ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವರ್ಷದ ಮೊದಲ ನ್ಯೂಯಾರ್ಕ್ ಫ್ಯಾಷನ್ ವೀಕ್ (New York Fashion Week), ಅಂತಾರಾಷ್ಟ್ರೀಯ ಮಟ್ಟದ ನಾನಾ ಪ್ರಯೋಗಾತ್ಮಕ ಸೀಸನ್‌ವೇರ್‌ಗಳ ಅನಾವರಣಕ್ಕೆ ನಾಂದಿ ಹಾಡಿತು. ಪ್ರತಿ ಸಾಲಿನಂತೆ ಈ ಬಾರಿಯೂ ಅಚ್ಚರಿ ಮೂಡಿಸುವಂತಹ ಸೀಸನ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ಹೆಜ್ಜೆ ಹಾಕಿದರು.
ಐದು ದಿನಗಳ ಕಾಲ ನಿರಂತರವಾಗಿ ನಡೆದ ಅಂತರಾಷ್ಟ್ರೀಯ ಮಟ್ಟದ ಈ ಫ್ಯಾಷನ್ ಶೋ ರನ್ ವೇನಲ್ಲಿ ಮುಂಬರುವ ಸೀಸನ್‌ನ ಸಾಕಷ್ಟು ಡಿಸೈನರ್‌ವೇರ್‌ಗಳು ಕಾಣಿಸಿಕೊಂಡವು. ಜಾಗತಿಕ ಮಟ್ಟದಲ್ಲಿ ನಡೆಯುವ ಈ ಶೋನಲ್ಲಿ ಆಯ್ದ ಡಿಸೈನರ್‌ಗಳು ಪಾಲ್ಗೊಂಡಿದ್ದರು. ಈ ಮಧ್ಯೆ ವ್ಯಾಲೇಂಟೇನ್ಸ್ ಡೇಗೂ (Valentine’s Day) ಪ್ರಾಮುಖ್ಯತೆ ನೀಡಲಾಗಿತ್ತು. ಶೋ ನಡೆಯುವ ಸುತ್ತಮುತ್ತ ರೆಡ್ ಕಲರ್ ಡ್ರೆಸ್ ಕೋಡ್‌ಗೆ ಮಾನ್ಯತೆ ನೀಡಲಾಗಿತ್ತು. ಈ ಶೇಡ್ ಧರಿಸಿದ ಫ್ಯಾಷನ್ ಪ್ರಿಯರನ್ನು ಆರಿಸಿ, ಶೋ ಮೂಲಕ ಶುಭಾಶಯ ಕೋರಲಾಯಿತು.
ಹುಬ್ಬೇರಿಸಿದ ಬ್ರಾಂಡ್‌ಗಳ ಡಿಸೈನರ್‌ವೇರ್
ವಿ ಆರ್ ಆಲ್ ಅನಿಮಲ್ಸ್ ಎಂಬ ಟ್ಯಾಗ್ ಲೈನ್‌ನಲ್ಲಿ ಶೋಕೇಸ್ ಮಾಡಿದ ಪ್ರೈವೆಟ್ ಪಾಲಿಸಿ ಬ್ರಾಂಡ್, ಎಕೆಎನ್ ವಾಸ್, ಎಂಬ್ರಾಯ್ಡರಿ ಹಾಗೂ ನಿಟ್ ಥೀಮ್ ಹೊಂದಿದ ಮೆಲ್ಕೇಸ್, ಪಾಪ್ ಕಲರ್‌ಗಳನ್ನು ಹೈಲೈಟ್ ಮಾಡಿದ ಸರ್ಜಿಯೊ ಹಡ್ಸನ್ ಬ್ರಾಂಡ್, ಡಿಫರೆಂಟ್ ವಿಂಟರ್‌ವೇರ್ ಅನಾವರಣ ಮಾಡಿದ ಸಂಜುಗ್ವಾನ್, ಮೊಟ್ಟ ಮೊದಲ ಬಾರಿಗೆ ನ್ಯೂಯಾರ್ಕ್ ಫ್ಯಾಷನ್ ವೀಕ್‌ನಲ್ಲಿ (New York Fashion Week) ಡೆಬ್ಯೂ ನೀಡಿದ ಹೆರೊನ್ ಪ್ರೆಸ್ಟಾನ್, ರನ್ ವೇ ಫ್ಯಾಷನ್‌ವೇರ್‌ನ ಪ್ರೊಯೆನ್ಜಾಸ್ಕಾಲರ್, ಪ್ರಬಾಲ್ ಗುರುಂಗ್‌ನ ವಿಂಟರ್ ಪಾರ್ಟಿ ಡಿಸೈನರ್‌ವೇರ್ಸ್, ಸಿಮ್ಕಾಐನ ಒವರ್‌ಸೈಝ್ಡ್ ಫ್ಯಾಷನ್‌ವೇರ್ಸ್ ಸೇರಿದಂತೆ ಪ್ರತಿಷ್ಠಿತ ಬ್ರಾಂಡ್‌ಗಳು ತಂತಮ್ಮ ಎಕ್ಸ್‌ಕ್ಲೂಸೀವ್ ಡಿಸೈನರ್‌ವೇರ್‌ಗಳನ್ನು ರನ್ ವೇ ಮೇಲೆ ಅನಾವರಣಗೊಳಿಸಿ, ನೋಡುಗರಿಂದ ಮೆಚ್ಚುಗೆ ಪಡೆದವು.
ಫ್ಯಾಷನ್ ವಿಮರ್ಶಕರ ಪ್ರಶಂಸೆ
ಕೆಲವು ಡಿಸೈನರ್‌ವೇರ್‌ಗಳು ವೇರಬಲ್ ಲಿಸ್ಟ್‌ಗೆ ಸೇರಿದರೇ, ಅದಕ್ಕಿಂತ ಹೆಚ್ಚು ಫ್ಯಾಷನ್ ವೇರ್‌ಗಳು ನಾನ್‌ವೇರಬಲ್ ಡಿಸೈನ್ ಲಿಸ್ಟ್‌ಗೆ ಸೇರಿದವು. ಹೊಸ ಡಿಸೈನರ್‌ವೇರ್‌ಗಳು ಪ್ರಯೋಗಾತ್ಮಕ ಫ್ಯಾಷನ್‌ನಲ್ಲಿ ಅಂತಾರಾಷ್ಟ್ರೀಯ ಫ್ಯಾಷನ್ ವಿಮರ್ಶಕರ ಕಟು ವಿಮರ್ಶೆಗೆ ಒಳಗಾದರೂ ಉತ್ತಮ ಪ್ರಶಂಸೆಯನ್ನೇ ಗಳಿಸಿದವು. ಕೆಲವು ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾದವು. ಒಟ್ಟಿನಲ್ಲಿ ಈ ಸಾಲಿನ ನ್ಯೂಯಾರ್ಕ್ ಫ್ಯಾಷನ್ ವೀಕ್ ವ್ಯಾಲೆಂಟೈನ್ಸ್ ಡೇಯನ್ನು (Valentine’s Day) ಒಳಗೊಂಡಂತೆ ಆಚರಿಸಲ್ಪಟ್ಟದ್ದು ವಿಶೇಷ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion News: ಭಾವಿ ಮಾಡೆಲ್‌ಗಳಿಗೆ ಅವಕಾಶ ಕಲ್ಪಿಸುತ್ತಿರುವ ಯಶ್ ಇಂಟರ್‌ನ್ಯಾಷನಲ್ ಫ್ಯಾಷನ್ ವೀಕ್