ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಹರ್ಷಿಕಾ ಪೂಣಚ್ಚ ಟ್ರೆಂಡಿಯಾಗಿರುವ ಪ್ಯಾಂಟ್‌ಸೂಟ್ ಫ್ಯಾಷನನ್ನು ಸ್ಯಾಂಡಲ್‌ವುಡ್‌ನಲ್ಲಿ ಹುಟ್ಟುಹಾಕಿದ್ದಾರೆ. ಹೌದು. ಇದೀಗ ಸ್ಯಾಂಡಲ್‌ವುಡ್‌ನಲ್ಲೂ ಪ್ಯಾಂಟ್‌ಸೂಟ್ ಹವಾ ಆರಂಭವಾಗಿದೆ. ಬಾಲಿವುಡ್‌ಗರ ಫೇವರೇಟ್ ಫ್ಯಾಷನ್ ಲಿಸ್ಟ್‌ನಲ್ಲಿರುವ ಕಲರ್‌ಫುಲ್ ಪ್ಯಾಂಟ್‌ಸೂಟ್ ಫ್ಯಾಷನ್‌ಗೆ ನಟಿ ಹರ್ಷಿಕಾ ಪೊಣಚ್ಚ ಮತ್ತಷ್ಟು ರಂಗು ತುಂಬಿದ್ದಾರೆ.
ಅಂದಹಾಗೆ, ನಟಿ ಹರ್ಷಿಕಾ ಪೂಣಚ್ಚ ಮೊದಲಿನಿಂದಲೂ ಫ್ಯಾಷನ್ ಪ್ರೇಮಿ ಮಾತ್ರವಲ್ಲ, ಟ್ರೆಂಡ್ ಸೆಟ್ಟರ್ ಕೂಡ. ಈಗಾಗಲೇ ಸಾಕಷ್ಟು ಕನ್ನಡ ಹಾಗೂ ಭೋಜಪುರಿ ಸಿನಿಮಾಗಳಲ್ಲಿ ನಟಿಸುವುದರೊಂದಿಗೆ ಬಹುಭಾಷಾ ತಾರೆಯಾಗಿದ್ದಾರೆ. ತಮ್ಮದೇ ಆದ ಸ್ಟೈಲ್ ಸ್ಟೇಟ್‌ಮೆಂಟ್‌ಗಳನ್ನು ಹೊಂದಿದ್ದಾರೆ. ಸದಾ ಹೊಸತನಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ಆಯಾ ಸೀಸನ್‌ಗೆ ತಕ್ಕಂತೆ ಮಾತ್ರವಲ್ಲ, ಬಾಲಿವುಡ್‌ನಲ್ಲಿರುವ ಟ್ರೆಂಡನ್ನು ಡಿಫರೆಂಟಾಗಿ ಸ್ಯಾಂಡಲ್‌ವುಡ್‌ನಲ್ಲೂ ಪರಿಚಯಿಸುತ್ತಾರೆ.
ಲೆಮೆನ್ ಯೆಲ್ಲೋ ಪ್ಯಾಂಟ್‌ಸೂಟ್
ಎದ್ದು ಕಾಣುವ ಲೆಮೆನ್ ಯೆಲ್ಲೋ ವೈಬ್ರೆಂಟ್ ಶೇಡ್ ಪ್ಯಾಂಟ್‌ಸೂಟ್‌ನಲ್ಲಿ ಹರ್ಷಿಕಾ ಬಾಲಿವುಡ್‌ಗರನ್ನು ಮೀರಿಸುವಂತೆ ಕಾಣಿಸಿಕೊಂಡಿರುವುದು ಫ್ಯಾಷನ್ ಪ್ರೇಮಿಗಳನ್ನು ಆಕರ್ಷಿಸಿದೆ. ಸೆಲೆಬ್ರಿಟಿ ಡಿಸೈನರ್ ಲಕ್ಷ್ಮಿ ಕೃಷ್ಣ ಲೆಬೆಲ್‌ನ ಈ ಪ್ಯಾಂಟ್‌ಸೂಟನ್ನು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಧರಿಸಿದ್ದರು. ಚಳಿಗಾಲದ ಫ್ಯಾಷನ್ ಟ್ರೆಂಡ್‌ನಲ್ಲಿರುವ ಈ ಉಡುಪಿನೊಂದಿಗೆ ಅದೇ ವರ್ಣದ ಫಂಕಿ ಸ್ಡಡ್ ಮ್ಯಾಚ್ ಮಾಡಿದ್ದು, ಸಿಂಪಲ್ ಲುಕ್‌ಗೆ ಸಾಥ್ ನೀಡಿದೆ. ಇನ್ನು ಪ್ಯಾಂಟ್‌ಸೂಟ್ ಇನ್ನರ್ ಆಗಿ ಧರಿಸಿರುವ ಫ್ಲೋರಲ್‌ನ ಲೇಸ್ ಕ್ರಾಪ್ ಟಾಪ್ ಅತ್ಯಂತ ಆಕರ್ಷಕವಾಗಿದ್ದು, ಕಂಪ್ಲೀಟ್ ಗ್ಲಾಮರ್ ಟಚ್ ನೀಡಿದೆ ಎನ್ನುತ್ತಾರೆ ವಿಮರ್ಶಕರು.
ಹರ್ಷಿಕಾ ಪ್ಯಾಂಟ್‌ಸೂಟ್ ಸ್ಟೈಲ್ ಬಗ್ಗೆ ಹೇಳುವುದೇನು?
ಪ್ಯಾಂಟ್‌ಸೂಟ್ ಫ್ಯಾಷನ್ ಟ್ರೆಂಡ್ ಬಗ್ಗೆ ವಿಸ್ತಾರದೊಂದಿಗೆ ಮಾತನಾಡಿದ ಹರ್ಷಿಕಾ, ಯಾವುದೇ ಫ್ಯಾಷನ್‌ನಲ್ಲಿ ಹೊಸತನ ಬಯಸುವುದು ನನ್ನ ಚಾಯ್ಸ್. ಪ್ಯಾಂಟ್‌ಸೂಟ್‌ನಲ್ಲೂ ಅಷ್ಟೇ! ವೈಬ್ರೆಂಟ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಇದು ಈ ಸೀಸನ್‌ನ ಟ್ರೆಂಡ್ ಮಾತ್ರವಲ್ಲ, ಹೊಸತನ ತುಂಬುತ್ತದೆ. ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿರುವ ಈ ಟ್ರೆಂಡ್ ಇದೀಗ ನಮ್ಮಲ್ಲೂ ಕಾಲಿಟ್ಟಿದ್ದು, ಈ ಕ್ರೆಡಿಟ್ ಕ್ರಿಯೇಟಿವ್ ಸೆಲೆಬ್ರಿಟಿ ಡಿಸೈನರ್ ಲಕ್ಷ್ಮಿ ಕೃಷ್ಣ ಅವರಿಗೆ ಸಲ್ಲುತ್ತದೆ. ಇನ್ನು ಈ ವರ್ಷದ ಫ್ಯಾಷನ್‌ಗಳು ಆಯಾ ಸೀಸನ್‌ಗೆ ತಕ್ಕಂತೆ ಒಂದೊಂದಾಗಿ ತೆರೆ ಕಾಣಲಿವೆ. ಹೊಸತನ ತುಂಬುವ ಪ್ರಯೋಗಾತ್ಮಕ ಫ್ಯಾಷನ್ ಸ್ಟೇಟ್‌ಮೆಂಟ್‌ಗಳನ್ನು ಮತ್ತಷ್ಟು ಎನ್ನುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Winter Fashion: ಚುಮುಚುಮು ಚಳಿಗೆ ಬೆಚ್ಚಗಿಡುವ ಟ್ರೆಂಚ್ ಕೋಟ್ ಸಾಥ್