ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಟ್ರೀಟ್ ಫ್ಯಾಷನ್‌ನಲ್ಲಿ ಇದೀಗ ಇಂಡೋ-ವೆಸ್ಟರ್ನ್ ಶೈಲಿಯ ಸೀರೆ ಎಂಟ್ರಿ ನೀಡಿದೆ ಎಂದರೆ ಅಚ್ಚರಿಯಾಗಬಹುದು. ಆದರೂ ಇದು ನಿಜ. ಎಲ್ಲರಿಗೂ ಸ್ಟ್ರೀಟ್ ಫ್ಯಾಷನ್‌ನಲ್ಲಿ ಸೀರೆ ಉಡಬಹುದೇ ಎಂಬ ಪ್ರಶ್ನೆ ಕಾಡುವುದು ಸಹಜ. ಆದರೆ, ಅದನ್ನು ಪ್ರಯೋಗಾತ್ಮಕವಾಗಿ ಉಟ್ಟು ಟ್ರೆಂಡ್ ಸೆಟ್ಟರ್ ಆಗಿದ್ದಾರೆ ಬಾಲಿವುಡ್ ನಟಿ ಕರೀಷ್ಮಾ ತನ್ನಾ. ಹೌದು. ಬೂಸಾನ್‌ನ ಬೀದಿಗಳಲ್ಲಿ ಸೀರೆಯುಟ್ಟು ಓಡಾಡುತ್ತಾ ಫೋಟೋಶೂಟ್ ಮಾಡಿಸಿಕೊಂಡಿರುವ ನಟಿಯ ಈ ಸೀರೆ ಸ್ಟೈಲಿಂಗ್ ಇದೀಗ ಫ್ಯಾಷನ್ ಪ್ರಿಯರನ್ನು ಸೆಳೆದಿದೆ. ಇಂಡೋ-ವೆಸ್ಟರ್ನ್ ಸ್ಟೈಲ್‌ನಲ್ಲಿ ವಿಭಿನ್ನವಾಗಿ ದೇಸಿ ಸ್ಟೈಲ್‌ನಲ್ಲಿ ಕಾಣಿಸಿಕೊಂಡದ್ದು, ಇದೀಗ ಫ್ಯಾಷನ್‌ಲೋಕದ ಸುದ್ದಿಯಾಗಿದೆ (Star Saree Fashion).
ಸೆಲೆಬ್ರೆಟಿ ಸೀರೆ ಜಾದೂ
ನೋಡಲು ಸಿಂಪಲ್ ಎಂದೆನಿಸುವ ಈ ಸೀರೆ, ಸೆಲೆಬ್ರೆಟಿಗಳಿಗಾಗಿ ಸೀರೆಗಳನ್ನು ಪೂರೈಸುವ ಪ್ರತಿಷ್ಠಿತ ಬ್ರಾಂಡ್‌ನದ್ದು. ಆದರೆ, ಅತಿ ದುಬಾರಿ. ನೋಡಲು ಮಾತ್ರ ಸಿಂಪಲ್ ಸ್ಟ್ರೈಪ್ಸ್ ಪ್ರಿಂಟ್ಸ್ ಇರುವಂತೆ ಕಂಡರೂ ಇದು ಜೆಜೆ ವಲಯಾ ಮಲ್ಟಿಕಲರ್ಡ್ ಸಿಲ್ಕ್ ಕ್ರೆಪ್ ಶೆವ್ರಾನ್ ಪ್ರಿಂಟೆಡ್ ಸೀರೆ. ಕನಿಷ್ಠ ಎಂದರೂ 80 ಸಾವಿರ ರೂ.ಗಳಿಗೂ ಹೆಚ್ಚು ಬೆಲೆ ಹೊಂದಿದೆ. ಹಾಗೆಂದು ಸಾಮಾನ್ಯ ಮಹಿಳೆ ಈ ರೀತಿಯ ಸ್ಟೈಲಿಂಗ್ ಮಾಡಲು ಸಾಧ್ಯವಿಲ್ಲ ಎಂದೇನಿಲ್ಲ! ಇದೇ ರೀತಿ ರಿಪ್ಲಿಕಾ ಸೀರೆಗಳಲ್ಲಿ ಫ್ಯಾಷನ್ ರೂಲ್ಸ್ ಫಾಲೋ ಮಾಡಿದಲ್ಲಿ ಥೇಟ್ ಸೆಲೆಬ್ರೆಟಿಯಂತೆ ಕಾಣಬಹುದು ಎನ್ನುತ್ತಾರೆ ಸ್ಟೈಲಿಸ್ಟ್ಸ್.
ಸೆಲೆಬ್ರೆಟಿ ಸ್ಟೈಲಿಸ್ಟ್ ಸುಕೃತಿ ಗ್ರೋವರ್ ಸ್ಟೈಲಿಂಗ್‌ನಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿರುವ ನಟಿ ಕರೀಷ್ಮಾ ತನ್ನಾರಂತೆಯೇ ಫ್ಯಾಷನ್ ರೂಲ್ಸ್ ಫಾಲೋ ಮಾಡಿದಲ್ಲಿ ಸಾಮಾನ್ಯ ಸ್ತ್ರೀಯರು ಕೂಡ ಸಾಮಾನ್ಯ ಸೀರೆಯಲ್ಲೆ ಈ ರೀತಿ ಸುಂದರವಾಗಿ ಕಾಣಿಸಿಕೊಳ್ಳಬಹುದು ಎನ್ನುವ ಸೆಲೆಬ್ರೆಟಿ ಸ್ಟೈಲಿಸ್ಟ್ ರಿಯಾ, ಇದಕ್ಕಾಗಿ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.
ಸೆಲೆಬ್ರೆಟಿ ಲುಕ್‌ಗಾಗಿ ಒಂದಿಷ್ಟು ಫ್ಯಾಷನ್ ರೂಲ್ಸ್ ಫಾಲೋ ಮಾಡಿ:
- ಸೀರೆ ಅಗಲವಾಗಿ ಹರಡುವಂತಿರಬಾರದು, ಹಾಗೆಯೇ ಫ್ಲೋ ಆಗುವಂತಹ ಸೀರೆಯನ್ನು ಆಯ್ಕೆ ಮಾಡಿ.
- ಇದೀಗ ಇದೇ ಬಗೆಯ ಸಾಕಷ್ಟು ರಿಪ್ಲೀಕಾ ಸೀರೆಗಳು ದೊರೆಯುತ್ತವೆ. ಆಯ್ಕೆ ಮಾಡಿ.
- ಸ್ಲಿಮ್ ಆಗಿರುವವರಿಗೆ ಈ ಲುಕ್ ಹೊಂದುತ್ತದೆ.
- ಸ್ಯಾಂಡಲ್ ಬದಲು ಹೈ ಹೀಲ್ಸ್ ಹಾಫ್ ಶೂ ಚೂಸ್ ಮಾಡಿ.
- ಬ್ಲಾಕ್ ಶೇಡ್ನ ಸನ್ಗ್ಲಾಸ್ ಧರಿಸಿ.
- ಸೊಂಟಕ್ಕೆ ಲೆದರ್ ಬೆಲ್ಟ್ ಅಥವಾ ಬಕಲ್ ಬೆಲ್ಟ್ ಧರಿಸಿ.
- ಎಥ್ನಿಕ್ ಮೇಕಪ್ ಮಾಡುವುದು ಬೇಡ.
- ಕಿವಿಗೆ ಹ್ಯಾಂಗಿಂಗ್ಸ್ ಧರಿಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Kids Sunglasses Fashion: ಚಿಣ್ಣರ ಸ್ಟೈಲಿಂಗ್‌ಗೂ ಬಂತು ಕಲರ್‌ಫುಲ್ ಫಂಕಿ ಸನ್ ಗ್ಲಾಸ್