ಸಂದರ್ಶನ: ಶೀಲಾ ಸಿ. ಶೆಟ್ಟಿ
ಸ್ಯಾಂಡಲ್‌ವುಡ್ ನಟಿ (Milana Nagaraj Interview) ಮಿಲನಾ ನಾಗರಾಜ್ ಕೊ-ಆರ್ಡ್ ಸೂಟ್‌ನಲ್ಲಿ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ನೋಡಲು ಸಖತ್ ಫ್ಯಾಷನಬಲ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಮಿಲನಾ, ತೀರಾ ಸಿಂಪಲ್ ಫ್ಯಾಷನ್ ಸ್ಟೇಟ್‌ಮೆಂಟ್‌ಗಳನ್ನು ಫಾಲೋ ಮಾಡುವ ಸುರದ್ರೂಪಿ ನಟಿ. ಮಾಡುವ ಪ್ರತಿ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಲ್ಲೂ ಸಿಂಪ್ಲಿಸಿಟಿ ಬಯಸುವ ಸ್ಯಾಂಡಲ್‌ವುಡ್ ತಾರೆ. ಇದಕ್ಕೆ ಪೂರಕ ಎಂಬಂತೆ ಸದಾ ತಮ್ಮದೇ ಆದ ಚಾಯ್ಸ್‌ನ ಔಟ್‌ಫಿಟ್‌ಗಳಲ್ಲೆ ಕಾಣಿಸಿಕೊಳ್ಳುತ್ತಿರುತ್ತಾರೆ. ತಮ್ಮ ಫ್ಯಾಷನ್ ಹಾಗೂ ವಾರ್ಡ್ರೋಬ್ ಕಲೆಕ್ಷನ್ ಕುರಿತಂತೆ ವಿಸ್ತಾರ ನ್ಯೂಸ್‌ನೊಂದಿಗೆ ಅವರು ಮಾತನಾಡಿದ್ದಾರೆ.
ಸಮ್ಮರ್ ಸ್ಪ್ರಿಂಗ್‌ಗೆ ಮುನ್ನವೇ ಫ್ಲೋರಲ್ ಕೊ-ಆರ್ಡ್ ಸೂಟ್‌ನಲ್ಲಿ ಕಾಣಿಸಿಕೊಂಡಿರುವ ಈ ಸ್ಟೈಲಿಂಗ್ ಬಗ್ಗೆ ಹೇಳಿ?
ಈಗಾಗಲೇ ವಿಂಟರ್ ಮುಗಿಯುವ ಹಂತದಲ್ಲಿದ್ದು, ಸಮ್ಮರ್ ಸನಿಹದಲ್ಲಿದೆ. ನಾನು ಧರಿಸಿರುವ ಈ ಕೊ-ಆರ್ಡ್ ಸೂಟ್‌ನ ಕೋಟ್ ವಿಂಟರ್‌ಗೆ ಬೆಚ್ಚಗಿರಿಸಿದರೆ, ಕೋಟ್ ಇಲ್ಲದ ಕ್ರಾಪ್ ಟಾಪ್ ಸಮ್ಮರ್ ಫ್ಯಾಷನ್‌ಗೆ ಹೊಂದುತ್ತದೆ. ಹೀಗೆ ಎರಡೂ ಸೀಸನ್‌ಗೆ ಹೊಂದುವಂತಿದೆ. ತೇಜು ಕ್ರಾಂತಿ ಹಾಗೂ ಖುಷಿ ಜಗದೀಶ್ ಅವರ ಸ್ಟೈಲಿಂಗ್ ಇದಕ್ಕಿದೆ.
ವಿಸ್ತಾರ: ಸದಾ ಬ್ಯೂಟಿಫುಲ್ ಔಟ್‌ಫಿಟ್‌ಗಳಲ್ಲಿ ಸಿಂಪಲ್ ಆಗಿ ಕಾಣಿಸಿಕೊಳ್ಳುವ ನಿಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳೇನು?
ಸಿಂಪಲ್. ಹೌದು, ನಾನು ಸದಾ ಆದಷ್ಟೂ ಟ್ರೆಂಡಿ ಔಟ್‌ಫಿಟ್ ಚಾಯ್ಸ್ ಮಾಡುತ್ತೇನೆ. ಹವಾಮಾನಕ್ಕೆ ಹೊಂದುವಂತಹ ಫ್ಯಾಷನ್‌ವೇರ್ ಧರಿಸುತ್ತೇನೆ. ಸ್ಟೈಲಿಸ್ಟ್‌ಗಳೊಂದಿಗೆ ಚರ್ಚಿಸಿ ನನ್ನ ಔಟ್‌ಫಿಟ್ ನಿರ್ಧರಿಸುತ್ತೇನೆ. ಆದಷ್ಟೂ ಲೈಟ್ ಕಲರ್‌ಗಳು ನನ್ನ ಫ್ಯಾಷನ್ ಸ್ಟೇಟ್‌ಮೆಂಟ್‌ನಲ್ಲಿವೆ. ಇನ್ನು ಧರಿಸುವ ಔಟ್‌ಫಿಟ್‌ಗಳು ಸ್ಟೈಲ್ ಸ್ಟೇಟ್‌ಮೆಂಟನ್ನು ನಿರ್ಧರಿಸುತ್ತವೆ.
ನಿಮ್ಮ ವಾರ್ಡ್ರೋಬ್‌ನಲ್ಲಿ ಕಲೆಕ್ಷನ್‌ನಲ್ಲಿರುವ ಕಾಮನ್ ಕಲರ್ಸ್‌ಗಳ್ಯಾವುವು?
ನಾನು ಡಾರ್ಕ್ ಕಲರ್ಸ್‌ನಿಂದ ಸದಾ ದೂರ. ಹಾಗಾಗಿ ಯೆಲ್ಲೋ, ಪಿಸ್ತಾ, ಪೀಚ್‌ನಂತಹ ತಿಳಿ ವರ್ಣಗಳನ್ನು ಹೆಚ್ಚಾಗಿ ಚೂಸ್ ಮಾಡುತ್ತೇನೆ. ಅದು ಟ್ರೆಡಿಷನಲ್ ಆಗಬಹುದು ಅಥವಾ ವೆಸ್ಟರ್ನ್ ಆಗಬಹುದು. ಪಾಸ್ಟೆಲ್ ಶೇಡ್ಸ್ ನನಗಿಷ್ಟ.
ಸೀಸನ್‌ಗೆ ತಕ್ಕಂತೆ ನಿಮ್ಮ ಆಯ್ಕೆ ಹೇಗೆ ಭಿನ್ನವಾಗಿರುತ್ತದೆ?
ಫಿಟ್ ಬಾಡಿ ನನ್ನದಾಗಿರುವುದರಿಂದ ಆದಷ್ಟೂ ಸ್ಲಿಮ್ ಫಿಟ್ ಉಡುಗೆಗಳನ್ನು ಇಷ್ಟಪಡುತ್ತೇನೆ. ಉದಾಹರಣೆಗೆ ವಿಂಟರ್‌ನಲ್ಲಿ ಬಾಡಿಕಾನ್ ಡ್ರೆಸ್‌ಗಳನ್ನು ಹೆಚ್ಚಾಗಿ ಧರಿಸುತ್ತಿದ್ದೆ. ಇನ್ಮುಂದೆ ಬರುವ ಸಮ್ಮರ್ ಸ್ಪ್ರಿಂಗ್‌ನಲ್ಲಿ ಆದಷ್ಟೂ ಫ್ಲೋರಲ್ ಪ್ರಿಂಟ್ಸ್ ಹಾಗೂ ಪಾಸ್ಟೆಲ್ ಶೇಡ್‌ನ ಡ್ರೆಸ್‌ಗಳಿಗೆ ಪ್ರಾಮುಖ್ಯತೆ ನೀಡುತ್ತೇನೆ.
ಯಾರೂ ಕಾಪಿ ಮಾಡಲಾಗದ ನಿಮ್ಮದೇ ಆದ ಸಿಗ್ನೇಚರ್ ಸ್ಟೈಲ್ ಏನು?
ಮುಗುಳ್ನಗೆ ಹಾಗೂ ಎಂತಹದ್ದೇ ಔಟ್‌ಫಿಟ್ ಧರಿಸಿದ ನಂತರವೂ ಕಂಡುಬರುವ ಬದಲಾಗದ ನನ್ನ ಸಿಂಪ್ಲಿಸಿಟಿ.
ಇತ್ತೀಚಿಗೆ ನೀವು ಬದಲಿಸಿದ ಲುಕ್ ಯಾವುದು?
ಇತ್ತೀಚಿನ ಲವ್‌ಬಡ್ರ್ಸ್ ಸಿನಿಮಾದಲ್ಲಿ ಕನ್ನಡಕ ಧರಿಸಿ ಕೊಂಚ ಲುಕ್ ಬದಲಿಸಿದ್ದೆ. ಒಂದೇ ಲುಕ್‌ಗೆ ಕೊಂಚ ಇತಿಶ್ರೀ ಹಾಡಿದ್ದೆ. ಅಭಿಮಾನಿಗಳಿಗೂ ಇಷ್ಟವಾಯಿತು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sandalwood Star Fashion: ಮನಮೋಹಕ ಕಟೌಟ್ ಡ್ರೆಸ್‌ನಲ್ಲಿ ನ್ಯೂ ಸೀಸನ್ ವೆಲ್‌ಕಮ್ ಮಾಡಿದ ನಟಿ ನಿಮಿಕಾ ರತ್ನಾಕರ್