ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಾರ್ಯಕ್ರಮವೊಂದರಲ್ಲಿ ಒಂದು ಪಾದಕ್ಕೆ ಲ್ಯಾವೆಂಡರ್ ಮತ್ತೊಂದು ಪಾದಕ್ಕೆ ಪಿಂಕ್…ಹೀಗೆ ವಿಭಿನ್ನ ವರ್ಣದ ಹೈ ಹೀಲ್ಸ್ ಶೂ ಧರಿಸಿ, ತಮ್ಮದೇ ಆದ ಡಿಫರೆಂಟ್ ಫ್ಯಾಷನನ್ನು ನಟಿ ರಶ್ಮಿಕಾ ಮಂದಣ್ಣ ಹುಟ್ಟು ಹಾಕಿದ್ದಾರೆ.
ಮಿಸ್ ಮ್ಯಾಚ್ ಫ್ಯಾಷನ್
ಕಾಲಿಗೆ ಹಾಕುವ ಸ್ಯಾಂಡಲ್ ಒಂದೇ ಕಲರ್ ಹಾಗೂ ಡಿಸೈನ್ ಧರಿಸುವುದು ಕಾಮನ್ ಫ್ಯಾಷನ್. ಅದರಲ್ಲೆ ಚಿತ್ರ-ವಿಚಿತ್ರ ಡಿಸೈನ್ ಧರಿಸುವುದು ವಿಯರ್ಡ್ ಫ್ಯಾಷನ್. ಅದೇ ಒಂದು ಕಾಲಿಗೆ ಒಂದು ಬಣ್ಣ, ಮತ್ತೊಂದು ಕಾಲಿಗೆ ಇನ್ನೊಂದು ಬಣ್ಣದ ಶೂ ಧರಿಸುವುದು ಯಾವ ಫ್ಯಾಷನ್! ಈ ಮಿಸ್ ಮ್ಯಾಚ್ ಫುಟ್‌ವೇರ್ ಫ್ಯಾಷನ್ ಫೋಟೋಗಳು ನೋಡಿದ್ದರೂ ಅದು ಪ್ಯಾರೀಸ್, ಮಿಲಾನ್ ಇಲ್ಲವೇ ಲಂಡನ್ ಫ್ಯಾಷನ್ ವೀಕ್‌ನದ್ದಾಗಿರುತ್ತದೆ. ನಮ್ಮಲ್ಲಿ ತೀರಾ ವಿರಳ. ಆದರೆ, ಇದೀಗ ಇಂತಹ ಹೊಸ ಪ್ರಯೋಗಾತ್ಮಕ ಬಣ್ಣ ಬಣ್ಣದ ಫುಟ್‌ವೇರ್ ಧರಿಸಿ ಹೊಸ ಫ್ಯಾಷನ್‌ಗೆ ನಾಂದಿ ಹಾಡಿದ್ದಾರೆ ರಶ್ಮಿಕಾ.
ಮೆಟಾ ಕ್ರಿಯೇಟರ್ಸ್ ಡೇಯಲ್ಲಿ ವೈಬ್ರೆಂಟ್ ಶರ್ಟ್ ಹಾಗೂ ಟೋರ್ನ್ ಜೀನ್ಸ್‌ನ ಫಂಕಿ ಲುಕ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ ಹೂಪ್ ಇಯರಿಂಗ್ಸ್ ಧರಿಸಿ, ವಿಭಿನ್ನ ಬಣ್ಣದ ಆಫ್ ಶೂ ಧರಿಸಿ ಫಂಕಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.
ಪ್ರಯೋಗಾತ್ಮಕ ಫ್ಯಾಷನ್
ಫ್ಯಾಷನಿಸ್ಟಾಗಳು ಹೇಳುವಂತೆ, ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ಗೆ ಎಂಟ್ರಿ ನೀಡಿದ ನಂತರ ನಟಿ ರಶ್ಮಿಕಾ ಮಂದಣ್ಣ ಸಾಕಷ್ಟು ಬಿಂದಾಸ್ ಸ್ಟೇಟ್‌ಮೆಂಟ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಸದಾ ಒಂದಲ್ಲ ಒಂದು ಸುದ್ದಿಯಲ್ಲಿರುವ ರಶ್ಮಿಕಾ, ಇತ್ತೀಚೆಗೆ ದೊಡ್ಡ ಬ್ರಾಂಡ್‌ವೊಂದರ ಜಾಹೀರಾತಿನಲ್ಲಿ ಡಿಸೈನರ್ ಲೆಯರ್ ಲುಕ್ ನೀಡುವ ಬಿಕಿನಿಯಲ್ಲೂ ಕಾಣಿಸಿಕೊಂಡು ಬಿಂದಾಸ್ ಫ್ಯಾಷನ್‌ಗೆ ಸೈ ಎಂದರು. ಬಾಲಿವುಡ್‌ನ ಪ್ರತಿ ಕಾರ್ಯಕ್ರಮದಲ್ಲೂ ಒಂದಲ್ಲ ಒಂದು ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಇದೀಗ ಅವರಿಗೆ ಸಾಮಾನ್ಯವಾಗಿದೆ. ಹಾಗಾಗಿ ಇತರೇ ಬಾಲಿವುಡ್ ತಾರೆಯರ ಹಿಂದೆ ಬೀಳುವ ಮುಂಬಯಿಯ ಪಾಪರಾಜ್ಹಿ ಟೀಮ್ ಇದೀಗ ಇವರ ಹಿಂದೆಯೂ ಕೂಡ ಗಿರಕಿ ಹೊಡೆಯಲಾರಂಭಿಸಿದೆ.
ಇನ್ನು ಎಲ್ಲರೊಂದಿಗೂ ಸ್ನೇಹದಿಂದಲೇ ವರ್ತಿಸುವ ರಶ್ಮಿಕಾ, ಮಾತ್ರ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ಗೆ ಹಾರಿದ ನಂತರ ಸಖತ್ ಬೋಲ್ಡ್ ಹಾಗೂ ಬ್ಯೂಟಿಫುಲ್ ಉಡುಪುಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಹೊಸ ಸ್ಟೈಲಿಶ್ ಪ್ರಯೋಗಗಳಿಗೆ ನಾಂದಿ ಹಾಡುತ್ತಿರುವುದು ಸ್ವಾಗತಾರ್ಹ ಎಂದಿದೆ ಫ್ಯಾಷನಿಸ್ಟಾಗಳ ಟೀಮ್.
ಒಟ್ಟಿನಲ್ಲಿ, ರಶ್ಮಿಕಾ ಮಂದಣ್ಣ ಫ್ಯಾಷನಿಸ್ಟಾಗಳ ಫೇವರೇಟ್ ಸ್ಟಾರ್ ಆಗುತ್ತಿದ್ದಾರೆ ಎನ್ನಲಡ್ಡಿಯಿಲ್ಲ!
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star Fashion | ಎಥ್ನಿಕ್ ಫ್ಯಾಷನ್‌ಗೆ ವಾಲಿದ ಅನನ್ಯಾ ಪಾಂಡೆ