Site icon Vistara News

Shah Rukh Khan Fashion | ಬಾಲಿವುಡ್‌ ಕಿಂಗ್‌ ಖಾನ್‌ ಶಾರುಖ್‌ ರೀಲ್‌ ಫ್ಯಾಷನ್‌ Vs ರಿಯಲ್‌ ಫ್ಯಾಷನ್‌!

Shah rukh khan Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕಿಂಗ್‌ ಖಾನ್‌, ಬಾಲಿವುಡ್‌ ಬಾದ್‌ಶಾ ಶಾರುಖ್‌ ಖಾನ್‌ ಸಿನಿಮಾಗಳಲ್ಲಿ ನೋಡಲು ಮಾತ್ರ ಸಖತ್‌ ಫ್ಯಾಷನ್‌ ಕಾನ್ಶಿಯಸ್‌ ಸ್ಟಾರ್‌. ಇದಕ್ಕೆ ಪೂರಕ ಎಂಬಂತೆ, ಇವರ ಬಿಂದಾಸ್‌ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಿಗೆ ೯೦ರ ದಶಕದ ಯಂಗ್‌ಸ್ಟರ್ಸ್‌ ಸಮ್ಮೋಹನಕ್ಕೊಳಗಾಗಿದ್ದರು ಎಂದರೆ ಅಚ್ಚರಿಯಾಗಬಹುದು. ಅಚ್ಚರಿಯಾದರೂ ಇದು ನಿಜ. ಆದರೆ, ಇದಕ್ಕೆ ತದ್ವಿರುದ್ಧವೆಂಬಂತೆ ಕಿಂಗ್‌ ಖಾನ್‌, ತಮ್ಮ ರಿಯಲ್‌ ಲೈಫ್‌ನಲ್ಲಿ ತಮ್ಮದೇ ಆದ ಕಂಪ್ಲೀಟ್‌ ಡಿಫರೆಂಟ್‌ ಫ್ಯಾಷನ್‌ ಸ್ಟೇಟ್‌ಮೆಂಟ್‌ ಹೊಂದಿದ್ದಾರೆ ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್‌ಗಳು.

ಅಂದಹಾಗೆ, ಬಾಲಿವುಡ್‌ ಸಿನಿಮಾಗಳ ಮೂಲಕ ನಾಯಕ ನಟನೊಬ್ಬ ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳನ್ನು ಟ್ರೆಂಡಿಯಾಗಿಸಿದ್ದ ಕ್ರೆಡಿಟ್‌ ಇವರಿಗೆ ಸಲ್ಲುತ್ತದೆ. ೯೦ರ ದಶಕದ ಆಸು-ಪಾಸಿನ ಜನರೇಷನ್‌ನ ಹುಡುಗರಲ್ಲಿ ಫ್ಯಾಷನ್‌ ಪ್ರೇಮ ಹುಟ್ಟುವಂತೆ ಮಾಡಿದ ನಟನ ಸಾಲಿಗೆ ಇವರು ಮೊದಲು ಸೇರುತ್ತಾರೆ.

ಸಿನಿಮಾಗಳಲ್ಲೂ ಫ್ಯಾಷೆನಬಲ್‌ ಲುಕ್‌ :

ಶಾರುಖ್‌ ಖಾನ್‌ ನಟಿಸಿದ ಸಾಕಷ್ಟು ಸಿನಿಮಾಗಳು ಅದರಲ್ಲೂ ದಿಲ್ವಾಲೆ ದುಲ್ಹಾನಿಯಾ ಲೇ ಜಾಯೆಂಗೆಯಲ್ಲಿ ಅವರು ಧರಿಸಿದ್ದ ಒಂದೊಂದು ಉಡುಗೆಗಳು ಯಾವ ಮಟ್ಟಿಗೆ ಪ್ರಚಲಿತಕ್ಕೆ ಬಂದವೆಂದರೇ, ಅಲ್ಲಿಯವರೆಗೂ ಕೇವಲ ವಿದೇಶಕ್ಕೆ ಮಾತ್ರ ಸೀಮಿತವಾಗಿದ್ದ ಲೇಯರ್‌ ಲುಕ್‌, ಟ್ರಾವೆಲ್‌ ಫ್ಯಾಷನ್‌, ವೆಡ್ಡಿಂಗ್‌ ಫ್ಯಾಷನ್‌, ಫ್ಯಾಮಿಲಿ ಫ್ಯಾಷನ್‌ ಕಾನ್ಸೆಪ್ಟ್‌ ಸಾಮಾನ್ಯ ಜನರ ಜೀವನಕ್ಕೂ ಎಂಟ್ರಿ ಕೊಟ್ಟವು. ಆ ಮಟ್ಟಿಗೆ ಇವರ ಸಿನಿಮಾ ಲುಕ್‌ ಜನರಿಗೆ ಹತ್ತಿರವಾಗಿತ್ತು ಎನ್ನುತ್ತಾರೆ ಸೆಲೆಬ್ರಿಟಿ ಡಿಸೈನರ್‌ ದೀಕ್ಷಾ.

ಹೇಗಿದೆ ಗೊತ್ತಾ ಶಾರುಖ್‌ ವಾರ್ಡ್‌ರೋಬ್‌?

ಶಾಪಿಂಗ್‌ ಮಾಲ್‌ವೊಂದರ ಭಾಗದಂತಿರುವ ಶಾರುಖ್‌ ಮನೆಯ ಅವರ ಪರ್ಸನಲ್‌ ವಾರ್ಡ್‌ರೋಬ್‌ ಬಹುತೇಕ ಇಂಟರ್‌ನ್ಯಾಷನಲ್‌ ಬ್ರಾಂಡ್‌ಗಳ ದುಬಾರಿ ಔಟ್‌ಫಿಟ್‌ಗಳಿವೆಯಂತೆ. ಇಷ್ಟಿದ್ದರೂ ಕಿಂಗ್‌ ಖಾನ್‌ಗೆ ವೈಟ್‌ ಹಾಗೂ ಬ್ಲಾಕ್‌ ಶರ್ಟ್ ಹಾಗೂ ಬ್ಲೇಝರ್‌, ಕೋಟ್‌ಗಳ ಮೇಲೆಯೇ ಮೋಹ ಹೆಚ್ಚು ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್‌ಗಳು. ಇನ್ನು ಇವರು ನಟಿಸಿದ ಸಿನಿಮಾಗಳಲ್ಲಿ ಧರಿಸಿದ ಉಡುಪುಗಳ ಕಲೆಕ್ಷನ್‌ ಕೂಡ ನೆನಪಾಗಿ ಇವರ ಬಳಿಯೇ ಇದೆಯಂತೆ.

ಶಾರುಖ್‌ ರೀಲ್‌ – ರಿಯಲ್‌ ಫ್ಯಾಷನ್‌ ಸ್ಟೇಟ್‌ಮೆಂಟ್ಸ್‌ ಝಲಕ್‌ :

· ಪರ್‌ಫ್ಯೂಮ್‌ ಪ್ರಿಯ ಶಾರುಖ್‌ ಬಳಿ ಲೆಕ್ಕವಿಲ್ಲದಷ್ಟು ಸುಗಂಧ ದ್ರವ್ಯಗಳ ಕಲೆಕ್ಷನ್‌ ಇದೆಯಂತೆ.

· ಎಂದಿಗೂ ಸ್ಲಿಪ್ಪರ್‌ ಧರಿಸದ ಶಾರುಖ್‌, ಸ್ನೀಕರ್ಸ್‌ ಇಲ್ಲದೇ ನೆಲದ ಮೇಲೆ ಹೆಜ್ಜೆ ಇಡುವುದಿಲ್ಲವಂತೆ.

· ವೈಟ್‌ ಶರ್ಟ್ ಹಾಗೂ ಲೂಸಾಗಿರುವ ಜೀನ್ಸ್‌ ಇವರ ಕಂಫರ್ಟಬಲ್‌ ಡೈಲಿವೇರ್.

· ಹಿರಿಯ ನಟ ದಿಲೀಪ್ ಕುಮಾರ್‌, ಬಿಗ್‌ ಬಿ ಇವರ ಫ್ಯಾಷನ್‌ ಐಕಾನ್‌.

· ಸಿನಿಮಾಗಾಗಿ ಏನು ಬೇಕಾದರೂ ಧರಿಸುವ ಶಾರುಖ್‌, ಮನೆಯಲ್ಲಿ ಮಾತ್ರ ಹಾಕಿದ್ದೇ ಉಡುಪು ಮತ್ತೆ ಮತ್ತೆ ಧರಿಸುತ್ತಾರಂತೆ.

· ಟೈಟ್‌ ಟೀ ಶರ್ಟ್- ಟೈಟ್‌ ಪ್ಯಾಂಟ್‌ ಅಂದ್ರೆ ಮಾರುದ್ದ ಓಡುತ್ತಾರಂತೆ.

· ವಾರ್ಡ್‌ರೋಬ್‌ ತುಂಬೆಲ್ಲಾ ಫುಟ್‌ವೇರ್‌ ಇದ್ರೂ, ಹರಿದು ಹೋಗುವ ತನಕ ಬದಲಿಸುವುದಿಲ್ಲವಂತೆ.

· ಲಂಡನ್‌ನಲ್ಲಿ ಹೊರತುಪಡಿಸಿದರೇ ಇನ್ನೆಲ್ಲೂ ಶಾಪಿಂಗ್‌ ಮಾಡುವುದಿಲ್ಲವಂತೆ!

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Shah Rukh Khan Birthday | ಕಿಂಗ್‌ ಖಾನ್‌ ನಕಾರಾತ್ಮಕ ಪಾತ್ರದಲ್ಲಿ ನಟಿಸಿರುವ 5 ಚಲನಚಿತ್ರಗಳು

Exit mobile version