ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಮ್ಮರ್ ಸೀಸನ್‌ಗೆ (Star Fashion) ಸಾಥ್ ನೀಡುವ ಕಾರ್ಪೆಂಟರ್ ಪ್ಯಾಂಟ್‌ನಲ್ಲಿ ಸ್ಯಾಂಡಲ್‌ವುಡ್ ನಟಿ ಶುಭಾರಕ್ಷಾ ಕಾಣಿಸಿಕೊಂಡಿದ್ದು, ಈ ಸೀಸನ್‌ನ ಕೂಲ್ ಫ್ಯಾಷನ್‌ಗೆ ಸೈ ಎಂದಿದ್ದಾರೆ.
ಶುಭಾ ರಕ್ಷಾ ಫ್ಯಾಷನ್ ಟಾಕ್
ಸಿಂಗಲ್ ಶೋಲ್ಡರ್ ಹೊಂದಿರುವ ಕ್ರಾಪ್ ಟಾಪ್‌ಗೆ ಲೈಟ್ ಅಥವಾ ಸ್ಕೈ ಬ್ಲ್ಯೂ ಕಾರ್ಪೆಂಟರ್ ಪ್ಯಾಂಟ್ ಮ್ಯಾಚ್ ಮಾಡಿರುವುದು, ಇದಕ್ಕೆ ಮಿಲ್ಕಿ ವೈಟ್ ಕ್ರಾಪ್ ಟಾಪ್ ಧರಿಸಿರುವುದು, ಈ ಸೀಸನ್‌ನ ಫ್ಯಾಷನ್‌ಗೆ ಪಕ್ಕಾ ಮ್ಯಾಚ್ ಆಗುವಂತಿದೆ. ನೋಡಲು ಕೂಲ್ ಲುಕ್ ನೀಡುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಸ್ಟಾರ್ ಲುಕ್ ಅಥವಾ ಸೆಲೆಬ್ರೆಟಿ ಲುಕ್‌ಗೆ ಹೊಂದುತ್ತಿದೆ ಎನ್ನುತ್ತಾರೆ ನಟಿ ಶುಭಾರಕ್ಷಾ. ತಮ್ಮ ಈ ಸಮ್ಮರ್ ಕೂಲ್ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ವಿಸ್ತಾರ ನ್ಯೂಸ್‌ನೊಂದಿಗೆ ಹಂಚಿಕೊಂಡ ಶುಭಾರಕ್ಷಾ, ಆಗಾಗ್ಗೆ ನಾನು ಫ್ಯಾಷನ್‌ವೇರ್‌ಗಳನ್ನು ಪ್ರಯೋಗ ಮಾಡುತ್ತಲೇ ಇರುತ್ತೇನೆ. ಒಂದಲ್ಲ ಒಂದು ಸ್ಟೈಲ್ ಸ್ಟೇಟ್‌ಮೆಂಟ್ ಬದಲಿಸುತ್ತಿರುತ್ತೇನೆ. ಆದರೆ, ಈ ಸೀಸನ್‌ನ ಈ ಫ್ಯಾಷನ್ ನನಗೆ ಮೆಚ್ಚುಗೆಯಾಯಿತು. ಫೋಟೋಶೂಟ್‌ಗಾಗಿ ಈ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡಿದ್ದರೂ ಕೂಡ ಈ ಕೂಲ್ ಫ್ಯಾಷನ್ ಹಾಲಿವುಡ್ ಸೆಲೆಬ್ರೆಟಿ ಲುಕ್‌ನಂತೆ ಕಂಡಿತ್ತು ಎಂದು ಹೇಳಿಕೊಂಡಿದ್ದಾರೆ.
ಏನಿದು ಕಾರ್ಪೆಂಟರ್ ಪ್ಯಾಂಟ್ ಸ್ಟೈಲ್
ಸಮ್ಮರ್ ಸೀಸನ್‌ಗೆ ಸೂಟ್ ಆಗುವಂತಹ ಈ ಪ್ಯಾಂಟ್ ದೊಗಲೆಯಾಗಿರುತ್ತದೆ. ಫಿಟ್ಟಿಂಗ್ ಇರುವುದಿಲ್ಲ. ಬದಲಿಗೆ ಮೂರ್ನಾಲ್ಕು ಪಾಕೆಟ್‌ಗಳಿರುತ್ತವೆ. ಹೈ ವೇಸ್ಟ್‌ಲೈನ್ ಹೊಂದಿರುತ್ತದೆ. 80-90ರ ದಶಕದ ಮಧ್ಯದಲ್ಲಿ ಟ್ರೆಂಡ್‌ನಲ್ಲಿದ್ದ ಈ ಪ್ಯಾಂಟ್‌ಗಳು ವರ್ಕಿಂಗ್ ಮೆನ್‌ಗಳ ಫ್ಯಾಷನ್‌ನಲ್ಲಿತ್ತು. ಬರಬರುತ್ತಾ ಮಹಿಳೆಯರಿಗಾಗಿ ಹೊಸ ರೂಪದಲ್ಲಿ ಬಿಡುಗಡೆಗೊಂಡವು. ಇದೀಗ ಜೀನ್ಸ್ ಹಾಗೂ ಡೆನೀಮ್‌ನಲ್ಲೂ ಈ ಬಗೆಯ ಪ್ಯಾಂಟ್‌ಗಳು ಬಿಡುಗಡೆ ಹೊಂದಿವೆ. ಸ್ಟ್ರೇಟ್‌ಕಟ್ ಹೊಂದಿರುವುದರಿಂದ ಧರಿಸಿದಾಗ ಎತ್ತರವಾಗಿ ಕಾಣಬಹುದು. ಈ ಪ್ಯಾಂಟ್‌ಗೆ ತಕ್ಕಂತೆ ಮಾಡರ್ನ್ ಶೈಲಿಯ ಟಾಪ್‌ಗಳನ್ನು ಧರಿಸಿದಾಗ ಇದು ಟ್ರೆಂಡಿಯಾಗಿ ಕಾಣುತ್ತದೆ. ಟೀ ಶರ್ಟ್ ಧರಿಸಿದಲ್ಲಿ ಸಾಮಾನ್ಯ ಪ್ಯಾಂಟ್‌ನಂತೆಯೇ ಕಾಣಬಹುದು. ಹಾಗಾಗಿ, ಇಂತಹ ಪ್ಯಾಂಟ್‌ಗಳಿಗೆ ಕ್ರಾಪ್ ಟಾಪ್, ಸಿಂಗಲ್ ಶೋಲ್ಡರ್, ಕೋಲ್ಡ್ ಶೋಲ್ಡರ್, ಹಾಲ್ಟರ್ ನೆಕ್‌ನಂತಹ ಪ್ಯಾಂಟ್‌ಗಳನ್ನು ಧರಿಸಬಹುದು. ಇವು ಗ್ಲಾಮರಸ್ ಲುಕ್ ನೀಡುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಕಾರ್ಪೆಂಟರ್ ಪ್ಯಾಂಟ್ ಆಯ್ಕೆಗೆ ಸ್ಟೈಲಿಸ್ಟ್‌ಗಳ 3 ಟಿಪ್ಸ್
- ಫ್ಯಾಬ್ರಿಕ್ ನೋಡಿ ಖರೀದಿಸಿ.
- ಪ್ಲಂಪಿಯಾಗಿರುವವರು ಸಾಫ್ಟ್ ಫ್ಯಾಬ್ರಿಕ್ನದ್ದನ್ನು ಆಯ್ಕೆ ಮಾಡಿ.
- ದೊಗಲೆಯಾಗಿರುವುದರಿಂದ ಆದಷ್ಟೂ ಸರಿಯಾದ ಸೈಝ್ನದ್ದನ್ನು ಕೊಳ್ಳಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion: ಬೇಸಿಗೆಯಲ್ಲೂ ಸ್ಕರ್ಟ್‌ಗೆ ಬ್ಲ್ಯಾಕ್ ಟಾಪ್ ಧರಿಸಿ ಮಿಕ್ಸ್ ಮ್ಯಾಚ್ ಮಾಡಿದ ನಟಿ ರಾಧಿಕಾ ನಾರಾಯಣ್