ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜಾಗತಿಕ ಮಟ್ಟದಲ್ಲಿ ಫ್ಯಾಷನ್ ಹಬ್ ಎಂದೇ ಕರೆಯಲಾಗುವ ಪ್ಯಾರಿಸ್‌ನಲ್ಲಿ ಸ್ಯಾಂಡಲ್‌ವುಡ್ ನಟಿ ಮೇಘನಾ ಗಾಂವ್ಕರ್ ವಿಂಟರ್ ಲೇಯರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿನ ಹವಾಮಾನಕ್ಕೆ ಹೊಂದುವಂತಹ ಬೆಚ್ಚನೆಯ ಫ್ಯಾಷೆನಬಲ್ ಉಡುಪುಗಳಲ್ಲಿ ಪ್ಯಾರೀಸ್ ಸ್ಟ್ರೀಟ್ ಫ್ಯಾಷನ್‌ಗೆ ಸೈ ಎಂದಿದ್ದಾರೆ.
ಪ್ಯಾರಿಸ್ ಎಲ್ಲರಿಗೂ ತಿಳಿದಿರುವಂತೆ ಫ್ಯಾಷನ್ ಸಿಟಿ. ಪ್ರತಿಯೊಬ್ಬ ಫ್ಯಾಷನ್ ಪ್ರಿಯರು ಒಮ್ಮೆ ನೋಡಲೇ ಬೇಕೆಂದುಕೊಳ್ಳುವ ಸಿಟಿಯಿದು. ನಟಿ ಮೇಘನಾ ಗಾಂವ್ಕರ್ ಕೂಡ ಫ್ಯಾಷೆನಬಲ್ ನಟಿ. ಎಲ್ಲರಿಗೂ ಗೊತ್ತಿರುವಂತೆ ಟ್ರಾವೆಲನ್ನು ಅತಿ ಹೆಚ್ಚು ಇಷ್ಟ ಪಡುವ ನಟಿ. ಈ ಬಾರಿ ತಮ್ಮ ಹಾಲಿಡೇ ಕಳೆಯಲು ಫ್ರಾನ್ಸ್‌ಗೆ ತೆರಳಿ, ತಮ್ಮ ನೆಚ್ಚಿನ ಸಿಟಿ ಪ್ಯಾರೀಸ್‌ಗೆ ವಿಸಿಟ್ ಸುತ್ತಾಡುತ್ತಾ ಸಂತಸಪಟ್ಟಿದ್ದಾರೆ. ಈ ಬಗ್ಗೆ ಅವರೇ ಖುದ್ದು ಸಿಂಪಲ್ ಆಗಿ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪ್ಯಾರಿಸ್‌ನಲ್ಲಿ ಸ್ಟ್ರೀಟ್ ಸ್ಟೈಲ್
“ಪ್ಯಾರಿಸ್ ಮೈ ಲವ್” ಕ್ಯಾಪ್ಷನ್‌ನೊಂದಿಗೆ ವಿಂಟರ್ ಫ್ಯಾಷನ್‌ನಲ್ಲಿ ಕಾಣಿಸಿಕೊಂಡಿರುವ ಮೇಘನಾ ಬ್ಲ್ಯಾಕ್ ಪ್ಯಾಂಟ್, ಬ್ಲ್ಯಾಕ್ ಟ್ರೆಂಚ್‌ಕೋಟ್ ಧರಿಸಿದ್ದಾರೆ. ಇದಕ್ಕೆ ಯೆಲ್ಲೋ ವರ್ಣದ ಸ್ಟೋಲನ್ನು ೨ ಬಾರಿ ರೋಲ್ ಮಾಡಿ ಸ್ಟೈಲ್ ಮಾಡಿದ್ದಾರೆ. ಅಂದಹಾಗೆ, ಅಲ್ಲಿನ ಚಳಿಗೆ ಧರಿಸಿರುವ ಬ್ಲ್ಯಾಕ್ ಶೇಡ್‌ನ ಕೋಟ್ ದೇಹವನ್ನು ಬೆಚ್ಚಗಿಡುವುದರೊಂದಿಗೆ ಫ್ಯಾಷನ್ ಲುಕ್‌ಗೂ ಸಾಥ್ ನೀಡಿದೆ ಎಂಬುದು ಫ್ಯಾಷನ್ ವಿಮರ್ಶಕರ ಅಭಿಪ್ರಾಯ.
ಟ್ರೆಂಚ್ ಕೋಟ್ ಜತೆ ರೆಡ್ ಗ್ಲೌವ್ಸ್-ಸ್ಟೋಲ್
ಮತ್ತೊಂದು ಔಟ್‌ಫಿಟ್‌ನಲ್ಲಿ ಬ್ಲ್ಯೂ ಜೀನ್ಸ್, ಪಿಂಕ್ ಶೇಡ್‌ನ ಟೀ ಶರ್ಟ್‌ಗೆ ರೆಡ್ ಚೆಕ್ಸ್‌ನ ಸ್ಟೋಲ್ ಹಾಗೂ ರೆಡ್ ಗ್ಲೌವ್ಸ್ ಧರಿಸಿರುವ ಮೇಘನಾ , ಇದರೊಂದಿಗೆ ಕ್ರೀಮಿಶ್ ವರ್ಣದ ಟ್ರೆಂಚ್ ಕೋಟ್ ಮ್ಯಾಚ್ ಮಾಡಿದ್ದಾರೆ. ಸಿಟಿ ರೌಂಡ್‌ನಲ್ಲಿ ಲೆದರ್ ಪ್ಯಾಂಟ್, ಅದಕ್ಕೆ ರೆಡ್ ಟಾಪ್, ಬ್ರೌನ್ ವರ್ಣದ ಅಸ್ಸೆಮ್ಮಿಟ್ರಿಕಲ್ ಕಾಲರ್‌ನ ಜಾಕೆಟ್, ಬಣ್ಣ ಬಣ್ಣದ ಸ್ಟೋಲ್ ಧರಿಸಿದ್ದು ಆಕರ್ಷಕವಾಗಿ ಕಾಣುತ್ತಿದ್ದಾರೆ. ಇನ್ನು ಒಮ್ಮೆ ಸಿಂಪಲ್ ಪೋನಿಟೇಲ್, ಫ್ರೀ ಹೇರ್‌ಸ್ಟೈಲ್ ಮಾಡಿರುವ ಮೇಘನಾ, ಮಿನಿಮಲ್ ಮೇಕಪ್‌ಗೆ ಮೊರೆ ಹೋಗಿದ್ದಾರೆ. ಹೆಚ್ಚು ಆಕ್ಸೆಸರೀಸ್‌ಗೆ ನೋ ಹೇಳಿದ್ದಾರೆ. ಟ್ರಾವೆಲ್ ಟೈಮ್‌ನಲ್ಲಿ ಸಾಥ್ ನೀಡುವ ಬ್ಲಾಕ್ ಶೂ ಇವರ ಲಿಸ್ಟ್‌ನಲ್ಲಿದೆ. ಇದು ಅವರ ಸಿಂಪಲ್ ಟ್ರಾವೆಲ್ ಟೈಮ್ ಲೇಯರ್ ಲುಕ್‌ನ ಸಿಂಪ್ಲಿಸಿಟಿಯನ್ನು ಎತ್ತಿಹಿಡಿದಿದೆ ಎಂದು ಹೇಳುತ್ತಾರೆ ಫ್ಯಾಷನ್ ವಿಮರ್ಶಕರು. ಇನ್ನು ಮೇಘನಾ ಈ ಮೊದಲು ಕೂಡ ವಿದೇಶಿ ಟ್ರಾವೆಲ್ ಫ್ಯಾಷನ್ ಪರ್ಫೆಕ್ಟ್ ಆಗಿ ಪಾಲಿಸಿರುವುದು ಅವರ ಡ್ರೆಸ್‌ಕೋಡ್‌ನಿಂದಲೇ ತಿಳಿಯುತ್ತದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion : ಸ್ಯಾಂಡಲ್‌ವುಡ್‌ನಲ್ಲಿ ಪ್ಯಾಂಟ್‌ಸೂಟ್ ಟ್ರೆಂಡ್ ಹುಟ್ಟುಹಾಕಿದ ನಟಿ ಹರ್ಷಿಕಾ ಪೂಣಚ್ಚ