ಶೀಲಾ ಸಿ. ಶೆಟ್ಟಿ, ಬೆಂಗಳೂರು
ನೋಡಲು ಅತ್ಯಾಕರ್ಷಕವಾದ ಮೊಘಲರ ಎಥ್ನಿಕ್ ಉಡುಪುಗಳನ್ನು ಧರಿಸಿದ ಮಾಡೆಲ್‌ಗಳು ಗತಕಾಲದ ವೈಭವವನ್ನು Ramp ಮೇಲೆ ವಾಕ್ ಮಾಡಿ ಸಾರಿದರು. ನೋಡಲು ಮೊಗಲರ ರಾಜ-ಮಹಾರಾಜರು, ಬೇಗಂ ಅಥವಾ ರಾಣಿ-ಮಹಾರಾಣಿಯರಂತೆ ಕಾಣಿಸುತ್ತಿದ್ದ ಮಾಡೆಲ್‌ಗಳು ಥೇಟ್ ಗತಕಾಲದ ಮೊಘಲರಂತೆ ಗ್ರ್ಯಾಂಡ್ ಡಿಸೈನರ್‌ವೇರ್‌ಗಳನ್ನು ಧರಿಸಿ, Ramp ಮೇಲೆ ಹೆಜ್ಜೆ ಹಾಕಿ, ಸಂಚಲನ ಮೂಡಿಸಿದರು.
ಅಂದಹಾಗೆ, ಇದು ನಡೆದದ್ದು ಉದ್ಯಾನನಗರಿಯಲ್ಲಿ. ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಹಾಗೂ ಕೊರಿಯೊಗ್ರಾಫರ್ ರಾಜೇಶ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ಶೆಲ್ ಸ್ಟೈಲ್ ಫ್ಯಾಷನ್ ಇವೆಂಟ್ ಮೊಗಲರ ಫ್ಯಾಷನ್ ಪುಟಗಳನ್ನು ತೆರೆದಿಡುವಲ್ಲಿ ಯಶಸ್ವಿಯಾಯಿತು.
ಶೆಲ್ ಸ್ಟೈಲ್ ಫ್ಯಾಷನ್ ಇವೆಂಟ್
ಈ ಫ್ಯಾಷನ್ ಇವೆಂಟ್‌ನಲ್ಲಿ ಒಬ್ಬೊಬ್ಬರದು ಒಂದೊಂದು ಬಗೆಯ ಡಿಸೈನರ್‌ವೇರ್‌ಗಳು ಹಳೆಯ ಫ್ಯಾಷನ್ ಝಲಕ್ ತೋರ್ಪಡಿಸುವಲ್ಲಿ ಯಶಸ್ವಿಯಾಯಿತು. ಕೇವಲ ಡಿಸೈನರ್‌ವೇರ್‌ಗಳಲ್ಲ, ಅದರೊಂದಿಗೆ ಧರಿಸಿದ್ದ ಒಂದೊಂದು ಜ್ಯುವೆಲರಿ ಹಾಗೂ ನಡೆ ಎಲ್ಲವೂ ಮೊಘಲರ ಕಾಲದ ಫ್ಯಾಷನ್ ಅನ್ನು ಈ ಪೀಳಿಗೆಗೆ ಪರಿಚಯಿಸಿದಂತಿತ್ತು.
ರಾಜೇಶ್ ಶೆಟ್ಟಿಯವರ ನೇತೃತ್ವ
ಮೊಗಲ್ ಡೈನಸ್ಟಿ ಕಲೆಕ್ಷನ್ ಹೆಸರಲ್ಲಿ ಗತಕಾಲದ ವೈಭವವನ್ನು ಎತ್ತಿ ಹಿಡಿಯುವ ಎಥ್ನಿಕ್ ಶೈಲಿಯ ಉಡುಗೆ-ತೊಡುಗೆಗಳನ್ನು ಧರಿಸಿದ ಮಾಡೆಲ್‌ಗಳು ಇತಿಹಾಸದ ಫ್ಯಾಷನ್ ಹಾಗೂ ಸ್ಟೈಲ್‌ನ ಒಂದೊಂದು ಝಲಕನ್ನು Ramp ಮೇಲೆ ವಾಕ್ ಮಾಡಿ ತೋರಿಸಿ ಯಶಸ್ವಿಯಾಗಿಸಿದ್ದಾರೆ. ಇದಕ್ಕೆ ಮಾಡೆಲ್‌ಗಳ ಸಹಕಾರದಿಂದ ಇದು ಯಶಸ್ವಿಯಾಗಿದೆ ಎಂದು ಹೇಳುತ್ತಾರೆ ಕರ್ನಾಟಕದ ಖ್ಯಾತ ಸೆಲೆಬ್ರಿಟಿ ಡಿಸೈನರ್ ಹಾಗೂ ಕೊರಿಯೊಗ್ರಾಫರ್ ಎಂದೇ ಖ್ಯಾತಿ ಗಳಿಸಿರುವ ಕನ್ನಡಿಗ ರಾಜೇಶ್ ಶೆಟ್ಟಿಯವರು.
ಇನ್ನು ಮಾಡೆಲ್ ಡೀನಾ ಪೂಜಾರಿ ಹೇಳುವಂತೆ, ಎಥ್ನಿಕ್ ಉಡುಪುಗಳನ್ನು ಧರಿಸಿ Ramp show ಮಾಡುವುದು ಒಂಥರ ಖುಷಿ ನೀಡುತ್ತದೆ ಎನ್ನುತ್ತಾರೆ.
ಈ ramp ಶೋದಲ್ಲಿ ಮೊಗಲರ ಶೆರ್ವಾನಿ, ಕಮೀಜ್, ಬೇಗಂ ಹಾಗೂ ರಾಣಿಯರು ಧರಿಸುತ್ತಿದ್ದ ಸೀರೆ, ಲೆಹೆಂಗಾ ಸೇರಿದಂತೆ ನಾನಾ ಬಗೆಯ ಎಥ್ನಿಕ್ ಉಡುಪುಗಳಲ್ಲಿ ಮಾಡೆಲ್‌ಗಳು ಮಿಂಚಿದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Wedding Fashion | ಅರಿಶಿಣ ಶಾಸ್ತ್ರದಲ್ಲಿ ಶಕುಂತಲೆಯಂತೆ ಕಂಡ ಅದಿತಿ; ಫ್ಯಾಷನ್ ರೂವಾರಿ ಯಾರು?