ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇಲ್ಲಿ ಒಬ್ಬರಿಗಿಂತ ಒಬ್ಬರು ನೋಡಲು ಕ್ಯೂಟ್ ಆಗಿ ಕಾಣಿಸುತ್ತಿದ್ದರು. ಒಂದೊಂದು ಬಗೆಯ ಟ್ರೆಂಡಿ ಡಿಸೈನರ್‌ವೇರ್‌ಗಳನ್ನು ಧರಿಸಿ ಹೆಜ್ಜೆ ಹಾಕುತ್ತಿದ್ದರು. ಫ್ಯಾಷನ್ ಶೋನ ಸ್ಪರ್ಧೆಗೆ ಬಂದಿದ್ದೇವೆ ಎಂಬುದಕ್ಕಿಂತ ರ್ಯಾಂಪ್ ವಾಕ್ ಎಂಬ ಖುಷಿಯಲ್ಲಿ ಪಾಲ್ಗೊಂಡಿದ್ದರು. ಯಂಗ್‌ಸ್ಟರ್ಸ್ ನಿಂದಿಡಿದು ಮಕ್ಕಳು ಕೂಡ ಶೈನ್ ಟ್ಯಾಗ್‌ನ ೩ ನೇ ಸೀಸನ್‌ನ ಈ ಫ್ಯಾಷನ್ ಶೋನಲ್ಲಿ ಪಾಲ್ಗೊಂಡಿದ್ದರು. ನೋಡಲು ಎಲ್ಲರೂ ಮನಮೋಹಕ ಡಿಸೈನರ್‌ವೇರ್‌ಗಳಲ್ಲಿ ಮಿನುಗುತ್ತಿದ್ದರು.
ಮೂರು ರೌಂಡ್ ರ್ಯಾಂಪ್ ವಾಕ್
ಮೊದಲಿಗೆ ಟ್ರೆಡಿಷನಲ್ ರೌಂಡ್‌ನಲ್ಲಿ ಸಾಂಪ್ರದಾಯಿಕ ಉಡುಗೆ ತೊಡುಗೆಗಳಲ್ಲಿ ಕಾಣಿಸಿಕೊಂಡ ಭಾವಿ ಮಾಡೆಲ್‌ಗಳು ನಂತರ ಕಂಪ್ಲೀಟ್ ವೆಸ್ಟರ್ನ್ವೇರ್‌ಗಳಲ್ಲಿ ಹಾಗೂ ಬದಲಾದ ಲುಕ್‌ನಲ್ಲಿ ವಾಕ್ ಮಾಡಿದರು. ಕೊನೆಯ ರೌಂಡ್ ಭಾಗವಹಿಸಿದ್ದವರಿಗೆ ವಹಿಸಲಾಗಿತ್ತು. ಈ ಕಾಸ್ಟ್ಯೂಮ್ ರೌಂಡ್‌ನಲ್ಲಿ ಅವರವರ ಆಯ್ಕೆ ತಕ್ಕಂತೆ ಉಡುಗೆ ತೊಡುಗೆಗಳನ್ನು ಧರಿಸಿದ್ದರು. ಅತ್ಯಂತ ಆಕರ್ಷಕ ಕಾಸ್ಟ್ಯೂಮ್ ಧರಿಸಿದ್ದವರಿಗೆ ವಿಜೇತರೆಂದು ಘೋಷಿಸಲಾಯಿತು.
ಹೊಸ ಡಿಸೈನರ್ ವೇರ್ ಶೋ ಎಂದ ಪದ್ಮಪ್ರಿಯಾ
“ಫ್ಯಾಷನ್ ಶೋಗಳು ಮನಸ್ಸನ್ನು ಅರಳಿಸುತ್ತವೆ. ಹೊಸತನಕ್ಕೆ ನಾಂದಿಯಾಡುತ್ತವೆ. ಅಷ್ಟು ಮಾತ್ರವಲ್ಲ, ಹೊಸ ಟ್ರೆಂಡ್ ಹಾಗೂ ಫ್ಯಾಷನ್ ಅನ್ನು ಸಮಾಜಕ್ಕೆ ಪರಿಚಯಿಸುತ್ತವೆ. ಇದಕ್ಕೆ ಪೂರಕ ಎಂಬಂತೆ, ಶೈನ್ ಟ್ಯಾಗ್ ಬ್ರಾಂಡ್ ಕೂಡ ಹೊಸ ಪ್ರಯೋಗಾತ್ಮಕ ಉಡುಗೆ ತೊಡುಗೆಗಳನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡುತ್ತಿದೆ. ಹೊಸ ಫ್ಯಾಷನ್‌ವೇರ್‌ಗಳನ್ನು ನಯಾ ಲುಕ್‌ನಲ್ಲಿ ಬಿಡುಗಡೆ ಮಾಡಿದೆ” ಎಂದು ಮಾಡೆಲ್, ವೆಲ್ಹೋಝ್ ಸಂಸ್ಥಾಪಕಿ ಪದ್ಮಪ್ರಿಯಾ ಅಭಿಪ್ರಾಯಪಟ್ಟರು.
ವೇದಿಕೆ ಕಲ್ಪಿಸುವ ಗುರಿ
ಪ್ರತಿ ಆರು ತಿಂಗಳಿಗೊಮ್ಮೆ ಫ್ಯಾಷನ್ ಶೋಗಳ ಮೂಲಕ ಹೊಸ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸುವುದು ಸಂಸ್ಥೆಯ ಉದ್ದೇಶವಾಗಿದೆ. ಈ ಮೂಲಕ ಮುಂಬರುವ ಮಾಡೆಲ್‌ಗಳಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ದೇವೆ. ಪ್ರತಿಬಾರಿಯು ಹೊಸಬರಿಗೆ ವೇದಿಕೆ ಕಲ್ಪಿಸುವುದು ನಮ್ಮ ಗುರಿಯಾಗಿದೆ ಎಂದು ಶೈನ್‌ಟ್ಯಾಗ್ ಸಂಸ್ಥಾಪಕಿ ಪ್ರಿಯಾ ತಿಳಿಸಿದರು.
ಇನ್ನು ಮಾಡೆಲ್ ಧೀಮಂತ್, ಫ್ಯಾಷನ್ ಎಂಬುದು ಹೊಸತನಕ್ಕೆ ನಾಂದಿ ಹಾಡುತ್ತದೆ ಎಂದರು. ಮಾಡೆಲ್ ಪ್ರಿಯಾ ಪ್ರಶಾಂತ್ ಕೂಡ ಹಾಜರಿದ್ದರು. ಇವರೊಂದಿಗೆ ಶೈನ್‌ಟ್ಯಾಗ್ ಸಂಸ್ಥಾಪಕಿ ಪ್ರಿಯಾ ಮರಿಯಾನಾಥನ್, ಸುಚಿತ್ರಾ, ಅನಿತಾ ರಂಗನಾಥ್, ಸೇರಿದಂತೆ ಸಾಕಷ್ಟು ಗಣ್ಯರು ಭಾಗವಹಿಸಿದ್ದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion: ಸ್ಟೈಲಿಶ್ ಕಿರುತೆರೆ ನಟಿ ದೀಪಿಕಾ ದಾಸ್ ಬಿಂದಾಸ್ ಫ್ಯಾಷನ್‌ಗೆ ಅಭಿಮಾನಿಗಳು ಫಿದಾ