Site icon Vistara News

Paternity Leave: ಜನನ ಪ್ರಮಾಣ ಭಾರೀ ಕುಸಿತ: ನೂತನ ಅಪ್ಪಂದಿರಿಗೆ ರಜೆ ಹೆಚ್ಚಿಸಲು ಮುಂದಾದ ಸಿಂಗಾಪುರ

#image_title

ಸಿಂಗಾಪುರ: ಅಧಿಕ ಜನನ ಪ್ರಮಾಣ ಎಷ್ಟು ಅಪಾಯಕಾರಿಯೂ ಅದೇ ರೀತಿ ಅತ್ಯಂತ ಕಡಿಮೆ ಜನನ ಪ್ರಮಾಣವೂ ಕೂಡ ದೇಶದ ಆರ್ಥಿಕ ಪರಿಸ್ಥಿತಿಗೆ ಹೊಡೆತ ನೀಡುವ ವಿಚಾರವೇ. ಚೀನಾ, ಜಪಾನ್ ಅಂತಹ ದೇಶಗಳು ಈ ರೀತಿಯ ಸಮಸ್ಯೆಯಿಂದ ಬಳಲುತ್ತಿವೆ. ಇದೀಗ ಸಿಂಗಾಪುರದಲ್ಲಿಯೂ ಕೂಡ ಜನನ ಪ್ರಮಾಣದಲ್ಲಿ ಭಾರೀ ಕುಸಿತ ಉಂಟಾಗಿದ್ದು, ಅದನ್ನು ಸಮತೋಲನಕ್ಕೆ ತರುವುದಕ್ಕೆ ಸರ್ಕಾರ ಹಲವು ರೀತಿಯ ಸಾಹಸಗಳನ್ನು ಮಾಡಲಾರಂಭಿಸಿದೆ. ಅದೇ ನಿಟ್ಟಿನಲ್ಲಿ ನೂತನವಾಗಿ ತಂದೆಯಾಗುವವರಿಗೆ ಕಚೇರಿಗಳಲ್ಲಿ ನೀಡಲಾಗುವ ಪಿತೃತ್ವ ರಜೆ (Paternity Leave) ಅನ್ನು ಹೆಚ್ಚಿಸುವುದಾಗಿ ತಿಳಿಸಲಾಗಿದೆ.

ಇದನ್ನೂ ಓದಿ: Viral Video: ಅಮೆರಿಕ ಅಧ್ಯಕ್ಷ ಬೈಡೆನ್​ ಎನ್ನುವ ಬದಲು ಅಧ್ಯಕ್ಷ ಒಬಾಮಾ ಎಂದ ವೈಟ್​ಹೌಸ್​​ ಮಾಧ್ಯಮ ಕಾರ್ಯದರ್ಶಿ
ಸಿಂಗಾಪುರದಲ್ಲಿ ಈಗಾಗಲೇ ಪಿತೃತ್ವ ರಜೆ ಜಾರಿಯಲ್ಲಿದೆ. 2013ರಿಂದಲೂ ನೂತನ ತಂದೆಯಂದಿರಿಗೆ 2 ವಾರಗಳ ರಜೆ ನೀಡಲಾಗುತ್ತಿದೆ. ಆದರೆ ಈ ರಜೆ ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಕಡಿಮೆಯಿದೆ. ವರದಿಯ ಪ್ರಕಾರ 2018ರಲ್ಲಿ ಕೇವಲ ಮೂರನೇ ಒಂದರಷ್ಟು ನೂತನ ತಂದೆಯರು ಮಾತ್ರವೇ ಈ ರಜೆ ಬಳಕೆ ಮಾಡಿಕೊಂಡಿದ್ದಾರೆ. ತಾಯಂದಿರೇ ಮಕ್ಕಳನ್ನು ನೋಡಿಕೊಳ್ಳಬೇಕು ಎನ್ನುವ ಭಾವನೆ, ಕಚೇರಿಯಲ್ಲಿ ಹೆಚ್ಚು ಕೆಲಸ ಮಾಡಿ ಒಳ್ಳೆಯ ಕೆಲಸಗಾರ ಎಂದೆನಿಸಿಕೊಳ್ಳಬೇಕೆಂಬ ಭಾವನೆಯಿಂದಾಗಿ ಜನರು ರಜೆ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಹೇಳಲಾಗಿದೆ.

ಅದೇ ಕಾರಣಕ್ಕೆ ಇದೀಗ ಪಿತೃತ್ವ ರಜೆಯನ್ನು ನಾಲ್ಕು ವಾರಗಳಿಗೆ ಹೆಚ್ಚಿಸಲಾಗಿದೆ. ಎರಡು ವಾರಗಳ ಕಾಲ ಹೆಚ್ಚುವರಿ ರಜೆ ನೀಡುವುದು ಕಂಪನಿಯ ನಿರ್ಧಾರವಾಗಿರುತ್ತದೆ. ಆದರೆ ಮುಂಬರುವ ದಿನಗಳಲ್ಲಿ ಅದನ್ನು ಕಡ್ಡಾಯ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ. ಅದೇ ರೀತಿ ನೂತನ ತಂದೆ-ತಾಯಿಗೆ ಮಗುವಿನ ಬೋನಸ್ ನೀಡುವುದು ಹಾಗೆಯೇ ವಾರ್ಷಿಕವಾಗಿ ಸಂಬಳರಹಿತ ರಜೆಯ ಸಂಖ್ಯೆಯನ್ನು ಹೆಚ್ಚಿಸುವ ಕ್ರಮಗಳೂ ಕೂಡ ಸಿಂಗಾಪುರದಲ್ಲಿ ಜಾರಿಯಲ್ಲಿದೆ.

Exit mobile version