Site icon Vistara News

Patriotic Fashion: ಸ್ವಾತಂತ್ರ್ಯೋತ್ಸವಕ್ಕೆ ಟ್ರೆಂಡಿಯಾದ ದೇಸಿ ಫ್ಯಾಷನ್‌

Patriotic Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ವಾತಂತ್ರ್ಯೋತ್ಸವದ ಸಂಭ್ರಮಕ್ಕೆ ಸಾಥ್‌ ನೀಡುವ ದೇಸಿ ಫ್ಯಾಷನ್‌ ಇದೀಗ ಟ್ರೆಂಡಿಯಾಗಿದೆ. ಸದ್ಯಕ್ಕೆ ವೆಸ್ಟರ್ನ್ ವೇರ್ ಸೈಡಿಗೆ ಸರಿದಿದ್ದು, ದೇಸಿ ಫ್ಯಾಷನ್‌ ಎಲ್ಲೆಡೆ ರಾರಾಜಿಸುತ್ತಿದೆ. ಈ ಸಂಭ್ರಮಕ್ಕೆ ಪೂರಕ ಎಂಬಂತೆ ಫ್ಯಾಷನ್‌ ಲೋಕವೂ ನಾನಾ ರೀತಿಯಲ್ಲಿ ಸಾಥ್‌ ನೀಡುತ್ತಿದೆ. ಈ ಸಂಭ್ರಮಾಚರಣೆಗೆ ಯಾವ್ಯಾವ ಬಗೆಯ ಉಡುಪು ಧರಿಸಬಹುದು, ಆಕ್ಸೇಸರೀಸ್‌ಗಳಿಂದ ಹೇಗೆಲ್ಲಾ ಸಿಂಗಾರಗೊಳ್ಳಬಹುದು ಎಂಬುದರ ಬಗ್ಗೆ ಫ್ಯಾಷನ್‌ ಡಿಸೈನರ್‌ಗಳು ಇಲ್ಲಿ ವಿವರಿಸಿದ್ದಾರೆ.

ಊರ್ವಶಿ ರೌತೇಲಾ, ಬಾಲಿವುಡ್‌ ನಟಿ

ಟ್ರೆಂಡಿ ಖಾದಿ ಕಾಟನ್‌ ಡಿಸೈನರ್‌ವೇರ್‌

ಈ ಸೀಸನ್‌ನಲ್ಲಿ ಖಾದಿ ಹಾಗೂ ಕಾಟನ್‌ ಫ್ಯಾಬ್ರಿಕ್‌ನಲ್ಲಿ ನಾನಾ ಡಿಸೈನ್‌ನ ಒಂದಕ್ಕಿಂತ ಒಂದು ಆಕರ್ಷಕವಾಗಿ ಕಾಣುವಂತಹ ಉಡುಪುಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಮಹಿಳೆಯರಿಗೆಂದೇ ಖಾದಿ ಅಥವಾ ಕಾಟನ್‌ ಸೀರೆಗಳು ಬಂದಿವೆ. ಸ್ವಾತಂತ್ರ್ಯ ದಿನಾಚರಣೆಯಂದು ಧರಿಸಬಹುದಾದ ಲೈಟ್‌ ವರ್ಣದ ಕ್ರೀಮ್‌, ಸ್ಕಾರ್ಲೆಟ್‌, ವೈಟ್‌ ವಿತ್‌ ಬಾರ್ಡರ್‌ ಇರುವಂತವು ಚಾಲ್ತಿಯಲ್ಲಿವೆ. ಇವು ದಿನಾಚಾರಣೆಗೆ ಪರ್ಫೆಕ್ಟ್‌ ಸೂಟ್‌ ಆಗುತ್ತವೆ. ಅಂತವನ್ನು ಆಯ್ಕೆ ಮಾಡಿ ಧರಿಸಿ ಎನ್ನುತ್ತಾರೆ ಡಿಸೈನರ್ಸ್‌.

ಸಾರಾ ಅಲಿ ಖಾನ್‌, ಬಾಲಿವುಡ್‌ ನಟಿ

ಕುರ್ತಾ- ಕಮೀಜ್ ಪ್ರೇಮ

ಲಾಂಗ್‌ ಸಲ್ವಾರ್‌ ಕಮೀಜ್ ಹಾಗೂ ಕುರ್ತಾಗಳು ಈ ದಿನದ ವಿಶೇಷ ಆಚರಣೆಗೆ ಸೂಟ್‌ ಆಗುತ್ತವೆ ಎಂಬ ಕಾರಣದಿಂದಾಗಿ ಇವುಗಳ ಖರೀದಿಯೂ ಭರದಿಂದ ಸಾಗಿದೆ. ಆದಷ್ಟೂ ದೇಸಿ ಲುಕ್‌ ನೀಡುವಂತವನ್ನು ಕೊಂಡು ಧರಿಸಿ. ತೀರಾ ಗ್ಲಾಮರಸ್‌ ಆಗಿ ಕಾಣುವಂತದ್ದನ್ನು ಆವಾಯ್ಡ್‌ ಮಾಡಿ. ನೋಡಲು ಡಿಸೆಂಟ್‌ ಲುಕ್‌ ನೀಡುವಂತದ್ದನ್ನು ಕೊಂಡು ಧರಿಸುವುದು ಉತ್ತಮ ಎಂದು ಸಲಹೆ ನೀಡುತ್ತಾರೆ ಮಾಡೆಲ್‌ ರೀಮಾ.

ಭೂಮಿ ಫಡ್ನೇಕರ್‌, ಬಾಲಿವುಡ್‌ ನಟಿ

“ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಮಯ. ಹಾಗಾಗಿ ಈಗಾಗಲೇ ಫ್ಯಾಷನ್‌ ಪ್ರೇಮಿಗಳೆಲ್ಲರೂ ವೆಸ್ಟರ್ನ್‌ವೇರ್‌, ಕ್ಯಾಶುವಲ್‌ವೇರ್‌ಗೆ ಅಲ್ಪ ವಿರಾಮ ಹಾಕಿದ್ದಾರೆ. ಮಾನಿನಿಯರು ಸಿಂಪಲ್‌ ಹಾಗೂ ಇಂಡಿಯನ್‌ ಲುಕ್‌ ನೀಡುವ ಎಥ್ನಿಕ್‌ ಡ್ರೆಸ್‌ ಹಾಗೂ ಸೀರೆಗಳನ್ನು ಖರೀದಿಸತೊಡಗಿದ್ದಾರೆ. ಇನ್ನು ಪುರುಷರು ಲೈಟ್‌ ಶೇಡ್ಸ್‌ನ ಕುರ್ತಾ, ಜುಬ್ಬಾ ಹಾಗೂ ಕಮೀಝ್‌ಗೆ ಮೊರೆ ಹೋಗಿದ್ದಾರೆ. ಪಕ್ಕಾ ಭಾರತೀಯರ ಸ್ಟೈಲ್‌ಗೆ ಎಲ್ಲರೂ ಫಿದಾ ಆಗಿದ್ದಾರೆ” ಎನ್ನುತ್ತಾರೆ ಸ್ಟೈಲಿಸ್ಟ್ಗಳು.

ರಂಗಿನ ತ್ರಿವರ್ಣ ದುಪಟ್ಟಾ

ಕ್ರೇಪ್‌, ಜಾರ್ಜೆಟ್‌, ಕಾಟನ್‌, ನೈಲಾನ್‌ ಸೇರಿದಂತೆ ನಾನಾ ಮೆಟಿರಿಯಲ್‌ನಲ್ಲಿ ಲಭ್ಯವಿರುವ ತ್ರಿವರ್ಣ ದುಪಟ್ಟಾ ಇಂದು ಅತಿ ಹೆಚ್ಚು ಬೇಡಿಕೆಯಲ್ಲಿದೆ. ಒಂದು ಸಾದಾ ಉಡುಪಿನ ಮೇಲೆ ಈ ದುಪಟ್ಟಾವನ್ನು ಧರಿಸಿದರಾಯಿತು. ದೇಶಪ್ರೇಮ ವ್ಯಕ್ತಪಡಿಸಲು ಇದು ಸಹಕಾರಿಯಾಗುತ್ತದೆ ಎನ್ನುತ್ತಾರೆ ಮಾರಾಟಗಾರರು.

ನುಸ್ರತ್‌ ಬರೌಚಾ, ಬಾಲಿವುಡ್‌ ನಟಿ

ಆಕ್ಸೆಸರೀಸ್‌ಗಳು ಹೀಗಿರಲಿ

ದಿನಾಚರಣೆಯಂದು ಧರಿಸುವ ಆಕ್ಸೆಸರೀಸ್‌ಗಳು ಯಾವುದೇ ಕಾರಣಕ್ಕೂ ಆಭಾಸವುಂಟು ಮಾಡಬಾರದು. ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ತ್ರಿವರ್ಣ ಮಿಕ್ಸ್‌ ಮ್ಯಾಚ್‌ ಮಾಡುವಂತಹ ನಾನಾ ಹ್ಯಾಂಗಿಂಗ್‌ ಇಯರಿಂಗ್‌ಗಳನ್ನು ಧರಿಸಬಹುದು. ತ್ರಿವರ್ಣದ ಡಬ್ಬಲ್‌ ರಬ್ಬರ್‌ ಬ್ಯಾಂಡನ್ನು ಕೈಗಳಿಗೆ ಧರಿಸಬಹುದು. ಕೂದಲಿಗೂ ಹಾಕಬಹುದು ಎನ್ನುತ್ತಾರೆ ಸ್ಟೈಲಿಸ್ಸ್ಟ್‌.

ಸೋಫಿ ಚೌಧರಿ, ಬಾಲಿವುಡ್‌ ನಟಿ

ಎಚ್ಚರ ವಹಿಸಿ

ದೇಶಪ್ರೇಮದ ಹೆಸರಲ್ಲಿ ಬಾವುಟ, ಸಿಂಬಲ್ಸ್‌, ಉಡುಗೆ-ತೊಡುಗೆಯನ್ನು ಹೇಗೇ ಬೇಕೋ ಹಾಗೆ ಧರಿಸಕೂಡದು. ಯಾವುದೇ ಉಡುಪಿನಲ್ಲಿ ಇಂಪ್ರೆಷನ್‌ ತರುವ ಮುನ್ನ ಆದಷ್ಟೂ ಎಚ್ಚರವಹಿಸಬೇಕು. ದೇಶಪ್ರೇಮದ ಹೆಸರಲ್ಲಿ ರಾಷ್ಟ್ರದ ಘನತೆ ಹಾಗೂ ಗೌರವಕ್ಕೆ ಧಕ್ಕೆಯುಂಟಾಗುವಂತಹ ಫ್ಯಾಷನ್‌ ಮಾಡಬಾರದು ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Saree Fashion: ಸ್ವಾತಂತ್ರ್ಯೋತ್ಸವ ಸೀಸನ್‌ನಲ್ಲಿ ಟ್ರೆಂಡಿಯಾದ ಕಾಟನ್‌ ಮಿಕ್ಸ್‌ ಸೀರೆ

Exit mobile version