ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆಯಾ ಸೀಸನ್ ಗೆ ತಕ್ಕಂತೆ ಕೈಗಳಿಗೂ ಕೂಡ ಆರೈಕೆ ಅಗತ್ಯ. ಮೆನಿಕ್ಯೂರ್ ಮಾತ್ರವಲ್ಲದೇ, ಇತರೇ ವಿಧಾನಗಳಿಂದಲೂ ಕೈಗಳ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಮನೆಯಲ್ಲೆ ಕೆಲವು ಟಿಪ್ಸ್ ಪಾಲಿಸಿದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪರ್ಟ್ ಲತಾ.
- ಹಾಲಿನ ಕೆನೆಯ ಮಸಾಜ್
ಹಾಲಿನ ಕೆನೆಯೊಂದಿಗೆ ಅರಿಷಿಣ ಬೆರೆಸಿ ಕೈಗಳಿಗೆ ಲೇಪಿಸಿ, ಒಂದೈದು ನಿಮಿಷ ಮಸಾಜ್ ಮಾಡಿ. ಇಪ್ಪತ್ತು ನಿಮಿಷದ ನಂತರ ತೊಳೆಯಿರಿ. ಆಗಾಗ ಈ ರೀತಿ ಮಸಾಜ್ ಮಾಡುವುದರಿಂದ ಚರ್ಮ ಕಾಂತಿಯುಕ್ತವಾಗುವುದು.
- ಆಲಿವ್ ಎಣ್ಣೆ ಮಸಾಜ್
ಆಲಿವ್ ಎಣ್ಣೆಯೊಂದಿಗೂ ಚಿಟಿಕೆ ಅರಿಷಿಣ ಬೆರೆಸಿ ಕೈಗಳಿಗೆ ಹಚ್ಚಿ, ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ವಾಶ್ ಮಾಡಿ. ಕಪ್ಪಾಗಿರುವ ಚರ್ಮದ ದಿನ ಕಳೆದಂತೆ ತಿಳಿಯಾಗುವುದು.
- ಕಡಲೆಹಿಟ್ಟಿನ ಮಸಾಜ್
ಚರ್ಮ ಒರಟಾಗಿದ್ದಲ್ಲಿ ಕಡಲೆಹಿಟ್ಟಿನ ಸ್ಕ್ರಬ್ಬಿಂಗ್ ಮಾಡಬಹುದು. ನಿಯಮಿತ ಸ್ಕ್ರಬ್ಬಿಂಗ್ ತೋಳಿನ ಚರ್ಮವನ್ನು ಸುಕೋಮಲವಾಗಿಸುವುದು. ಕೈಗಳ ಚರ್ಮ ಮೃದುವಾಗಿದ್ದಲ್ಲಿ ಹೆಚ್ಚು ಮಸಾಜ್ ಹಾಗೂ ಸ್ಕ್ರಬ್ಬಿಂಗ್-ಪ್ಯಾಕಿಂಗ್ ಅವಶ್ಯಕತೆ ಇಲ್ಲ. ಒಣಗಿದ ಡೆಡ್ ಸ್ಕಿನ್ ತೆಗೆಯಲು ಪ್ಯೂಮಿಕ್ ಸ್ಟೋನ್ನಿಂದಲೂ ಮಸಾಜ್ ಮಾಡಬಹುದು.
- ಕೊಬ್ಬರಿ ಎಣ್ಣೆ ಮಸಾಜ್
ಆಗಾಗ ಕೊಬ್ಬರಿ ಎಣ್ಣೆಯನ್ನು ಕೈಗಳಿಗೆ ಹಚ್ಚಿ. ಹತ್ತು ನಿಮಿಷ ಮಸಾಜ್ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯುವುದರಿಂದ ಚರ್ಮ ಸುಕೋಮಲವಾಗುತ್ತದೆ.
- ಟ್ಯಾನ್ ಹೋಗಲಾಡಿಸಲು ಮಸಾಜ್
ರೋಸ್ ವಾಟರ್ ಹಾಗೂ ಗ್ಲಿಸರಿನ್ ಮಿಶ್ರಣವನ್ನು ಟ್ಯಾನ್ ಆದ ಭಾಗಕ್ಕೆ ಲೇಪಿಸಿ, ಕೆಲ ನಿಮಿಷಗಳ ಕಾಲ ಮಸಾಜ್ ಮಾಡಿ. ಸ್ವಲ್ಪದಿನಗಳ ನಂತರ ಚರ್ಮದ ಟ್ಯಾನ್ ಕಡಿಮೆಯಾಗುವುದನ್ನು ಗಮನಿಸಬಹುದು. ಚರ್ಮ ಬಿರುಕಾಗಿದ್ದಲ್ಲಿ ಗ್ಲಿಸರ್ ನಿಂದ ಮಸಾಜ್ ಮಾಡುವುದನ್ನು ರೂಢಿಸಿಕೊಳ್ಳಿ.
ಫುಲ್ ಸ್ಲೀವ್ ಧರಿಸಿ
ಸಮಸ್ಯೆ ಬಗೆಹರಿಯುವವರೆಗೂ ಫುಲ್ ಸ್ಲೀವ್ ಉಡುಪುಗಳನ್ನು ಧರಿಸಿ. ಗಾಳಿಗೆ ಕೈಗಳು ಒರಟಾಗುವುದನ್ನು ತಪ್ಪಿಸಲು ದುಪಟ್ಟಾ ಬಳಸಿ. ಕೊಂಚ ಸ್ಟೈಲಿಶ್ ಆಗಿ ಕಾಣಲು ಪಾರದರ್ಶಕ ಸ್ಲೀವ್ ಉಡುಪುಗಳನ್ನು ಧರಿಸಿ. ಇದರಿಂದ ಕೈಗಳು ಕಪ್ಪಾಗುವುದನ್ನು ತಡೆಯಬಹುದು ಎನ್ನುತ್ತಾರೆ ಸೌಂದರ್ಯ ಪರಿಣತರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Beauty Care: ತ್ವಚೆಯ ಸೌಂದರ್ಯ ಹೆಚ್ಚಿಸುವ ಸ್ಟ್ರಾಬೆರಿ