ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಿತ್ರ-ವಿಚಿತ್ರ ಹೆಡ್ ಗೇರ್, ಆಕ್ಸೆಸರೀಸ್ ಹಾಗೂ ಡಿಸೈನರ್ ವೇರ್‌ಗಳನ್ನು ಧರಿಸಿದ ಪ್ರೊಫೆಷನಲ್ ಮಾಡೆಲ್‌ಗಳು ಹೆಜ್ಜೆ ಹಾಕಿದ್ದು ಶೋನ ರಂಗು ಏರಿಸಿತ್ತು. ಮಾಡೆಲ್‌ಗಳು ಧರಿಸಿದ್ದ ವೇರಬಲ್ ಹಾಗೂ ನಾನ್ ವೇರಬಲ್ ಫ್ಯಾಷನ್‌ವೇರ್ ಫ್ಯಾಷನ್ ಪ್ರಿಯರ ಮನ ಸೆಳೆಯಿತು. ರ‍್ಯಾಂಪ್ ವಾಕ್ ಇತರೇ ರ‍್ಯಾಂಪ್ ಶೋಗಳಿಗಿಂತ ಕೊಂಚ ಭಿನ್ನವಾಗಿತ್ತು.
ಅಂದಹಾಗೆ, ಉದ್ಯಾನ ನಗರಿಯಲ್ಲಿ ಸೆಲೆಬ್ರೆಟಿ ಫ್ಯಾಷನ್ ಡಿಸೈನರ್ ಹಾಗೂ ಡೈರೆಕ್ಟರ್ ಶಿಲ್ಪಿ ಚೌಧರಿ ನೇತೃತ್ವದಲ್ಲಿ ನಡೆದ ಈ ಹೈ ಫ್ಯಾಷನ್ ಪಾರ್ಟಿ ಶೋನಲ್ಲಿ ಪ್ರೊಫೆಷನಲ್ ಮಾಡೆಲ್‌ಗಳು ವಾಕ್ ಮಾಡಿದ್ದು ಮಾತ್ರವಲ್ಲ, ತೆರೆಮೆರೆಯಲ್ಲಿ ಸಾಧನೆಗೈದವರನ್ನು ಹಾಗೂ ಪ್ಯಾರಾ ಒಲಿಂಪಿಯಾಡ್‌ನಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ರ‍್ಯಾಂಪ್ ಮೇಲೆ ಸನ್ಮಾನ ಮಾಡಿ, ಗೌರವಿಸಲಾಯಿತು.
ಪದ್ಮಶ್ರೀ ಪುರಸ್ಕೃತರಿಗೆ ರ್ಯಾಂಪ್ ಮೇಲೆ ಸನ್ಮಾನ
ಪದ್ಮಶ್ರೀ ಪುರಸ್ಕೃತ, ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ರ‍್ಯಾಂಪ್ ಒಲಿಂಪಿಯಾಡ್ ವೆಂಕಟೇಶ್ ಹಾಗೂ ಪ್ಯಾರಾ ಒಲಿಂಪಿಯಾಡ್ ಸಾಧಕ ವಿಶ್ವಾಸ್ ಅವರನ್ನು ರ‍್ಯಾಂಪ್ ಮೇಲೆ ಕರೆತಂದು, ಅವರ ಸಾಧನೆ ಬಗ್ಗೆ ಪ್ರಶಂಸಿಸಿ, ರ‍್ಯಾಂಪ್ ವಾಕ್ ಮಾಡಿಸುತ್ತಲೇ ಅವರನ್ನು ಸನ್ಮಾನಿಸಲಾಯಿತು. ರ‍್ಯಾಂಪ್ ಎಂಬುದು ಕೇವಲ ಕಲರ್‌ಫುಲ್ ಪ್ರಪಂಚ ಮಾತ್ರವಲ್ಲ, ಸಾಧಕರನ್ನು ಗುರುತಿಸುವ ವೇದಿಕೆಯೂ ಆಗಬಹುದು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.
ಸೆಲೆಬ್ರೆಟಿ ಡಿಸೈನರ್ ಶಿಲ್ಪಿ ಚೌಧರಿ ಮಾತು
ಇಡಿ ಫ್ಯಾಷನ್ ಶೋನ ನೇತೃತ್ವ ವಹಿಸಿದ್ದ ಸೆಲೆಬ್ರೆಟಿ ಡಿಸೈನರ್ ಹಾಗೂ ಶೋ ಡೈರೆಕ್ಟರ್ ಶಿಲ್ಪಿ ಚೌಧರಿಯವರು ರ‍್ಯಾಂಪ್ ಮೇಲೆ ಶೋ ಸ್ಟಾಪರ್ ಆಗಿ ವಾಕ್ ಮಾಡಿದ್ದು ಮಾತ್ರವಲ್ಲ, ವೇದಿಕೆಯ ಮೇಲೆ ಸಾಧಕರನ್ನು ಕರೆತಂದು ಮಾತನಾಡಿದರು.
ಫ್ಯಾಷನ್ ಶೋಗಳು ಕೇವಲ ರ‍್ಯಾಂಪ್ ವಾಕ್‌ಗೆ ಮಾತ್ರ ಸೀಮಿತವಾಗಬಾರದು. ಇತರೇ ಕ್ಷೇತ್ರದವರನ್ನು ಗುರುತಿಸಿ, ವೇದಿಕೆಗೆ ಕರೆತರುವ ಕೆಲಸ ಮಾಡಬೇಕು. ಇಂತಹ ಕಾರ್ಯವನ್ನು ನಾವು ಆರಂಭಿಸಿದ್ದೇವೆ. ಇದಕ್ಕೆ ನಮಗೆ ಹೆಮ್ಮೆಯೆನಿಸುತ್ತಿದೆ. ಕೇವಲ ಡಿಸೈನರ್‌ವೇರ್‌ಗಳನ್ನು ಪ್ರದರ್ಶಿಸುವುದು ಮಾತ್ರವಲ್ಲ, ಭವುಷ್ಯದ ಕನಸು ಕಾಣುತ್ತಿರುವವರಿಗೂ ಮಾರ್ಗ ತೋರಿಸುವ ವೇದಿಕೆಯಾಗಬೇಕು ಎಂದು ಸೆಲೆಬ್ರಿಟಿ ಡಿಸೈನರ್ ಶಿಲ್ಪಿ ಚೌಧರಿ ಅಭಿಪ್ರಾಯಪಟ್ಟರು.
ಮುಂಬರುವ ಫ್ಯಾಷನ್ ಶೋಗಳಲ್ಲಿ ಆದಷ್ಟೂ ಫ್ರೆಶ್ ಫೇಸ್ ಅಂದರೆ, ಮಾಡೆಲ್‌ಗಳಾಗಿ ಮುಂದುವರಿಯಲು ಬಯಸುವ ಭಾವಿ ಮಾಡೆಲ್‌ಗಳಿಗೆ ಪ್ರೋತ್ಸಾಹ ನೀಡುವುದಾಗಿ ಹಾಗೂ ಅವಕಾಶ ಕಲ್ಪಿಸುವುದಾಗಿ ಹೇಳಿದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: New York Fashion Week: ಬೆರಗು ಮೂಡಿಸಿದ ನ್ಯೂಯಾರ್ಕ್ ಫ್ಯಾಷನ್ ವೀಕ್ 2023