Site icon Vistara News

Star Fusion Fashion | ಫಾತಿಮಾ ಸನಾ ಶೇಕ್‌ ಬ್ಯಾಕ್‌ಲೆಸ್‌ ಟಾಸೆಲ್ಸ್ ಕ್ರಾಪ್‌ ಬ್ಲೌಸ್‌

Star Fusion Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ದಂಗಲ್‌ ಖ್ಯಾತಿಯ ನಟಿ ಫಾತಿಮಾ ಸನಾ ಶೇಕ್‌ ಧರಿಸಿದ್ದ, ಫ್ಯೂಷನ್‌ ಫ್ಯಾಷನ್‌ಗೆ ಸೇರುವ ಸೆಮಿ ಎಥ್ನಿಕ್‌ನ ಲೆಹೆಂಗಾ ಶೈಲಿಯ ಶರಾರ ಪ್ಯಾಂಟ್‌ಗೆ ಮ್ಯಾಚ್‌ ಮಾಡಿದ ಬ್ಯಾಕ್‌ಲೆಸ್‌ ಟ್ಯಾಸೆಲ್ಸ್‌ ಥ್ರೆಡ್‌ ಕ್ರಾಪ್‌ ಬ್ಲೌಸ್‌ ಫ್ಯಾಷನ್‌ ಪ್ರಿಯರ ಹುಬ್ಬೇರಿಸಿದೆ. ಸದ್ಯ ಪ್ರಯೋಗಾತ್ಮಕ ವಿನ್ಯಾಸದ ಡಿಸೈನರ್‌ವೇರ್‌ಗಳ ಲಿಸ್ಟ್‌ಗೆ ಸೇರಿದೆ.

ಶರಾರಗೆ ಡಿಸೈನರ್‌ ಕಾರ್ಸೆಟ್ ಕ್ರಾಪ್‌ ಬ್ಲೌಸ್

ಅಂದಹಾಗೆ, ಸನಾ ಶೇಕ್‌ ಧರಿಸಿರುವ ತಿಳಿ ಕ್ರೀಮ್‌ ಶೇಡ್‌ನ ಲೆಹೆಂಗಾ ಶೈಲಿಯ ಶರಾರ ಮೈಕ್ರೋ ಮಿರರ್‌ ವರ್ಕ್‌ನಿಂದ ಕೂಡಿದ್ದು, ಇದಕ್ಕೆ ಕಾರ್ಸೆಟ್‌ ಲುಕ್‌ ನೀಡುವ ಹಾಲ್ಟರ್‌ ನೆಕ್‌ನ ಈ ಡಿಸೈನರ್‌ ಕ್ರಾಪ್‌ ಬ್ಲೌಸ್‌ ಫ್ರಿಂಝ್‌ ಬೀಡ್ಸ್‌ ವಿನ್ಯಾಸ ಹೊಂದಿದೆ. ಇನ್ನು ಪ್ಯಾಚ್‌ ವರ್ಕ್ ಹಾಗೂ ಮಿರರ್‌-ಥ್ರೆಡ್‌ ವರ್ಕ್ ಮಿಶ್ರಣವಿರುವ ಈ ಬ್ಲೌಸ್‌ ಬ್ಯಾಕ್‌ಸೈಡ್‌ ಕೂಡ ಅಷ್ಟೇ ಆಕರ್ಷಣೀಯವಾಗಿ ಡಿಸೈನ್‌ ಮಾಡಲಾಗಿದೆ. ಬ್ಲೌಸ್‌ನ ಹಿಂಭಾಗ ಕಂಪ್ಲೀಟ್‌ ಥ್ರೆಡ್‌ನಿಂದ ಹೆಣೆದಿದ್ದು, ಟೈಯಿಂಗ್‌ ಜತೆಗೆ ಪಾಸ್ಟೆಲ್‌ ಶೇಡ್‌ನ ಮಲ್ಟಿಪಲ್‌ ಟಾಸೆಲ್ಸ್‌ ಡಿಫರೆಂಟ್‌ ಲುಕ್‌ ನೀಡಿದೆ. ಇದು ಫ್ಯೂಷನ್‌ ಫ್ಯಾಷನ್‌ ಕ್ರಾಪ್‌ ಬ್ಲೌಸ್‌ ಆಗಿದ್ದು, ಪ್ರಯೋಗಾತ್ಮಕ ಡಿಸೈನರ್‌ವೇರ್‌ಗೆ ನಾಂದಿ ಹಾಡಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ ರಾಕಿ.

ಸ್ಟೈಲಿಸ್ಟ್‌ಗಳು ಹೇಳುವುದೇನು?

ಸನಾ ಶರಾರ ಜತೆ ಧರಿಸಿರುವ ಬ್ಯಾಕ್‌ಲೆಸ್‌ ಥ್ರೆಡ್‌ ಟ್ಯಾಸೆಲ್ಸ್‌ ಕ್ರಾಪ್‌ ಬ್ಲೌಸ್‌ ಇದೀಗ ಫ್ಯಾಷನ್‌ಲೋಕದಲ್ಲಿ ಸುದ್ದಿಯಾಗಿರುವುದು ನಟ ಅಮೀರ್‌ಖಾನ್‌ ಮಗಳ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡ ನಂತರ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಸನಾ, ಸೋಷಿಯಲ್‌ ಮೀಡಿಯಾದಲ್ಲಿ ಡಿಸೈನರ್‌ ಪಾಯಲ್‌ ಸಿಂಗಲ್‌ ಡಿಸೈನ್‌ ಮಾಡಿದ ಈ ಎಕ್ಸ್‌ಕ್ಲೂಸೀವ್‌ ವಿನ್ಯಾಸದ ಡಿಸೈನರ್‌ವೇರ್‌ ಧರಿಸಿದ ಫೋಟೋಶೂಟ್‌ ಚಿತ್ರಗಳನ್ನು ಕಾರ್ಯಕ್ರಮ ನಡೆದ ಒಂದೆರೆಡು ದಿನಗಳ ನಂತರ ಸೋಷಿಯಲ್‌ ಮೀಡಿಯಾದಲ್ಲಿ ಸೀರೀಸ್‌ ಆಗಿ ಹಂಚಿಕೊಂಡಿದ್ದರು. ಈ ಡಿಸೈನರ್‌ ಬಗ್ಗೆ ಇರುವ ಒಲವನ್ನು ಸನಾ ವ್ಯಕ್ತಪಡಿಸಿದ್ದರು. ತದನಂತರ ಈ ಡಿಸೈನರ್‌ವೇರ್‌ ಫ್ಯಾಷನ್‌ ಪ್ರಿಯರಿಗೆ ಮಾತ್ರವಲ್ಲ, ಫ್ಯಾಷನಿಸ್ಟಾಗಳ ಹಾಗೂ ಸ್ಟೈಲಿಸ್ಟ್‌ಗಳ ಚರ್ಚೆಯಲ್ಲೂ ಸೇರಿಕೊಂಡಿತು ಎನ್ನುತ್ತಾರೆ ಸ್ಟೈಲಿಸ್ಟ್‌ ರಿಚಾ ಹಾಗೂ ದಿವಿಜಾ.

ನಟಿ ಸನಾ, ಹಲವು ದಿನಗಳ ನಂತರ ವಿಭಿನ್ನ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡದ್ದು ಮಾತ್ರವಲ್ಲ, ಪ್ರಯೋಗಾತ್ಮಕ ವಿನ್ಯಾಸದ ಔಟ್‌ಫಿಟ್‌ ಧರಿಸಿದ್ದು ಫ್ಯಾಷನ್‌ ಪ್ರಿಯರಿಗೆ ಪ್ರಿಯವಾಯಿತು ಎನ್ನುತ್ತಾರೆ ಸೆಲೆಬ್ರಿಟಿ ಸ್ಟೈಲಿಸ್ಟ್‌ ತರುಣ್‌.

ಅಂದಹಾಗೆ, ಸನಾ ಧರಿಸಿದ್ದ ಈ ಡಿಸೈನರ್‌ವೇರನ್ನು ಸೆಲೆಬ್ರಿಟಿ ಡಿಸೈನರ್‌ ಪಾಯಲ್‌ ಸೀಂಗಲ್‌ ಡಿಸೈನ್‌ ಮಾಡಿದ್ದು, ಅಕ್ಷಿತಾ ಹಾಗೂ ಸಿಶಿತಾ ಪರ್ವಾನಿ ಸ್ಟೈಲಿಂಗ್‌ ಮಾಡಿದ್ದರು. ಜ್ಯುವೆಲರಿ ರಾಧಿಕಾ ಅಗರ್‌ವಾಲ್‌ ಸ್ಟುಡಿಯೋ ಲೆಬೆಲ್‌ನದ್ದಾಗಿದೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Winter Mens Fashion | ಮ್ಯಾನ್ಲಿ ಲುಕ್‌ಗೆ ಸಾಥ್‌ ನೀಡುವ ಪುರುಷರ ವಿಂಟರ್‌ ಫ್ಯಾಷನ್‌

Exit mobile version