ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮದರ್ಸ್ ಡೇ (Sandalwood Fashionable Mothers) ಎಂಬುದು ಒಂದು ನಿರ್ದಿಷ್ಟ ವರ್ಗಕ್ಕೆ ಸೀಮಿತವಾಗಿಲ್ಲ! ಬದಲಿಗೆ ಎಲ್ಲಾ ಕ್ಷೇತ್ರಗಳ ತಾಯಂದಿರಿಗೂ ಅನ್ವಯಿಸುತ್ತದೆ. ಹಾಗೆಯೇ ಸ್ಯಾಂಡಲ್‌ವುಡ್‌ನಲ್ಲೂ ತಾಯ್ತನದ ಆನಂದ ಅನುಭವಿಸುವುದರೊಂದಿಗೆ ತಮ್ಮನ್ನು ತಾವು ಪ್ರೀತಿಸುತ್ತಾ ಇತರೆ ತಾಯಂದಿರಿಗೆ ಮಾದರಿಯಾಗಿರುವ ಸ್ಟೈಲಿಶ್ ತಾರೆಯರು ಇದ್ದಾರೆ. ಅವರಲ್ಲಿ ಕೆಲವು ನಟಿಯರನ್ನು ಫ್ಯಾಷನ್ ವಿಮರ್ಶಕರು ಗುರುತಿಸಿ, ಅವರ ಜೀವನೋತ್ಸಾಹ ಹಾಗೂ ಫ್ಯಾಷನ್ ಪ್ರೇಮದ ಕುರಿತಂತೆ ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
ಶ್ವೇತಾ ಶ್ರೀವಾತ್ಸವ್
ನಟಿ ಶ್ವೇತಾ ಶ್ರೀವಾತ್ಸವ್ ತಮ್ಮ ಮುದ್ದಾದ ಮಗಳೊಂದಿಗೆ ಟ್ರೆಡಿಷನಲ್ ಔಟ್‌ಫಿಟ್‌ಗಳಲ್ಲಿ ಹಬ್ಬ-ಹರಿದಿನಗಳಲ್ಲಿ ಸೋಷಿಯಲ್ ಮೀಡಿಯಾ ಮೂಲಕ ವಿಶ್ ಮಾಡುವುದು ಮಾತ್ರವಲ್ಲ, ಸಾಕಷ್ಟು ಪ್ರಮೋಷನ್‌ಗಳಲ್ಲೂ ಒಟ್ಟಾರೆ ಫ್ಯಾಷೆನಬಲ್ ಆಗಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸ್ಟೈಲಿಶ್ ಅಮ್ಮ- ಮುದ್ದಾದ ಮಗಳ ಜೋಡಿಯಿದು.
ರಾಧಿಕಾ ಪಂಡಿತ್
ನಟಿ ರಾಧಿಕಾ ಪಂಡಿತ್ ಮದುವೆಯಾಗಿ ಇಬ್ಬರು ಮಕ್ಕಳಾದ ನಂತರವೂ ತಮ್ಮದೇ ಆದ ಯೂನಿಕ್ ಸ್ಟೈಲ್‌ಮೆಂಟ್‌ಗಳನ್ನು ಹೊಂದಿದ್ದಾರೆ. ಫ್ಯಾಮಿಲಿ, ಟ್ರಾವೆಲ್ ಹಾಗೂ ಸಮಾರಂಭ ಹೀಗೆ ಆಯಾ ಸಂದರ್ಭಕ್ಕೆ ತಕ್ಕಂತೆ ತಮ್ಮ ಸ್ಟೈಲಿಂಗ್ ಬದಲಿಸಿಕೊಳ್ಳುವ ನಟಿ ಇವರು. ಸದಾ ನೋಡಲು ಆಕರ್ಷಕವಾಗಿ ಕಾಣಿಸುವ ನಟಿಯರಲ್ಲಿ ಒಬ್ಬರು.
ಅನು ಪ್ರಭಾಕರ್
ಮಗಳೊಂದಿಗೆ ಹೆಚ್ಚಾಗಿ ಯಾವುದೇ ಸಮಾರಂಭದಲ್ಲಿ ಕಾಣಿಸಿಕೊಳ್ಳದಿದ್ದರೂ ಕೂಡ ಜನ ಮೆಚ್ಚಿದ ಸ್ಟೈಲಿಶ್ ಅಮ್ಮ ಅನು ಪ್ರಭಾಕರ್ ಎಂದರೂ ಅಡ್ಡಿಯಿಲ್ಲ! ಸದಾ ತಮ್ಮ ಯೂನಿಕ್ ಸ್ಟೈಲ್ ಆದ ಮುಗುಳ್ನಗೆ ಹಾಗೂ ಟ್ರೆಡಿಷನಲ್ ಸೀರೆ ಹಾಗೂ ಔಟ್‌ಫಿಟ್‌ನಲ್ಲಿ ಗಮನ ಸೆಳೆಯುವ ಅನು ಪ್ರಭಾಕರ್ ಕೂಡ ಸ್ಯಾಂಡಲ್‌ವುಡ್‌ನ ಸ್ಟೈಲಿಶ್ ಅಮ್ಮಂದಿರ ಸಾಲಿಗೆ ಸೇರುತ್ತಾರೆ.
ಶ್ವೇತಾ ಚೆಂಗಪ್ಪ
ಕಿರುತೆರೆ ಹಾಗೂ ಹಿರಿತೆರೆಯಲ್ಲೂ ಕಾಣಿಸಿಕೊಂಡಿರುವ ನಟಿ ಹಾಗೂ ನಿರೂಪಕಿ ಶ್ವೇತಾ ಚೆಂಗಪ್ಪ, ತಮ್ಮ ಮುದ್ದಿನ ಮಗನೊಂದಿಗೆ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫ್ಯಾಷನಬಲ್ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಷ್ಟೇಕೆ! ಕೆಲವೊಮ್ಮೆ ಮಗನೊಂದಿಗೆ ಟ್ವಿನ್ನಿಂಗ್ ಹಾಗೂ ಪೋಸ್ ನೀಡುವ ಸ್ಟೈಲಿಶ್ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ. ತಮ್ಮದೇ ಆದ ಫ್ಯಾಷನ್ ಸ್ಟೇಟ್‌ಮೆಂಟ್‌ಗಳನ್ನು ಹೊಂದಿದ್ದಾರೆ.
ಸಂಜನಾ ಗರ್ಲಾನಿ
ನಟಿ ಸಂಜನಾ ಗರ್ಲಾನಿ ಮೊದಲಿನಿಂದಲೂ ಸಿನಿಮಾ ಮಾತ್ರವಲ್ಲ ಸಾಕಷ್ಟು ಜಾಹೀರಾತು ಹಾಗೂ ಶೋಗಳ ಮೂಲಕವೂ ಫ್ಯಾಷನಬಲ್ ಎಂದೆನಿಸಿಕೊಂಡವರು. ಮಗ ಹುಟ್ಟಿದ ನಂತರವೂ ಸಾಮಾಜಿಕ ಸಂದೇಶ ಇಲ್ಲವೇ ಮಕ್ಕಳ ಆರೈಕೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿಕೊಡುವ ಕಾರ್ಯವನ್ನು ಮಾಡುತ್ತಿರುತ್ತಾರೆ. ಪ್ರತಿಯೊಂದು ಕ್ಲಿಪ್‌ನಲ್ಲೂ ಸ್ಟೈಲಿಶ್ ಆಗಿ ಕಾಣುವ ನಟಿಯಿವರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Mothers Day Twinning Fashion: ಮದರ್ಸ್ ಡೇಗೆ ಅಮ್ಮನೊಂದಿಗೆ ಟ್ವಿನ್ನಿಂಗ್ ಫ್ಯಾಷನ್!