ಶೀಲಾ ಸಿ. ಶೆಟ್ಟಿ, ಬೆಂಗಳೂರು
ರಕ್ಷಾಬಂಧನಕ್ಕೆ ನಾನಾ ಬಗೆಯ ಟ್ರೆಂಡಿ ಔಟ್‌ಫಿಟ್‌ಗಳು ಆಗಮಿಸಿವೆ. ಟ್ರೆಡಿಷನಲ್ ಪ್ರಿಯರಿಗೆ ಹಾಗೂ ವೆಸ್ಟರ್ನ್ ಔಟ್‌ಫಿಟ್ ಪ್ರಿಯರಿಗೂ ಸೂಟ್ ಆಗುವಂತಹ ಡಿಸೈನರ್‌ವೇರ್‌ಗಳು ಎಂಟ್ರಿ ನೀಡಿದೆ. ಆಯಾ ಸೆಲೆಬ್ರೇಷನ್‌ಗೆ ಅನುಗುಣವಾಗಿ ಡ್ರೆಸ್‌ಕೋಡ್ ಆಯ್ಕೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಡಿಸೈನರ್ ಸಾಕ್ಷಿ. ಈ ಹಬ್ಬಕ್ಕೆ ಸೂಟ್ ಆಗುವಂತೆ ಹೇಗೆಲ್ಲಾ ೫ ಟ್ರೆಂಡಿ ಡಿಸೈನರ್‌ವೇರ್‌ಗಳನ್ನು ಧರಿಸಬಹುದು ಎಂಬುದರ ಬಗ್ಗೆ ಅವರು ಇಲ್ಲಿ ವಿವರಿಸಿದ್ದಾರೆ.
- ಟ್ರೆಡಿಷನಲ್ ಔಟ್‌ಫಿಟ್
ಸಹೋದರ-ಸಹೋದರಿಯರು ಇಬ್ಬರೂ ಟ್ರೆಡಿಷನಲ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡರೇ ಉತ್ತಮ. ಇದು ನೋಡಲು ಆಕರ್ಷವಾಗಿ ಕಾಣುತ್ತದೆ. ಹಬ್ಬದ ಮೆರಗು ನೀಡುತ್ತದೆ. ಸಹೋದರಿಯರು ಲೆಹೆಂಗಾ, ಗಾಗ್ರಾ ಧರಿಸಬಹುದು. ಇದಕ್ಕೆ ಸೂಟ್ ಆಗುವಂತೆ ಸಹೋದರರು ಶೆರ್ವಾನಿ ಧರಿಸಬಹುದು. ಗ್ರ್ಯಾಂಡ್ ಹಬ್ಬವಾದಲ್ಲಿ ಇವನ್ನು ಧರಿಸುವುದು ಸೂಕ್ತ.
- ಸಲ್ವಾರ್ ಕಮೀಝ್ ಹಾಗೂ ಜುಬ್ಬಾ ಪೈಜಾಮ
ಮಾನಿನಿಯರು ಸಲ್ವಾರ್ ಕಮೀಝ್ ಧರಿಸಿದಲ್ಲಿ ಪುರುಷರು ಕೊಂಚ ವರ್ಕ್ ಇರುವಂತಹ ಜುಬ್ಬಾ ಪೈಜಾಮ ಧರಿಸಬಹುದು. ಇದು ನೋಡಲು ಆಕರ್ಷಕವಾಗಿ ಕಾಣುತ್ತದೆ. ಇಬ್ಬರ ಉಡುಪುಗಳು ಕೂಡ ಮ್ಯಾಚ್ ಆಗುತ್ತವೆ.
- ಸೆಮಿ ಎಥ್ನಿಕ್ ಡ್ರೆಸ್‌ಕೋಡ್
ಸಹೋದರ-ಸಹೋದರಿಯರಿಬ್ಬರೂ ಫಂಕಿ ಲುಕ್ ಪ್ರಿಯರಾದಲ್ಲಿ ಇಬ್ಬರೂ ಕೂಡ ಸೆಮಿ ಎಥ್ನಿಕ್ ಡಿಸೈನರ್‌ವೇರ್ ಧರಿಸಬಹುದು. ಸಹೋದರಿ ವೆಸ್ಟರ್ನ್ ಕ್ರಾಪ್ ಟಾಪ್‌ಗೆ ಲಾಂಗ್ ಸ್ಕರ್ಟ್, ಇದಕ್ಕೆ ಹೊಂದುವ ಫಂಕಿ ಜುವೆಲ್ ಹಾಗೂ ಹೇರ್‌ಸ್ಟೈಲ್ ಮಾಡಬಹುದು. ಇನ್ನು ಸಹೋದರರು ಕೂಡ ಟೀ ಶರ್ಟ್ಗೆ ಫಂಕಿ ಲುಕ್ ನೀಡುವ ವ್ರಿಸ್ಟ್ ಬ್ಯಾಂಡ್, ನೆಕ್‌ಚೈನ್ ಹಾಗೂ ಹೇರ್‌ಸ್ಟೈಲ್ ಮ್ಯಾಚ್ ಮಾಡಬಹುದು.
- ಟ್ವಿನ್ನಿಂಗ್‌ಗೆ ಸೈ ಎನ್ನಿ
ಕ್ಯಾಶುವಲ್ ಹಾಗೂ ಎಥ್ನಿಕ್ ಎರಡೂ ಬಗೆಯಲ್ಲೂ ಟ್ವಿನ್ನಿಂಗ್ ಮಾಡಬಹುದು. ಇದು ನೋಡಲು ಚೆನ್ನಾಗಿ ಒಪ್ಪುವುದು ಕೂಡ. ಕ್ಯಾಶುವಲ್ ಧರಿಸುವುದಾದಲ್ಲಿ ಮೊದಲೇ ಮಾತನಾಡಿಕೊಂಡು ಒಂದೇ ವರ್ಣದ ಹಾಗೂ ಡಿಸೈನ್‌ನ ಉಡುಪುಗಳನ್ನು ಚೂಸ್ ಮಾಡಬೇಕು. ಎಥ್ನಿಕ್ ಆದಲ್ಲಿ ಒಂದೇ ವರ್ಣದ್ದಾದರೇ ಓಕೆ. ಉದಾಹರಣೆಗೆ, ಗೋಲ್ಡನ್ ವರ್ಣದ ಲೆಹೆಂಗಾ ಧರಿಸಿದಲ್ಲಿ, ಸಹೋದರ ಕೂಡ ಗೋಲ್ಡನ್ ವರ್ಣದ ಕುರ್ತಾ ಧರಿಸಬೇಕಾಗುತ್ತದೆ.
- ಡಿಸೈನರ್ ಸೀರೆ ಹಾಗೂ ಕುರ್ತಾ
ಇನ್ನು ಮಾನಿನಿಯರು ಡಿಸೈನರ್ ಸೀರೆ ಧರಿಸಿದಲ್ಲಿ ರಾಕಿ ಕಟ್ಟಿಸಿಕೊಳ್ಳುವ ಹುಡುಗರು ಕೊಂಚ ಗ್ರ್ಯಾಂಡ್ ಲುಕ್ ನೀಡುವ ಕುರ್ತಾ ಇಲ್ಲವೇ ಶೆರ್ವಾನಿ ಧರಿಸುವುದು ಉತ್ತಮ. ಇದು ಈ ಫೆಸ್ಟಿವ್ ಲುಕ್ ನೀಡುತ್ತದೆ.
ಔಟ್‌ಫಿಟ್ ಮ್ಯಾಚ್ ಮಾಡುವ ಮುನ್ನ:
- ಇಬ್ಬರ ಚಾಯ್ಸ್ಗೆ ತಕ್ಕಂತೆ ಡಿಸೈನರ್ಸ್ ಆಯ್ಕೆ ಮಾಡಿ.
- ಟ್ವಿನ್ನಿಂಗ್ ಮಾಡುವಾಗ ಒಂದೇ ಕಲರ್ ಚೂಸ್ ಮಾಡಬೇಕು.
- ಫೋಟೋಶೂಟ್ ಮಾಡುವಾಗ ಆದಷ್ಟೂ ಒಂದೇ ಬಗೆಯ ಡಿಸೈನ್ಸ್ನದ್ದು ಧರಿಸಿ.
- ಎಥ್ನಿಕ್ ಲುಕ್ ಪರ್ಫೆಕ್ಟ್ ಚಾಯ್ಸ್ ಎನ್ನಬಹುದು.
ಇದನ್ನೂ ಓದಿ| Rakshabandhan | ರಕ್ಷಾಬಂಧನಕ್ಕೆ ಎಂಟ್ರಿ ಕೊಟ್ಟ ಕಲರ್‌ಫುಲ್ ರಾಖಿ