ಶೀಲಾ ಸಿ. ಶೆಟ್ಟಿ, ಬೆಂಗಳೂರು
ಪ್ಲಂಪಿಯಾಗಿದ್ದರೇನಂತೆ! ಪ್ಲಸ್ ಸೈಜ್ ಫ್ಯಾಷನ್ (Plus Size Fashion) ಅಳವಡಿಸಿಕೊಂಡರಾಯಿತು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು. ಸ್ಮಾರ್ಟಾಗಿ ಕಾಣಿಸಲು ತೆಳ್ಳಗೆ ಉದ್ದನಾಗಿರಬೇಕು, ಪರ್ಫೆಕ್ಟ್ ಬಾಡಿ ಮಾಸ್ ಇಂಡೆಕ್ಸ್ ಹೊಂದಿರಬೇಕು ಎಂಬ ಫ್ಯಾಷನ್ ರೂಲ್ಸ್‌ಗೆ ಇದೀಗ ಬ್ರೇಕ್ ಬಿದ್ದಿದೆ. ದಪ್ಪಗಿದ್ದರೂ ಫ್ಯಾಷೆನಬಲ್ ಆಗಿ ಕಾಣಿಸಬಹುದು ಎಂಬ ಪ್ಲಸ್ ಸೈಜ್ ಫ್ಯಾಷನ್ (Plus Size Fashion) ಮಂತ್ರಕ್ಕೆ ಫ್ಯಾಷನ್ ಪ್ರಿಯರು ಸೈ ಎಂದಿದ್ದಾರೆ.
ಏನಿದು ಪ್ಲಸ್ ಸೈಜ್ ಫ್ಯಾಷನ್
ನಾನಿರುವ ದಪ್ಪಕ್ಕೆ ಡ್ರೆಸ್ ಮ್ಯಾಚ್ ಆಗುವುದಿಲ್ಲ. ಫಿಟ್ಟಿಂಗ್ ಸರಿಯಾಗಿ ಕೂರುವುದಿಲ್ಲ. ಕಲರ್ಸ್, ಡಿಸೈನ್‌ಗಳು ಹೊಂದುವುದಿಲ್ಲ ಎಂಬುದು ಬಹುತೇಕ ಪ್ಲಂಪಿಯಾಗಿರುವ ಪ್ಲಸ್ ಸೈಜ್ ಮಹಿಳೆಯರ ಹಾಗೂ ಪುರುಷರ ದೂರಾಗಿತ್ತು. ಆದರೆ ಇದೀಗ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳುತ್ತಿರುವ ಪ್ಲಸ್ ಸೈಜ್ ಫ್ಯಾಷನ್ ವೇರ್‌ಗಳು (Plus Size Fashion Wear) ಈ ದೂರನ್ನು ದೂರ ಮಾಡಿವೆ. ಇದಕ್ಕೆಂದೇ ಪ್ರತ್ಯೇಕ ಫ್ಯಾಷನ್ ಸ್ಟೇಟ್‌ಮೆಂಟನ್ನು ಬಿಡುಗಡೆಗೊಳಿಸಿವೆ. ಇದಕ್ಕೆ ಸಾಥ್ ನೀಡಲು ಸಾಕಷ್ಟು ಬ್ರಾಂಡೆಡ್ ಫ್ಯಾಷನ್‌ವೇರ್‌ಗಳು ನಾನಾ ವಿನ್ಯಾಸದ ಹಾಗೂ ವರ್ಣದ ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿವೆ. ಪ್ಲಸ್ ಸೈಝ್ ಫ್ಯಾಷನ್‌ವೇರ್ ವಿಚಾರಕ್ಕೆ ಬಂದಲ್ಲಿ, ಮಾನಿನಿಯರು ಹಾಗೂ ಪುರುಷರಿಗೆ ಪ್ರತ್ಯೇಕ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಿವೆ.
ಎಲಿಗೆಂಟ್ ಲುಕ್‌ಗೆ ಆದ್ಯತೆ
ಹುಡುಗಿಯರಿಗಾದರೇ ಒಂದಿಷ್ಟು ಬದಲಾವಣೆ, ವಿವಾಹಿತ ಅಥವಾ ಮಕ್ಕಳ ತಾಯಂದಿರಿಗೆ ಪ್ರತ್ಯೇಕ ಸ್ಟಿಚ್ಚಿಂಗ್ ಕಾನ್ಸೆಪ್ಟ್ ಅಳವಡಿಸಲಾಗಿರುತ್ತದೆ. ಹುಡುಗಿಯರ ಪ್ಲಸ್ ಸೈಜ್ ಉಡುಪುಗಳಲ್ಲಿ ಬಾಡಿ ಕರ್ವ್‌ಗೆ ಹೆಚ್ಚು ಗಮನ ನೀಡಲಾಗಿರುತ್ತದೆ. ಹಾಗಾಗಿ ಕೊಂಚ ದಪ್ಪವಾಗಿರುವ ಹುಡುಗಿಯರು ಫಿಟ್ಟಿಂಗ್ ಡ್ರೆಸ್ ಹಾಕಿಕೊಳ್ಳಬಹುದು. ಇಲ್ಲಿ ಅತಿ ಹೆಚ್ಚಾಗಿ ವರ್ಣ ಹಾಗೂ ಉದ್ದನಾಗಿ ಕಾಣಿಸುವಂತೆ ಆಯ್ದ ವಿನ್ಯಾಸಕ್ಕೆ ಹೆಚ್ಚು ಮಹತ್ವ ನೀಡಲಾಗಿರುತ್ತದೆ. ಇದು ಹುಡುಗಿಯರ ಪ್ಲಸ್ ಸೈಜ್ ಉಡುಪುಗಳ ಹೈಲೈಟ್. ಆದರೆ, ಇವು ಕೊಂಚ ದುಬಾರಿ ಎನ್ನುತ್ತಾರೆ ಮಾಡೆಲ್ ದಿವ್ಯಾ.
ಇನ್ನು ವಿವಾಹಿತ ಮಹಿಳೆಯರಿಗೆ ಟಮ್ಮಿಯನ್ನು ಕರಗಿಸುವುದು ಕಷ್ಟದ ಕೆಲಸ. ಇಂತಹವರಿಗೆ ಸೂಟ್ ಆಗುವಂತಹ ಎ ಲೈನ್, ಟಮ್ಮಿ ಸೈಡ್ ಫ್ರಿಲ್, ಅಂಬ್ರೆಲ್ಲಾ ಕಟ್ ಹೀಗೆ ನಾನಾ ಬಗೆಯವು ದೊರೆಯುತ್ತವೆ. ಕೊಳ್ಳುವಾಗ ಅವರವರ ಬಾಡಿ ನೇಚರ್‌ಗೆ ತಕ್ಕಂತೆ ಟ್ರಯಲ್ ನೋಡಿ ಕೊಳ್ಳುವುದು ಉತ್ತಮ ಎನ್ನುತ್ತಾರೆ ಮಾಡೆಲ್ ದೀಪ್ತಿ.
ಪುರುಷರಿಗೆ ಹೆಚ್ಚು ಆಯ್ಕೆಗಳಿಲ್ಲ!
ಪುರುಷರಿಗೆ ಪ್ಲಸ್ ಸೈಜ್‌ನಲ್ಲಿ ಹೆಚ್ಚು ಆಪ್ಷನ್‌ಗಳಿಲ್ಲ! ಹೆಚ್ಚು ಡಿಸೈನ್ ಕೂಡ ಸಿಗುವುದಿಲ್ಲ. ಹಾಗಾಗಿ ಹೆಚ್ಚು ಫ್ಯಾಷನೆಬಲ್ ಆಗಿ ಕಾಣಿಸಲು ಸಾಧ್ಯವಾಗದು. ಪುರುಷರು ಪ್ಲಸ್ ಸೈಜ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಎಕ್ಸೆಲ್ ಮೊರೆ ಹೋಗುತ್ತಾರೆ. ಇನ್ನು ಪಸ್ಲ್‌ಸೈಜ್‌ನದ್ದು ಆಯ್ಕೆ ಮಾಡುವುದಾದಲ್ಲಿ ಅತಿ ಹೆಚ್ಚು ದುಬಾರಿಯ ಬ್ರಾಂಡ್‌ಗೆ ಮೊರೆ ಹೋಗಬೇಕಾಗುತ್ತದೆ ಎನ್ನುತ್ತಾರೆ ಮಾಡೆಲ್ ಮಹಾಜನ್.
ಪ್ಲಸ್ ಸೈಜ್ ಖರೀದಿಸುವಾಗ ಗಮನವಿಡಿ
- ಆದಷ್ಟೂ ಬ್ರಾಂಡ್ನದ್ದು ಕೊಳ್ಳಿ.
- ವರ್ಣ ಹಾಗೂ ವಿನ್ಯಾಸಕ್ಕೆ ಮೊದಲು ಪ್ರಾಮುಖ್ಯತೆ ನೀಡಿ.
- ದುಬಾರಿಯಾಗಿರುವುದರಿಂದ ಆದಷ್ಟೂ ಮಿಕ್ಸ್ ಮ್ಯಾಚ್ ಟ್ರಿಕ್ಸ್ ಬಳಸಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Celebrity Fashion Corner: ಪೇಜೆಂಟ್‌ಗಳು ಆತ್ಮವಿಶ್ವಾಸ ಹೆಚ್ಚಿಸುತ್ತವೆ: ಮಿಸೆಸ್ ಇಂಡಿಯಾ ಗ್ಲೋಬ್ ವೀಣಾ ಜೈನ್