ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟಿ ಅನನ್ಯಾ ಪಾಂಡೆ ಎಥ್ನಿಕ್ ಔಟ್‌ಫಿಟ್‌ಗಳು ನೆಟ್ಟಿಗರ ಮನಸೂರೆಗೊಳ್ಳಲಾರಂಭಿಸಿವೆ. ಸದಾ ವೆಸ್ಟರ್ನ್ ಔಟ್‌ಫಿಟ್‌ಗಳಲ್ಲಿ ಕೂಲ್ ಆಗಿ ಕಾಣಿಸಿಕೊಳ್ಳುತ್ತಿದ್ದ ಸ್ಲಿಮ್ ನಟಿ ಅನನ್ಯಾ ಪಾಂಡೆ ಇದೀಗ ಎಥ್ನಿಕ್ ಡಿಸೈನರ್‌ವೇರ್‌ಗಳಲ್ಲಿ ಮಿನುಗಲಾರಂಭಿಸಿದ್ದಾರೆ.
ಸಿನಿಮಾ ಪ್ರಮೋಷನ್‌ಗಳಿಗಾಗಿ ತಮ್ಮ ಫ್ಯಾಷನ್ ಸ್ಟೇಟ್‌ಮೆಂಟ್ ಬದಲಿಸಿಕೊಂಡಿರುವ ಅನನ್ಯಾ ಪಾಂಡೇ ಇದೀಗ ತಮ್ಮ ಸ್ಟೈಲ್‌ಸ್ಟೇಟ್‌ಮೆಂಟ್‌ಗಳತ್ತ ಮುಖಮಾಡಿದ್ದಾರೆ ಎನ್ನುತ್ತಿದ್ದಾರೆ ಫ್ಯಾಷನ್ ವಿಮರ್ಶಕರು.
ಎಥ್ನಿಕ್ ಫ್ಯಾಷನ್ ಕಡೆ ವಾಲಿದ ಅನನ್ಯಾ
ಝೀರೋ ಸೈಝ್ ಹಾಗೂ ಜೆನ್–ಝಿ ಐಕಾನ್ ಎಂದೇ ಕರೆಸಿಕೊಳ್ಳುವ ನಟಿ ಅನನ್ಯಾ ಪಾಂಡೇ ಸ್ಟೈಲ್ ಸ್ಟೇಟ್‌ಮೆಂಟ್ ಇದೀಗ ಎಥ್ನಿಕ್ ಹಾಗೂ ಸೆಮಿ ಎಥ್ನಿಕ್ ಕಡೆ ವಾಲಿದೆ. ಮೊದಮೊದಲು ಕೇವಲ ವೆಸ್ಟರ್ನ್ ಔಟ್‌ಫಿಟ್‌ಗಳಲ್ಲೆ ಕಾಣಿಸಿಕೊಳ್ಳುತ್ತಿದ್ದ ಅನನ್ಯಾ ಇತ್ತೀಚೆಗೆ ಬಿಡುಗಡೆಯಾದ ಚಿತ್ರವೊಂದರ ಪ್ರಮೋಷನ್ ಸಮಯದಲ್ಲಿ ಒಂದೆರೆಡು ಸಮಾರಂಭಗಳಲ್ಲಿ ವೆಸ್ಟರ್ನ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಂಡದ್ದು ಹೊರತುಪಡಿಸಿದರೇ ಇನ್ನುಳಿದಂತೆ ಎಲ್ಲಾ ಕಡೆಯಲ್ಲೂ ಸೆಮಿ ಎಥ್ನಿಕ್ ಹಾಗೂ ಎಥ್ನಿಕ್ ಔಟ್‌ಫಿಟ್‌ಗಳಲ್ಲೆ ಕಾಣಿಸಿಕೊಂಡು ಫ್ಯಾಷನ್ ಪ್ರಿಯರನ ಮೆಚ್ಚುಗೆ ಗಳಿಸಿದರು. ಫ್ಲೋರ್ ಲೆಂತ್ ಎಥ್ನಿಕ್ ಲೆಹೆಂಗಾ, ಎಥ್ನಿಕ್ ಕ್ರಾಪ್ ಟಾಪ್‌ನೊಂದಿಗೆ ಶರಾರಾ ಶೈಲಿಯ ಪ್ಯಾಂಟ್ ಜತೆಗೆ ಲಾಂಗ್ ಕಾರ್ಡಿಗಾನ್‌ನಲ್ಲಿ ಮನಮೋಹಕವಾಗಿ ಕಾಣಿಸಿದರು. ಇನ್ನು ಬ್ಲಾಕ್ ಲೆಕೆಂಗಾ ಹಾಗೂ ಬಿಕಿನಿ ಶೈಲಿಯ ಬ್ಲೌಸ್ ಅವರಿಗೆ ಗ್ಲಾಮರ್ ಲುಕ್ ನೀಡುವುದರೊಂದಿಗೆ ಮತ್ತಷ್ಟು ಸ್ಟೈಲಿಶ್ ಆಗಿಸಿತ್ತು.
ಫ್ಯಾಷನ್ ವಿಮರ್ಶಕರು ಹೇಳುವುದೇನು?
ಅನನ್ಯಾ ಪಾಂಡೆ ಜೆನ್-ಝಿ ಅಂದರೆ ಈ ಹೊಸ ಜನರೇಷನ್ ನಟಿ, ಹಾಗಾಗಿ ಹೆಚ್ಚು ಮೇಕಪ್ ಇಷ್ಟಪಡುವುದಿಲ್ಲ, ಹೆವ್ವಿ ಡಿಸೈನ್‌ನ ಉಡುಪುಗಳನ್ನು ಧರಿಸುವುದಿಲ್ಲ. ಜೆನ್ –ಝಿ ಜನರೇಷನ್ ನಟಿಯರು ಕಂಪ್ಲೀಟ್ ವಿಭಿನ್ನವಾಗಿ ಯೋಚಿಸುತ್ತಾರೆ. ಅದಕ್ಕೆ ತಕ್ಕಂತೆ ತಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಅನ್ನು ಅಳವಡಿಸಿಕೊಳ್ಳುತ್ತಾರೆ. ಇದು ಈ ಜನರೇಷನ್ ಯುವಕ-ಯುವತಿಯರ ಸ್ಟೈಲ್‌ಸ್ಟೇಟ್‌ಮೆಂಟ್‌ನ ಪ್ರತಿಬಿಂಬ ಎಂದರೂ ತಪ್ಪಾಗಲಾರದು.
ಝಿರೋ ಸೈಝ್ ಇರುವ ಅನನ್ಯಾ ಪಾಂಡೇ ಕರ್ವಿ ಗರ್ಲ್ ಅಲ್ಲ, ಹಾಗಾಗಿ ಅವರ ಬಾಡಿ ಶೇಪ್‌ಗೆ ತಕ್ಕಂತೆ ಎಥ್ನಿಕ್ ಉಡುಪುಗಳನ್ನು ಆಯ್ಕೆ ಮಾಡಿಕೊಂಡಿರುವುದು ಅವರನ್ನು ಆಕರ್ಷಕವಾಗಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಜಿಯಾ.
ಡೇನಿಮ್ ಪ್ರಿಯೆ ಅನನ್ಯಾ
ಅನನ್ಯಾ ತಾವು ಡೆನೀಮ್ ಪ್ರಿಯೆ ಎಂದು ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಆದರೂ ಸಿನಿಮಾ ಪ್ರಮೋಷನ್ ಸಮಯದಲ್ಲಿ ಮಾತ್ರ ಎಥ್ನಿಕ್ ಫ್ಯಾಷನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ ಎನ್ನುತ್ತಾರೆ. ಡಿಫರೆಂಟ್ ಲುಕ್‌ಗಾಗಿ ಎಂಬುದು ಅವರ ಅಭಿಪ್ರಾಯ.
ಅನನ್ಯಾ ಚಾಯ್ಸ್ ಹೀಗಿದೆ:
- ಜೀನ್ಸ್ ವೈಟ್ ಟೀಶರ್ಟ್ ಸಿಂಪಲ್ ಔಟ್ಫಿಟ್ ಅಂದ್ರೆ ಇಷ್ಟ.
- ಡೆನೀಮ್ನ ಔಟ್ಫಿಟ್ಗಳೆಂದರೇ ಸಖತ್ ಇಷ್ಟ.
- ಕರಣ್ ಜೋಹರ್ ವಾರ್ಡ್ರೋಬ್ ಮೇಲೆ ಕಣ್ಣಿದೆ.
- ಫ್ಲೇರ್ಪ್ಯಾಂಟ್, ಬಾಡಿ ಸೂಟ್ಸ್ ಕೂಡ ಇಷ್ಟ.
ಇದನ್ನೂ ಓದಿ| Star Style | ಟ್ರೆಂಡ್ ಸೆಟ್ ಮಾಡಿದ ಅಲಿಯಾ ಪ್ರೆಗ್ನೆನ್ಸಿ ಫ್ಯಾಷನ್