ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಲರ್‌ಫುಲ್ ಹೋಳಿ ಸಿಲೆಬ್ರೇಷನ್‌ಗೆ ಸಾಥ್ ನೀಡುವಂತಹ ಹಾಗೂ ಚರ್ಮಕ್ಕೆ ಧಕ್ಕೆಯಾಗದಂತಹ ಅರ್ಗಾನಿಕ್ ಬಣ್ಣಗಳು ಮಾರುಕಟ್ಟೆಗೆ ಕಾಲಿಟ್ಟಿದೆ. ಜನರಲ್ಲಿ ಆರೋಗ್ಯ ಹಾಗೂ ಚರ್ಮದ ಕಾಳಜಿ ಹೆಚ್ಚಾಗತೊಡಗಿದಂತೆ ಕೆಮಿಕಲ್ ರಹಿತ ಬಣ್ಣಗಳನ್ನು ಬಳಸುವ ಅಭ್ಯಾಸ ಮೊದಲಿಗಿಂತ ಹೆಚ್ಚಾಗಿದೆ. ಇದಕ್ಕೆ ಪೂರಕ ಎಂಬಂತೆ, ಅರ್ಗಾನಿಕ್ ಹೋಳಿ ಪೌಡರ್ ಖರೀದಿಸುವ ಗ್ರಾಹಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಸ್ಕಿನ್ ಎಕ್ಸ್‌ಪರ್ಟ್ಸ್.
ಅರಿವು ಮತ್ತಷ್ಟು ಹೆಚ್ಚಾಗಬೇಕು
ಇತ್ತೀಚೆಗೆ ಕೆಮಿಕಲ್‌ಸಹಿತ ದೊರೆಯುವ ಹೋಳಿ ಬಣ್ಣದಿಂದ ಕಣ್ಣು ಹಾಗೂ ಚರ್ಮದ ಮೇಲೆ ಉಂಟಾಗುವ ಅಡ್ಡ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿದೆ. ಹಾಗಾಗಿ ಇದೀಗ ಸಾಕಷ್ಟು ಮಂದಿ ಅರ್ಗಾನಿಕ್ ಹೋಳಿ ಬಣ್ಣಗಳನ್ನು ಕೇಳಿ ಖರೀದಿಸುತ್ತಾರೆ ಎನ್ನುತ್ತಾರೆ ಮಾರಾಟಗಾರರಾದ ರಂಗದೊರೈ. ಅವರ ಪ್ರಕಾರ, ಈ ಅರ್ಗಾನಿಕ್ ಬಣ್ಣಗಳನ್ನು ಬಳಸುವ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಇದರ ಬಳಕೆ ಮತ್ತಷ್ಟು ಹೆಚ್ಚಾಗಬಹುದು.
ಸೋಷಿಯಲ್ ಮೀಡಿಯಾ ಸಾಥ್
ಈ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ, ಅರ್ಗಾನಿಕ್ ಹೋಳಿ ಪೌಡರ್ ಖರೀದಿಸುವವರ ಸಂಖ್ಯೆ ಮೊದಲಿಗಿಂತ ಈ ಬಾರಿ ಹೆಚ್ಚಾಗಿದೆ. ಯಾವುದೇ ಸೈಡ್‌ಎಫೆಕ್ಟ್ ಮಾಡದ ಅರ್ಗಾನಿಕ್ ಹೋಳಿ ಪೌಡರ್‌ಗಳು ಹಾಗೂ ಲಿಕ್ವಿಡ್ ಬಳಸುವ ಕುರಿತಂತೆ ಜಾಗೃತಿ ಕಾರ್ಯಕ್ರಮಗಳು, ಅಪ್‌ಡೇಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಾದಂತೆ ಇವುಗಳನ್ನು ಬಳಸುವವರೂ ಅಧಿಕಗೊಂಡಿದ್ದಾರೆ ಎನ್ನುತ್ತಾರೆ ಟೆಕ್ ಸ್ಯಾವಿ ರಿಚರ್ಡ್.
ಆನ್‌ಲೈನ್‌ನಲ್ಲಿ ಸ್ಕಿನ್ ಫ್ರೆಂಡ್ಲಿ ಹೋಳಿ ಪೌಡರ್ ಮಾರಾಟ
ಇದೀಗ ಆನ್‌ಲೈನ್‌ನಲ್ಲಿ ಸಾಕಷ್ಟು ಬ್ರಾಂಡ್‌ನ ಸ್ಕಿನ್ ಫ್ರೆಂಡ್ಲಿ ಹೋಳಿ ಪೌಡರ್‌ಗಳು ಹಾಗೂ ಹೋಳಿ ನಂತರ ಬಳಸುವ ಸ್ಕಿನ್ ಕೇರ್, ಫೇಸ್ ಕೇರ್ ಪ್ರಾಡಕ್ಟ್‌ಗಳು ಬಿಡುಗಡೆಗೊಂಡಿವೆ. ಬ್ಯೂಟಿ ಇನ್‌ಫ್ಲೂಯೆನ್ಸರ್ಸ್ ಮುಖಾಂತರ ಮಹಿಳೆಯರನ್ನು ತಲುಪುತ್ತಿವೆ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.
“ನಾವು ಪ್ರತಿವರ್ಷ ಸಾವಯವ ವಸ್ತುಗಳಿಂದ ತಯಾರಿಸಿದ ಬಣ್ಣಗಳನ್ನು ಖರೀದಿಸುತ್ತೇವೆ. ಇವು ತ್ವಚೆಯ ಫ್ರೆಂಡ್ಲಿ ಕೂಡ” ಎನ್ನುತ್ತಾರೆ ಹೋಳಿ ಸೆಲೆಬ್ರೇಟ್ ಮಾಡುವ ರಾಶಿ. ಇನ್ನು ಅಕ್ಷತಾ ಹೇಳುವಂತೆ, ಸೋಷಿಯಲ್ ಮೀಡಿಯಾದ ಬ್ಯೂಟಿ ಇನ್‌ಫ್ಲೂಯೆನ್ಸರ್ ಮುಖಾಂತರ ನಾನಾ ಅರ್ಗಾನಿಕ್ ಬ್ರಾಂಡ್‌ನ ಬಣ್ಣಗಳು ಪರಿಚಯಗೊಳ್ಳುತ್ತಿವೆ. ಇದು ಕೊಳ್ಳಲು ಸಹಕಾರಿ.
ಇದರೊಂದಿಗೆ ಆನ್‌ಲೈನ್ ಮೂಲಕ ಮನೆಮನೆಗೆ ಅರ್ಗಾನಿಕ್ ಬಣ್ಣದ ಪಾಕೇಟ್‌ಗಳನ್ನು ತಲುಪಿಸುವ ವ್ಯವಸ್ಥೆಯನ್ನು ಬಹಳಷ್ಟು ಬೆಂಗಳೂರಿನ ಲೋಕಲ್ ಅಂಗಡಿಗಳು ಮಾಡುತ್ತಿವೆ. ಕೆಲವೆಡೆ ಈ ಬಣ್ಣಗಳೊಂದಿಗೆ ಗಿಫ್ಟ್ ಹ್ಯಾಂಪರ್ ಹಾಗೂ ವೋಚರ್‌ಗಳನ್ನು ನೀಡಲಾಗುತ್ತಿದೆ.
ಅರ್ಗಾನಿಕ್ ಹೋಳಿ ಪೌಡರ್ ಖರೀದಿಸುವಾಗ
- ಸಿದ್ಧಪಡಿಸಿದ ಹಾಗೂ ಎಕ್ಸ್ಪೈರಿ ಡೇಟ್ ನೋಡಿ ಕೊಳ್ಳಿ.
- ಆದಷ್ಟೂ ತಿಳಿ ವರ್ಣಗಳನ್ನು ಆಯ್ಕೆ ಮಾಡಿ.
- ಕೆಲವು ಬ್ರಾಂಡ್ಗಳು ಅರ್ಗಾನಿಕ್ ಬಣ್ಣಗಳು ಪ್ಯಾಕೇಟ್ನೊಂದಿಗೆ ಸ್ಕಿನ್ ಕೇರ್ ಪ್ರಾಡಕ್ಟ್ಗಳ ಸ್ಯಾಂಪಲ್ಗಳನ್ನು ನೀಡುತ್ತಿವೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sandalwood Star Fashion: ಸ್ಯಾಂಡಲ್‌ವುಡ್ ನಟಿ ಸಂಯಕ್ತಾ ಹೆಗ್ಡೆ ಲೈಫ್‌ಸ್ಟೈಲ್‌ಗೆ ತಕ್ಕಂತೆ ಬದಲಾಗುವ ಫ್ಯಾಷನ್