ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗ್ಲಾಮರಸ್ ಬಾಲಿವುಡ್ ನಟಿ ಅಹನಾ ಕುಮ್ರಾ ಗೋವಾ ಬೀಚ್‌ನಲ್ಲಿ ಮೈ ತುಂಬಾ ಸೀರೆಯುಟ್ಟು ಬೀಚ್‌ನಲ್ಲಿ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಇದು ಸೀರೆ ಎಂದರೆ ಮೂಗು ಮುರಿಯುವ ಫ್ಯಾಷನ್ ಪ್ರೇಮಿಗಳಲ್ಲಿ ಅಚ್ಚರಿ ಮೂಡಿಸಿದೆ. ಎಲ್ಲರಂತೆ ವರ್ಷಾಚಾರಣೆಗೆಂದು ಗೋವಾಗೆ ತೆರಳಿದ್ದ ಅಹನಾ, ಡಿಫರೆಂಟ್ ಆಗಿ ನ್ಯೂ ಇಯರ್ ಆರಂಭಿಸುವ ಸಲುವಾಗಿ ಸಾದಾ ಹಸಿರು ಸೀರೆಯನ್ನು ಉಟ್ಟು ಬೀಚ್‌ನಲ್ಲೆಲ್ಲ ನಲಿದಾಡಿ, ಸೀರೆಯ ಫ್ಯಾಷನ್‌ಗೆ ಹೊಸ ಭಾಷ್ಯ ಬರೆದಿದ್ದಾರೆ.
ಜುಹಿ ಅಲಿ ಸ್ಟೈಲಿಂಗ್ ಹಾಗೂ ಸೃಷ್ಟಿ ಬಿರ್ಜೆಯವರ ಮೇಕಪ್‌ನಲ್ಲಿ ಹಸಿರು ಸೀರೆಯಲ್ಲಿ ಆಕರ್ಷಕವಾಗಿ ಕಾಣುತ್ತಿರುವ ಇವರ ಟ್ರೆಡಿಷನಲ್ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ನಟಿ ಅಹನಾ ಸೀರೆ ಪ್ರೇಮ
ಅಂದಹಾಗೆ, ಅಹನಾ ಕುಮ್ರಾ ಸೀರೆ ಧರಿಸುವುದು ತೀರಾ ಕಡಿಮೆ. ಆಗೊಮ್ಮೆ ಈಗೊಮ್ಮೆ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಸುದ್ದಿಯಾಗುತ್ತಾರೆ. ಸೀರೆ ನನಗಿಷ್ಟ ಎನ್ನುವ ಅವರು ಸೀರೆಯಲ್ಲಿ ನಾನು ಮಾತ್ರವಲ್ಲ, ಯಾವ ಹೆಣ್ಣುಮಗಳಾದರೂ ಸುಂದರಿಯಾಗಿ ಕಾಣಿಸಬಲ್ಲಳು ಸಾಕಷ್ಟು ಬಾರಿ ಫ್ಯಾಷನ್ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಸೀರೆ ಕೂಡ ಗ್ಲಾಮರಸ್ ಆಗಿ ಕಾಣಬಲ್ಲದು ಆದರೆ, ಒಂದಿಷ್ಟು ಮಾರ್ಪಾಡು ಮಾಡಬೇಕಾಗುತ್ತದೆ ಎಂದು ಕಳೆದ ಬಾರಿ ಸೀರೆ ಧರಿಸಿದಾಗ ಫ್ಯಾಷನ್ ಪ್ರೇಮಿಗಳಿಗೆ ಟಿಪ್ಸ್ ಕೂಡ ನೀಡಿದ್ದರು.
ಬಿಂದಾಸ್ ಅಹನಾ ಫ್ಯಾಷನ್ ಸ್ಟೇಟ್‌ಮೆಂಟ್ಸ್
ಸದಾ ಗ್ಲಾಮರಸ್ ಔಟ್‌ಫಿಟ್‌ಗಳಲ್ಲೆ ಕಾಣಿಸಿಕೊಳ್ಳುವ ಇವರ ಫ್ಯಾಷನ್ ಸ್ಟೇಟ್‌ಮೆಂಟ್ ಬಿಂದಾಸ್ ಕೆಟಗರಿಗೆ ಸೇರಿದೆ. ನೋಡಲು ಹಾಟ್ ಲುಕ್‌ನಲ್ಲೆ ಸದಾ ಕಾಣುವ ಅಹನಾ, ಸೋಷಿಯಲ್ ಮೀಡಿಯಾದಲ್ಲೂ ಅಪಾರ ಫ್ಯಾಷನ್ ಅಭಿಮಾನಿಗಳನ್ನು ಹೊಂದಿದ್ದಾರೆ. ಆಗಾಗ್ಗೆ ತಮ್ಮ ಡಿಫರೆಂಟ್ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ಹೇಳಿಕೊಳ್ಳುತ್ತಿರುತ್ತಾರೆ. ಟಿಪ್ಸ್ ಕೂಡ ನೀಡುತ್ತಾರೆ.
ಸೆಲೆಬ್ರಿಟಿ ಫ್ಯಾಷನ್ ಐಕಾನ್
ಅಹನಾ ಲ್ಯಾಕ್ಮೆ ಫ್ಯಾಷನ್ ವೀಕ್ ಸೇರಿದಂತೆ ಸಾಕಷ್ಟು ಫ್ಯಾಷನ್ ಶೋಗಳಲ್ಲಿ ಸೆಲೆಬ್ರಿಟಿ ಶೋ ಸ್ಟಾಪರ್ ಆಗಿ ವಾಕ್ ಕೂಡ ಮಾಡಿದ್ದಾರೆ. ಜೊತೆಗೆ ಸಾಕಷ್ಟು ಜಾಹೀರಾತುಗಳಲ್ಲೂ ಕಾಣಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ, ವೆಬ್ ಸೀರಿಸ್‌ನಲ್ಲಿ ತಮ್ಮ ಬಿಂದಾಸ್ ನಟನೆಯ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಸದಾ ಒಂದಲ್ಲ ಒಂದು ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್ ಮೂಲಕ ಫ್ಯಾಷನ್ ಪ್ರಿಯರ ಗಮನ ಸೆಳೆಯುತ್ತಿರುತ್ತಾರೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star Winter Fashion | ವಾಷಿಂಗ್ಟನ್ನಲ್ಲಿ ನಟಿ ನೇಹಾ ಶೆಟ್ಟಿಯ ಕ್ಲಾಸಿ ವಿಂಟರ್ ಫ್ಯಾಷನ್ ಝಲಕ್