಟಿಪ್ರಿಯರಿಗೆ ಬಂತು ಮಿರಮಿರ ಮಿನುಗುವ ಸಿಕ್ವೀನ್ಸ್‌ ಔಟ್‌ಫಿಟ್ಸ್‌

ಪ್ರತೀಕ್‌ ಮೊದಲ ಕಾನ್‌ ವಾಕ್‌

“ಇದು ನನ್ನ ಮೊದಲ ಅಂತಾರಾಷ್ಟ್ರೀಯ ಮಟ್ಟದ ರೆಡ್‌ ಕಾರ್ಪೆಟ್‌ ವಾಕ್‌. ಹಾಗಾಗಿ ನಾನು ಆಕರ್ಷಕವಾಗಿ ಕಾಣಿಸುವುದರೊಂದಿಗೆ ನನ್ನ ತಾಯಿಗೆ ಟ್ರಿಬ್ಯೂಟ್‌ ಕೂಡ ಸಲ್ಲಿಸಬೇಕಿತ್ತು. ಹಾಗಾಗಿ ಕತ್ತಿಗೆ ವಿಂಟೇಜ್‌ ಸ್ಕಾರ್ಫ್‌ ಧರಿಸಿ, ಕಾಣಿಸಿಕೊಂಡೆ. ಇದು ಎಲ್ಲರಿಗೂ ಇಷ್ಟವಾಯಿತು” ಎಂದು ಪ್ರತೀಕ್‌ ಮಾಧ್ಯಮದವರೆದುರು ಸಂತಸ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ, ಈ ಬಾರಿಯ ಕಾನ್‌ ಫೆಸ್ಟಿವಲ್‌ ಮೂಲಕ ಭಾರತೀಯ ಮೆನ್ಸ್ ಫ್ಯಾಷನ್‌ನಲ್ಲಿ ಪ್ರತೀಕ್‌ ಕ್ರಾಪ್‌ ಟುಕ್ಸೆಡೊ ಟ್ರೆಂಡ್‌ ಹುಟ್ಟು ಹಾಕಿದ್ದಾರೆ ಎಂದು ವಿಮರ್ಶಿಸಿದ್ದಾರೆ ಫ್ಯಾಷನಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Star Fashion: ಮಾಲಾಶ್ರೀ ಮಗಳ ಬಿಗ್‌ ಬ್ಲ್ಯಾಕ್‌ ಜುಮ್ಕಾ ಲವ್‌!

ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿ (Star Fashion) ಆರಾಧನಾಗೆ ಇದೀಗ ಬಿಗ್‌ ಬ್ಲ್ಯಾಕ್‌ ಜುಮ್ಕಾಗಳ ಮೇಲೆ ಲವ್‌ ಆಗಿದೆ. ಇಂಡೋ-ವೆಸ್ಟರ್ನ್‌ ಲುಕ್‌ಗೆ ಸಾಥ್‌ ನೀಡಿದೆ. ಟ್ರೆಂಡಿಯಾಗಿರುವ ಇವನ್ನು ಹುಡುಗಿಯರು ಅವರಂತೆ ಕಾಣಲು ಹೇಗೆಲ್ಲಾ ಧರಿಸಬಹುದು? ಎಂಬುದರ ಬಗ್ಗೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು ಒಂದಿಷ್ಟು ಟಿಪ್ಸ್‌ ನೀಡಿದ್ದಾರೆ.

VISTARANEWS.COM


on

Star Fashion
ಚಿತ್ರಗಳು: ಆರಾಧನಾ, ಸ್ಯಾಂಡಲ್‌ವುಡ್‌ ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ನ ಉದಯೋನ್ಮುಖ ನಟಿ (Star Fashion) ಆರಾಧನಾಗೆ ಇದೀಗ ಬಿಗ್‌ ಬ್ಲ್ಯಾಕ್‌ ಜುಮ್ಕಾಗಳ ಮೇಲೆ ಲವ್‌ ಆಗಿದೆ. ಹೌದು, ಒಂದು ಕಾಲದಲ್ಲಿ ಸ್ಯಾಂಡಲ್‌ವುಡ್‌ನ ಸೂಪರ್‌ ಸ್ಟಾರ್‌ ಆಗಿದ್ದ, ಮಾಲಾಶ್ರೀ ಮಗಳಾದ ನಟಿ ಆರಾಧನಾ, ಈಗಷ್ಟೇ ನಟ ದರ್ಶನ್‌ ಅವರೊಂದಿಗೆ ‘ಕಾಟೇರ’ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಾನಾ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಮಾಡೆಲ್‌ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಆಗಾಗ ಒಂದಲ್ಲ ಒಂದು ಹೊಸ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳ ಮೂಲಕ ಈ ಜನರೇಷನ್‌ ಹುಡುಗಿಯರನ್ನು ಸೆಳೆಯುತ್ತಿದ್ದಾರೆ.

Star Fashion

ಆರಾಧನಾ ಜುಮ್ಕಾ ಪ್ರೇಮ

ಅಂದಹಾಗೆ, ನಟಿ ಆರಾಧನಾ ಇದೀಗ ಬ್ಲ್ಯಾಕ್‌ ಔಟ್‌ಫಿಟ್‌ ಜೊತೆ ಬ್ಲ್ಯಾಕ್‌ ಬಿಗ್‌ ಜುಮ್ಕಾ ಧರಿಸಿ ಕಾಣಿಸಿಕೊಂಡಿರುವುದು ಅವರಿಗೆ ಬಾಲಿವುಡ್‌ ಫೀಲ್‌ ನೀಡಿದೆ. ಚಿತ್ರದೊಂದಿಗೆ ಅವರು ಹಾಕಿಕೊಂಡಿರುವ ಜುಮ್ಕಾ ಹಿಂದಿ ಹಾಡು ಅವರ ಜುಮ್ಕಾ ಮೇಲಿನ ಪ್ರೇಮವನ್ನು ಹೈಲೈಟ್‌ ಮಾಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಇಂಡೋ-ವೆಸ್ಟರ್ನ್‌ ಲುಕ್‌

ಬ್ಲ್ಯಾಕ್‌ ಮೆಟಲ್‌ನ ಬಿಗ್‌ ಜುಮ್ಕಾಗಳು ಎಲ್ಲಾ ಬ್ಲ್ಯಾಕ್‌ ಹಾಗೂ ಡಾರ್ಕ್‌ ಶೇಡ್‌ಗೆ ಮ್ಯಾಚ್‌ ಆಗುತ್ತವೆ. ಹೆಚ್ಚು ಮಿಕ್ಸ್‌ ಮ್ಯಾಚ್‌ ಮಾಡುವ ಅಗತ್ಯವಿಲ್ಲ ಎನ್ನುವ ಜ್ಯುವೆಲ್‌ ಡಿಸೈನರ್‌ಗಳು, ಆರಾಧನಾ ಅವರಿಗೆ ಈ ಜುಮ್ಕಾಗಳು ಸಖತ್‌ ಆಗಿ ಮ್ಯಾಚ್‌ ಆಗಿವೆ. ಅವರ ವೆಸ್ಟರ್ನ್‌ ಸ್ಟೈಲ್‌ಗೆ ಸಾಥ್‌ ನೀಡಿವೆ. ಜುಮ್ಕಾಗಳು ವೆಸ್ಟರ್ನ್‌ ಸ್ಟೈಲ್‌ಸ್ಟೇಟ್ಮೆಂಟ್‌ಗೆ ಮ್ಯಾಚ್‌ ಮಾಡಿರುವುದು ಅವರಿಗೆ ಇಂಡೋ-ವೆಸ್ಟರ್ನ್‌ ಲುಕ್‌ಗೆ ಸಾಥ್‌ ನೀಡಿವೆ ಎನ್ನುತ್ತಾರೆ ಅವರು.
ಇನ್ನು ಅವರ ಬಾರ್ಡಟ್‌ ಡ್ರೆಸ್‌ ಇವನ್ನು ಮತ್ತಷ್ಟು ಹೈಲೈಟ್‌ ಮಾಡಿದೆ. ಇದರೊಂದಿಗೆ ಮ್ಯಾಚ್‌ ಮಾಡಿರುವ ಬಿಗ್‌ ಬ್ಲ್ಯಾಕ್‌ ಮೆಟಲ್‌ನ ಕಾಕ್ಟೈಲ್‌ ಫಿಂಗರ್‌ರಿಂಗ್‌ ಕೂಡ ಕಂಪ್ಲೀಟ್‌ ಮಾರ್ಡನ್‌ ಟಚ್‌ ನೀಡಿದೆ. ಇನ್ನು, ಅವರ ಹನ್‌ ಹೇರ್‌ಸ್ಟೈಲ್‌ ಹಾಗೂ ನೆಕ್‌ಲೇಸ್‌ ಇಲ್ಲದ ಖಾಲಿ ಕತ್ತನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ಇವೆಲ್ಲದರ ಜೊತೆಗೆ ತಿಳಿಯಾದ ಮೇಕಪ್‌, ಕಾಜಲ್‌ ಹಚ್ಚಿದ ಕಂಗಳು ಸಿಂಪಲ್‌ ಲುಕ್‌ ಈ ಜನರೇಷನ್‌ ಹುಡುಗಿಯರಿಗೆ ಪ್ರಿಯವಾಗುವಂತಿದೆ ಎನ್ನುವ ಫ್ಯಾಷನ್‌ ವಿಮರ್ಶಕರಾದ ರಿಚಾ ಪ್ರಕಾರ, ಇದು ಯಂಗ್‌ ಹುಡುಗಿಯರ ಸ್ಟೈಲಿಶ್‌ ಲುಕ್‌ಗೆ ಮಾದರಿಯಾಗುವಂತಿದೆ ಎನ್ನುತ್ತಾರೆ.

Star Fashion

ತಾರೆಯರ ಮುಗಿಯದ ಬಿಗ್‌ ಜುಮ್ಕಾ ಲವ್‌

ಬಿಗ್‌ ಜುಮ್ಕಾಗಳು ಅದರಲ್ಲೂ, ಬ್ಲ್ಯಾಕ್‌ ಹಾಗೂ ವೈಟ್‌ ಮೆಟಲ್‌ನ ಜುಮ್ಕಾಗಳು ಸದಾ ಸಿನಿ ತಾರೆಯರ ಫೇವರೇಟ್‌ ಲಿಸ್ಟ್‌ನಲ್ಲಿವೆ. ಸಿನಿಮಾಗಳಲ್ಲಿ ಅಥವಾ ಸೀರಿಯಲ್‌ಗಳಲ್ಲಿ ಸೀರೆಯೊಂದಿಗೆ ಅಥವಾ ಎಥ್ನಿಕ್‌ ಉಡುಪುಗಳೊಂದಿಗೆ ನಾಯಕಿಯರು ಧರಿಸುವ ಈ ಬಿಗ್‌ ಜುಮ್ಕಾಗಳು, ಹುಡುಗಿಯರನ್ನು ಮಾತ್ರವಲ್ಲ, ಮಧ್ಯ ವಯಸ್ಕ ಮಹಿಳೆಯರನ್ನು ಸೆಳೆದು ಟ್ರೆಂಡಿಯಾಗಿವೆ. ಬಾಲಿವುಡ್‌ನ ನಟಿ ಸಾರಾ ಅಲಿ ಖಾನ್‌, ಶ್ರದ್ಧಾ ಕಪೂರ್‌, ಸೋನಂ ಕಪೂರ್‌, ಜಾನ್ಹವಿ ಸೇರಿದಂತೆ ಸಾಕಷ್ಟು ಬಾಲಿವುಡ್‌ ನಟಿಯರನ್ನು ಸವಾರಿ ಮಾಡಿವೆ. ಬರಬರುತ್ತಾ ಸ್ಯಾಂಡಲ್‌ವುಡ್‌ ನಟಿಯರನ್ನು ಸೆಳೆದಿವೆ. ಇವೆಲ್ಲದರ ಪರಿಣಾಮ, ಎವರ್‌ಗ್ರೀನ್‌ ಮೆಟಲ್‌ ಜ್ಯುವೆಲ್‌ ಟ್ರೆಂಡ್‌ಗೆ ಸೇರಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

ಇದನ್ನೂ ಓದಿ: Fashion Trend: ಜೆನ್‌ ಜಿ ಹುಡುಗ-ಹುಡುಗಿಯರ ಆವರಿಸಿದ ಚಿತ್ರ-ವಿಚಿತ್ರ ಡ್ರಾಗನ್‌ ಜ್ಯುವೆಲರಿಗಳು!

ಬಿಗ್‌ ಬ್ಲ್ಯಾಕ್‌ ಜುಮ್ಕಾ ಧರಿಸಲು ಬಯಸುವ ಹುಡುಗಿಯರಿಗೆ 5 ಟಿಪ್ಸ್‌

  • ನಿಮ್ಮ ಮುಖದ ಆಕಾರಕ್ಕೆ ಹೊಂದುವ ಡಿಸೈನ್‌ ಧರಿಸಿ.
  • ಈ ಜುಮ್ಕಾ ಧರಿಸಿದಾಗ ಕತ್ತಿಗೆ ಭಾರಿ ವಿನ್ಯಾಸದ ನೆಕ್‌ಪೀಸನ್ನು ಧರಿಸಬೇಡಿ.
  • ಬ್ಲ್ಯಾಕ್‌ ಬಿಗ್‌ ಜುಮ್ಕಾಗಳು ಎಲ್ಲಾ ಉಡುಪಿಗೂ ಮ್ಯಾಚ್‌ ಆಗುತ್ತವೆ.
  • ಹೇರ್‌ಸ್ಟೈಲ್‌ ಕಟ್ಟಿದಂತಿರಲಿ. ಜುಮ್ಕಾಗಳು ಹೈಲೈಟಾಗುತ್ತವೆ.
  • ಧರಿಸುವ ಉಡುಪಿನ ನೆಕ್‌ಲೈನ್‌ ಅಗಲವಾಗಿದ್ದಷ್ಟು ಜುಮ್ಕಾಗಳು ಎದ್ದು ಕಾಣುತ್ತವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ದೇಶ

Covaxin Safety: ಕೊವ್ಯಾಕ್ಸಿನ್‌ನಿಂದ ಅಡ್ಡ ಪರಿಣಾಮ ಎಂದು ಬನಾರಸ್‌ ವಿವಿ ವರದಿ; ವೈದ್ಯ ಸಂಶೋಧನಾ ಸಂಸ್ಥೆ ಆಕ್ಷೇಪ

Covaxin Safety: ಬಿಎಚ್‌ಯು ಸಂಶೋಧನೆ ಮಾಡುವ ಮುನ್ನ ಸರಿಯಾದ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ. ಸಂಶೋಧನೆಗೆ ಬಳಸಿರುವ ಜನಸಂಖ್ಯೆ ಪ್ರಮಾಣಕ್ಕೂ, ಸ್ಟಡಿ ವರದಿಗೂ ತುಂಬ ವ್ಯತ್ಯಾಸವಿದೆ. ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಹೇಳಿದವರನ್ನು ವರದಿ ತಯಾರಿಸಲು ಟೆಲಿಫೋನ್‌ ಮೂಲಕ ಸಂಪರ್ಕಿಸಲಾಗಿದೆಯೇ ಹೊರತು, ಅವರ ಅಭಿಪ್ರಾಯವನ್ನು ನೇರವಾಗಿ ಪಡೆದುಕೊಂಡಿಲ್ಲ ಎಂದು ಐಸಿಎಂಆರ್‌ ಅಸಮಾಧಾನ ವ್ಯಕ್ತಪಡಿಸಿದೆ.

VISTARANEWS.COM


on

Covaxin Safety
Koo

ನವದೆಹಲಿ: ಬ್ರಿಟನ್‌ನಲ್ಲಿ ಅಸ್ಟ್ರಾಜೆನಿನಾ ಕೊರೊನಾ ನಿರೋಧಕ ಕೋವಿಶೀಲ್ಡ್‌ ಲಸಿಕೆ ಪಡೆದವರಿಗೆ ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಸ್ವತಃ ಕಂಪನಿಯೇ ಒಪ್ಪಿಕೊಂಡ ಬಳಿಕ ಭಾರತದಲ್ಲೂ ಕೊರೊನಾ ನಿರೋಧಕ ಲಸಿಕೆಯ ಸುರಕ್ಷತೆಗೆ ಬಗ್ಗೆ ಚರ್ಚೆಯಾಗುತ್ತಿದೆ. ಅದರಲ್ಲೂ, ದೇಶೀಯವಾಗಿ ಭಾರತ್‌ ಬಯೋಟೆಕ್‌ (Bharat Biotech) ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್‌ ಅಡ್ಡಪರಿಣಾಮಗಳ ಕುರಿತು ಬನಾರಸ್‌ ಹಿಂದು ವಿವಿ (BHU) ವರದಿ ಬಿಡುಗಡೆ ಮಾಡಿದೆ. ಕೊವ್ಯಾಕ್ಸಿನ್‌ ಪಡೆದ ಮೂವರಲ್ಲಿ ಒಬ್ಬರಿಗೆ ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಬಿಎಚ್‌ಯು ಪ್ರಕಟಿಸಿದ ವರದಿಗೆ ಈಗ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಆಕ್ರೋಶ ವ್ಯಕ್ತಪಡಿಸಿದೆ.

ಐಸಿಎಂಆರ್‌ ಮಹಾ ನಿರ್ದೇಶಕ ರಾಜೀವ್‌ ಬಾಹ್ಲ್‌ ಅವರು ಬಿಎಚ್‌ಯು ಅಧ್ಯಯನ ವರದಿಯನ್ನು ನಿರಾಕರಿಸಿದ್ದಾರೆ. “ಬಿಎಚ್‌ಯು ಸಂಶೋಧನೆ ಮಾಡುವ ಮುನ್ನ ಸರಿಯಾದ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿಲ್ಲ. ಸಂಶೋಧನೆಗೆ ಬಳಸಿರುವ ಜನಸಂಖ್ಯೆ ಪ್ರಮಾಣಕ್ಕೂ, ಸ್ಟಡಿ ವರದಿಗೂ ತುಂಬ ವ್ಯತ್ಯಾಸವಿದೆ. ಅಡ್ಡ ಪರಿಣಾಮ ಉಂಟಾಗಿದೆ ಎಂಬುದಾಗಿ ಹೇಳಿದವರನ್ನು ವರದಿ ತಯಾರಿಸಲು ಟೆಲಿಫೋನ್‌ ಮೂಲಕ ಸಂಪರ್ಕಿಸಲಾಗಿದೆಯೇ ಹೊರತು, ಅವರ ಅಭಿಪ್ರಾಯವನ್ನು ನೇರವಾಗಿ ಪಡೆದುಕೊಂಡಿಲ್ಲ. ಸಂಶೋಧನೆಗೆ ಬಳಸಿರುವ ಅಂಕಿ-ಅಂಶಗಳನ್ನು ಸರಿಯಾಗಿ ಅವಲೋಕನ ಮಾಡಿಲ್ಲ” ಎಂಬುದಾಗಿ ರಾಜೀವ್‌ ಬಾಹ್ಲ್‌ ಹೇಳಿದ್ದಾರೆ.

“ಲಸಿಕೆಯ ಅಡ್ಡ ಪರಿಣಾಮ, ಲಸಿಕೆಯ ಸುರಕ್ಷತೆ ಬಗ್ಗೆ ಅಧ್ಯಯನ ಮಾಡಲು ತುಂಬ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಬಿಎಚ್‌ಯು ಇಂತಹ ಮಾನದಂಡಗಳನ್ನು ಅನುಸರಿಸುವುದು ಬಿಡಿ, ಅಧ್ಯಯನ ಮಾಡುವ ತಜ್ಞರಿಗೆ ತಾಂತ್ರಿಕ ಹಾಗೂ ಹಣಕಾಸು ನೆರವು ಕೂಡ ಒದಗಿಸಿಲ್ಲ. ಹಾಗಾಗಿ, ಲಸಿಕೆಯ ಸುರಕ್ಷತೆಯ ಬಗ್ಗೆ ಬನಾರಸ್‌ ಹಿಂದು ವಿವಿ ಮಾಡಿದ ಸಂಶೋಧನಾ ವರದಿಯು ವೈಜ್ಞಾನಿಕತೆಯ ಆಧಾರದ ಮೇಲಿಲ್ಲ” ಎಂದು ಹೇಳಿದ್ದಾರೆ.

ಕೊವ್ಯಾಕ್ಸಿನ್‌ ಲಸಿಕೆ ಪಡೆದ ಸುಮಾರು 926 ಜನರನ್ನು ಸಂಪರ್ಕಿಸಿ ಲಸಿಕೆಯ ಸುರಕ್ಷತೆ, ಅಡ್ಡ ಪರಿಣಾಮಗಳ ಕುರಿತು ಅಧ್ಯಯನ ವರದಿ ತಯಾರಿಸಿದೆ. ಲಸಿಕೆ ಪಡೆದ ಮೂವರಲ್ಲಿ ಒಬ್ಬರಿಗೆ ಅಡ್ಡ ಪರಿಣಾಮ ಉಂಟಾಗಿದೆ. ಲಸಿಕೆ ಪಡೆದವರಿಗೆ ಪಾರ್ಶ್ವವಾಯು, ನರಗಳಿಗೆ ಸಂಬಂಧಿಸಿದ ಕಾಯಿಲೆ, ಕೆಮ್ಮು, ಮೂಗು ಸೋರುವಿಕೆ, ಗಂಟಲು ಕೆರೆತ, ಉಸಿರಾಟ ಸಮಸ್ಯೆ ಸೇರಿ ಹಲವು ಅಡ್ಡ ಪರಿಣಾಮಗಳು ಕಾಣಿಸಿಕೊಂಡಿವೆ” ಎಂಬುದಾಗಿ ವರದಿ ತಿಳಿಸಿತ್ತು.

ಭಾರತ್‌ ಬಯೋಟೆಕ್‌ ಹೇಳುವುದೇನು?

“ಸುರಕ್ಷತೆ ಹಾಗೂ ದಕ್ಷತೆಯೇ ಮೊದಲು ಎಂಬ ದೃಷ್ಟಿಕೋನದಿಂದ ಹಲವು ಮಾನದಂಡಗಳನ್ನು ಇಟ್ಟುಕೊಂಡು ಲಸಿಕೆಯನ್ನು ಉತ್ಪಾದಿಸಲಾಗಿದೆ. ಭಾರತದಲ್ಲಿ ಕೇಂದ್ರ ಸರ್ಕಾರದ ಲಸಿಕಾಕರಣ ಯೋಜನೆಯ ವೇಳೆ ಅತಿ ಹೆಚ್ಚು ಪ್ರಯೋಗಕ್ಕೀಡಾದ ಲಸಿಕೆ ಎಂದರೆ ಅದು ಕೊವ್ಯಾಕ್ಸಿನ್‌ ಮಾತ್ರ. ಪರವಾನಗಿ ಪ್ರಕ್ರಿಯೆಯ ವೇಳೆ ಸುಮಾರು 27 ಸಾವಿರ ಅಂಶಗಳ ಕುರಿತು ಅಧ್ಯಯನ, ಪರಿಶೀಲನೆ ನಡೆಸಲಾಗಿದೆ. ವೈದ್ಯಕೀಯ ಪ್ರಯೋಗಕ್ಕೂ ಲಸಿಕೆಯನ್ನು ಒಳಪಡಿಸಲಾಗಿದೆ. ಹಾಗಾಗಿ, ಲಸಿಕೆಯು ಸಂಪೂರ್ಣವಾಗಿ ಸುರಕ್ಷಿತವಾಗಿದೆ” ಎಂಬುದಾಗಿ ಭಾರತ್‌ ಬಯೋಟೆಕ್‌ ಕಂಪನಿ ತಿಳಿಸಿದೆ.

ಇದನ್ನೂ ಓದಿ: Covaxin: ಕೊವ್ಯಾಕ್ಸಿನ್‌ ಸುರಕ್ಷಿತ ಲಸಿಕೆ ಎಂದ ಭಾರತ್‌ ಬಯೋಟೆಕ್;‌ ಸೈಡ್‌ ಎಫೆಕ್ಟ್‌ ಆರೋಪದ ಬೆನ್ನಲ್ಲೇ ಸ್ಪಷ್ಟನೆ!

Continue Reading

ವಿಜಯನಗರ

Food Department : ಜೀವಂತ ಇದ್ದವಳನ್ನು ಸತ್ತಿದ್ದಾಗಿ ಘೋಷಿಸಿದ ಆಹಾರ ಇಲಾಖೆ; ರೇಷನ್‌ ಕಾರ್ಡ್‌ನಿಂದಲೇ ಹೆಸರು ಡಿಲೀಟ್‌

Food Department : ತಾಯಿ-ಮಗ ಜೀವಂತವಾಗಿದ್ದರೂ, ಬದುಕಿಲ್ಲ ಎಂದು ಪಡಿತರ ಚೀಟಿಯಿಂದ (BPL Card) ಹೆಸರನ್ನೇ ಡಿಲೀಟ್‌ ಮಾಡಿದ್ದಾರೆ. ಸ್ಥಳ ಪರಿಶೀಲನೆ ಮಾಡದೆ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳದೇ ಆಹಾರ ಇಲಾಖೆಯ (ration card) ಅಧಿಕಾರಿಗಳ ಯಡವಟ್ಟಿಗೆ ಕಡು ಬಡತನದ ಕುಟುಂಬವೊಂದು ಪರದಾಡುತ್ತಿದೆ.

VISTARANEWS.COM


on

By

Food department deletes name from ration card list even though it is alive
Koo

ವಿಜಯನಗರ: ಜೀವಂತವಾಗಿರುವ ತಾಯಿ-ಮಗನನ್ನು ಸತ್ತಿದ್ದಾಗಿ ಘೋಷಿಸಿ, ಇಬ್ಬರನ್ನೂ ಪಡಿತರ ಚೀಟಿ (BPL Card) ಹೆಸರಿನಿಂದ ಆಹಾರ ಇಲಾಖೆಯು (Food Department) ಡಿಲೀಟ್ ಮಾಡಿದೆ. ವಿಜಯನಗರ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳ (ration card) ಯಡವಟ್ಟಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಅಂಜೀನಮ್ಮ ಮತ್ತು ಅವರ ಪುತ್ರ ಅಜಯ್ ಬದುಕಿದ್ದರೂ 2019ರಲ್ಲೇ ಸತ್ತಿದ್ದಾರೆ ಎಂದು ಬಿಪಿಎಲ್‌ ಕಾರ್ಡ್‌ನಿಂದ ಹೆಸರು ಡಿಲೀಟ್‌ ಮಾಡಲಾಗಿದೆ. ಕಳೆದ ಐದು ವರ್ಷದಿಂದ ಪಡಿತರದಿಂದ ಬಡ ಕುಟುಂಬವೊಂದು ವಂಚಿತವಾಗಿದೆ. ಆಹಾರ ಇಲಾಖೆ ಯಡವಟ್ಟಿನಿಂದ ಪಡಬಾರದ ಕಷ್ಟ ಪಡುತ್ತಿರುವ ಕುಟಂಬ ತಿಂಗಳ ಪಡಿತರಕ್ಕೂ ಅಲೆಯುತ್ತಿದೆ.

ಇದನ್ನೂ ಓದಿ: Road Accident : ಬಸ್‌ ಗುದ್ದಿದ ರಭಸಕ್ಕೆ ಕಾರು ಛಿದ್ರ ಛಿದ್ರ; ಚಾಲಕ ಸ್ಪಾಟ್‌ ಡೆತ್‌, ನಾಲ್ವರಿಗೆ ಗಾಯ

ಆಹಾರ ಇಲಾಖೆ ಯಾರದ್ದೋ ಮಾತು ಕೇಳಿ ಪಡಿತರ ಚೀಟಿಯಿಂದ ಹೆಸರು ಡಿಲೀಟ್ ಮಾಡಿದೆ. ಕೂಡ್ಲಿಗಿ ತಾಲೂಕಿನ ಅಂಜಿನಮ್ಮ ತೀರಾ ಕಡು ಬಡವರಾಗಿದ್ದು, ಆಹಾರ ಇಲಾಖೆಯ ಕೆಲಸಕ್ಕೆ ಇತರೇ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ರೇಷನ್ ಕಾರ್ಡ್ ಇಲ್ಲದೇ ಇರುವುದರಿಂದ ಗೃಹ ಲಕ್ಷ್ಮೀ ಯೋಜನೆಯ ಲಾಭವೂ ಅಂಜಿನಮ್ಮಗೆ ಸಿಕ್ಕಿಲ್ಲ.

ಇತ್ತ ನ್ಯಾಯಕ್ಕಾಗಿ ಅಂಜಿನಮ್ಮ ಕುಟುಂಬ ನಿತ್ಯ ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗೆ ಅಲೆದು ಸುಸ್ತಾಗಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಪಡಿತರ ಚೀಟಿಯಿಂದ ಹೆಸರು ತೆಗೆಯಬೇಕಾದರೆ ಅಧಿಕಾರಿಗಳು ಸ್ಪಾಟ್‌ ವಿಸಿಟ್‌ ಮಾಡಬೇಕು. ಪಡಿತರ ಚೀಟಿಯಲ್ಲಿ ಇರುವವರು ಬದುಕಿದ್ದಾರಾ ಇಲ್ವಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಅಧಿಕಾರಿಗಳು ಪರಿಶೀಲಿಸದೇ ಹೀಗೆ ಅಂಜೀನಮ್ಮ ಹೆಸರು ತೆಗೆದಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
T20 World Cup 2024
ಕ್ರೀಡೆ1 min ago

T20 World Cup 2024: ಇಂಡೋ-ಪಾಕ್​ ಮಿನಿ ವಿಶ್ವಕಪ್​ ಸಮರ ನಡೆಯುವ ಸ್ಟೇಡಿಯಂನ ವಿಡಿಯೊ ವೈರಲ್​

Ebrahim Raisi
ದೇಶ27 mins ago

Ebrahim Raisi: ಇಬ್ರಾಹಿಂ ರೈಸಿ ನಿಧನದಿಂದ ಭಾರತದಲ್ಲಿ ಚಿನ್ನ, ಪೆಟ್ರೋಲ್‌ ಬೆಲೆ ಏರಿಕೆ? ಹೀಗಿದೆ ವಿಶ್ವ ಮಾರುಕಟ್ಟೆ ಸ್ಥಿತಿ-ಗತಿ

Hit And Run Case
ಕರ್ನಾಟಕ31 mins ago

Hit And Run Case: ಕೂಡ್ಲಿಗಿಯಲ್ಲಿ ಹಿಟ್ ಆ್ಯಂಡ್ ರನ್; ಬೈಕ್‌ಗೆ ಲಾರಿ ಡಿಕ್ಕಿಯಾಗಿ ಯುವತಿ ಸಾವು

IPL 2024
ಕ್ರೀಡೆ1 hour ago

IPL 2024: ಮೋದಿ ಸ್ಟೇಡಿಯಂನಲ್ಲಿ ಫುಟ್ಬಾಲ್​ ಆಡಿದ ಆರ್​ಸಿಬಿ ಆಟಗಾರರು

Cannes Star Fashion
ಫ್ಯಾಷನ್1 hour ago

Cannes Star Fashion: ಕ್ರಾಪ್‌ ಟುಕ್ಸೆಡೊ ಧರಿಸಿ ತಾಯಿಗೆ ಶ್ರದ್ಧಾಂಜಲಿ ಅರ್ಪಿಸಿದ ನಟ ಪ್ರತೀಕ್‌ ಬಬ್ಬರ್

Reservation in outsourcing
ಪ್ರಮುಖ ಸುದ್ದಿ2 hours ago

Reservation in Outsourcing: ಇನ್ನು ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ; ಸಿದ್ದರಾಮಯ್ಯ ಸರ್ಕಾರದ ಮಹತ್ವದ ಆದೇಶ

Karnataka weather Forecast
ಮಳೆ2 hours ago

Karnataka Weather : ಯಾದಗಿರಿಯಲ್ಲಿ ಸಿಡಿಲಿಗೆ ಕುರಿಗಾಹಿ ಸಾವು ; ಬಿರುಗಾಳಿ ಸಹಿತ ಮಳೆಗೆ ಸಿಲುಕಿದ ಪ್ರವಾಸಿಗರು

MLC N Ravikumar Spoke in North East Graduate Constituency Election Preliminary meeting in hosapete
ವಿಜಯನಗರ2 hours ago

MLC Election: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ: ಎನ್. ರವಿಕುಮಾರ್

Lok Sabha Election
ದೇಶ2 hours ago

Lok Sabha Election: 5ನೇ ಹಂತದಲ್ಲಿ ಕೇವಲ ಶೇ.56ರಷ್ಟು ಮತದಾನ; ಯಾವ ರಾಜ್ಯದಲ್ಲಿ ಹೆಚ್ಚು?

Public Exam Good news for students of classes 5 and 8 and 9 Important decision of Karnataka government
ಶಿಕ್ಷಣ2 hours ago

Public Exam: 5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌; ರಾಜ್ಯ ಸರ್ಕಾರದ ಮಹತ್ವ ನಿರ್ಧಾರ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ7 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 day ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ4 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌