Site icon Vistara News

Expensive lehenga | ಅಂಬಾನಿ ಫ್ಯಾಮಿಲಿ ಭಾವಿ ಸೊಸೆ ರಾಧಿಕಾ ಮರ್ಚೆಂಟ್‌ ಧರಿಸಿದ ಲೆಹೆಂಗಾ ರೇಟು ಎಷ್ಟಿರಬಹುದು?

Expensive lehenga

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಅಂಬಾನಿ ಫ್ಯಾಮಿಲಿಯ ಭಾವಿ ಸೊಸೆ ರಾಧಿಕಾ ಮರ್ಚೆಂಟ್‌ (Radhika Merchant), ತನ್ನ ಎಂಗೇಜ್‌ಮೆಂಟ್‌ನಲ್ಲಿ ಧರಿಸಿರುವ ಗೋಲ್ಡನ್‌ ಡಿಸೈನರ್‌ ಲೆಹೆಂಗಾ (Golden Designer Lehenga) ಬೆಲೆ ಎಷ್ಟಿರಬಹುದು ಎಂದುಕೊಂಡಿದ್ದೀರಾ? ಲಕ್ಷ ಲಕ್ಷ ರೂ.ಗಳಷ್ಟು (Expensive lehenga) ಬೆಲೆಬಾಳುವಂತದ್ದು. ಆ ಲೆಹೆಂಗಾ ಬೆಲೆಯಲ್ಲಿ ಸಾಮಾನ್ಯ ವ್ಯಕ್ತಿ ಒಂದು ಫ್ಲ್ಯಾಟ್‌ ಖರೀದಿಸಬಹುದು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು. ಹೌದು. ಈ ಲೆಹೆಂಗಾದ ನಿಖರವಾದ ಬೆಲೆಯನ್ನು ಡಿಸೈನರ್‌ ಹಾಗೂ ಫ್ಯಾಮಿಲಿಯವರು ಎಲ್ಲಿಯೂ ತಿಳಿಸದಿದ್ದರೂ ಫ್ಯಾಷನ್‌ ಡಿಸೈನರ್‌ಗಳು ಮಾತ್ರ ಬೆಲೆಯನ್ನು ಅಂದಾಜಿಸಿದ್ದಾರೆ.

ಸೆಲೆಬ್ರಿಟಿ ಡಿಸೈನರ್‌ ಸಂದೀಪ್‌ ಕೋಸ್ಲಾ ಡಿಸೈನರ್‌ವೇರ್‌

ಅಂದಹಾಗೆ, ಬಾಲಿವುಡ್‌ನ ಸೆಲೆಬ್ರಿಟಿ ಡಿಸೈನರ್‌ ಅಬುಜಾನಿ ಸಂದೀಪ್‌ ಕೋಸ್ಲಾ ಡಿಸೈನ್‌ ಮಾಡಿರುವ ಈ ಗೋಲ್ಡನ್‌ ಡಿಸೈನರ್‌ ಲೆಹೆಂಗಾ ಸಾಮಾನ್ಯವಾದುದಲ್ಲ! ಸೆಮಿ ಪ್ರಿಶಿಯಸ್‌ ಸ್ಟೋನ್ಸ್‌ (Semi Precious Stones) ಹಾಗೂ ಬಂಗಾರದ ಬೀಡ್ಸ್‌ಗಳನ್ನೊಳಗೊಂಡಿದೆ. ಬಂಗಾರದ ಥ್ರೆಡ್‌ನಲ್ಲಿ ಜರ್ದೋಸಿ ವರ್ಕ್, ಹ್ಯಾಂಡ್‌ ಎಂಬ್ರಾಯ್ಡರಿ ಒಳಗೊಂಡಿದೆ. ಬಾರ್ಡರ್‌ನಲ್ಲಿ ಬಂಗಾರದ ಝರಿ ಹೊಂದಿದೆ. ಅಮೆರಿಕನ್‌ ಡೈಮಂಡ್‌ಗಳಿಂದ ಸಿಂಗಾರಗೊಂಡಿದೆ. ಇನ್ನು ಫ್ಯಾಬ್ರಿಕ್‌ ಅತಿ ಶುದ್ಧ ರೇಷ್ಮೆಯದ್ದಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಹ್ಯಾಂಡ್‌ಮೇಡ್‌ ನಕ್ಷಿಬಾರ್ಡರ್‌ ಈ ಲೆಹೆಂಗಾದ ಸೌಂದರ್ಯ ಹೆಚ್ಚಿಸಿದೆ.

ಈ ಡಿಸೈನರ್‌ವೇರ್‌ನ ನಿಗದಿತ ಬೆಲೆಯನ್ನು ಅಂಬಾನಿ ಫ್ಯಾಮಿಲಿಯವರು ಎಲ್ಲಿಯೂ ಹೇಳಿಕೊಂಡಿಲ್ಲ! ಡಿಸೈನರ್‌ ಕೂಡ ಅನಾವರಣಗೊಳಿಸಿಲ್ಲ. ಆದರೆ, ಇದು ಕೋಟಿ ರೂ.ಗಳಿಗೆ ಹತ್ತಿರವಾಗಿದೆ ಎನ್ನುತ್ತಿದ್ದಾರೆ ಫ್ಯಾಷನ್‌ ವಿಮರ್ಶಕರು.

ರಾಯಲ್‌ ಡಿಸೈನರ್‌ ಲೆಹೆಂಗಾ

ಇನ್ನು ಸೆಲೆಬ್ರಿಟಿ ಡಿಸೈನರ್‌ ಸಂದೀಪ್‌ ಕೋಸ್ಲಾರವರು ಹೇಳಿಕೊಂಡಂತೆ, ರಾಧಿಕಾ ಮರ್ಚೆಂಟ್‌ರ ನಿಶ್ಚಿತಾರ್ಥದ (radhika merchant engagement) ಈ ಸುಂದರ ಗೋಲ್ಡನ್‌ ಲೆಹೆಂಗಾದ ಒಂದೊಂದು ವಿನ್ಯಾಸವು ವಿಶೇಷವಾಗಿದ್ದು, ಪ್ರತಿಯೊಂದು ಹ್ಯಾಂಡ್‌ಮೇಡ್‌ ಆಗಿದೆ. ಈ ಲೆಹೆಂಗಾ ಡಿಸೈನ್‌ ಮಾಡಲೆಂದು ತಿಂಗಳಾನುಗಟ್ಟಲೆಯಿಂದಲೇ ಪ್ಲಾನ್‌ ಮಾಡಲಾಗಿತ್ತು. ಲೆಹೆಂಗಾ ಬ್ಲೌಸ್‌, ದುಪಟ್ಟಾ ಹಾಗೂ ಲಂಗ ಎಲ್ಲಕ್ಕೂ ಭಾರತೀಯ ಪರಂಪರೆಯ ಇತಿಹಾಸದಲ್ಲಿ ರಾಯಲ್‌ ಫ್ಯಾಮಿಲಿಯವರು ಧರಿಸುತ್ತಿದ್ದ ಫ್ಯಾಬ್ರಿಕ್‌ ಬಳಕೆ ಮಾಡಲಾಗಿದೆ. ಇಡೀ ಲೆಹೆಂಗಾ ಒಂದೇ ಶೇಡ್‌ನದ್ದಾಗಿದ್ದು, ಅತ್ಯಮೂಲ್ಯ ಕ್ರಿಸ್ಟಲ್‌ಗಳನ್ನು ಬಳಸಲಾಗಿದೆ ಎಂದಿದ್ದಾರೆ.

ಅಂಬಾನಿ ಫ್ಯಾಮಿಲಿಯ ಡಿಸೈನರ್‌ವೇರ್‌ಗಳು

ಇನ್ನು ಅಂಬಾನಿ ಫ್ಯಾಮಿಲಿಯ ಎಲ್ಲರೂ ಧರಿಸಿರುವ ಒಂದೊಂದು ಡಿಸೈನ್‌ನ ಡಿಸೈನರ್‌ವೇರ್‌ಗಳು ಎಲ್ಲವೂ ಕೂಡ ಲಕ್ಷಗಟ್ಟಲೆ ಬೆಲೆಬಾಳುವಂತದ್ದಾಗಿದೆ. ಇದಕ್ಕಾಗಿ ಎಕ್ಸ್‌ಕ್ಲೂಸಿವ್‌ ಫ್ಯಾಬ್ರಿಕ್‌ (Exclusive fabric) ಬಳಸಲಾಗಿದೆ. ಸಾಮಾನ್ಯ ಬೀಡ್ಸ್‌ ಬಳಕೆ ಬದಲು ಪ್ರಿಶಿಯಸ್‌ ಸ್ಟೋನ್ಸ್‌ ಬಳಸಲಾಗಿದೆ. ರಾಯಲ್‌ ಫ್ಯಾಮಿಲಿಯ ಈ ರಾಯಲ್‌ ಡಿಸೈನರ್‌ವೇರ್‌ಗಳು (Designer Wears) ರಾಜ-ಮಹಾರಾಜರ ದಿರಸನ್ನು ನೆನಪಿಸುವಂತಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರು.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ| Star fashion | ಕಾರ್ಪೋರೇಟ್‌ ಕ್ಷೇತ್ರದ ಮಹಿಳೆಯರ ಮನಗೆದ್ದ ನಟಿ ಶ್ರುತಿ ಹಾಸನ್‌ ಇಂಡೋ – ವೆಸ್ಟರ್ನ್ ಸೀರೆ ಸ್ವಾಗ್‌

Exit mobile version