ಶೀಲಾ ಸಿ. ಶೆಟ್ಟಿ, ಬೆಂಗಳೂರು
“ಶೈನ್ ಲೈಕ್ ಎ ಸ್ಟಾರ್” ಈ ಹೊಸ ವರ್ಷದ ಫ್ಯಾಷನ್ ಉಡುಗೆಗಳ ಥೀಮ್. ಹೌದು, ಎಂದಿನಂತೆ ಈ ಬಾರಿಯೂ ನವನವೀನ ವಿನ್ಯಾಸದ ಶೈನಿಂಗ್ ಉಡುಗೆ ತೊಡುಗೆಗಳು ನ್ಯೂ ಇಯರ್ ಪಾರ್ಟಿಯ ರಂಗು ಹೆಚ್ಚಿಸಲು ಎಂಟ್ರಿ ನೀಡಿವೆ.
ಝಗಮಗಿಸುವ ಸ್ಟ್ರಾಪ್ ಫ್ರಾಕ್, ಕಟೌಟ್ ಫ್ರಾಕ್, ವೀ ನೆಕ್, ಟರ್ಟಲ್ ನೆಕ್ ಟಾಪ್ಸ್, ಮ್ಯಾಕ್ಸಿ, ಇನ್ನು ಹಾಫ್ ಶೈನಿಂಗ್ ಕಾನ್ಸೆಪ್ಟ್‌ನ ಡಬಲ್ ಶೇಡ್ ಇರುವಂತಹ ಮೆಟಾಲಿಕ್, ಸಿಲ್ವರ್, ಗೋಲ್ಡನ್, ಬ್ಲ್ಯೂ ಬೆರ್ರಿ, ಬ್ಲಾಕ್ ಸಿಲ್ವರ್ ವರ್ಣಮಯ ಶಿಮ್ಮರಿಂಗ್ ಇರುವಂತಹ ಶೈನಿಂಗ್ ಶೇಡ್ಸ್ ಡಿಸೈನರ್‌ವೇರ್‌ಗಳು ಈ ಸೀಸನ್ ಫ್ಯಾಷನ್‌ನಲ್ಲಿ ಎಂಟ್ರಿ ನೀಡಿವೆ.
ಈಗ ಮೊದಲಿನಂತೆ ಶೈನಿಂಗ್ ವೇರ್‌ಗಳು ಕೇವಲ ಡಾನ್ಸ್‌ಗೆ ಮಾತ್ರ ಸೀಮಿತವಾಗಿಲ್ಲ
ಇದೀಗ ಪಾರ್ಟಿವೇರ್‌ಗಳಾಗಿಯೂ ಬದಲಾಗಿವೆ. ಅಷ್ಟು ಮಾತ್ರವಲ್ಲ, ಇವು ಕೇವಲ ಕ್ಯಾಶುವಲ್ ಹಾಗೂ ಪಾರ್ಟಿವೇರ್‌ಗಳಲ್ಲಿ ಮಾತ್ರವಲ್ಲ, ಬದಲಿಗೆ ಸೆಮಿ ಎಥ್ನಿಕ್ ಲುಕ್‌ನಲ್ಲೂ ಹೆಚ್ಚೆಚ್ಚು ಬಿಡುಗಡೆಗೊಂಡಿವೆ. ನಾನಾ ವಿನ್ಯಾಸಗಳಲ್ಲಿ ವೈವಿಧ್ಯಮಯ ಕಾನ್ಸೆಪ್ಟ್‌ಗಳು ವಿನೂತನ ಡಿಸೈನರ್‌ವೇರ್‌ನ ಹುಟ್ಟಿಗೆ ಕಾರಣವಾಗಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.
ಹೊಸ ವರ್ಷದ ಹರ್ಷಕ್ಕೆ ಶೈನಿಂಗ್‌ವೇರ್
ಗೋಲ್ಡನ್, ಸಿಲ್ವರ್‌ನ ಮೆಟಾಲಿಕ್ ಶೇಡ್ಸ್‌ನ ವೆಸ್ಟರ್ನ್ ಔಟ್‌ಫಿಟ್ಸ್ ಎಲ್ಲೆಡೆ ರಾರಾಜಿಸುತ್ತಿದ್ದು, ನಾನಾ ವಿನ್ಯಾಸಗಳಲ್ಲಿ ಲಭ್ಯ. ಟೀನೇಜ್ ಹಾಗೂ ಕಾಲೇಜು ಹುಡುಗಿಯರಿಗೆ ಗ್ಲಾಮರಸ್ ವಿನ್ಯಾಸದಲ್ಲಿ ದೊರೆಯುತ್ತಿವೆ. ನೋಡಲು ಫಂಕಿ ಲುಕ್ ನೀಡುತ್ತಿವೆ. ಕೊಂಚ ಮಾಡರ್ನ್ ಲುಕ್‌ನಲ್ಲಿರುವವರಿಗೆ ಈ ಮೆಟಾಲಿಕ್ ಶೇಡ್ಸ್ ಹೊಂದುತ್ತವೆ. ಅದರಲ್ಲೂಡಸ್ಕಿ ಸ್ಕಿನ್ ಟೋನ್ ಇರುವವರಿಗೆ ಹಾಗೂ ವೀಟೀಶ್ ಸ್ಕಿನ್ ಟೋನ್ ಇರುವವರಿಗೆ ಚೆನ್ನಾಗಿ ಕಾಣುತ್ತವೆ.
ಝಗಮಗಿಸುವ ಮಿಕ್ಸ್ ಮ್ಯಾಚ್ ಕಾನ್ಸೆಪ್ಟ್
ಮಿಕ್ಸ್ ಮ್ಯಾಚ್ ಪ್ರಿಯರಿಗೆ ಪ್ರಿಯವಾಗುವಂತೆ ಇಂದು ಶೈನಿಂಗ್ ಟಾಪ್ಸ್ ಹಾಗೂ ಲೇಯರ್ ಲುಕ್ ನೀಡುವ ಕೋಟ್ಸ್, ಜಾಕೆಟ್ಸ್, ಶ್ರಗ್ಸ್ ಹೊಸ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ. ಜೀನ್ಸ್ ಪ್ಯಾಂಟ್‌ಗೂ ಧರಿಸಬಹುದಾದ ಟಾಪ್‌ಗಳು ಆಗಮಿಸಿವೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.
ಸೆಮಿ ಎಥ್ನಿಕ್ ಶೈನಿಂಗ್‌ವೇರ್
ಸೆಮಿ ಎಥ್ನಿಕ್ ಗೌನ್ ಹಾಗೂ ಸಿಕ್ವಿನ್ಸ್ ಡ್ರೆಸ್‌ಗಳು ಮಹಿಳೆಯರಿಗೆ ಸೂಟ್ ಆಗುವಂತಹ ವಿನ್ಯಾಸದಲ್ಲಿ ದೊರೆಯುತ್ತಿವೆ. ನೋಡಲು ಕಫ್ತಾನ್ ಶೈಲಿಯಲ್ಲಿ ಡಿಸೈನರ್‌ವೇರ್‌ಗಳು ವಿವಾಹಿತ ಮಹಿಳೆಯರಿಗೆಂದು ಬಿಡುಗಡೆಗೊಂಡಿವೆ.
ಪ್ರಿಂಟ್ಸ್ ಶೈನಿಂಗ್‌ವೇರ್ ಈ ಬಾರಿಯ ಟ್ರೆಂಡ್‌ನಲ್ಲಿಲ್ಲ. ಹಾಗಾಗಿ ಅವನ್ನು ಆವಾಯ್ಡ್ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್ ರಿಚಾ.
ಪಾರ್ಟಿ ಶೈನಿಂಗ್‌ವೇರ್ ಆಯ್ಕೆಗೂ ಮುನ್ನ
- ಈ ಡಿಸೈನರ್ವೇರ್ಗೆ ಹೆಚ್ಚು ಆಕ್ಸೆಸರೀಸ್ ಬೇಡ.
- ಹೇರ್ಸ್ಟೈಲ್ ಮೆಸ್ಸಿಯಾಗಿರಬಾರದು.
- ಮಿನೆರಲ್ ಮೇಕಪ್ ಮತ್ತಷ್ಟು ಹೊಳಪು ನೀಡಬಲ್ಲದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Jacket Saree Fashion | ಚಳಿಗಾಲದಲ್ಲಿ ಟ್ರೆಂಡಿಯಾದ ಜಾಕೆಟ್ ಸೀರೆ ಫ್ಯಾಷನ್