ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ರೆಡ್ ಸೀರೆಗೆ ಎಥ್ನಿಕ್ ಪೆಪ್ಲಮ್ ಬ್ಲೌಸ್ ಧರಿಸಿ ಟ್ರೆಂಡ್ ಸೆಟ್ ಮಾಡಿದ್ದಾರೆ. ಸದಾ ಒಂದಲ್ಲ ಒಂದು ವಿನೂತನ ಬಗೆಯ ಸೀರೆ ಉಡುವ ಶಿಲ್ಪಾ ಶೆಟ್ಟಿ, ಈ ಬಾರಿ ತಾವು ಉಟ್ಟ ಸೀರೆಗೆ ಡಿಫರೆಂಟ್ ಲುಕ್ ನೀಡಿದ್ದು, ಇಂಡೋ-ವೆಸ್ಟರ್ನ್ ಶೈಲಿಯ ಟಾಪ್ ಕಾನ್ಸೆಪ್ಟ್‌ನ ಪೆಪ್ಲಮ್ ಬ್ಲೌಸನ್ನು ಎಥ್ನಿಕ್ ಲುಕ್‌ನಲ್ಲಿ ಡಿಫರೆಂಟ್ ಆಗಿ ಡ್ರೆಪಿಂಗ್ ಮಾಡಿ ಧರಿಸಿದ್ದಾರೆ. ಇದು ಸೀರೆ ಪ್ರಿಯರ ಮನ ಗೆದ್ದಿದೆ.
ಏನಿದು ಪೆಪ್ಲಮ್ ಬ್ಲೌಸ್?
ಮೂಲತಃ ಗ್ರೀಸ್‌ನ ಫ್ಯಾಷನ್‌ನಲ್ಲಿದ್ದ ಈ ಪೆಪ್ಲಮ್ ಬ್ಲೌಸ್ ಇಂದು ಪ್ರಪಂಚದಾದ್ಯಂತ ಇರುವ ಫ್ಯಾಷನ್ ಡಿಸೈನರ್‌ಗಳ ಕೈಗಳಲ್ಲಿ ಸಿಲುಕಿ ನಾನಾ ರೂಪ ಪಡೆದುಕೊಂಡಿದೆ. ನೋಡಲು ಟಾಪ್‌ನಂತಿರುವ ಈ ಬ್ಲೌಸ್ ಧರಿಸುವ ಸೊಂಟದ ಭಾಗದಲ್ಲಿ ಅಂದರೆ, ವೇಸ್ಟ್‌ಲೈನ್‌ನಲ್ಲಿ ಮಾತ್ರ ರಫಲ್ ಇಲ್ಲವೇ ಫ್ರಿಲ್ ರೀತಿಯ ವಿನ್ಯಾಸ ಮಾಡಲಾಗಿರುತ್ತದೆ. ಇದು ಬೆಲ್ಲಿಯ ಮೇಲಿನ ತನಕ ಇರುತ್ತದೆ. ಇದೀಗ ಸೀರೆಯ ಜೊತೆ ಧರಿಸುವಾಗ ಈ ಬ್ಲೌಸ್ ನಮ್ಮ ರಾಷ್ಟ್ರದ ಎಥ್ನಿಕ್ ಅಟೈರ್‌ಗೆ ಸೂಟ್ ಆಗುವಂತೆ ಡಿಸೈನ್ ಮಾಡಲಾಗುತ್ತದೆ. ಇನ್ನು ರಾಜಸ್ಥಾನದಲ್ಲಿ ಧರಿಸುವ ಗಾಗ್ರಗೂ ಇದೇ ರೀತಿಯ ಬ್ಲೌಸ್ ಧರಿಸುವುದನ್ನು ನಾವು ಕಾಣಬಹುದು. ಆದರೆ, ಇದು ಅದಲ್ಲ, ಸ್ಟಿಚ್ಚಿಂಗ್ ಹಾಗೂ ವಿನ್ಯಾಸ ಬದಲಿರುತ್ತದೆ ಎನ್ನುತ್ತಾರೆ ಫ್ಯಾಷನ್ ಡಿಸೈನರ್ ದೇವಿಕಾ.
ಬದಲಾದ ರೂಪದಲ್ಲಿ ಪೆಪ್ಲಮ್ ಬ್ಲೌಸ್ ವಿನ್ಯಾಸ
ಪೆಪ್ಲಮ್ ಬ್ಲೌಸ್ ಸೀರೆ ಕಾನ್ಸೆಪ್ಟ್ ಇಂದಿನದಲ್ಲ, ಮೊದಲಿನಿಂದಲೂ ಇದೆ. ಆಗಾಗ್ಗೆ ಶೋಗಳು ಹಾಗೂ ತಾರೆಯರು ಧರಿಸಿದ ನಂತರ ಮತ್ತೊಮ್ಮೆ ಬೆಳಕಿಗೆ ಬರುತ್ತದೆ. ಕೆಲಕಾಲ ಟ್ರೆಂಡಿಯಾಗುತ್ತದೆ. ಇದೀಗ ಅದೇ ರೀತಿ ನಟಿ ಶಿಲ್ಪಾ ಶೆಟ್ಟಿಯೂ ಕೂಡ ಈ ಮಾದರಿಯ ಬ್ಲೌಸ್ ಧರಿಸಿರುವುದು ಸುದ್ದಿಯಾಗಿದೆ. ಈ ಫ್ಯಾಷನ್ ಮರೆತಿದ್ದ, ಸೀರೆ ಪ್ರಿಯರು ಮತ್ತೊಮ್ಮೆ ಆಕರ್ಷಿತರಾಗಿದ್ದಾರೆ. ಪರಿಣಾಮ, ಶಿಲ್ಪಾ ಶೆಟ್ಟಿಯವರ ಈ ಮಾನೋಕ್ರೋಮ್ ಪೆಪ್ಲಮ್ ಸೀರೆ ಟ್ರೆಂಡ್ ಸೆಟ್ ಮಾಡುವಲ್ಲಿ ಯಶಸ್ವಿಯಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ರಿಯಾ.
ಮಾನೋಕ್ರೋಮ್ ರೆಡ್ ಪೆಪ್ಲಮ್ ಸೀರೆಯ ವಿಭಿನ್ನ ಡ್ರೆಪಿಂಗ್
ಶಿಲ್ಪಾ ಶೆಟ್ಟಿಯವರು ಉಟ್ಟಿರುವ ಈ ಒಂದೇ ಶೇಡ್‌ನ ಮಾನೋಕ್ರೋಮ್ ಕೆಂಪು ಬಣ್ಣದ ಸೀರೆ ಡ್ರೆಪಿಂಗ್ ವಿಭಿನ್ನವಾಗಿರುವುದು ಸೀರೆಯ ಲುಕ್ಕನ್ನು ಬದಲಿಸಿದೆ. ಗಾಗ್ರದಂತೆ ಧರಿಸಿರುವ ಈ ಡ್ರೆಪಿಂಗ್‌ಗೆ ಪೆಪ್ಲಮ್ ಬ್ಲೌಸ್ ಸಾಥ್ ನೀಡಿದೆ. ಸಾಫ್ಟ್ ಸಿಲ್ಕ್‌ನ ಈ ಸೀರೆಯ ಬಿಳಿ ಬಣ್ಣದ ಥ್ರೆಡ್ ವಿನ್ಯಾಸದ ಬಾರ್ಡರ್ ಇದಕ್ಕೆ ಮ್ಯಾಚ್ ಆಗುವಂತಹ ಫ್ಲೋರಲ್ ಪ್ರಿಂಟೆಡ್ ಪೆಪ್ಲಮ್ ಬ್ಲೌಸ್ ಡಿಫರೆಂಟ್ ಆಗಿ ಬಿಂಬಿಸಿದೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sandalwood Star Fashion: ಮನಮೋಹಕ ಕಟೌಟ್ ಡ್ರೆಸ್‌ನಲ್ಲಿ ನ್ಯೂ ಸೀಸನ್ ವೆಲ್‌ಕಮ್ ಮಾಡಿದ ನಟಿ ನಿಮಿಕಾ ರತ್ನಾಕರ್