ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಯಲ್ಲಿ ಕೆಜಿಎಫ್‌ಡಬ್ಲ್ಯೂ ಆಶ್ರಯದಲ್ಲಿ ನಡೆದ ಮಿಸ್ ಕರ್ನಾಟಕ ಗ್ರೆಶಿಯಸ್ ಫ್ಯಾಷನ್ ಪೇಜೆಂಟ್ ಯಶಸ್ವಿಯಾಗಿ ಜರುಗಿತು. ಸ್ಪರ್ಧೆಯೊಂದಿಗೆ, ಆಕರ್ಷಕ ಉಡುಗೆ-ತೊಡುಗೆಗಳನ್ನು ಧರಿಸಿದ ಭಾವಿ ಮಾಡೆಲ್‌ಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ಪ್ರೇಕ್ಷಕರ ಮನ ಗೆದ್ದರು.
ನಾನಾ ಟೈಟಲ್‌ಗಳ ಪೇಜೆಂಟ್
ಮಿಸೆಸ್ ಗ್ರೆಶಿಯಸ್ ಕರ್ನಾಟಕ, ಮಿಸ್ ಕರ್ನಾಟಕ ಗ್ರೆಶಿಯಸ್, ಮಿಸ್ಟರ್ ಹೀಗೆ ನಾನಾ ಟೈಟಲ್‌ಗಳಿಗಾಗಿ ಪೇಜೆಂಟ್‌ನಲ್ಲಿ ಭಾವಿ ಮಾಡೆಲ್‌ಗಳು ಟ್ರೆಡಿಷನಲ್ ಹಾಗೂ ಇಂಡೋ-ವೆಸ್ಟರ್ನ್ ಕಾಸ್ಟ್ಯೂಮ್ ಧರಿಸಿ ರ್ಯಾಂಪ್ ವಾಕ್ ಮಾಡಿದರು. ಜ್ಯೋತ್ಸ್ನಾ ವೆಂಕಟೇಶ್ ಹಾಗೂ ಶಬರೀಶ್ ಅವರ ಸಾರಥ್ಯದಲ್ಲಿ ನಡೆದ ಈ ಫ್ಯಾಷನ್ ಪೇಜೆಂಟ್‌ನಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲಿ ಮುನ್ನೆಡೆಯುವ ಅಭಿಲಾಷೆ ಹೊಂದಿದ ಮಾಡೆಲ್‌ಗಳು ಉತ್ಸಾಹದಿಂದ ಭಾಗವಹಿಸಿದ್ದರು.
ಫ್ಯಾಷನ್ ಕೊರಿಯೊಗ್ರಾಫರ್ ಸುಜೇಶ್ ಷಣ್ಮುಗನ್ ಭಾವಿ ಮಾಡೆಲ್‌ಗಳಿಗೆ ರ್ಯಾಂಪ್ ರೂಲ್ಸ್‌ನಿಂದ ಹಿಡಿದು, ವಾಕ್‌ವರೆಗೂ ಟ್ರೈನಿಂಗ್ ನೀಡಿದ್ದರು. ನಟಿ ಅದ್ವಿತಿ ಶೆಟ್ಟಿ ಫ್ಯಾಷನ್ ಪೇಜೆಂಟ್‌ನ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು ಮಾತ್ರವಲ್ಲ, ರ್ಯಾಂಪ್ ಮೇಲೂ ಕಾಣಿಸಿಕೊಂಡರು.
ರ್ಯಾಂಪ್ ಕ್ಷೇತ್ರಕ್ಕೆ ಸ್ವಾಗತ
ಫ್ಯಾಷನ್ ಪೇಜೆಂಟ್‌ಗಳು ಮುಂದಿನ ಮಾಡೆಲಿಂಗ್ ಕ್ಷೇತ್ರದಲ್ಲಿ ಮುಂದುವರಿಯಲು ಅನುವು ಮಾಡಿಕೊಡುತ್ತವೆ. ಜತೆಗೆ ಭವಿಷ್ಯಕ್ಕೆ ಮುನ್ನುಡಿ ಬರೆಯುತ್ತವೆ. ಈ ಕ್ಷೇತ್ರದಲ್ಲಿ ಹಾರ್ಡ್ ವರ್ಕ್ ಅಗತ್ಯ. ಮಾಡೆಲ್‌ಗಳಿಗೆ ರ್ಯಾಂಪ್ ಕ್ಷೇತ್ರ ಸದಾ ಸ್ವಾಗತಿಸುತ್ತದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದ ನಟಿ ಅದ್ವಿತಿ ಶೆಟ್ಟಿ ರ್ಯಾಂಪ್‌ನಲ್ಲಿ ವಾಕ್ ಮಾಡಿದವರಿಗೆ ಶುಭಾಶಯಗಳನ್ನು ತಿಳಿಸಿದರು.
ನಮ್ಮ ಫ್ಯಾಷನ್ ಪೇಜೆಂಟ್‌ಗಳಲ್ಲಿ ಭಾಗವಹಿಸಿದವರು ಈಗಾಗಲೇ ಸಾಕಷ್ಟು ಮಂದಿ ಈ ಕ್ಷೇತ್ರದಲ್ಲಿ ಮಾತ್ರವಲ್ಲ, ನಟನಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಪೇಜೆಂಟ್ ಸಾಕಷ್ಟು ಮಂದಿಗೆ ಭವಿಷ್ಯದ ಮುನ್ನುಡಿ ಬರೆದಿದೆ . ಈ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಕೆಜಿಎಫ್‌ಡಬ್ಲ್ಯೂ ಸಂಸ್ಥಾಪಕಿ ಜ್ಯೋತ್ಸ್ನಾ ವೆಂಕಟೇಶ್ ಹೇಳಿದರು.
ಪೇಜೆಂಟ್ ವಿಜೇತರ ಪಟ್ಟಿ
ಮಿಸೆಸ್ ಗ್ರೆಶಿಯಸ್ ಕರ್ನಾಟಕ ಟೈಟಲನ್ನು ಶಿಲ್ಪಾ ಅಶ್ವಥನಾರಾಯಣ ಸ್ವಾಮಿ ಮುಡಿಗೇರಿಸಿಕೊಂಡರು. ಮೊದಲ ರನ್ನರ್ ಅಪ್ ಹೇಮಾ ಸಂತೋಷ್, ಎರಡನೇ ರನ್ನರ್ ಅಪ್ ವೇದಿಕಾ ಪಡೆದುಕೊಂಡರು. ಮಿಸ್ ಕರ್ನಾಟಕ ಗ್ರೆಶಿಯಸ್ ಆಗಿ ವಿಸ್ಮಯಾ ಆಯ್ಕೆ ಗೊಂಡರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ | Belt Fashion | ಟ್ರೆಡಿಷನಲ್ ಡಿಸೈನರ್‌ವೇರ್ರ್‌ಗೂ ಬಂತು ಬೆಲ್ಟ್ ಫ್ಯಾಷನ್