-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಕ್ಕಳ ಮೇಕಪ್‌ಗೆ ನೋ ಹೇಳಿ! ಹೌದು, ನಿಮ್ಮ ಮಕ್ಕಳಿಗೆ ಮೇಕಪ್ ಅಂದ್ರೆ ತುಂಬಾ ಇಷ್ಟಾನಾ? (No Makeup For Kids) ಮಕ್ಕಳು ಸದಾ ನಿಮ್ಮ ಮೇಕಪ್ ಕಿಟ್ ತೆಗೆದುಕೊಂಡು ಹಚ್ಚಿಕೊಳ್ಳುತ್ತಾರೆಯೇ? ಲಿಪ್‌ಸ್ಟಿಕ್, ಐ ಲೈನರ್, ಬ್ಲಷರ್, ಐ ಮೇಕಪ್, ಫೌಂಡೇಶನ್, ಕನ್ಸಿಲರ್ ಹೀಗೆ ನಾನಾ ಬಗೆಯ ಮೇಕಪ್ ಪ್ರಾಡಕ್ಟ್‌ಗಳನ್ನು ಆಗಾಗ ಬಳಸುತ್ತಾರೆಯೇ? ಹಾಗಾದಲ್ಲಿ, ಖಂಡಿತ ಅವರ ಕೈಗಳಿಗೆ ಇವು ಸಿಗದಂತೆ ನೋಡಿಕೊಳ್ಳಿ. ಪದೇಪದೇ ಮಕ್ಕಳು ಮೇಕಪ್ ಮಾಡಿಕೊಳ್ಳುತ್ತಿದ್ದಲ್ಲಿ ಅಥವಾ ಬಳಸುತ್ತಿದ್ದಲ್ಲಿ ಮಕ್ಕಳ ಸೂಕ್ಷ್ಮ ತ್ವಚೆಯ ಆರೋಗ್ಯಕ್ಕೆ ಧಕ್ಕೆಯಾಗಬಹುದು, ಮಕ್ಕಳ ಸುಕೋಮಲ ಚರ್ಮ ಅತಿ ಚಿಕ್ಕ ವಯಸ್ಸಿನಲ್ಲಿಯೇ ಹಾಳಾಗಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಫರ್ಟ್ಸ್.
ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾಯ್ತು ಕಿಡ್ಸ್ ಮೇಕಪ್ ಡೆಮೋ
ಇತ್ತೀಚೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಬ್ಯೂಟಿ ಪಾಠಕ್ಕೆ ಅಥವಾ ಡೆಮೋಗೆ ಮಕ್ಕಳನ್ನು ಬಳಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ. ಮಕ್ಕಳ ಅತಿ ಕೋಮಲವಾದ ತ್ವಚೆಗೆ ಮೇಕಪ್ ಮಾಡುವುದು ಅಥವಾ ಅವರನ್ನು ನಾನಾ ಬಗೆಯ ಮೇಕಪ್‌ನಲ್ಲಿ ತೋರಿಸುವುದು ಹೆಚ್ಚಾಗಿದೆ. ಇದು ಕೆಲವು ಬ್ಯೂಟಿ ಟ್ರೈನಿಂಗ್ ಪಡೆಯುವಂತವರು ಇಲ್ಲವೇ ಬ್ಯೂಟಿ ಎಕ್ಸ್‌ಫರ್ಟ್‌ಗಳು ಪ್ರಮೋಷನ್‌ಗಾಗಿ ಮಾಡುತ್ತಾರೆ. ಆದರೆ, ಇದನ್ನು ನೋಡುವ ಮಕ್ಕಳು ಕೂಡ ಇವನ್ನು ಫಾಲೋ ಮಾಡಲು ಆರಂಭಿಸಿದ್ದಾರೆ. ಇದು ತಪ್ಪು ಎನ್ನುತ್ತಾರೆ ಸ್ಕಿನ್ ಸ್ಪೆಷಲಿಸ್ಟ್‌ಗಳು. ಅವರ ಪ್ರಕಾರ, ಇಂತಹ ಪ್ರಯೋಗಗಳು ಮಕ್ಕಳ ತ್ವಚೆಯ ಮೇಲೆ ಮಾಡಬಾರದು. ಅಪರೂಪಕ್ಕೆ ಓಕೆ. ಆದರೆ, ಇದು ಪ್ರತಿದಿನದ ಚಟವಾಗಬಾರದು ಎಂದು ಸಲಹೆ ನೀಡುತ್ತಾರೆ.
ಮಕ್ಕಳ ಸುಕೋಮಲ ತ್ವಚೆಗೆ ಹಾನಿ
ಸ್ಕಿನ್ ಸ್ಪೆಷಲಿಸ್ಟ್ ಜಯಶ್ರೀ ಅವರ ಪ್ರಕಾರ, ಮಕ್ಕಳ ತ್ವಚೆ ತೀರಾ ಸೂಕ್ಷ್ಮವಾಗಿರುತ್ತದೆ. ಪದೇ ಪದೇ ಮೇಕಪ್ ಹಚ್ಚಿದಾಗ ಅವರ ಚರ್ಮ ದ ಆರೋಗ್ಯ ಹದಗೆಡುತ್ತದೆ. ತ್ವಚೆಯ ಮೇಲೆ ಕೆಮಿಕಲ್ ಸಹಿತವಾಗಿರುವ ಮೇಕಪ್ ಪ್ರಾಡಕ್ಟ್‌ಗಳು ಒರಟಾಗುವಂತೆ ಮಾಡುತ್ತವೆ. ಕೆಲವಂತೂ ಚರ್ಮದ ಒಳಗೆ ಇಳಿದು ರ‍್ಯಾಶಸ್, ಕೆಂಪಾಗುವುದು, ಗುಳ್ಳೆಗಳು ಮೂಡುವುದು ಆರಂಭವಾಗುತ್ತದೆ. ಹದಿ ಹರೆಯದ ವಯಸ್ಸಿಗಿಂತ ಮುಂಚೆಯೇ ತ್ವಚೆಯ ಸಮಸ್ಯೆ ಆರಂಭವಾಗುವ ಲಕ್ಷಣಗಳು ಕಂಡು ಬರುತ್ತವೆ ಎನ್ನುತ್ತಾರೆ.
ಇದನ್ನೂ ಓದಿ: Monsoon Fashion: ಮಾನ್ಸೂನ್‌ಗೆ ಮರಳಿದೆ ಕಾರ್ಪೋರೇಟ್ ಯುವತಿಯರ ಬ್ಲೇಜರ್ ಜಾಕೆಟ್ ಫ್ಯಾಷನ್
- ದೊಡ್ಡವರಿಗಿಂತ ಅತಿ ಹೆಚ್ಚು ಬೇಗ ಮಕ್ಕಳಲ್ಲಿ ಮೇಕಪ್ನಲ್ಲಿರುವ ಟಾಕ್ಸಿಕ್ ಅಂಶವನ್ನು ಹೀರಿಕೊಳ್ಳುವುದು ಕಂಡು ಬರುತ್ತದೆ.
- ಮೇಕಪ್ ಬಳಸಿದಾಗ ಮಕ್ಕಳ ತ್ವಚೆಯು ಅತಿ ಬೇಗ ಮಾಯಿಶ್ಚರೈಸರ್ ಅಂಶವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ.
- ತೀರಾ ಬಳಸಬೇಕಾದ ಸಂದರ್ಭ ಎದುರಾದಲ್ಲಿ ಅರ್ಗಾನಿಕ್ ಬ್ಯೂಟಿ ಪ್ರಾಡಕ್ಟ್ ಬಳಸಿ.
- ಸ್ಕಿನ್ ರ‍್ಯಾಶಸ್ ಆದಲ್ಲಿ ಯಾವುದೇ ಕಾರಣಕ್ಕೂ ಬಳಸಬೇಡಿ.
( ಲೇಖಕಿ ಫ್ಯಾಷನ್ ಪತ್ರಕರ್ತೆ )