Site icon Vistara News

Sling Bag Fashion | ಔಟಿಂಗ್‌ ಫ್ಯಾಷನ್‌ ಸೇರಿದ ಸ್ಟೈಲಿಶ್‌ ಸ್ಲಿಂಗ್‌ ಬ್ಯಾಗ್‌

Sling Bag Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಔಟಿಂಗ್‌ ಫ್ಯಾಷನ್‌ಗೆ ನಾನಾ ವಿನ್ಯಾಸದ ಸ್ಲಿಂಗ್‌ ಬ್ಯಾಗ್‌ಗಳು ಎಂಟ್ರಿ ನೀಡಿದ್ದು, ಸ್ಟೈಲಿಶ್‌ ಮಹಿಳೆಯರ ಸ್ಟೈಲ್‌ ಲಿಸ್ಟ್‌ಗೆ ಸೇರಿವೆ. ಯಾವುದೇ ಉಡುಪಿನೊಂದಿಗೂ ಆರಾಮವಾಗಿ ಧರಿಸಬಹುದಾದ, ನೋಡಲು ಸ್ಟೈಲಿಶ್‌ ಆಗಿಯೂ ಕಾಣುವ ವೆರೈಟಿ ಸ್ಲಿಂಗ್‌ ಬ್ಯಾಗ್‌ಗಳು ಮನ ಗೆದ್ದಿವೆ. ಚಿಕ್ಕ ಸರಪಳಿಯಂತಿರುವ ಚೈನ್‌ ಸ್ಲಿಂಗ್‌ ಬ್ಯಾಗ್‌ಗಳು, ಪರ್ಸ್‌, ಕ್ಲಚ್‌ ಶೈಲಿಯವು, ಅರ್ಧ ಚೈನ್‌ ಅರ್ಧ ಬೆಲ್ಟ್‌ ಕಾನ್ಸೆಪ್ಟ್‌ನವು, ವ್ಯಾನಿಟಿ ಸ್ಲಿಂಗ್‌ ಬ್ಯಾಗ್‌ಗಳು ಸದ್ಯಕ್ಕೆ ಪ್ರಚಲಿತದಲ್ಲಿವೆ.

ಜಾಸ್ಮಿನ್‌ ಬಾಸಿನ್‌, ನಟಿ

ಫಂಕಿ ಲುಕ್‌ ನೀಡುವ ಸ್ಲಿಂಗ್‌ ಬ್ಯಾಗ್‌

ವ್ಯಾನಿಟಿ ಬ್ಯಾಗ್‌ಗಳ ಬಳಕೆದಾರರು ಇದೀಗ ಸ್ಲಿಂಗ್‌ ಬ್ಯಾಗ್‌ ಮೋಹಕ್ಕೆ ಒಳಗಾಗಿದ್ದಾರೆ. ನೋಡಲು ಬಿಂದಾಸ್‌ ಲುಕ್‌ ನೀಡುವ ಇವು ಆರಾಮದಾಯಕ ಎನಿಸುತ್ತಿರುವುದು ಕೊಳ್ಳುಗರು ಹೆಚ್ಚಾಗಲು ಕಾರಣ ಎನ್ನುತ್ತಾರೆ ಬ್ಯಾಗ್‌ ಮಾರಾಟಗಾರಾದ ರಾಮ. ಫಂಕಿ ಸ್ಟೈಲ್‌ ಸ್ಟೇಟ್‌ಮೆಂಟ್‌ ನೀಡುವ ಈ ಸ್ಲಿಂಗ್‌ ಬ್ಯಾಗ್‌ಗಳು ನೋಡಲು ಹೊಸ ಅಕ್ಸೆಸರೀಸ್‌ನಂತೆ ಕಾಣುತ್ತವೆ ಮಾತ್ರವಲ್ಲ, ಎಲ್ಲಿ ಬೇಕಾದರೂ ಹಾಕಿಕೊಂಡು ಓಡಾಡಲು ಸಹಕಾರಿಯಾಗುತ್ತವೆ. ಈ ಬ್ಯಾಗ್‌ಗಳ ಪ್ಲಸ್‌ ಪಾಯಿಂಟ್‌ ಎಂದರೆ ಇವು ಯಂಗ್‌ಲುಕ್‌ ಇಂಪ್ರೆಷನ್‌ ನೀಡುತ್ತವೆ. ನೋಡಲು ಕಾಂಪಾಕ್ಟ್ ಆಗಿದ್ದರೂ ಈ ಬ್ಯಾಗ್‌ನಲ್ಲಿ ಸಾಕಷ್ಟು ಕಂಪಾರ್ಟ್‌ಮೆಂಟ್ಸ್‌ ಇರುವಂತವು ದೊರೆಯುತ್ತವೆ.

ಕ್ರಾಸ್‌ ಆಗಿ ಸ್ಟೈಲಿಶ್‌ ಆಗಿ ಹಾಕಿಕೊಳ್ಳಿ

“ಯಾವುದೇ ಸ್ಲಿಂಗ್‌ ಬ್ಯಾಗ್‌ಗಳನ್ನು ವ್ಯಾನಿಟಿ ಬ್ಯಾಗ್‌ನಂತೆ ಹೊತ್ತೊಯ್ಯುವ ಪ್ರಮೇಯವಿಲ್ಲ! ಬದಲಿಗೆ ಕ್ರಾಸ್‌ ಡೈರೆಕ್ಷನ್‌ನಲ್ಲಿ ಹಾಕಿಕೊಂಡರಾಯಿತು. ನೋಡಲು ಸ್ಟೈಲಿಶ್‌ ಆಗಿಯೂ ಕಾಣುತ್ತದೆ. ಮೊಬೈಲ್‌, ಕಾರ್ಡ್ , ಕ್ಯಾಶ್‌, ಚಿಕ್ಕ ಮೇಕಪ್‌ ಆಕ್ಸೆಸರೀಸನ್ನು ಕೂಡ ಇದರೊಳಗೆ ಇರಿಸಬಹುದು. ಫ್ಯಾಷೆನಬಲ್‌ ಆಗಿಯೂ ಕಾಣಿಸುತ್ತದೆ”ಎನ್ನುತ್ತಾರೆ ಕಾಲೇಜು ವಿದ್ಯಾರ್ಥಿನಿಯರಾದ ದಿವ್ಯಾ ಹಾಗೂ ಜೀವಿತಾ.

ಕೀರ್ತಿ ಸುರೇಶ್‌, ನಟಿ

ಪಾಪ್ಯುಲರ್‌ ಆದ ಬೆಲ್ಟ್‌-ಚೈನ್‌ ಸ್ಲಿಂಗ್‌ ಬ್ಯಾಗ್‌

ಸದ್ಯಕ್ಕೆ ಬೆಲ್ಡ್‌ ಹಾಗೂ ಚೈನ್‌ ಇರುವಂಥವು ಸಖತ್‌ ಪಾಪ್ಯುಲರ್‌ ಆಗಿವೆ. ಲೆದರ್‌, ಕ್ಲಾತ್‌, ಸಿಲಿಕಾನ್‌ ಹೀಗೆ ನಾನಾ ಮೆಟಿರಿಯಲ್‌ನಲ್ಲಿ ದೊರಕುವ ಸ್ಲಿಂಗ್‌ ಬ್ಯಾಗ್‌ಗಳು ನಾನಾ ವರ್ಣ ಹಾಗೂ ಡಿಸೈನ್‌ಗಳಲ್ಲೂ ದೊರೆಯುತ್ತವೆ. ಕೆಲವು ಬಿಗ್‌ ಸ್ಲಿಂಗ್‌ ಬ್ಯಾಗ್‌ಗಳಿಗೆ ಬೆಲ್ಟ್‌ ಶೈಲಿಯ ಅಥವಾ ಚೈನ್‌ ಲಿಂಕ್‌ ಎರಡೂ ಇರುತ್ತದೆ. ಟೂ ಇನ್‌ ಒನ್‌ ಶೈಲಿಯಲ್ಲಿರುವ ಈ ಬ್ಯಾಗ್‌ ವೃತ್ತಿಪರ ಮಹಿಳೆಯರಿಗೆ ಹೊಂದುತ್ತವೆ. ಬಣ್ಣ ಬಣ್ಣದ ಬ್ಯಾಗ್‌ ಕೊಂಡರೇ ಆಯಾ ಬಣ್ಣದ ಉಡುಪಿಗೆ ಇಲ್ಲವೇ ಕಾಂಟ್ರಸ್ಟ್‌ ಮ್ಯಾಚ್‌ ಆಗುವ ಉಡುಪಿಗೆ ಹಾಕಿಕೊಳ್ಳಬಹುದು ಎನ್ನುತ್ತಾರೆ ಸ್ಟೈಲಿಸ್ಟ್‌ ಸುಷ್ಮಾ.

ಚೈನ್‌-ಬೆಲ್ಟ್‌ ಸ್ಲಿಂಗ್‌ ಬ್ಯಾಗ್‌

ಗೋಲ್ಡನ್‌ ಸೈಡ್‌ ಸ್ಲಿಂಗ್‌ ಚೈನ್‌ ಬ್ಯಾಗ್‌ಗಳು ಈ ಸೀಸನ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ವೆಸ್ಟರ್ನ್‌ ಔಟ್‌ಫಿಟ್‌ಗೆ ಮ್ಯಾಚ್‌ ಆಗುತ್ತವೆ. ಆದರೆ, ದೇಸಿ ಲುಕ್‌ಗೆ ಮ್ಯಾಚ್‌ ಮಾಡುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಧರಿಸಿದ ಡಿಸೈನರ್‌ವೇರ್‌ ಇಲ್ಲವೇ ಸೀರೆಗೆ ಚೈನ್‌ ಬ್ಯಾಗ್‌ನ ಕಲರ್‌ ಹಾಗೂ ಮೆಟೀರಿಯಲ್‌ ಮ್ಯಾಚ್‌ ಆಗಬೇಕು. ಇನ್ನು ನಟಿ ನಿಮಿಕಾ ಪ್ರಕಾರ, ಹಾಫ್‌ ಚೈನ್‌ ಹಾಫ್‌ ಬೆಲ್ಟ್‌ ಇರುವಂಥವು ಕೂಡ ಇವುಗಳ ಜತೆ ಟ್ರೆಂಡಿಯಾಗುತ್ತಿದೆ. ಆದಷ್ಟೂ ಹೆಗಲ ಮೇಲೆ ನೀಟಾಗಿ ಕೂರುವಂತಹ ಈ ಬ್ಯಾಗ್‌ಗಳನ್ನು ಫೋಟೋ ಶೂಟ್‌ನಲ್ಲೂ ಹೆಚ್ಚಾಗಿ ಬಳಸಲಾಗುತ್ತಿದೆ.

ಜಾಸ್ಮಿನ್‌ ಬಾಸಿನ್‌, ನಟಿ

ಸ್ಲಿಂಗ್‌ ಬ್ಯಾಗ್‌ ಪ್ರಿಯರಿಗೆ ಸಲಹೆಗಳು

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Lakme Fashion Week Celebrities | ಲ್ಯಾಕ್ಮೆ ಫ್ಯಾಷನ್‌ ವೀಕ್‌ ರ್‍ಯಾಂಪ್‌ ಸೀರೀಸ್‌ನಲ್ಲಿ ಸೆಲೆಬ್ರಿಟಿಗಳ ಆಕರ್ಷಕ ಕ್ಯಾಟ್‌ವಾಕ್‌

Exit mobile version