ನಮ್ಮ ಆತ್ಮವಿಶ್ವಾಸ ಹೆಚ್ಚಿಸುವ (confidence building) ಸರಳ ದಾರಿ ಎಂದರೆ ನಮ್ಮನ್ನು ನಾವು ಪ್ರೀತಿಸುವುದು (self love). ಇದೇನಿದು, ನಮ್ಮನ್ನು ನಾವು ಪ್ರೀತಿಸುವುದು ಎಂದರೆಎಂದು ಅವಕ್ಕಾಗಬೇಡಿ. ನಮ್ಮನ್ನು ನಾವು ಪ್ರೀತಿಸುವುದರಲ್ಲಿ ವಿಶೇಷವೇನಿದೆ ಎನ್ನಬೇಡಿ. ಬೇರೆಯವರನ್ನು ಪ್ರೀತಿಸುವ ಮೊದಲು ನಾವು ನಮ್ಮನ್ನು ಪ್ರೀತಿಸುವುದನ್ನು ಕಲಿಯಬೇಕು. ಯಾಕೆಂದರೆ, ಬೇರೆಯವರನ್ನು ಪ್ರೀತಿಸಲು ನಾವು ನಮ್ಮನ್ನು ಗಾಢವಾಗಿ ಪ್ರೀತಿಸುವುದೂ ಬೇಕಾಗುತ್ತದೆ. ನಮ್ಮ ಚರ್ಮ, ನಮ್ಮ ದೇಹ, ನಮ್ಮ ಆಸಕ್ತಿ ಎಲ್ಲವೂ ನಮಗೆ ದಕ್ಕಿದ ಅತ್ಯಪೂರ್ವ ವರ ಎಂದು ನಾವು ಒಮ್ಮೆ ಯೋಚಿಸಲು ಶುರು ಮಾಡಿದರೆ ಬದುಕು ಸರಳವಾಗಿ ಕಾಣುತ್ತದೆ. ನಾವು ಬದಲಾಯಿಸಲಾಗದ ವಿಚಾರಗಳನ್ನು ಬದಿಗಿಟ್ಟರೆ ವೃಥಾ ಚಿಂತೆ ತಪ್ಪುತ್ತದೆ. ಬದುಕು ಸುಂದರ ಎಂಬುದು ಮನದಟ್ಟಾಗುತ್ತದೆ.
ಹಾಗಾದರೆ ನಮ್ಮನ್ನು ನಾವು ಪ್ರೀತಿಸುವುದು ಎಂದರೇನು? ನಾವು ನಮ್ಮನ್ನು ಹೇಗೆ ಪ್ರೀತಿಸಬಹುದು ಎಂಬುದರ ಸರಳ ಹಾಗೂ ಅಷ್ಟೇ ಪ್ರಾಯೋಗಿಕ ವಿಧಾನಗಳು ಇಲ್ಲಿವೆ.
1. ಎಲ್ಲಕ್ಕಿಂತ ಮುಖ್ಯ ಆರೋಗ್ಯ. ನಾವು ಆರೋಗ್ಯವಾಗಿರಬೇಕು ಎಂಬುದು ನಮಗೆ ಎಲ್ಲಕ್ಕಿಂತ ಮುಖ್ಯವಾಗಬೇಕು. ನಮ್ಮ ಆರೋಗ್ಯದ ಕಡೆಗಣನೆ ಸಲ್ಲದು. ಹಾಗಾಗಿ ಆರೋಗ್ಯವಾಗಿರಲು ಅಗತ್ಯವಾದ ನಡೆ ನಮ್ಮದಾಗಿರಬೇಕು. ನಮ್ಮ ಅಗತ್ಯಗಳ, ನಮ್ಮ ದೇಹಕ್ಕೆ ಹೊಂದುವ ಹಾಗೂ ಸರಳ ಜೀವನ ಶೈಲಿ ನಮ್ಮದಾಗಿರಲಿ. ಈ ಬಗ್ಗೆ ನಿರ್ಲಕ್ಷ್ಯ ಸಲ್ಲದು.
2. ಆರೋಗ್ಯಕರ ಆಹಾರ ಸೇವನೆ ಆದ್ಯತೆಯಾಗಿಸಿ. ಹಣ್ಣು ಹಂಪಲು, ತರಕಾರಿ ನಿತ್ಯವೂ ಹೊಟ್ಟೆ ಸೇರಲಿ. ನಮ್ಮ ಭಾವನೆಗಳ ವೈಪರೀತ್ಯಕ್ಕೂ ಆಹಾರಕ್ಕೂ ಸಂಬಂಧವಿದೆ. ಹಾಗಾಗಿ ಆದಷ್ಟು ಉತ್ತಮ ಆಹಾರ ಪ್ರಮುಖ ಆದ್ಯತೆಯಾಗಿರಲಿ.
3. ಕೃತಜ್ಞತಾ ಭಾವನೆ ನಾವು ನಿತ್ಯ ಜೀವನದಲ್ಲಿ ರೂಢಿಸಿಕೊಳ್ಳಬಹುದಾದ ಬಹುಮುಖ್ಯ ಗುಣ. ಜೀವನದಲ್ಲಿ ನಮಗೆ ದಕ್ಕಿದ ಸವಲತ್ತುಗಳು ಭಾಗ್ಯಗಳ ಬಗ್ಗೆ ನಮಗೆ ಕೃತಜ್ಞತಾ ಭಾವವಿರಲಿ. ಇದು ಪಾಸಿಟಿವ್ ಮನಸ್ಥಿತಿ ರೂಢಿಸಿಕೊಳ್ಳಲು ಇರುವ ಮುಖ್ಯ ಮೆಟ್ಟಿಲು.
4. ಪ್ರತಿಯೊಬ್ಬರೂ ತಪ್ಪುಗಳನ್ನು ಮಾಡುತ್ತಾರೆ. ಹಾಗೆಯೇ ಮಾಡಿದ ತಪ್ಪುಗಳನ್ನು ಒಪ್ಪಿಕೊಂಡು ತಿದ್ದಿ ನಡೆಯುವುದು, ಮುಂದೆ ಅಂತಹ ತಪ್ಪುಗಳಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ನಮ್ಮನ್ನು ನಾವು ಕ್ಷಮಿಸಿ, ತಪ್ಪಿನಿಂದ ತದ್ದಿಕೊಂಡ ಅಂಶಗಳನ್ನು ಅರಿತು, ಪಾಠವನ್ನು ಕಲಿಯುವುದನ್ನು ರೂಢಿಸಿಕೊಳ್ಳಬೇಕು.
ಇದನ್ನೂ ಓದಿ: Happiness | ಸದಾ ಖುಷಿಯೇ ಬೇಕೇ? ಈ ಹಾರ್ಮೋನುಗಳನ್ನೂ ಚೆನ್ನಾಗಿ ನೋಡಿಕೊಳ್ಳಿ!
5. ನಿಮ್ಮ ವಿಶೇಷತೆಯ ಬಗ್ಗೆ ಅರಿವಿರಲಿ. ನಿಮ್ಮ ಶಕ್ತಿಯ ಬಗ್ಗೆ ನಿಮಗೆ ಗೊತ್ತಿರಲಿ ಹಾಗೂ ಅದನ್ನು ಸಂಪೂರ್ಣವಾಗಿ ಒಪ್ಪಿ ಅಪ್ಪಿಕೊಳ್ಳಿ. ಇದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತದೆ.
6. ನಿಮ್ಮಲ್ಲಿ ನೆಗೆಟಿವ್ ಭಾವವನ್ನು ಹೆಚ್ಚು ಮಾಡುವ ಮಂದಿಯಿಂದ ದೂರವಿರಿ. ಪಾಸಿಟಿವ್ ಮನಸ್ಥಿತಿ ಮಂದಿಗೆ ಹತ್ತಿರವಾಗಿ. ನಿಮಗೆ ಸ್ಪೂರ್ತಿ ಕೊಡುವ, ನಿಮ್ಮನ್ನು ಹುರಿದುಂಬಿಸುವ, ತಪ್ಪಾದಾಗ ತಿದ್ದಿ ನೆಯಲು ಅವಕಾಶ ಕೊಡುವ, ನಿಮ್ಮನ್ನು ಧೈರ್ಯ ಗುಂದದಂತೆ ನೋಡಿಕೊಳ್ಳುವವರ ಸ್ನೇಹ ಒಳ್ಳೆಯದು.
7. ನಿಮ್ಮ ಆಸಕ್ತಿಗಳತ್ತಲೂ ಗಮನ ಕೊಡಿ. ನಿಮಗೆ ಸಂತೋಷ ಕೊಡುವ ಒಳ್ಳೆಯ ಕೆಲಸ, ಹವ್ಯಾಸಗಳನ್ನು ಬಿಡಬೇಡಿ. ವೃತ್ತಿಯ ನಡುವೆ ಅವುಗಳಿಗೂ ಜಾಗ ಮಾಡಿಕೊಳ್ಳಿ.
8. ಪ್ರತಿಯೊಬ್ಬರಿಗೂ ಕಷ್ಟ ಬರುತ್ತದೆ. ಹಾಗಾಗಿ, ಕಷ್ಟದಲ್ಲಿರುವವರಿಗೆ ಹೆಗಲು ಕೊಡಲು, ಕನಿಷ್ಟ ಸಹಾಯ ನಿಮ್ಮಿಂದಾದರೆ ಮಾಡಿ.
9 ಭವಿಷ್ಯದ ಬಗ್ಗೆ ಚಿಂತೆ ಮಾಡುವುದನ್ನು ಕಡಿಮೆ ಮಾಡಿ ವರ್ತಮಾನದಲ್ಲಿ ಖುಷಿಪಡಿ. ಈಗ ಮಾಡುತ್ತಿರುವ ಕೆಲಸದ ಬಗ್ಗೆ ಸಂತೋಷ ಪಡಿ. ಅದನ್ನು ಸಂಪೂರ್ಣವಾಗಿ ಅನುಭವಿಸಿ.
ಇದನ್ನೂ ಓದಿ: Happiness | ಜೀವನಪ್ರೀತಿಗೆ ಸ್ಫೂರ್ತಿ ಜಪಾನೀಯರ ಈ ಎಂಟು ಬದುಕಿನ ಸೂತ್ರಗಳು!