ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ನ ಗ್ಲಾಮರಸ್ ನಟಿ ಕತ್ರೀನಾ ಕೈಫ್ ವೈಬ್ರೆಂಟ್ ಫಂಕಿ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಎದ್ದು ಕಾಣುವ ರೆಡಿಯಂಟ್ ಲುಕ್ ನೀಡುವ ನಿಯಾನ್ ಲೈಮ್ ಶೇಡ್‌ನ ಕಾರ್ಗೋ ಸ್ಯಾಟೀನ್ ಪ್ಯಾಂಟ್ ಹಾಗೂ ಇಂಗ್ಲಿಷ್ ಪದಗಳನ್ನೊಳಗೊಂಡ ಪ್ರಿಂಟೆಡ್ ಶರ್ಟ್‌ನಲ್ಲಿ ಬಾಲಿವುಡ್ ನಟಿ ಕತ್ರೀನಾ ಕೈಫ್ ಕಾಣಿಸಿಕೊಂಡಿದ್ದಾರೆ. ಅಲಿಸೆನ್ ಡೊಲ್ವಿಯಾ ಲೆಬೆಲ್‌ನಲ್ಲಿ, ಸ್ಟೈಲ್‌ಬ್ಯಾಮಿ ಸ್ಟೈಲಿಂಗ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿರುವ ಕತ್ರೀನಾ ಲುಕ್ ಎಲ್ಲರೂ ನಾಚುವಂತಿದೆ.
ಅಂದಹಾಗೆ, ಆಧುನಿಕ ಜನರೇಷನ್‌ನ ಯಂಗ್‌ಸ್ಟರ್ಸ್ ಧರಿಸುವ ವೈಬ್ರೆಂಟ್ ಶೇಡ್‌ನ ಡ್ರೆಸ್‌ಕೋಡ್, ಬ್ಯಾಂಗ್ ಪೋನಿಟೇಲ್ ಹೇರ್‌ಸ್ಟೈಲ್ ಕತ್ರೀನಾ ಅವರ ರೆಗ್ಯುಲರ್ ಸ್ಟೈಲ್ ಸ್ಟೇಟ್‌ಮೆಂಟ್‌ಗಿಂತ ಭಿನ್ನವಾಗಿದೆ. “ನಾನು ಹೇಳಬೇಕಾದ್ದನ್ನು ನನ್ನ ಶರ್ಟ್ ಹೇಳಿದೆ” ಎಂದಿರುವ ಕತ್ರೀನಾಗೆ ಪತಿ ಹಾಗೂ ನಟ ವಿಕ್ಕಿ ಕೌಶಲ್ ಆಗಾಗ್ಗೆ ಫ್ಯಾಷನ್ ಟಿಪ್ಸ್ ನೀಡುತ್ತಾರಂತೆ. ಏನಾದರೂ ಬದಲಾವಣೆ ಬೇಕಾದಲ್ಲಿ ಹೇಳುತ್ತಾರಂತೆ. ಆದರೆ, ಯಾವತ್ತೂ ವಿಕ್ಕಿ ನನ್ನ ಫ್ಯಾಷನ್‌ಗೆ ಅಡ್ಡಗಾಲು ಮಾತ್ರ ಹಾಕುವುದಿಲ್ಲ ಎನ್ನುತ್ತಾರೆ ಕತ್ರೀನಾ.
ಮದುವೆಯ ನಂತರ ಮೊದಲ ಫಂಕಿ ಫ್ಯಾಷನ್
ಅಂದ ಹಾಗೆ, ಕತ್ರೀನಾ ಫಂಕಿ ಲುಕ್‌ನಲ್ಲಿ ಕಾಣಿಸಿಕೊಂಡಿರುವುದು ಇದು ಮೊದಲ ಬಾರಿಯೇನಲ್ಲ! ಆದರೆ, ಮದುವೆಯಾದ ನಂತರ ಇದೇ ಮೊದಲ ಬಾರಿಗೆ ಫಂಕಿಯಾಗಿ ಯಂಗ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮದುವೆಗಿಂತ ಮೊದಲು ಒಂದಿಷ್ಟು ವರ್ಷ ತೀರಾ ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಕತ್ರೀನಾ ಇದೀಗ ಜನರೇಷನ್ ಗ್ಯಾಪ್ ಬ್ರೇಕ್ ಮಾಡಲು ಈ ಲುಕ್‌ಗೆ ಮೊರೆ ಹೋಗಿದ್ದಾರೆ ಎಂದು ವಿಶ್ಲೇಷಿಸಿದ್ದಾರೆ ಸ್ಟೈಲಿಸ್ಟ್‌ಗಳು.
ಅವರ ಪ್ರಕಾರ, ಅಭಿಮಾನಿಗಳು, ನಟಿಯರು ಮದುವೆಯಾದ ನಂತರವೂ ಕೂಡ ತಾವು ಆರಾಧಿಸುವ ನಟಿಯರು ಆಕರ್ಷಕವಾಗಿ ಇಲ್ಲವೇ ಗ್ಲಾಮರಸ್ ಆಗಿ ಇರಬೇಕೆಂದು ಬಯಸುತ್ತಾರೆ. ಆದರೆ ಎಲ್ಲರ ವಿಷಯದಲ್ಲಿ ಇದು ನಡೆಯುವುದಿಲ್ಲ! ಆದರೆ, ಕತ್ರೀನಾ ಮಾತ್ರ ಮದುವೆಯ ನಂತರವೂ ಕೂಡ ಎಂದಿನಂತೆ ತಮ್ಮ ಸ್ಟೈಲ್ ಸ್ಟೇಟ್‌ಮೆಂಟ್‌ಗಳನ್ನು ಮುಂದುವರಿಸಿದ್ದಾರೆ. ಇದು ಅಭಿಮಾನಿಗಳಿಗೂ ಖುಷಿ ತಂದಿದೆ. ಕತ್ರೀನಾ ಮಾತ್ರವಲ್ಲ, ಇತ್ತೀಚೆಗೆ ಸಾಕಷ್ಟು ನಟಿಮಣಿಯರು ಯಂಗ್ ಲುಕ್ ಸ್ಟೈಲ್ ಸ್ಟೇಟ್‌ಮೆಂಟ್‌ಗಳನ್ನು ಪ್ರಿಫರ್ ಮಾಡಲಾರಂಭಿಸಿದ್ದಾರೆ, ಇಂದಿನ ಜನರೇಷನ್ ನಟಿಯರೊಂದಿಗೆ ತಾವೂ ಕೂಡ ಆಕರ್ಷಕವಾಗಿ ಕಾಣಲಾರಂಭಿಸಿದ್ದಾರೆ ಎನ್ನುತ್ತಾರೆ ಫ್ಯಾಷನಿಸ್ಟ್‌ಗಳು.
ಪಾಪುಲರ್ ಆಗುವ ಸ್ಟೈಲ್ ಸ್ಟೇಟ್‌ಮೆಂಟ್ಸ್
ಕೆಲವೊಮ್ಮೆ ಸಿನಿಮಾಗಳ ಪಾತ್ರಗಳಿಗೂ ಸೂಟ್ ಆಗುವಂತಹ ಸ್ಟೈಲ್ ಸ್ಟೇಟ್‌ಮೆಂಟ್‌ಗಳು ಕೂಡ ಪಾಪ್ಯುಲರ್ ಆಗುತ್ತವೆ. ಆದರೆ, ಮೊದಲಿನಿಂದಲೂ ಕತ್ರೀನಾ ತಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳಲ್ಲಿ ಹೆಚ್ಚಿನ ಬದಲಾವಣೆಗಳನ್ನು ತಂದಿಲ್ಲ. ಸಿನಿಮಾಗಾಗಿ ಡ್ರೆಸ್‌ಕೋಡ್ ಬದಲಿಸಿಲ್ಲ, ಆದರೆ, ಇದೀಗ ಬದಲಾಗುತ್ತಿದ್ದಾರೆ ಎನ್ನುತ್ತಾರೆ ಸಿನಿಮಾ ಸ್ಟೈಲಿಸ್ಟ್‌ಗಳು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star Fashion | ವಿಭಿನ್ನ ಬಣ್ಣದ ಶೂ ಧರಿಸಿ ಪ್ರಯೋಗಾತ್ಮಕ ಟ್ರೆಂಡ್‌ಗೆ ನಾಂದಿ ಹಾಡಿದ ರಶ್ಮಿಕಾ ಮಂದಣ್ಣ