ಲಂಡನ್: ಭವಿಷ್ಯದಲ್ಲಿ ಬ್ರಿಟನ್ ರಾಜ ಹಾಗೂ ರಾಣಿ ಆಗಲಿರುವ ಡ್ಯೂಕ್ ಮತ್ತು ಡಚೆಸ್‌ನ (Prince William and Kate) ಮೊಟ್ಟಮೊದಲು ಜತೆಯಾಗಿ ಚಿತ್ರಿಸಿಕೊಂಡ ವರ್ಣಚಿತ್ರವನ್ನು ಶುಕ್ರವಾರ ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿರುವ ವಸ್ತುಸಂಗ್ರಹಾಲಯದಲ್ಲಿ ಅನಾವರಣಗೊಳಿಸಲಾಯಿತು. ಕಲಾವಿದ ಜೇಮೀ ಕೋರೆತ್ ಈ ವರ್ಣಚಿತ್ರ ರಚಿಸಿದ್ದಾರೆ.
2020ರ ಮಾರ್ಚ್‌ನಲ್ಲಿ ಗಿನ್ನೆಸ್ ಸ್ಟೋರ್‌ಹೌಸ್‌ಗೆ ಧರಿಸಿದ್ದ ದಿ ವ್ಯಾಂಪೈರ್‌ಸ್ ವೈಫ್ ಎನ್ನುವ ಹೊಳೆಯುವ ಹಸಿರು ಉಡುಪನ್ನು ಕೇಟ್ ಧರಿಸಿದ್ದಾರೆ. ಚಿತ್ರದಲ್ಲಿ ಪ್ರಿನ್ಸ್ ವಿಲಿಯಂರನ್ನು ತನ್ನ ತೋಳುಗಳಿಂದ ಅಪ್ಪಿಕೊಂಡು ಪಕ್ಕಕ್ಕೆ ನೋಡುತ್ತಿದ್ದಾರೆ. ಡಚೆಸ್ ಐತಿಹಾಸಿಕ ಕಲಾಕೃತಿಗೆ ಹೊಂದುವ ಉಡುಪನ್ನು ಧರಿಸಿದ್ದರೆ ವಿಲಿಯಂ ಕಪ್ಪು ಸೂಟ್ ಧರಿಸಿಕೊಂಡಿದ್ದಾರೆ.
“ಇದು ಅವರನ್ನು ಒಟ್ಟಿಗೆ ಚಿತ್ರಿಸಿದ ಮೊದಲ ಭಾವಚಿತ್ರ. ಕೇಂಬ್ರಿಡ್ಜ್‌ನ ಡ್ಯೂಕ್ ಮತ್ತು ಡಚೆಸ್ ಅವರ ಸಾರ್ವಜನಿಕ ಮತ್ತು ಖಾಸಗಿ ಜೀವನದ ನಡುವಿನ ಸಮತೋಲನದ ಭಾವನೆಯನ್ನು ಚಿತ್ರವು ಪ್ರಚೋದಿಸಬೇಕೆಂದು ನಾನು ಬಯಸುತ್ತೇನೆ” ಎಂದು ಚಿತ್ರವನ್ನು ರಚಿಸಿರುವ ಕಲಾವಿದ ಜೇಮೀ ಕೋರೆತ್ ಹೇಳಿದ್ದಾರೆ.
1800ರ ದಶಕದ ಮುತ್ತು ಮತ್ತು ವಜ್ರದ ಕಿವಿಯೋಲೆ, ಬ್ರೇಸ್‌ಲೆಟ್ ಅನ್ನು ಕೆಟ್ ಧರಿಸಿದ್ದಾರೆ. ಇದನ್ನು ರಾಜಮನೆತನದ ತಲೆ ತಲೆಮಾರುಗಳಿಂದ ಧರಿಸಲಾಗುತ್ತದೆ. ಮ್ಯೂಸಿಯಂನಲ್ಲಿ ಸಾರ್ವಜನಿಕರಿಗೆ ಈ ಭಾವಚಿತ್ರವನ್ನು ಪ್ರದರ್ಶೀಸಲು ಇರಿಸಿದ್ದಾಗ ಗುರುವಾರ ವಿಲಿಯಂ ಮತ್ತು ಕೇಟ್ ಕೇಂಬ್ರಿಡ್ಜ್‌ಗೆ ಭೇಟಿ ನೀಡಿದರು. ತಮ್ಮದೇ ವರ್ಣಚಿತ್ರವನ್ನು ಚಿತ್ರವನ್ನು ವೀಕ್ಷಿಸಿದರು.
ಇದನ್ನೂ ಓದಿ: ಡಾ. ರಾಜ್ ಕುಟುಂಬದ ಮತ್ತೊಂದು ಕುಡಿ ಎಂಟ್ರಿ: ಯುವ ರಾಜ್‌ಕುಮಾರ್ ಪದಾರ್ಪಣೆ ಘೋಷಣೆ