Site icon Vistara News

Nail Art Craze | ಯುವತಿಯರಲ್ಲಿ ಹೆಚ್ಚುತ್ತಿದೆ ನೇಲ್‌ ಆರ್ಟ್ ಕ್ರೇಜ್

Nail art Craze

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಯುವತಿಯರಲ್ಲಿ ಇದೀಗ ನೇಲ್‌ ಆರ್ಟ್ ಕ್ರೇಝ್‌ ಹೆಚ್ಚಿದೆ. ಕೇವಲ ಐಬ್ರೋ, ಫೇಶಿಯಲ್‌, ಹೇರ್‌ ಕಲರಿಂಗ್‌, ಮೇಕ್‌ಓವರ್‌ ಹಾಗೂ ಇತರೇ ಬ್ಯೂಟಿ ಆರೈಕೆಗಳಿಗೆ ಸೀಮಿತವಾಗಿದ್ದ ಹೆಣ್ಣುಮಕ್ಕಳ ಕ್ರೇಜ್ ಇದೀಗ ನೇಲ್‌ ಆರ್ಟ್‌ನತ್ತ ವಾಲಿದೆ.

ತಾರೆಯರಿಂದ ಸಾಮಾನ್ಯ ಹುಡುಗಿಯವರೆಗೆ

ಮೊದಲೆಲ್ಲಾ ತಾರೆಯರು, ಮಾಡೆಲ್‌ಗಳು ಮಾತ್ರ ನೇಲ್‌ ಆರ್ಟ್ ಪ್ರಿಯರಾಗಿದ್ದರು. ಈಗ ಹಾಗಿಲ್ಲ. ಬಹುತೇಕ ಜೆನ್‌ ಝಿ ಹುಡುಗಿಯರು ನೇಲ್‌ ಆರ್ಟ್‌ನತ್ತ ವಾಲಿದ್ದಾರೆ. ಇನ್ನು ವಿವಾಹಿತ ಮಹಿಳೆಯರು ಮನೆಯ ಯಾವುದೇ ಸಮಾರಂಭಗಳು ಹಾಗೂ ಕುಟುಂಬದ ಮದುವೆಗಳಿದ್ದಲ್ಲಿ ನೇಲ್ ಆರ್ಟ್ ಮಾಡಿಸಿಕೊಳ್ಳುವುದು ಕಾಮನ್‌ ಆಗಿ ಹೋಗಿದೆ.

“ನೇಲ್ಆರ್ಟ್ ಒಂದು ಕಲೆ. ಅದಕ್ಕೆ ಈಗ ಮಾನ್ಯತೆ ದೊರೆತಿದೆ. ಈ ಹಿಂದೆ ನೇಲ್‌ಆರ್ಟ್ ಎಂದರೆ ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ಸಾಮಾನ್ಯ ಹುಡುಗಿಯರೂ ನೇಲ್‌ ಆರ್ಟ್ ಪ್ರಿಯರು ಈ ಕ್ರೇಜ್‌ಗೆ ಮೊರೆ ಹೋಗಿದ್ದಾರೆ. ಅದರಲ್ಲೂ ದೊಡ್ಡ ದೊಡ್ಡ ಸಮಾರಂಭಗಳಿಗೆ ನೇಲ್‌ ಆರ್ಟ್ ಮಾಡಿಸಿಕೊಳ್ಳುವವರು ಹೆಚ್ಚು” ಎನ್ನುತ್ತಾರೆ ನೇಲ್ ಆರ್ಟ್ ತಜ್ಞೆ ರಾಶಿ.

ನೇಲ್‌ ಬಾರ್‌ಗಳ ಸಂಖ್ಯೆ ಹೆಚ್ಚಳ

ಕೇವಲ ಬ್ಯೂಟಿ ಪಾರ್ಲರ್‌ಗಳಲ್ಲಿ ಮಾತ್ರವಲ್ಲ, ಇದೀಗ ಪ್ರತ್ಯೇಕವಾಗಿ ನೇಲ್‌ ಸಲೂನ್‌ ಇಲ್ಲವೇ ನೇಲ್‌ ಬಾರ್‌ ಹೆಸರಲ್ಲಿ ಇವು ಆರಂಭವಾಗಿವೆ. ಅಷ್ಟೇ ಏಕೆ? ಬಹಳಷ್ಟು ಬ್ಯೂಟಿ ಪಾರ್ಲರ್‌ಗಳು ಕೂಡ ತರಬೇತಿ ಪಡೆದ ನೇಲ್‌ ಆರ್ಟ್ ಎಕ್ಸ್‌ಪರ್ಟ್‌ಗಳನ್ನು ನೇಮಿಸಿಕೊಂಡಿದ್ದಾರೆ. ಸರ್ವೀಸ್‌ ನೀಡುತ್ತಿದ್ದಾರೆ. ಇನ್ನು ಕೆಲವು ನೇಲ್‌ ಆರ್ಟ್‌ ವಿಭಾಗವನ್ನು ಆರಂಭಿಸಿ, ಪ್ಯಾಕೇಜ್‌ ಸೇವೆ ನೀಡುತ್ತಿವೆ.

ದುಬಾರಿ ನೇಲ್ಆರ್ಟ್

ಅಂದ ಹಾಗೆ, ನೇಲ್ಆರ್ಟ್ ದರ ಆಯಾ ಡಿಸೈನ್‌ಗೆ ತಕ್ಕಂತಿರುತ್ತದೆ. ಅದರಲ್ಲೂ ಈ ನೇಲ್ಆರ್ಟ್ ಮಾಡಲು ಗಂಟೆಗಟ್ಟಲೆ ಸಮಯ ಬೇಕಾಗುತ್ತದೆ. ನೇಲ್‌ ಆರ್ಟ್ ತಜ್ಞರು ಎರಡು ಕೈಗಳಿಗೆ ನೇಲ್ಆರ್ಟ್ ಮಾಡಲು ಕನಿಷ್ಠವೆಂದರೂ ೨ ಗಂಟೆ ತೆಗೆದುಕೊಳ್ಳುತ್ತಾರೆ. ನೇಲ್‌ ಆರ್ಟ್‌ನಲ್ಲೂ ನಾನಾ ವಿಧಗಳಿವೆ. ಸಿಂಪಲ್‌, ಫಂಕಿ, ಸ್ಟಿಕ್ಕರ್‌, ಸ್ಟೆನ್ಸಿಲ್‌, ಏರ್ಬ್ರಶ್‌ ನೇಲ್ಆರ್ಟ್‌ಗಳು ಸೇರಿದಂತೆ ಸಾಕಷ್ಟು ಬಗೆಯವು ಪಾಪ್ಯುಲರ್‌ ಆಗಿವೆ. ಆದರೆ, ಇತರೇ ಬ್ಯೂಟಿ ಸರ್ವೀಸ್‌ಗಳಿಗಿಂತ ದುಬಾರಿ ಎಂಬುದನ್ನು ಮರೆಯಬಾರದು.

ನೇಲ್ಆರ್ಟ್ ಪ್ರಿಯರಿಗೆ ಒಂದಿಷ್ಟು ಸಲಹೆಗಳು

ಇದನ್ನೂ ಓದಿ| Fashion trend | ಯಂಗ್‌ಲುಕ್‌ಗೆ ಸಾಥ್‌ ನೀಡುವ ವ್ರಾಪ್‌ ಹೆಡ್‌ಬ್ಯಾಂಡ್ಸ್‌

Exit mobile version