ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ವಾತಂತ್ರ್ಯೋತ್ಸವದ ಸಂಭ್ರಮ ಹೆಚ್ಚಿಸಲು ರಾಷ್ಟ್ರಪ್ರೇಮ ಬಿಂಬಿಸುವ ವೆರೈಟಿ ಕಾಟನ್ ಮಿಕ್ಸ್, ಸೆಮಿ ಕಾಟನ್ ಮಿಕ್ಸ್ ಹಾಗೂ ಕಾಟನ್ ಮಿಕ್ಸ್ ಸಿಲ್ಕ್ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಕಾಟನ್ ಮಿಕ್ಸ್ ಸೀರೆ ವೆರೈಟಿ
ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾಟನ್ ಮಿಕ್ಸ್ ಸೀರೆ ಎಂದಾಕ್ಷಣ ಅದು ಪ್ಯೂರ್ ಕಾಟನ್‌ನಿಂದ ತಯಾರಾದದ್ದು ಎಂದಲ್ಲ. ಇತರೇ ಫ್ಯಾಬ್ರಿಕ್‌ನೊಂದಿಗೆ ಕಾಟನ್ ಮಿಕ್ಸ್ ಆಗಿದೆ ಎಂದರ್ಥ ಎನ್ನುತ್ತಾರೆ ಡಿಸೈನರ್ಸ್ ರಾಶಿ. ಅವರ ಪ್ರಕಾರ, ಕಲರ್ ಕಾಂಬಿನೇಷನ್ ಹಾಗೂ ಮಕ್‌ಮಲ್‌ನಂತಹ ಫ್ಯಾಬ್ರಿಕ್ ಹೊಂದಿರುವ ಕಾಟನ್ ಮಿಕ್ಸ್ ಸೀರೆಗಳು, ಉಟ್ಟರೆ ಹಾಗೆಯೇ ಫ್ಲೋ ಆಗುವಂತಹ ಕಾಟನ್ ಸಿಲ್ಕ್ ಮಿಕ್ಸ್ ಸೀರೆಗಳು ಹೆಚ್ಚು ರನ್ನಿಂಗ್‌ನಲ್ಲಿವೆ. ಫ್ಲೋರಲ್ ಪ್ರಿಂಟೆಡ್‌ನವು, ಜೆಮೆಟ್ರಿಕಲ್ ವಿನ್ಯಾಸದವು, ಸ್ಟ್ರೈಪ್ಸ್‌ನವು ಯುವತಿಯರನ್ನು ಸೆಳೆಯುತ್ತಿವೆ. ಇನ್ನು ಮಲ್ಟಿಪಲ್ ಬಾರ್ಡರ್ ಇರುವಂತಹ ಕಾಟನ್ ಮಿಕ್ಸ್ ಸೀರೆಗಳು ಟ್ರೆಡಿಷನಲ್ ಮಾನಿನಿಯರನ್ನು ಬರಸೆಳೆದಿವೆ. ಎಂದಿನಂತೆ ವೃತ್ತಿಪರರನ್ನು ಹೊಸ ವಿನ್ಯಾಸದ ಪ್ರಿಂಟ್ಸ್ ಇರುವಂತವು ಸೆಳೆದಿವೆ.
ವಿಭಿನ್ನ ಕಾಟನ್ ಮಿಕ್ಸ್ ಸೀರೆಗಳು
ಸೀರೆಯ ಮೇಲೆ ಕಥೆ ಹೇಳುವ ಪೊಟ್ರೈಟ್‌ಗಳು, ಡಿಸೈನ್‌ಗಳು ಈ ಸಾಲಿನ ಸ್ವಾತಂತ್ರ್ಯ ದಿನಾಚಾರಣೆಯ ಸಮಯಕ್ಕೆ ಆಗಮಿಸಿವೆ. ನೋಡಲು ಸಿಂಪಲ್ ಹಾಗೂ ಎಲಿಗೆಂಟ್ ಆಗಿ ಕಾಣುವ ಬಗೆಬಗೆಯ ಸಿಲ್ಕ್ ಮಿಕ್ಸ್ ಕಾಟನ್ ಸೀರೆಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.
ಕಾಟನ್ ಮಿಕ್ಸ್ ಸೀರೆಗೆ ಕಾಂಟ್ರಾಸ್ಟ್ ಬ್ಲೌಸ್
ಕಾಂಟ್ರಾಸ್ಟ್ ಇಲ್ಲವೇ ಮಿಕ್ಸ್ ಮ್ಯಾಚ್ ಬ್ಲೌಸ್‌ಗಳನ್ನು ಧರಿಸುವುದು ಇದೀಗ ಟ್ರೆಂಡ್‌ನಲ್ಲೊಂದಾಗಿದೆ. ಹಾಗಾಗಿ ಕುಟುಂಬದಲ್ಲಿ ಒಬ್ಬರ ಸೀರೆಯನ್ನು ಮತ್ತಷ್ಟು ಮಂದಿ ಉಡುವ ಕಾನ್ಸೆಪ್ಟಿಗೆ ಇದು ನಾಂದಿ ಹಾಡಿದೆ. “ಇಂದು ಕಾಟನ್ ಸೀರೆಗೆ ಪಕ್ಕಾ ಒಂದೇ ರೀತಿಯ ಪರ್ಫೆಕ್ಟ್ ಮ್ಯಾಚಿಂಗ್ ಬ್ಲೌಸ್ ಧರಿಸುವ ರಿವಾಜಿಗೆ ಇತಿ ಶ್ರೀ ಬಿದ್ದಿದೆ. ನೋಡಲು ಡಿಫರೆಂಟ್ ಲುಕ್ ನೀಡುವ ಕ್ರಾಪ್ ಟಾಪ್ ಬ್ಲೌಸ್, ಚೈನಾ ಕಾಲರ್‌ನ ಲಾಂಗ್ ಬ್ಲೌಸ್ ಇಲ್ಲವೇ ಹಾಲ್ಟರ್ ನೆಕ್‌ನಂತಹ ಗ್ಲಾಮರಸ್ ಬ್ಲೌಸ್‌ಗಳು ಟ್ರೆಂಡ್‌ನಲ್ಲಿವೆ” ಎನ್ನುತ್ತಾರೆ ಡಿಸೈನರ್ ಯೋಗಿತಾ. ಇನ್ನು ಡಿಸೈನರ್ ರಿಯಾ ಹೇಳುವಂತೆ ಇಂದು ಹೆಚ್ಚು ಟ್ರೆಂಡ್‌ನಲ್ಲಿರುವ ಪ್ರಿಂಟೆಡ್ ಡಿಸೈನರ್ ಕಾಟನ್ ಮಿಕ್ಸ್ ಮ್ಯಾಚಿಂಗ್ ಬ್ಲೌಸ್‌ಗಳನ್ನು ಒಂದಕ್ಕಿಂತ ಹೆಚ್ಚು ಸೀರೆಗೆ ಧರಿಸಬಹುದು.
ಸೀರೆಯನ್ನುಡ್ರೆಪ್ ಮಾಡಿ ಇಡಿ
ಕಾಟನ್ ಸೀರೆಯನ್ನು ಉಡುವ ಮುನ್ನ ಅಂದರೆ ಹಿಂದಿನ ದಿನವೇ ಸೀರೆಗೆ ನೆರಿಗೆ ಮತ್ತು ಸೆರಗುಗಳಿಗೆ ಇಸ್ತ್ರಿ ಮಾಡಿ. ಡ್ರೆಪ್ ಮಾಡಿ ಪಿನ್ ಹಾಕಿ. ಮರುದಿನ ಸೀರೆಯನ್ನು ಉಟ್ಟುಕೊಳ್ಳಲು ಸುಲಭವಾಗುತ್ತದೆ. ಹೆಚ್ಚು ಗೊಂದಲವಾಗದು ಎನ್ನುತ್ತಾರೆ ಸೀರೆ ಡ್ರೆಪಿಂಗ್ ಎಕ್ಸ್ಪರ್ಟ್ಸ್.
ಮಾನ್ಸೂನ್‌ನಲ್ಲಿ ಜಾಗ್ರತೆ
ಮಾನ್ಸೂನ್‌ನಲ್ಲಿ ಸೀಸನ್‌ನಲ್ಲಿ ಕಾಟನ್ ಸೀರೆಯನ್ನುಉಟ್ಟುಕೊಂಡಾಗ, ಒದ್ದೆಯಾಗದಂತೆ, ಮುದ್ದೆಯಾಗದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದಲ್ಲಿ ಮೈಗಂಟಬಹುದು.
ಕಾಟನ್ ಮಿಕ್ಸ್ ಸೀರೆ ಖರೀದಿಸುವಾಗ:
- ಗುಣಮಟ್ಟದ್ದನ್ನು ಪರಿಶೀಲಿಸಿ ಖರೀದಿಸಿ.
- ಆದಷ್ಟೂ ಟ್ರೆಂಡಿಯಾಗಿರುವುದನ್ನು ಚೂಸ್ ಮಾಡಿ.
- ಮಿಕ್ಸ್ ಮ್ಯಾಚ್ ಕಾಟನ್ ಶುದ್ಧ ಕಾಟನ್ ಅಲ್ಲ ಎಂಬುದು ತಿಳಿದಿರಲಿ.
- ಮಾನೋಕ್ರೋಮಾಟಿಕ್ ಶೇಡ್ನವು ಟ್ರೆಂಡಿಯಾಗಿವೆ ಎಂಬುದು ತಿಳಿದಿರಲಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Indo-western fashion | ಟ್ರೆಂಡಿಯಾಯ್ತು ಇಂಡೋ-ವೆಸ್ಟರ್ನ್ ಸೀರೆ ಬ್ಲೌಸ್