Site icon Vistara News

Silk Saree Maintanance: ಬೆಲೆಬಾಳುವ ರೇಷ್ಮೆ ಸೀರೆಗಳ ನಿರ್ವಹಣೆ ಹೀಗಿರಲಿ

Silk Saree Maintanance

ಶೀಲಾ ಸಿ. ಶೆಟ್ಟಿ, ಬೆಂಗಳೂರು

ರೇಷ್ಮೆ ಸೀರೆಗಳನ್ನು ಕೊಳ್ಳುವುದಷ್ಟೇ ಅಲ್ಲ, ನಂತರ ಅವುಗಳ ಸೂಕ್ತ ನಿರ್ವಹಣೆ ಕೂಡ ಮಾಡಬೇಕು. ಇಲ್ಲವಾದಲ್ಲಿ ಅವುಗಳು ಮಾಸಬಹುದು. ಇಲ್ಲವೇ ಹಾಳಾಗಬಹುದು. ಸೀರೆಗಳ ಫ್ಯಾಬ್ರಿಕ್‌ ಆಧಾರದ ಮೇಲೆ ನಿರ್ವಹಣೆ ಮಾಡಬೇಕು ಎನ್ನುತ್ತಾರೆ ಸ್ಟೈಲಿಸ್ಟ್‌ ರೀಟಾ.

ಮಂದಿರಾ ಬೇಡಿ, ನಟಿ

ಉಟ್ಟ ನಂತರ ಹರಡಿ ಒಣಗಿಸಿ

ಯಾವುದೇ ರೇಷ್ಮೇ ಸೀರೆಯನ್ನು ಉಟ್ಟ ನಂತರ, ಬೆವರಿನ ವಾಸನೆ ಹೋಗಲಾಡಿಸಲು ನೆರಳಿನಲ್ಲಿ ಒಣಗಿಸಿ. ನಂತರ ಮಡಿಸಿಡಿ. ಎರಡು ತಿಂಗಳಿಗೊಮ್ಮೆ ವಾರ್ಡ್ರೋಬ್‌ನಲ್ಲಿರುವ ರೇಷ್ಮೆ ಸೀರೆಗಳನ್ನು ತೆಗೆದು ಕೆಲ ಹೊತ್ತು ಬಿಸಿಲಿನಲ್ಲಿ ಒಣಗಿಸಿಡಿ. ಸೀರೆಯು ಗಾಳಿಯಲ್ಲಿ ಹಾಗೂ ತಿಳಿ ಬಿಸಿಲಲ್ಲಿಒಣಗಿದಾಗ ವಾಸನೆ ಬರುವುದಿಲ್ಲ. ಮತ್ತೆ ಮಡಿಸಿಡಿ.

ಗೆರೆ ಮೂಡದಿರಲು ಹೀಗೆ ಮಾಡಿ

ಬಹಳ ಕಾಲ ಮಡಿಸಿಟ್ಟ ಸೀರೆಗಳಲ್ಲಿ ಗೆರೆ ಮೂಡಿ ಹರಿದು ಹೋಗುವ ಸಂಭವವಿರುತ್ತದೆ. ಹಾಗಾಗಿ ಕಬ್ಬಿಣದ ಹ್ಯಾಂಗರ್‌ನಲ್ಲಿಹಾಕಿಡಬೇಡಿ. ಸೂಟ್‌ಕೇಸ್‌ ಹಾಗೂ ಪೆಟ್ಟಿಗೆಯಲ್ಲಿರಿಸಬೇಡಿ. ಬದಲಿಗೆ ಕಬೋರ್ಡ್‌ನಲ್ಲಿಕಾಟನ್‌ ಬಟ್ಟೆಯನ್ನು ಹಾಸಿ ಅದರ ಮೇಲೆ ಇರಿಸಿ.

ಭೂಮಿ ಪಡ್ನೆಕರ್‌

ಬಟ್ಟೆಯಲ್ಲಿ ಸುತ್ತಿಡಿ

ರೇಷ್ಮೆ ಸೀರೆಯ ಬಾರ್ಡರ್‌ ಬೆಲೆಬಾಳುವಂತಾದ್ದಾಗಿರುತ್ತದೆ. ಅಗಲವಾದ ಬಾರ್ಡರ್‌ಗಳಿರುವ ಸೀರೆಗಳನ್ನು ಒಂದು ತೆಳುವಾದ ಬಟ್ಟೆಯಲ್ಲಿಸುತ್ತಿಡಬೇಕು. ಧೂಳು ಬೀಳದಿರುವಂತಹ ಸ್ಥಳದಲ್ಲಿಟ್ಟರೆ ಸೀರೆಗಳ ಬಾರ್ಡರ್‌ ಹಾಳಾಗುವುದಿಲ್ಲ. ರೇಷ್ಮೆ ಸೀರೆಗಳನ್ನು ಎಂದಿಗೂ ಪ್ಲಾಸ್ಟಿಕ್‌ ಕವರ್‌ಗಳಲ್ಲಿಡಬೇಡಿ. ಇವುಗಳನ್ನು ಇರಿಸಲು ಪೇಪರ್‌ ಕವರ್‌ಗಳು ದೊರೆಯುತ್ತವೆ. ಅದರಲ್ಲಿರಿಸಿ.

ಗುಳಿಗೆ ಒಳಗಿರಿಸಬೇಡಿ

ರೇಷ್ಮೆ ಸೀರೆಗಳನ್ನು ವಾರ್ಡ್ ರೋಬ್ ನಲ್ಲಿ ಮಡಿಸಿಡುವಾಗ ಜಿರಲೆ, ಕ್ರೀಮಿ ಕೀಟಗಳು ಬರದಂತೆ ನೋಡಿಕೊಳ್ಳಿ. ಸೀರೆಗಳನ್ನು ಕ್ರೀಮಿಕೀಟಗಳಿಂದ ಕಾಪಾಡುವ ಸುರಕ್ಷತಾ ಗುಳಿಗೆಗಳನ್ನು ಅದರೊಳಗೆ ಇರಿಸಬೇಡಿ. ಕಲೆಯಾಗುವ ಸಂಭವವಿರುತ್ತದೆ. ಬದಲಿಗೆ ಸೀರೆಗೆ ತಾಗದಂತೆ ಮೂಲೆಯಲ್ಲಿರಿಸಿ.

ಅಂಕಿತಾ ಲೊಕಂಡೆ, ನಟಿ

ರೇಷ್ಮೆ ಸೀರೆಯನ್ನು ಒಗೆಯಬೇಡಿ

ಯಾವುದೇ ಕಾರಣಕ್ಕೂ ಬೆಲೆಬಾಳುವ ರೇಷ್ಮೆ ಸೀರೆಗಳನ್ನು ಮನೆಯಲ್ಲೆ ಒಗೆಯಬೇಡಿ. ಬದಲಿಗೆ ಡ್ರೈವಾಶ್‌ಗೆ ನೀಡಿ. ಅಗತ್ಯವಿದ್ದರೆ ಮಾತ್ರ ವಾಶ್‌ ಮಾಡಿಸುವುದು ಉತ್ತಮ. ಇಲ್ಲವಾದಲ್ಲಿ ಸೀರೆಯ ರಂಗು ಮಸುಕಾಗಬಹುದು. ಹಳೆ ಸೀರೆಯಂತೆ ಕಾಣಬಹುದು. ಇನ್ನು ಸೀರೆಯ ಬಾರ್ಡರ್‌ಗೆ ಐರನ್‌ ಮಾಡುವಾಗ, ನೇರವಾಗಿ ಸೀರೆಯ ಮೇಲೆ ಮಾಡದೇ ಒಂದು ಪೇಪರ್‌ನ್ನು ಮೇಲೆ ಹಾಕಿ ಮಾಡಿದರೆ, ಸೀರೆಯ ಬಾರ್ಡರ್‌ ಹಾಳಾಗುವುದು ತಪ್ಪುತ್ತದೆ. ಶಾಖ ಹೆಚ್ಚಾಗಕೂಡದು. ಬಾರ್ಡರ್‌ ಕಪ್ಪಾಗಬಹುದು. ಜಾಗ್ರತೆಯಿಂದ ಪ್ರೆಸ್‌ ಮಾಡಿ ಇರಿಸಿ.

ಸೀರೆಗೆ ಫಾಲ್‌ ಹಾಕಿಸಿ

ರೇಷ್ಮೆ ಸೀರೆಗಳ ಬಾರ್ಡರ್‌ ಮಡಿಸಿ ಹೋಗದಂತೆ ಮಾಡಲು ಸೀರೆಗಳಿಗೆ ಫಾಲ್‌ ಹಾಕಿಸುವುದು ಉತ್ತಮ. ಪಾಲಿಸ್ಟರ್‌ ಫಾಲ್‌ ಬಳಸುವುದು ಉತ್ತಮ. ಆಗ ಬಾರ್ಡರ್‌ ಸುಕ್ಕಾದಂತೆ ಕಾಣುವುದಿಲ್ಲ. ಧರಿಸಿದಾಗ ಸುಂದರವಾಗಿ ಕಾಣಿಸುತ್ತವೆ.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ|Saree Fashion: ಸ್ವಾತಂತ್ರ್ಯೋತ್ಸವ ಸೀಸನ್‌ನಲ್ಲಿ ಟ್ರೆಂಡಿಯಾದ ಕಾಟನ್‌ ಮಿಕ್ಸ್‌ ಸೀರೆ

Exit mobile version