Site icon Vistara News

Star holiday Fashion | ಬಾಲಿ ಹಾಲಿಡೇ ಫ್ಯಾಷನ್‌ಗೆ ಸೈ ಎಂದ ನಟಿ ಹರ್ಷಿಕಾ ಪೊಣಚ್ಚ

Star holiday Fashion harshika poonacha

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಾಲಿಯ ಸುಂದರವಾದ ದ್ವೀಪಗಳಲ್ಲಿ ಹಾಲಿ ಡೇ ಎಂಜಾಯ್ ಮಾಡುತ್ತಿರುವ ನಟಿ ಹಾಗೂ ಮಾಡೆಲ್ ಹರ್ಷಿಕಾ ಪೊಣಚ್ಚ, ಅಲ್ಲಿಗೆ ಹೊಂದುವಂತಹ ಆಕರ್ಷಕ ಹಾಲಿಡೇ ಫ್ಯಾಷನ್‌ಗೆ ಸೈ ಎಂದಿದ್ದಾರೆ.

ಫ್ಲೋರಲ್ ಡಿಸೈನರ್‌ವೇರ್‌ಗಳಲ್ಲಿ ಹರ್ಷಿಕಾ

ಹೊಸ ವರ್ಷದ ಆಚರಣೆಯ (new year at bali) ಹಿನ್ನೆಲೆಯಲ್ಲಿ ವಿದೇಶಕ್ಕೆ ಹಾರಿದ್ದ ನಟಿ ಹರ್ಷಿಕಾ ಪೊಣಚ್ಚ, ಈ ಬಾರಿ ತಮ್ಮ ಹಾಲಿಡೇ ಫ್ಯಾಷನ್‌ನ್ನಲ್ಲಿ ಕೊಂಚ ಬದಲಾವಣೆ ತಂದಿದ್ದಾರೆ. ಫ್ರೆಶ್ ಲುಕ್ ನೀಡುವ ಶ್ವೇತವರ್ಣದ ಉಡುಪುಗಳು ಹಾಗೂ ಫ್ಲೋರಲ್ ಉಡುಪುಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ. ನೋಡಲು ಆಕರ್ಷಕವಾಗಿ ಕಾಣುವ ಸ್ಲಿಟ್ ಫ್ರಾಕ್, ಫ್ಲೋರಲ್ ಸ್ಲಿಪ್ ಫ್ರಾಕ್, ಹಾಲ್ಟರ್ ನೆಕ್ ಫ್ರಾಕ್ ಹಾಗೂ ಮೆಶ್ ವೈಟ್ ಶಾರ್ಟ್ ಶ್ರಗ್ಸ್ ಧರಿಸಿದ್ದಾರೆ.

ಬಾಲಿಯಲ್ಲಿಯೇ ಸ್ನೇಹಿತೆ ನಟಿ ಎಕ್ತಾ ರಾಥೋಡ್ ಹುಟ್ಟುಹಬ್ಬವನ್ನು (bali birthday trip) ಆಚರಿಸಿದ್ದಾರೆ. ಸ್ನೇಹಿತೆಯರೊಂದಿಗೆ ಪೂಲ್ ಡ್ರೆಸ್‌ಕೋಡ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಆಕರ್ಷಕ ಪಿಂಕ್ ಹಾಗೂ ಮೆಶ್ ಶ್ರಗ್ಸ್ನಂತಿರುವ ಪೂಲ್ ಡ್ರೆಸ್ಕೋಡ್ ಅವರಿಗೆ ಮತ್ತಷ್ಟು ಫಂಕಿ ಲುಕ್ ನೀಡಿದೆ.

ಯಾಚ್‌ನಲ್ಲಿ ಶ್ವೇತಧಾರಿ

ತಿಳಿ ನೀಲಿ ಆಕಾಶ, ಬಿಸಿಲಿನಲ್ಲಿ ಯಾಚ್ ಪ್ರಯಾಣವನ್ನು (bali yacht party) ಎಂಜಾಯ್ ಮಾಡುತ್ತಿರುವ ಹರ್ಷಿಕಾ, ಕಂಪ್ಲೀಟ್ ಶ್ವೇತಧಾರಿಯಾಗಿದ್ದಾರೆ. ಬಿಳಿ ಬಣ್ಣದ ಸಾದಾ ಫ್ರಾಕ್ ಜತೆಗೆ ಸನ್‌ಗ್ಲಾಸ್‌ನಲ್ಲಿ ಕಾಣಿಸಿಕೊಂಡಿರುವ ಅವರು ಹಾಫ್ ವೈಟ್ ಹ್ಯಾಟ್ ಧರಿಸಿದ್ದು, ಫಂಕಿ ಲುಕ್‌ಗಾಗಿ ಕಿವಿಗೊಂದು ಹೂ ಧರಿಸಿ ಫ್ಯಾಷೆನಬಲ್ ಆಗಿ ಪೋಸು ನೀಡಿರುವುದು ಫ್ಯಾಷನ್ ಪ್ರಿಯರ ಮನಸೆಳೆದಿದೆ.

ಬ್ಯೂಟಿಗಾಗಿ ಎಳನೀರು ಸೇವನೆ

ಬಿಸಿಲಲ್ಲಿ ಟ್ರಾವೆಲ್ ಮಾಡುವಾಗ ಟ್ಯಾನ್ ಆಗುವುದೇ ಹೆಚ್ಚು. ಅದರಲ್ಲೂ ಡಿಹೈಡ್ರೇಷನ್ ಆಗದಂತೆ ಗಮನವಹಿಸಬೇಕು. ಹೆಚ್ಚೆಚ್ಚು ನೀರು ಕುಡಿಯಬೇಕು ಹಾಗೂ ಸಿಕ್ಕಿದ ಕಡೆಯೆಲ್ಲಾ ಎಳನೀರು ಕುಡಿಯಬೇಕು ಎಂದು ಸೋಷಿಯಲ್ ಮೀಡಿಯಾದಲ್ಲೆ ಫೋಟೋದೊಂದಿಗೆ ಸಿಂಪಲ್ ಹಾಲಿಡೇ ಬ್ಯೂಟಿ ಟಿಪ್ಸ್ (harshika poonacha beauty secrets) ಕೂಡ ನೀಡಿದ್ದಾರೆ ನಟಿ ಹರ್ಷಿಕಾ.

ಮೂಲತಃ ಮಾಡೆಲ್ ಆಗಿರುವ ಹರ್ಷಿಕಾ ಹಾಲಿಡೇ ಫ್ಯಾಷನ್ ಸದಾ ಟ್ರೆಂಡ್ ಸೆಟ್ಟಿಂಗ್ ಆಗಿರುತ್ತದೆ. ಅವರ ಪ್ರತಿ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್ಮೆಂಟ್‌ಗಳು ಸದಾ ಆಕರ್ಷಕವಾಗಿರುತ್ತದೆ, ಸೀಸನ್‌ಗೆ ಹೊಂದುವಂತಿರುತ್ತದೆ ಎಂದು ಪ್ರಶಂಸಿಸುತ್ತಾರೆ ಫ್ಯಾಷನ್ ವಿಮರ್ಶಕರು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Celebrity Fashion Corner | ಅಡುಗೆ ಪ್ರೋಗ್ರಾಂಗಳ ಮೂಲಕ ಮಹಿಳೆಯರ ಮನ ಗೆದ್ದಿರುವ ಮುರಳಿ ಫ್ಯಾಷನ್‌ ಲೈಫ್‌ ಹೇಗಿದೆ?

Exit mobile version