Site icon Vistara News

Star Holiday Fashion | ಬಾಲಿಯಲ್ಲಿ ನಟಿ ನಭಾ ನಟೇಶ್‌ ಹಾಲಿ ಡೇ ಲುಕ್‌

Star Holiday Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ನಟಿ ನಭಾ ನಟೇಶ್‌ ಬಾಲಿಯ ಹಾಲಿ ಡೇ ಲುಕ್‌ನಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಫೆಸ್ಟೀವ್‌ ಸೀಸನ್‌ನ ಹಾಲಿ ಡೇಯಲ್ಲಿರುವ ನಭಾ ನಟೇಶ್‌ ಹಾಗೂ ಅವರ ಸ್ನೇಹಿತೆಯರು ಸದ್ಯಕ್ಕೆ ರಿಲಾಕ್ಸಿಂಗ್‌ ಮೋಡ್‌ನಲ್ಲಿದ್ದಾರೆ. ನಭಾ ರಿಫ್ರೆಶ್‌ ಆಗಿ ಕಾಣಿಸುವ ಫ್ರಾಕ್‌ಗಳಲ್ಲಿ ಹಾಲಿ ಡೇಯನ್ನು ಎಂಜಾಯ್‌ ಮಾಡುತ್ತಿದ್ದಾರೆ.

ವಜ್ರಕಾಯ, ಲೀ ಸೇರಿದಂತೆ ಕನ್ನಡ ಹಾಗೂ ಸಾಕಷ್ಟು ತೆಲುಗು ಚಿತ್ರಗಳಲ್ಲಿ ನಟಿಸಿರುವ ನಭಾ ನಟೇಶ್‌, ಸದ್ಯಕ್ಕೆ ಹೊಸ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಹೈದರಾಬಾದ್‌ನಲ್ಲೆ ತಳವೂರಿದ್ದಾರೆ. ಸಿನಿಮಾಗಳ ಮಧ್ಯೆಯೂ ಬ್ಯೂಟಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ಕಾಣಿಸುತ್ತಲೇ ಇರುತ್ತಾರೆ.

ನಭಾ ಸ್ಟೈಲಿಶ್‌ ನಟಿ

ಮೊದಲಿನಿಂದಲೂ ನಭಾ ನಟೇಶ್‌ ಸಖತ್‌ ಸ್ಟೈಲಿಶ್‌ ನಟಿ. ಸಿನಿಮಾ ಮಾತ್ರವಲ್ಲ, ಒಂದಲ್ಲ ಒಂದು ಕಾನ್ಸೆಪ್ಟ್‌ ಫೋಟೋ ಶೂಟ್‌ಗಳಲ್ಲೂ ಕೂಡ ಸ್ಟೈಲಿಶ್‌ ಆಗಿಯೇ ಕಾಣಿಸಿಕೊಳ್ಳುತ್ತಿರುತ್ತಾರೆ. “ಸೀಸನ್‌ಗೆ ತಕ್ಕಂತೆ ಹಾಗೂ ಸಂದರ್ಭಕ್ಕೆ ತಕ್ಕಂತೆ ನಾನು ಫ್ಯಾಷನ್‌ ಹಾಗೂ ಸ್ಟೈಲ್‌ ಸ್ಟೇಟ್‌ಮೆಂಟ್‌ ಅಳವಡಿಸಿಕೊಳ್ಳುತ್ತೇನೆ. ಬೇಕೆಂದಲ್ಲಿ ಬದಲಿಸುತ್ತೇನೆ” ಎನ್ನುವ ನಭಾ ನಟೇಶ್‌ ಬ್ಯೂಟಿ ಕಾನ್ಶಿಯಸ್‌ ನಟಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಬೀಚ್‌ಸೈಡ್‌ ಸ್ಟೈಲ್‌ ಸ್ಟೇಟ್‌ಮೆಂಟ್‌

ಕೋಲ್ಡ್‌ ಶೋಲ್ಡರ್‌, ಫ್ರಿಲ್‌ ಸ್ಲೀವ್‌ ಮಿನಿ ವೀ ನೆಕ್‌ಲೈನ್‌ ಇರುವ ಫ್ಲೋರಲ್‌ ಫ್ರಾಕ್‌ನೊಂದಿಗೆ ವೈಟ್‌ ಫಂಕಿ ಸನ್‌ಗ್ಲಾಸ್‌ ಹಾಗೂ ವೈಟ್‌ ರೆಗ್ಯುಲರ್‌ ಟೀ ಶೇಪ್‌ ಸ್ಯಾಂಡಲ್‌ ಧರಿಸಿರುವ ನಟಿ ನಭಾ ನಟೇಶ್‌ ಬಾಲಿಯ ಬೀಚ್‌ಸೈಡ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ತಕ್ಕಂತೆ ಸ್ಟೈಲಿಶ್‌ ಆಗಿ ಪೋಸ್‌ ನೀಡಿದ್ದಾರೆ. ಬೀಚ್‌ನ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಹೊಂದುವಂತೆ ಆಕ್ಸೆಸರಿಲೆಸ್‌ ಆಗಿದ್ದು, ಸ್ನೇಹಿತೆಯರೂ ಕೂಡ ಇದೇ ಸ್ಟೈಲ್‌ಸ್ಟೇಟ್‌ಮೆಂಟ್‌ಗೆ ಸಾಥ್‌ ನೀಡಿದ್ದಾರೆ. ಇನ್ನೊಂದು ದಿನ ಇನ್ನೊಂದು ಡಿಫರೆಂಟ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ಸೈ ಎಂದಿದ್ದು, ಗಿಗ್ನಂ ಸ್ಮಾಲ್‌ ಚೆಕ್ಸ್‌ ಪ್ರಿಂಟ್ಸ್‌ನ ಕಾಲರ್‌ ಹಾಗೂ ಫ್ರಿಲ್‌ ಇರುವಂತಹ ಬ್ಲಾಕ್‌ ಮತ್ತು ವೈಟ್‌ ಕಟೌಟ್‌ ಫ್ರಾಕ್‌ ಧರಿಸಿ ಬಾಲಿ ಸುತ್ತಿದ್ದಾರೆ.

ಫ್ಯಾಷೆನಬಲ್‌ ನಭಾ

ಕನ್ನಡ ಚಿತ್ರಗಳಲ್ಲಿ ನಟಿಸುವಾಗಲೂ ಅಷ್ಟೇ! ಡಿಸೈನರ್‌ವೇರ್‌ಗಳ ಬಗ್ಗೆ ಸಖತ್‌ ಕಾನ್ಶಿಯಸ್‌ ಆಗಿರುವ ನಭಾ ನಟೇಶ್‌, ಮಿನಿ ಸ್ಕರ್ಟ್‌ನಿಂದ ಹಿಡಿದು ಸೀರೆಯವರೆಗೂ ತಮ್ಮದೇ ಆದ ಫ್ಯಾಷನ್‌ ಸ್ಟೇಟ್‌ಮೆಂಟ್‌ಗಳನ್ನು ಪಾಲಿಸುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Holiday Fashion | ಬಂತು ದಸರಾ ಹಾಲಿಡೇ ಫ್ಯಾಷನ್‌

Exit mobile version