ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಿಣ್ಣರು ಹಾಗೂ ಟೀನೇಜ್ ಮಕ್ಕಳು ಪಾಲ್ಗೊಂಡಿದ್ದ ಆಕರ್ಷಕ ಫ್ಯಾಷನ್ ಶೋ ಪೋಷಕರ ಮತ್ತು ನೆರೆದಿದ್ದ ಫ್ಯಾಷನ್ ಪ್ರಿಯರ ಮನಸೆಳೆಯಿತು.
ಫ್ಯಾಷನ್ ಕೊರಿಯೊಗ್ರಾಫರ್ ರಾಜೇಶ್ ಮಾರ್ಗದರ್ಶನದಲ್ಲಿ ವೆಸ್ಟರ್ನ್ ಹಾಗೂ ಎಥ್ನಿಕ್ ಎರಡು ರೌಂಡ್‌ಗಳಲ್ಲಿ ಪಾಲ್ಗೊಂಡ ಮಕ್ಕಳು ತಮ್ಮದೇ ಆದ ಸ್ಟೈಲ್‌ನಲ್ಲಿ ಕ್ಯಾಟ್‌ವಾಕ್ ಮಾಡಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ಮಕ್ಕಳ ಮುದ್ದಾದ ಕ್ಯಾಟ್‌ವಾಕ್
ಟ್ರೆಡಿಷನಲ್ ರೌಂಡ್‌ನಲ್ಲಿ ಪುಟ್ಟ ಪುಟ್ಟ ಮಕ್ಕಳು ಸೀರೆ ಹಾಗೂ ದಾವಣಿ-ಲಂಗದಂತಹ ಕಾಸ್ಟ್ಯೂಮ್‌ಗಳಲ್ಲಿ ಕಾಣಿಸಿಕೊಂಡರು. ವೆಸ್ಟರ್ನ್ ರೌಂಡ್‌ನಲ್ಲಿ ಗೌನ್ ಹಾಗೂ ಫ್ರಾಕ್‌ಗಳಲ್ಲಿ ಕಾಣಿಸಿಕೊಂಡರು. ಹುಡುಗರು ಬಂದಗಲಾ ಹಾಗೂ ಮೋದಿಕೋಟ್‌ನಲ್ಲಿ ಕ್ಯಾಟ್‌ವಾಕ್ ಮಾಡಿದರು.
ಫ್ಯಾಷನ್ ಶೋಗಳು ಮಕ್ಕಳ ಪ್ರತಿಭೆಗೆ ಕೈಗನ್ನಡಿ
“ಫ್ಯಾಷನ್ ಶೋಗಳು ಮಕ್ಕಳ ಪ್ರತಿಭೆಗೆ ಕೈಗನ್ನಡಿಯಂತೆ. ಇದರಿಂದ ಮಕ್ಕಳು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ. ಅಲ್ಲದೇ ನಟನಾ ರಂಗಕ್ಕೆ ಹೋಗಲು ಬಯಸುವ ಮಕ್ಕಳಿಗೆ ಮೊದಲ ಹೆಜ್ಜೆ ಇಡಲು ಸಹಕಾರಿ ಎಂದು ಮಾಡೆಲ್ ಹಾಗೂ ವೆಲೋರ್ ಈವ್ ಸಂಸ್ಥೆಯ ಸಂಸ್ಥಾಪಕಿ ಪದ್ಮಾ ಪ್ರಿಯಾ ಹೇಳಿದರು.
ನಟಿ ಸಿತಾರಾ ತಾರಾ ಮಾತು
ಇಂದು ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳಿಗೆ ಸಾಕಷ್ಟು ಅವಕಾಶಗಳು ಸಿಗುತ್ತವೆ. ಇದು ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ಸಹಾಯ ಮಾಡುತ್ತದೆ ಎಂದು ನಟಿ ಸಿತಾರಾ ತಾರಾ ಹೇಳಿದರು.
ಪೋಷಕರು ಪ್ರೋತ್ಸಾಹಿಸುವುದು ಅಗತ್ಯ
ಮಕ್ಕಳನ್ನು ವೇದಿಕೆಯ ಮೇಲೆ ನೋಡುವುದೇ ಆನಂದ. ಅದರಲ್ಲೂ ರ್ಯಾಂಪ್ ಮೇಲೆ ವಾಕ್ ಮಾಡುವಾಗ ಅವರ ಆತ್ಮವಿಶ್ವಾಸ ಎದ್ದು ಕಾಣುತ್ತದೆ. ಇಂತಹ ವೇದಿಕೆಗಳು ಮಕ್ಕಳಿಗೆ ಪ್ರೊತ್ಸಾಹ ಕಲ್ಪಿಸುತ್ತದೆ ಎಂದು ಪೊಲೀಸ್ ಅಧಿಕಾರಿ (ಸಿಐಡಿ) ಹರ್ಷ ಅವರು ಅಭಿಪ್ರಾಯಪಟ್ಟರು.
ರ್ಯಾಂಪ್ ಮೇಲೆ ಅತಿಥಿ ಮಾಡೆಲ್‌ಗಳು
ದೀಪ ಬೆಳಗುವ ಮೂಲಕ ಆರಂಭವಾದ ಈ ಫ್ಯಾಷನ್ ಶೋನಲ್ಲಿ ಯಶಸ್ವಿ ಪುರುಷರು ಹಾಗೂ ಮಹಿಳೆಯರು ಹಾಗೂ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಿವೈಎಸ್‌ಪಿ(ಸಿಐಡಿ) ಹರ್ಷ, ಮೋಹನ್ ಬೇಸೀಸ್, ಸಂಸ್ಥೆಯ ಸಂಸ್ಥಾಪಕಿ ಪದ್ಮಾಪ್ರಿಯಾ, ಸಂಗೀತಾ ಹೊಳ್ಳ, ನಂದಿನಿ, ಮಾಡೆಲ್ ಸುಜಯ್ ಅಂಜನ್, ನಟಿ ಸಿತಾರಾ ತಾರಾ ಪಾಲ್ಗೊಂಡಿದ್ದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Ramp News: ರ‍್ಯಾಂಪ್ ಮೇಲೆ ರಂಜಿಸಿದ ಮಾಡೆಲ್‌ಗಳು