Site icon Vistara News

Star Beachside Fashion | ಸಮುದ್ರ ತೀರದಲ್ಲಿ ನಟಿ ಕೀರ್ತಿ ಸುರೇಶ್‌ ಗ್ಲಾಮರಸ್‌ ಲುಕ್‌

Star Beachside Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಹುಭಾಷಾ ನಟಿ ಕೀರ್ತಿ ಸುರೇಶ್‌ (keerthy suresh) ಅವರ ಪೂಲ್‌ಸೈಡ್‌ ಹಾಗೂ ಬೀಚ್‌ಸೈಟ್‌ ಗ್ಲಾಮರಸ್‌ ಫ್ಯಾಷನ್‌ (Beachside Fashion) ಸ್ಟೇಟ್‌ಮೆಂಟ್‌ಗಳಿಗೆ ಅಭಿಮಾನಿಗಳು ಫುಲ್‌ ಫಿದಾ ಆಗಿದ್ದಾರೆ. ಸದಾ ಡಿಸೆಂಟ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕೀರ್ತಿಯವರ ಬೀಚ್‌ಸೈಡ್‌ ಫ್ಯಾಷನ್‌ ಹೊಸ ವರ್ಷದಲ್ಲಿ ಸರ್‌ಪ್ರೈಸ್‌ ನೀಡುವಂತಿದೆ ಎಂದಿದ್ದಾರೆ ಫ್ಯಾಷನ್‌ ವಿಮರ್ಶಕರು. ಅವರ ಫ್ಯಾಷನ್‌ ಸ್ಟೈಲ್‌ಸ್ಟೇಟ್‌ಮೆಂಟ್‌ (style statement) ಬಗ್ಗೆ ಇಲ್ಲಿ ವಿಮರ್ಶೆ ಮಾಡಿದ್ದಾರೆ.

ಪೂಲ್‌ಸೈಡ್‌ನಲ್ಲಿ ಕೀರ್ತಿ ಗ್ಲಾಮರಸ್‌ ಲುಕ್‌

ಥಾಯ್ಲೆಂಡ್‌ನಲ್ಲಿ ಹಾಲಿಡೇ ಕಳೆದ ಫೋಟೋಗಳನ್ನು ಅಪ್‌ಲೋಡ್‌ ಮಾಡಿರುವ ನಟಿ ಕೀರ್ತಿ ಸುರೇಶ್‌, ಈ ಬಾರಿ ಬಿಂದಾಸ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ (style statement) ಪಾಲಿಸಿದ್ದಾರೆ. ಅದರಲ್ಲೂ ಪೂಲ್‌ಸೈಡ್‌ನಲ್ಲಿ ಶೋಲ್ಡರ್‌ಲೆಸ್‌ ಸ್ವಿಮ್ಮಿಂಗ್‌ ಡ್ರೆಸ್‌ಕೋಡ್‌ನಲ್ಲಿ ಸನ್‌ಗ್ಲಾಸ್‌ ಧರಿಸಿ, ಮುಗುಳ್ನಗೆಯಲ್ಲಿ ಕಾಣಿಸಿಕೊಂಡಿರುವುದು ಗ್ಲಾಮರಸ್‌ ಲುಕ್‌ಗೆ ಸಾಥ್‌ ನೀಡುವಂತಿದೆ. ಸದಾ ಡಿಸೆಂಟ್‌ ಲುಕ್‌ನಲ್ಲೆ ಕಾಣಿಸಿಕೊಳ್ಳುತ್ತಿದ್ದ ಕೀರ್ತಿಯ (keerthy suresh) ಈ ಲುಕ್‌ ನೆಟ್ಟಿಗರ ಹುಬ್ಬೇರಿಸಿರುವುದು ಮಾತ್ರವಲ್ಲ, ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆಯಂತೆ. ಆದರೆ, ಈ ಈ ಲುಕ್‌ ಇಂದಿನ ಅಗತ್ಯತೆಯಾಗಿದ್ದು ನಟಿಯರು ಆಗಾಗ್ಗೆ ತಮ್ಮ ರಿಯಲ್‌ ಲೈಫ್‌ನಲ್ಲೂ ಗ್ಲಾಮರಸ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ರಿಯಾ.

ಇನ್ನು ಸ್ಟೈಲಿಸ್ಟ್‌ ಜೀವನ್‌ ಹೇಳುವಂತೆ ಕೀರ್ತಿ ಸುರೇಶ್‌ ಯಾವತ್ತೂ ತಮ್ಮ ಡ್ರೆಸ್‌ಕೋಟ್‌ನಲ್ಲಿ ಒಂದು ಲಿಮಿಟ್‌ ಬಿಟ್ಟು ಆಚೆ ಹೋದವರಲ್ಲ! ಅದು ಗ್ಲಾಮರಸ್‌ ಲುಕ್‌ ಇರಬಹುದು ಅಥವಾ ಇನ್ಯಾವುದೇ ಲುಕ್‌ ಇರಬಹುದು. ಆದರೆ ಅವರು ಎಲ್ಲಾ ಬಗೆಯ ಔಟ್‌ಫಿಟ್‌ಗಳಿಗೂ ಸೂಟ್‌ ಆಗುತ್ತಾರೆ ಎನ್ನುತ್ತಾರೆ.

ಬೀಚ್‌ಸೈಡ್‌ನಲ್ಲಿ ಸನ್‌ಕಲರ್‌ ಉಡುಪಿನಲ್ಲಿ ಕೀರ್ತಿ

ಸಮುದ್ರತೀರದ ಎಲ್ಲಾ ಫೋಟೋಗಳಲ್ಲೂ ಕೀರ್ತಿ ಸನ್‌ ಕಲರ್‌ನ ಡ್ರೆಸ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರ ಬೀಚ್‌ಸೈಡ್‌ ಫ್ಯಾಷನ್‌ಗೆ (Beachside Fashion) ರಂಗು ಏರಿಸಿದೆ. ಫ್ಲೋರಲ್‌ ಲಾಂಗ್‌ ಶರ್ಟ್ ಶ್ರಗ್‌ ಧರಿಸಿದ್ದು, ಮತ್ತೊಂದರಲ್ಲಿ ಸಾದಾ ಯೆಲ್ಲೋ ಶರ್ಟ್ವೈಟ್‌ ಬರ್ಮಾಡಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಕೂಡ ಅವರನ್ನು ಮತ್ತಷ್ಟು ಸುಂದರವಾಗಿಸಿದೆ. ಎಲ್ಲಿಯೂ ಅತಿರೇಕವೆನಿಸಿಲ್ಲ. ಹಾಗಾಗಿ ಅಭಿಮಾನಿಗಳು ಫಿದಾ ಆಗಿದ್ದಾರೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ರಿಚಾ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Star holiday Fashion | ಬಾಲಿ ಹಾಲಿಡೇ ಫ್ಯಾಷನ್‌ಗೆ ಸೈ ಎಂದ ನಟಿ ಹರ್ಷಿಕಾ ಪೊಣಚ್ಚ

Exit mobile version