Site icon Vistara News

Mosquito control: ಸೊಳ್ಳೆ ಕಾಟಕ್ಕೆ ಬೇಸತ್ತಿದ್ದೀರಾ? ಹಾಗಿದ್ರೆ ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ!

Mosquito controle

ಬೆಂಗಳೂರು: ಸೊಳ್ಳೆ ಎಂದರೆ ಸಾಕು ಕೆಲವರು ಕುಳಿತಲ್ಲಿಯೇ ಹೌಹಾರುತ್ತಾರೆ. ಗಾತ್ರದಲ್ಲಿ ಚಿಕ್ಕದಾದರೂ ಇವು ಕೊಡುವ ಕಾಟ ಹೇಳತೀರದು. ಇನ್ನು ಬೇಸಿಗೆಯಲ್ಲಿ ಸೊಳ್ಳೆಗಳ ಕಾಟ (Mosquito control) ಹೆಚ್ಚಾಗಿರುತ್ತದೆ. ಸಂಜೆಯಾಗುತ್ತಿದ್ದಂತೆ ಮನೆಯ ಕಿಟಕಿ ಮತ್ತು ಬಾಗಿಲಿನ ಸಂದಿಯಲ್ಲಿ ನುಸುಳಿಕೊಂಡು ಮನೆಯೊಳಗೆ ಪ್ರವೇಶಿಸುತ್ತವೆ. ಮನೆಯೊಳಗೆ ಸಿಕ್ಕಿದವರಿಗೆ ಕಚ್ಚಿ ರಕ್ತ ಹೀರುತ್ತದೆ. ಇವುಗಳಿಂದ ರಾತ್ರಿ ನಿದ್ರೆ ಮಾಡಲು ಸಾದ್ಯವಾಗುವುದಿಲ್ಲ. ಹಾಗಾಗಿ ಜನರು ಸೊಳ್ಳೆ ನಿವಾರಕಗಳನ್ನು ಬಳಸುತ್ತಾರೆ.

ಆದರೆ ಈ ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾದಂತಹ ಮಾರಣಾಂತಿಕ ಕಾಯಿಲೆಗಳು ಕಾಡುತ್ತದೆ. ಹಾಗಾಗಿ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಬೇಕು. ಅದಕ್ಕಾಗಿ ನೀವು ಎಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು. ಹಾಗೇ ಸೊಳ್ಳೆಗಳ ಕಡಿತದಿಂದ ಉಂಟಾಗುವಂತಹ ಮಲೇರಿಯಾ ರೋಗವನ್ನು ತಡೆಗಟ್ಟಲು ಈ ಮನೆಮದ್ದುಗಳನ್ನು ತಪ್ಪದೇ ಬಳಸಿ.

ಆರ್ಟೆಮಿಸಿಯಾ ಆನ್ಯುವಾ(ಸ್ವೀಟ್ ವರ್ಮ್ವುಡ್ ): ಇದು ಸಾಂಪ್ರಾದಾಯಿಕ ಚೀನೀ ಔಷಧದ ಮೂಲಾಧಾರವಾಗಿದೆ. ಇದು ಮಲೇರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಆರ್ಟೆಮಿಸಿನಿನ್ ಸಂಯುಕ್ತ ಮಲೇರಿಯಾದ ಚಿಕಿತ್ಸೆಗೆ ಪರಿಣಾಮಕಾರಿಯಾಗಿದೆ. ಈ ಸಸ್ಯದ ಎಲೆಗಳಿಂದ ತಯಾರಿಸಿದ ಚಹಾವನ್ನು ಕುಡಿಯುವುದರ ಮೂಲಕ ಚಿಕಿತ್ಸೆಯನ್ನು ಪಡೆಯಬಹುದು.

ಬೇವು: ಬೇವಿನ ಎಲೆಗಳು ಮಲೇರಿಯಾ ಚಿಕಿತ್ಸೆಗೆ ಪರಿಣಾಮಕಾರಿ ಮನೆಮದ್ದಾಗಿದೆ. ಇದು ಜ್ವರ ನಿವಾರಕ ಗುಣವನ್ನು ಹೊಂದಿದೆ. ಬೇವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುವ ಮೂಲಕ ರಕ್ತ ಪರಿಚಲನೆಯ ಮೂಲಕ ಮಲೇರಿಯಾಕ್ಕೆ ಕಾರಣವಾಗುವಂತಹ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ.

ಸಿಂಕೋನಾ ಟ್ರೀ ತೊಗಟೆ: ಇದು ದಕ್ಷಿಣಾ ಅಮೇರಿಕಾದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಈ ಮರದ ತೊಗಟೆಯು ಕ್ವಿನೈನ್ ಅನ್ನು ಹೊಂದಿರುತ್ತದೆ. ಇದನ್ನು ಶತಮಾನಗಳಿಂದ ಮಲೇರಿಯಾ ಚಿಕಿತ್ಸೆಯಲ್ಲಿ ಬಳಸಲಾಗುತ್ತಿತ್ತು. ಹಾಗಾಗಿ ಜನರು ಮಲೇರಿಯಾ ತಡೆಗಟ್ಟಲು ಕ್ವಿನೈನ್ ಅಂಶವನ್ನು ಹೊಂದಿರುವ ನೀರನ್ನು ಕುಡಿಯುತ್ತಿದ್ದರು.

ಬೆಳ್ಳುಳ್ಳಿ : ಇದು ಆ್ಯಂಟಿ ಮೈಕ್ರೊಬಿಯಲ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಸೇವಿಸುವುದರಿಂದ ಮಲೇರಿಯಾ ರೋಗ ಲಕ್ಷಣಗಳನ್ನು ಕಡಿಮೆ ಮಾಡಬಹುದು. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಶುಂಠಿ: ಶುಂಠಿಯು ಮಲೇರಿಯಾಕ್ಕೆ ಚಿಕಿತ್ಸೆ ನೀಡುವ ಮತ್ತು ತಡೆಗಟ್ಟುವ ಸಾಮರ್ಥ್ಯವನ್ನು ಹೊಂದಿದೆ. ಹಾಗೇ ಇದು ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದರಲ್ಲಿರುವ ಜಿಂಜರಾಲ್ ಮತ್ತು ಜಿಂಜರೋನ್ ಉರಿಯೂತ ಮತ್ತು ಜ್ವರ ನಿವಾರಕ ಗುಣಗಳನ್ನು ಹೊಂದಿದೆ. ಇದು ಮಲೇರಿಯಾ ರೋಗಗಳಿಗೆ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: E-Pass Mandatory: ಊಟಿ, ಕೊಡೈಕೆನಾಲ್‌ ಪ್ರವಾಸ ಹೊರಟಿದ್ದೀರಾ? ಹಾಗಿದ್ದರೆ ಗಮನಿಸಿ

ಅರಿಶಿನ: ಇದನ್ನು ಆಯುರ್ವೇದದ ಚಿಕಿತ್ಸೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಕರ್ಕ್ಯುಮಿನ್ ಅಂಶವನ್ನು ಹೊಂದಿದ್ದು, ಮಲೇರಿಯಾವನ್ನು ತಡೆಗಟ್ಟಲು ಪರಿಣಾಮಕಾರಿಯಾಗಿದೆ. ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಮೂಲಕ ರೋಗಗಳನ್ನು ತಡೆಗಟ್ಟುತ್ತದೆ.

ಪಪ್ಪಾಯ ಎಲೆಗಳು: ಮಲೇರಿಯಾದ ಚಿಕಿತ್ಸೆಗೆ ಪಪ್ಪಾಯ ಎಲೆಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿರುವ ಅಂಶವು ಪ್ಲೇಟ್ಲೆಟ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಮಲೇರಿಯಾ ರೋಗವನ್ನು ಕಡಿಮೆಮಾಡುತ್ತದೆ.

Exit mobile version