ಸಂದರ್ಶನ: ಶೀಲಾ ಸಿ. ಶೆಟ್ಟಿ
ಸ್ಯಾಂಡಲ್‌ವುಡ್‌ನ ಬ್ಯೂಟಿಫಿಲ್ ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra Interview) ಯಾರಿಗೆ ಗೊತ್ತಿಲ್ಲ? ಕೋಲ್ಕೋತಾ ಬೆಡಗಿಯಾಗಿದ್ದ ಇವರು ಫ್ಯಾಷನ್ ಪೇಜೆಂಟ್‌ನಲ್ಲಿ ವಿಜೇತರಾದ ನಂತರವೇ ನಟಿಯಾಗಿದರಂತೆ. ಹಾಗೆಂದು ಅವರೇ ಹೇಳಿದ್ದಾರೆ. ನನಗಂತೂ ಫ್ಯಾಷನ್ ಶೋಗಳೆಂದರೆ ನನ್ನ ಹಳೆಯ ದಿನ ನೆನಪಾಗುತ್ತದೆ. ಸಿನಿಮಾಗಿಂತ ಮುಂಚೆಯ ಆರಂಭದ ದಿನಗಳು ಮನದಲ್ಲಿ ಸುಳಿದಾಡುತ್ತವೆ ಎನ್ನುತ್ತಾರೆ. ಈ ಬಗ್ಗೆ ಅವರು ವಿಸ್ತಾರ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ, ತಮ್ಮ ಸಿಗ್ನೇಚರ್ ಸ್ಟೈಲ್ ಹಾಗೂ ಫ್ಯಾಷನ್ ಲವ್ ಬಗ್ಗೆ ಮಾತನಾಡಿದ್ದಾರೆ.
ವಿಸ್ತಾರ: ಫ್ಯಾಷನ್ ಶೋ ಎಂದಾಕ್ಷಣ ನಿಮ್ಮಕಣ್ಣರಳುತ್ತದಲ್ಲ? ಇದಕ್ಕೆ ಕಾರಣವೇನು?
ಸಿನಿಮಾದಲ್ಲಿ ನಟಿಸುವ ಮುನ್ನ ನಾನು ಕೂಡ ಕೋಲ್ಕೋತಾದಲ್ಲಿ ನಡೆದ ಪೇಜೆಂಟ್‌ನಲ್ಲಿ ಭಾಗವಹಿಸಿ ವಿಜೇತಳಾಗಿದ್ದೆ. ಅಂದು ಮಾಡಿದ ರ್ಯಾಂಪ್ ವಾಕ್ ಇಂದಿಗೂ ನಾನು ಮರೆತಿಲ್ಲ! ಎಷ್ಟೇ ಬಾರಿ ರ್ಯಾಂಪ್ ಏರಿದರೂ ಕೂಡ ಖುಷಿಯಾಗುತ್ತೆ. ಮತ್ತೊಮ್ಮೆ ನನ್ನ ಹಿಂದಿನ ರ್ಯಾಂಪ್ ದಿನಗಳು ನೆನಪಾಗುತ್ತೆ. ಅದಕ್ಕೆ ಇರಬೇಕು ಅಷ್ಟೊಂದು ಕಾನ್ಫಿಡೆನ್ಸ್ ಆಗಿ ರ್ಯಾಂಪ್ ವಾಕ್ ಮಾಡುತ್ತೇನೆ.
ಎಷ್ಟು ಬಾರಿ ಧರಿಸಿದರೂ ಮತ್ತೊಮ್ಮೆ ಧರಿಸಬೇಕೆಂಬ ಇಚ್ಛೆಯಾಗುವ ಫೇವರೇಟ್ ಅಟೈರ್ ಯಾವುದು?
ಸೀರೆ. ಹೌದು. ನನಗೆ ಸೀರೆ ಉಡುವುದೆಂದರೇ ಸಖತ್ ಇಷ್ಟ. ಎಷ್ಟು ಬಾರಿ ಎಷ್ಟೇ ಸೀರೆ ಉಟ್ಟರೂ ಮತ್ತೊಮ್ಮೆ ಉಡಲು ಆಸೆಯಾಗುತ್ತದೆ. ಅಷ್ಟೊಂದು ಇಷ್ಟ ನನಗೆ. ನನ್ನ ಬಳಿ ಸಾಕಷ್ಟು ಸೀರೆಗಳ ಕಲೆಕ್ಷನ್ ಇದೆ. ಒಂದೊಂದು ಬಾರಿಯೂ ಸೀರೆಯನ್ನು ಮೊದಲ ಬಾರಿ ಸೀರೆ ಉಟ್ಟಂತೆ ಉತ್ಸಾಹದಿಂದ ಉಡುತ್ತೇನೆ.
ವಿವಾಹಿತರ ಫ್ಯಾಷನ್ ಪೇಜೆಂಟ್‌ನಲ್ಲಿ ಭಾಗವಹಿಸಲು ಬಯಸುವ ಮಹಿಳೆಯರಿಗೆ ಯಾವ ರೀತಿಯ ಸಲಹೆ ನೀಡಲು ಬಯಸುತ್ತೀರಾ?
ಆತ್ಮವಿಶ್ವಾಸದಿಂದ ಭಾಗವಹಿಸಿ. ವಿಜೇತರಾಗುವುದೇ ಮುಖ್ಯವಲ್ಲ! ಭಾಗವಹಿಸುವುದು ಮುಖ್ಯ. ಈ ಸಂದರ್ಭದಲ್ಲಿ ನಿಮಗೆ ಕಲಿಯಲು ಸಾಕಷ್ಟು ಅವಕಾಶಗಳು ದೊರೆಯಬಹುದು. ಇದಕ್ಕೆ ಪೂರಕ ಎಂಬಂತೆ, ಮಿಸೆಸ್ ಇಂಟರ್‌ನ್ಯಾಷನಲ್ ಸೂಪರ್ ಕ್ವೀನ್ ಪೇಜೆಂಟ್ ಕೂಡ ಮಹಿಳೆಯರಿಗೆ ಸಾಕಷ್ಟು ಸಪೋರ್ಟ್ ಮಾಡುತ್ತಿದೆ.
ನಿಮ್ಮ ಸಿಗ್ನೇಚರ್ ಸ್ಟೈಲ್ ಏನು ?
ಅದು ಕೂಡ ಸೀರೆ. ಯಾಕೆಂದರೆ ನಾನು ಸೀರೆಯ ಟ್ರೆಡಿಷನಲ್ ಲುಕ್‌ನಲ್ಲಿ ಮಾತ್ರ ಒಂದೇ ರೀತಿ ಕಾಣಿಸುತ್ತೇನೆ. ಹಾಗಾಗಿ ಸೀರೆ ನನ್ನ ಸಿಗ್ನೇಚರ್ ಸ್ಟೈಲನ್ನು ಪ್ರತಿಬಿಂಬಿಸುತ್ತದೆ.
ನೀವು ಪಾಲಿಸುವ ಫ್ಯಾಷನ್ ಸ್ಟೇಟ್‌ಮೆಂಟ್ ಏನು?
ನನಗೆ ಎಲ್ಲಾ ಬಗೆಯ ಉಡುಪುಗಳು ಇಷ್ಟವಾಗುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಅವು ನನಗೆ ಕಂಫರ್ಟಬಲ್ ಫೀಲಿಂಗ್ ನೀಡಬೇಕಷ್ಟೇ! ವಿನ್ಯಾಸಗಳು ಅಷ್ಟೇ! ನೋಡಲು ಟ್ರೆಂಡಿಯಾಗಿರಬೇಕು. ಮನಮೋಹಕವಾಗಿರಬೇಕು.
ಫ್ಯಾಮಿಲಿಯೊಂದಿಗೆ ಟ್ರೆಡಿಷನಲ್ ಅಟೈರ್ ಧರಿಸಿ ಪ್ರತಿ ಹಬ್ಬ ಆಚರಿಸುತ್ತೀರಲ್ಲ! ಈ ಔಟ್‌ಫಿಟ್ ಪ್ಲಾನಿಂಗ್ ಯಾರದ್ದು?
ಎಲ್ಲರೂ ಎಥ್ನಿಕ್ ಅಟೈರ್‌ನಲ್ಲಿ ಕಾಣಿಸಿಕೊಳ್ಳಬೇಕು ಎಂದು ಒಟ್ಟಾಗಿ ನಿರ್ಧಾರ ಮಾಡುತ್ತೀವಿ. ನಂತರ ಎಲ್ಲರೂ ಅವರವರ ಅಭಿರುಚಿಗೆ ತಕ್ಕಂತೆ ಟ್ರೆಡಿಷನಲ್‌ವೇರ್‌ನಲ್ಲಿ ಕಾಣಿಸಿಕೊಳ್ಳುತ್ತಿವಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sandalwood Star Fashion: ಸ್ಯಾಂಡಲ್‌ವುಡ್ ನಟಿ ಸಂಯಕ್ತಾ ಹೆಗ್ಡೆ ಲೈಫ್‌ಸ್ಟೈಲ್‌ಗೆ ತಕ್ಕಂತೆ ಬದಲಾಗುವ ಫ್ಯಾಷನ್