Site icon Vistara News

Star Fashion | ಗ್ಲಾಮರಸ್‌ ನಟಿ ಜಾಹ್ನವಿ ಕಪೂರ್‌ ಸೀರೆ-ಜುಮಕಿ ಪ್ರೇಮ

star fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ಇದ್ದಕ್ಕಿದ್ದಂತೆ ಸೀರೆ-ಜುಮಕಿಯ ಮೋಹಕ್ಕೆ ಸಿಲುಕಿದ್ದಾರೆ. ಸಿನಿಮಾ ಪ್ರಮೋಷನ್‌ನಲ್ಲಿ ಆಕರ್ಷಕ ಫ್ಲೋರಲ್‌ ಜುಮಕಿ ಹಾಗೂ ಲೈಮ್‌ ಕಲರ್‌ನ ಸೀರೆ ಧರಿಸಿ, ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.

ಕಳೆದ ಫೆಸ್ಟೀವ್‌ ಸೀಸನ್‌ನ ಪಾರ್ಟಿಗಳಲ್ಲೂ ಗ್ಲಾಮರಸ್‌ ಬಿಕಿನಿ ಸ್ಟೈಲ್‌ನ ಬ್ಲೌಸ್‌ ಹಾಗೂ ಲೆಹೆಂಗಾದಲ್ಲಿ ಕಾಣಿಸಿಕೊಂಡಿದ್ದ ಜಾಹ್ನವಿ ಕಪೂರ್‌, ಒಂದರನಂತರ ಒಂದು ಪಾರ್ಟಿಗಳಲ್ಲಿ ಶಿಮ್ಮರಿಂಗ್‌ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡಿದ್ದರು. ಭೇಟಿ ನೀಡಿದ ಎಲ್ಲೆಡೆ ಡೀಪ್‌ ನೆಕ್‌ಲೈನ್‌ ಇರುವ ಬ್ಲೌಸ್‌ ಹಾಗೂ ಲೆಹೆಂಗಾದಲ್ಲಿ ಹಾಟ್‌ ಆಗಿ ಕಾಣಿಸಿಕೊಂಡು ನೆಟ್ಟಿಗರ ಹುಬ್ಬೇರಿಸಿದ್ದರು. ಇದೀಗ ಇದ್ದಕ್ಕಿದ್ದಂತೆ ಅವರ ಮಿಲಿ ಸಿನಿಮಾದ ಪ್ರಮೋಷನ್‌ ಆರಂಭವಾಗುತ್ತಿದ್ದಂತೆಯೇ ಡಿಸೆಂಟ್‌ ಲುಕ್‌ಗೆ ಶರಣಾಗಿದ್ದಾರೆ.

ಆಗಾಗ ಬದಲಾಗುವ ಜಾಹ್ನವಿಯ ಲುಕ್‌

ಮೊದಲಿನಿಂದಲೂ ಜಾಹ್ನವಿ ಕಪೂರ್‌ಗೆ ಅಷ್ಟಾಗಿ ಜ್ಯುವೆಲರಿಗಳ ಮೇಲೆ ಮೋಹ ಇಲ್ಲವಂತೆ. ಇದನ್ನು ಹಿಂದೊಮ್ಮೆ ಅವರೇ ಫ್ಯಾಷನ್‌ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಯೂನಿಕ್‌ ಡಿಸೈನರ್‌ವೇರ್‌ಗಳೆಂದರೇ ನನಗೆ ಪ್ರೀತಿ. ನನಗೆ ಒಬ್ಬರು ಧರಿಸಿದ ಡಿಸೈನ್‌ ಹಾಗೂ ಉಡುಪಿನ ರಿಪ್ಲಿಕಾ ಧರಿಸುವುದು ಸುತಾರಾಂ ಇಷ್ಟವಿಲ್ಲ! ಕಾಪಿಕ್ಯಾಟ್‌ ಆಗುತ್ತದೆ. ಅದರಲ್ಲೂ ನಾನಂತೂ ಸದಾ ನನ್ನ ಉಡುಪು ಡಿಫರೆಂಟ್‌ ಆಗಿರಲು ಬಯಸುತ್ತೇನೆ. ಅದು ಸಿಂಪಲ್‌ ಆಗಿರಲಿ ಅಥವಾ ಡಿಸೈನರ್‌ ಉಡುಪಾಗಲಿ ಯೂನಿಫಾರ್ಮ್‌ನಂತೆ ಕಾಣಕೂಡದು ಎಂದು ಹೇಳಿದ್ದರು. ಇದಕ್ಕೆ ತಕ್ಕಂತೆ ಅವರು ಪ್ರತಿ ಬಾರಿ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಟ್‌ ಲುಕ್‌ ನೀಡುವ ಶಾರ್ಟ್ ಉಡುಪುನಿಂದ ಹಿಡಿದು ಭಾರತೀಯ ನಾರಿಯಂತೆ ಕಾಣುವ ಸಲ್ವಾರ್‌ ಕಮೀಜ್ ಹಾಗೂ ಸೀರೆಯನ್ನು ಧರಿಸುತ್ತಾರೆ. ಅವರ ಪರ್ಸನಾಲಿಟಿಗೆ ಇದು ಮ್ಯಾಚ್‌ ಆಗುತ್ತದೆ ಕೂಡ. ಪ್ರಯೋಗಾತ್ಮಕ ಫ್ಯಾಷನ್‌ನಲ್ಲಿ ಅವರು ಎತ್ತಿದ ಕೈ ಎನ್ನುತ್ತಾರೆ ಅವರ ಸ್ಟೈಲಿಸ್ಟ್‌ ಟೀಮ್‌ನವರು.

ಜಾನ್ವಿ ಜುಮಕಿ ಪ್ರೇಮ

ಮಿಲಿ ಸಿನಿಮಾದ ಪ್ರಮೋಷನ್‌ ಸಮಯದಲ್ಲಿ ಚಿತ್ರಕ್ಕೆ ಹೊಂದುವಂತೆ, ಇಲ್ಲವೇ ಜನರಿಗೆ ಇಷ್ಟವಾಗುವಂತೆ ಟ್ರೆಂಡ್‌ಗೆ ತಕ್ಕಂತೆ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುವ ಜಾಹ್ನವಿ, ಈ ಪ್ರಮೋಷನ್‌ ಸಮಯದಲ್ಲಿ ಲೈಮ್‌ ಬಣ್ಣದ ಹ್ಯಾಂಡ್‌ವರ್ಕ್ ಮಾಡಿದ ಸೀರೆಯನ್ನು ಉಟ್ಟಿದ್ದಾರೆ. ಕಿವಿಗೆ ಬ್ಲ್ಯಾಕ್‌ ಮೆಟಲ್‌ನ ಫ್ಲೋರಲ್‌ ಜುಮಕಿಯನ್ನು ಧರಿಸಿದ್ದಾರೆ. ಕೂದಲ ಮಧ್ಯೆ ಬೈತಲೆ ತೆಗೆದು ಸಿಂಪಲ್‌ ಫ್ರೀ ಹೇರ್‌ಸ್ಟೈಲ್‌ಗೆ ಮೊರೆ ಹೋಗಿದ್ದಾರೆ. ಇದು ಕಂಪ್ಲೀಟ್‌ ಡಿಸೆಂಟ್‌ ಲುಕ್‌ ನೀಡಿದೆ. ಇನ್ನು ಕುತ್ತಿಗೆಗೆ ಯಾವುದೇ ನೆಕ್ಲೇಸ್‌ ಆಗಲಿ ಕೈಗಳಿಗೆ ಬಳೆಯಾಗಲಿ ಧರಿಸಿಲ್ಲ! ಇದು ಜಾಹ್ನವಿಗೆ ತೀರಾ ಸಿಂಪಲ್‌ ಲುಕ್‌ ನೀಡಿದೆ ಎನ್ನುತ್ತಾರೆ ಸೆಲೆಬ್ರೆಟಿ ಫ್ಯಾಷನ್‌ ವಿಮರ್ಶಕರು.

ಒಟ್ಟಿನಲ್ಲಿ ಸದಾ ಜಾಹ್ನವಿಯ ಹಾಟ್‌ ಲುಕ್‌ ನೋಡಿದ್ದ ಜನರಿಗೆ ಇದೀಗ ಅವರ ಸಿಂಪಲ್‌ ಲುಕ್‌ ಅಚ್ಚರಿ ಮೂಡಿಸಿದೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Star Holiday Fashion | ಬಾಲಿಯಲ್ಲಿ ನಟಿ ನಭಾ ನಟೇಶ್‌ ಹಾಲಿ ಡೇ ಲುಕ್‌

Exit mobile version