ಬೆಂಗಳೂರು: ನಾವು ನಮ್ಮ ಮಕ್ಕಳಿಗೆ ಯಾವುದೇ ಒಂದು ಆಹಾರವನ್ನು ನೀಡುವಾಗಲೂ ತುಂಬಾ ಎಚ್ಚರಿಕೆ ವಹಿಸುತ್ತೇವೆ. ಅದಕ್ಕಾಗಿ ಮಾರುಕಟ್ಟೆಯಲ್ಲಿ ನೆಸ್ಲೆ ಕಂಪೆನಿಯ (Nestle Company) ಆಹಾರವನ್ನು ಕೇಳಿ ಪಡೆಯುತ್ತೇವೆ. ಯಾಕೆಂದರೆ ಇದು ವಿಶ್ವದ ಅತಿದೊಡ್ಡ ಮತ್ತು ಪ್ರಸಿದ್ಧ ಗ್ರಾಹಕರ ಸರಕುಗಳ ಪೂರೈಕೆಯ ಕಂಪೆನಿಯಾಗಿದೆ. ಆದರೆ ಈ ಕಂಪೆನಿಯ ಫುಡ್ ಅನ್ನು ಮಕ್ಕಳಿಗೆ ನೀಡಿದರೆ ಇದರಿಂದ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವುದರಲ್ಲಿ ಸಂಶಯವಿಲ್ಲ.
ಹೌದು ವಿಶ್ವದ ಅತಿದೊಡ್ಡ ಗ್ರಾಹಕರ ಸರಕುಗಳ ಪೂರೈಕೆಯ ಕಂಪೆನಿ ನೆಸ್ಲೆ ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಗ್ರಾಹಕರ ಮತ್ತು ಶಿಶುಗಳ ಆಹಾರದಲ್ಲಿ ಅತಿ ಹೆಚ್ಚು ಸಕ್ಕರೆಯನ್ನು ಬಳಸುತ್ತಿದೆ ಎಂಬುದಾಗಿ ಅಧ್ಯಯನದಿಂದ ತಿಳಿದುಬಂದಿದೆಯಂತೆ. ಯುನೈಟೆಡ್ ಕಿಂಗ್ ಡಮ್, ಜರ್ಮನಿ ಮತ್ತು ಸ್ವಿಟ್ಜರ್‌ಲ್ಯಾಂಡ್‌ನಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ನೆಸ್ಲೆ ಸಕ್ಕರೆ ಮುಕ್ತ ಆಹಾರವನ್ನು ಮಾರಾಟ ಮಾಡುತ್ತಿದ್ದರೆ ಏಷ್ಯನ್, ಆಫ್ರಿಕನ್ ಮತ್ತು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿ ನೆಸ್ಲೆ ಮಗುವಿನ ಆಹಾರ ಉತ್ಪನ್ನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯನ್ನು ಸೇರಿಸುತ್ತಿದೆ ಎಂದು ಅಧ್ಯಯನ ತೋರಿಸಿದೆ.
ಜನಪ್ರಿಯವಾದ ‘ಬೋರ್ನ್ ವೀಟಾ’ ಮೇಲೆ ಭಾರತ ಸರ್ಕಾರವು ಕಠಿಣ ಕ್ರಮ ಕೈಗೊಂಡ ಹಿನ್ನಲೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಈ ಮೂಲಕ ಬೊಜ್ಜು ಮತ್ತು ದೀರ್ಘಕಾಲದ ಕಾಯಿಲೆಗಳನ್ನು ನಿಗ್ರಹಿಸುವ ಗುರಿಯನ್ನು ಹೊಂದಿರುವ ಅಂತರರಾಷ್ಟ್ರೀಯ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂಬುದು ಅಧ್ಯಯನದ ಮೂಲಕ ತಿಳಿದುಬಂದಿದೆ.
ನೆಸ್ಲೆ ಕಂಪೆನಿ ಆಹಾರ ಉತ್ಪನ್ನಗಳ ಲೇಬಲ್ ಗಳಲ್ಲಿ ಪ್ಯಾಕೇಜಿಂಗ್, ವಿಟಮಿನ್ ಗಳು, ಖನಿಜಗಳು ಮತ್ತು ಉತ್ಪನ್ನಗಳಲ್ಲಿರುವ ಪೋಷಕಾಂಶಗಳ ವಿವರವನ್ನು ನೀಡುತ್ತಿದೆ ಆದರೆ ಉತ್ಪನ್ನಗಳಿಗೆ ಸೇರಿಸಿದ ಸಕ್ಕರೆ ಮಾಹಿತಿಯನ್ನು ಬಿಟ್ಟುಬಿಡಲಾಗಿದೆ ಎಂಬುದು ವರದಿಯಿಂದ ಬಹಿರಂಗಗೊಂಡಿದೆ. ಇದರಿಂದಾಗಿ ನೆಸ್ಲೆ ಕಂಪೆನಿಯ ಮೇಲೆ ಅನುಮಾನ ಹುಟ್ಟಿಕೊಂಡಿದೆ ಎನ್ನಲಾಗಿದೆ.
- ನೆಸ್ಲೆ ಆಹಾರ ಉತ್ಪನ್ನಗಳಿಗೆ ಬಳಸುತ್ತಿರುವ ಸಕ್ಕರೆ ಪ್ರಮಾಣದ ಬಗ್ಗೆ ಇಲ್ಲಿದೆ ಮಾಹಿತಿ
- ಥೈಲ್ಯಾಂಡ್ : ಒಂದು ಉತ್ಪನ್ನಕ್ಕೆ 6ಗ್ರಾಂ ಸಕ್ಕರೆ ಬಳಕೆ
- ಇಥಿಯೋಪಿಯಾ: 5.2ಗ್ರಾಂ ಸಕ್ಕರೆ ಬಳಕೆ
- ದಕ್ಷಿಣ ಆಫ್ರಿಕಾ: 4ಗ್ರಾಂ ಸಕ್ಕರೆ ಬಳಕೆ
- ಪಾಕಿಸ್ತಾನ : 2.7ಗ್ರಾಂ ಸಕ್ಕರೆ ಬಳಕೆ
- ಭಾರತ : 2.2ಗ್ರಾಂ ಸಕ್ಕರೆ ಬಳಕೆ
- ಬಾಂಗ್ಲಾದೇಶ: 1.6ಗ್ರಾಂ ಸಕ್ಕರೆ ಬಳಕೆ
- ಯುಕೆ, ಜರ್ಮನಿ, ಫ್ರಾನ್ಸ್ : ಶೂನ್ಯ ಸಕ್ಕರೆ ಬಳಕೆ
ಇದನ್ನೂ ಓದಿ: Viral Video: ಅಕ್ಷರ ಕಲಿಸಿದ ಶಿಕ್ಷಕಿಯ ಕಪಾಳಕ್ಕೆ ಹೊಡೆದ ವಿದ್ಯಾರ್ಥಿ; ಎಂಥ ಕಾಲ ಬಂತು ನೋಡಿ!
ಇದಕ್ಕೆ ಪ್ರತಿಕ್ರಿಯಿಸಿದ ನೆಸ್ಲೆ ಕಂಪೆನಿ ಉತ್ಪನ್ನಗಳಲ್ಲಿ ಸೇರಿಸಲಾದ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವುದಾಗಿ ತಿಳಿಸಿದೆ. ಆದರೆ ಈ ಅಧ್ಯಯನದಿಂದ ಹೊರಬಿದ್ದ ಮಾಹಿತಿಯಿಂದಾಗಿ ನೆಸ್ಲೆ ಆಹಾರ ಉತ್ಪನ್ನಗಳ ಮಾರಾಟದಲ್ಲಿ ಹಿನ್ನೆಡೆಯನ್ನು ಎದುರಿಸುವುದು ಖಂಡಿತ ಎನ್ನಲಾಗಿದೆ. ಒಟ್ಟಾರೆ ಮಕ್ಕಳ ಜೀವದ ಜೊತೆ ಆಟವಾಡುವಂತಹ ಆಹಾರ ಉತ್ಪನ್ನಗಳ ಕಂಪನಿಯನ್ನು ಬುಡಸಹಿತ ಕಿತ್ತು ಹಾಕುವುದು ಉತ್ತಮ ಎಂಬ ಮಾತುಗಳು ಕೇಳಿಬರುತ್ತಿವೆ.