ಮುಂಬಯಿ: ಕರ್ನಾಟಕದ ಮೂಲದ ಮುಂಬಯಿ ಬೆಡಗಿ ಸಿನಿ ಶೆಟ್ಟಿ ೨೦೨೨ನೇ ವರ್ಷದ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಾನುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಸಿನಿ ಶೆಟ್ಟಿಯನ್ನು ಭಾರತದ ಸುಂದರಿ ಎಂದು ಘೋಷಿಸಲಾಯಿತು. ರಾಜಸ್ಥಾನದ ರುಬಾಲ್ ಶೇಖಾವತ್ ಮೊದಲ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರೆ, ಉತ್ತರ ಪ್ರದೇಶದ ೨೧ ವರ್ಷದ ಶಿನಾತಾ ಚೌಹಾಣ್ ೨ನೇ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು.
ಸಿನಿ ಶೆಟ್ಟಿ ಕರ್ನಾಟಕ ಮೂಲದವರಾಗಿದ್ದು, ಮುಂಬಯಿಯಲ್ಲಿ ಹುಟ್ಟಿ ಬೆಳೆದಿದ್ದಾರೆ. ೨೧ ವರ್ಷದ ಈ ಸುಂದರಿ ಫಿನಾನ್ಸ್ ಹಾಗೂ ಅಕೌಂಟ್ಸ್ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಸಿನಿ ಭರತನಾಟ್ಯ ನೃತ್ಯಗಾರ್ತಿಯೂ ಹೌದು.
ಇದನ್ನೂ ಓದಿ: Beauty Care: ತ್ವಚೆಯ ಸೌಂದರ್ಯ ಹೆಚ್ಚಿಸುವ ಸ್ಟ್ರಾಬೆರಿ