ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್ ನಟಿ ಹಿತಾ ಚಂದ್ರಶೇಖರ್ ಸದ್ಯ ಮಸ್ಕಟ್ ಪ್ರವಾಸದಲ್ಲಿದ್ದು, ಅಲ್ಲಿನ ಹವಾಮಾನಕ್ಕೆ ತಕ್ಕಂತೆ ಕೂಲ್ ಟ್ರಾವೆಲ್ ಸ್ಟೈಲ್ ಸ್ಟೇಟ್‌ಮೆಂಟ್‌ಗೆ ಸೈ ಎಂದಿದ್ದಾರೆ. ಲೇಯರ್ ಲುಕ್‌ಗೆ ಅಲ್ಪ ವಿರಾಮ ಹಾಕಿ, ಆಕರ್ಷಕ ಬಿಂದಾಸ್ ಸಿಂಪಲ್ ಟ್ರಾವೆಲ್ ಔಟ್‌ಫಿಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
ನಟಿ ಹಿತಾ ಸ್ಯಾಂಡಲ್‌ವುಡ್ ಮಾತ್ರವಲ್ಲ, ಸಾಕಷ್ಟು ಹಿಂದಿ ವೆಬ್ ಸೀರೀಸ್ ಹಾಗೂ ಜಾಹೀರಾತುಗಳಲ್ಲಿ ನಟಿಸಿದ್ದು, ಸದಾ ಒಂದಲ್ಲ ಒಂದು ಬಗೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುತ್ತಾರೆ. ಇದರೊಂದಿಗೆ ಆಗಾಗ ತಮ್ಮ ಫ್ಯಾಷನ್ ಹಾಗೂ ಸ್ಟೈಲ್ ಸ್ಟೇಟ್‌ಮೆಂಟ್‌ಗಳ ಮೂಲಕವೂ ಫ್ಯಾಷನ್ ಪ್ರಿಯರನ್ನು ಸೆಳೆಯುತ್ತಲೇ ಇರುತ್ತಾರೆ. ಪತಿ, ನಟ ಕಿರಣ್ ಜೊತೆ ಮುಂಬಯಿ-ಬೆಂಗಳೂರು ಎರಡೂ ಕಡೆಯ ನಟನಾ ಕ್ಷೇತ್ರದಲ್ಲೂ ಬ್ಯುಝಿಯಾಗಿದ್ದಾರೆ. ನಟಿ ಹಿತಾ ತಮ್ಮ ಮದುವೆಯಲ್ಲಿ ಆಕರ್ಷಕ ಡಿಸೈನರ್‌ವೇರ್‌ಗಳ ಮೂಲಕ ಫ್ಯಾಷನ್ ಪ್ರಿಯರ ಗಮನ ಸೆಳೆದಿದ್ದನ್ನು ಇಂದಿಗೂ ಮರೆಯುವ ಹಾಗಿಲ್ಲ.
ಹವಾಮಾನಕ್ಕೆ ತಕ್ಕಂತೆ ಹಿತಾ ಔಟ್‌ಫಿಟ್ಸ್
ಸ್ಟಾರ್ ದಂಪತಿಗಳಾದ ನಟಿ ಹಿತಾ ಹಾಗೂ ಪತಿ ಕಿರಣ್, ಇಬ್ಬರೂ ಸಿಂಪಲ್ ಔಟ್‌ಫಿಟ್‌ನಲ್ಲೆ ರೋಡ್ ಜರ್ನಿ ಸಂಭ್ರಮಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಸಾಕಷ್ಟು ಔಟ್‌ಫಿಟ್‌ಗಳ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಕೂಡ ಮಾಡಿಕೊಂಡಿದ್ದಾರೆ. ಪ್ರಯಾಣದ ಆರಂಭದಲ್ಲಿ ಸಿಂಪಲ್ ಫ್ರಾಕ್ ಹಾಗೂ ಶರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಹಿತಾ, ಲೇಯರ್ ಲುಕ್ ಸೈಡಿಗಿರಿಸಿ ಸಿಂಪಲ್ ಬ್ರಿಥೆಬಲ್ ಔಟ್‌ಫಿಟ್‌ಗಳಲ್ಲಿ ಸುತ್ತಾಡಿದ್ದಾರೆ. ಇನ್ನು ಮಸ್ಕಟ್‌ನ ವಾಡಿ ಡೇಕಾದಲ್ಲಂತೂ ತಮ್ಮದೇ ಆದ ಫಂಕಿ ಲುಕ್‌ನಲ್ಲಿ ಓಡಾಡಿದ್ದಾರೆ. ಇನ್ನು ಮ್ಯೂಸಿಯಂ ಆಫ್ ಒಮಾನ್ ವ್ಯಾಪ್ತಿ ಪ್ರದೇಶದಲ್ಲಿ ಸುತ್ತಾಡುವಾಗ ಆಕರ್ಷಕ ಸಿಂಗಲ್ ಶೋಲ್ಡರ್ ಕ್ರಾಪ್ ಟಾಪ್ ಹಾಗೂ ನ್ಯಾರೋ ಜೀನ್ಸ್ ಪ್ಯಾಂಟ್‌ನ ಗ್ಲಾಮರಸ್ ಔಟಿಂಗ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಸ್ಟೈಲಿಸ್ಟ್ ರಿಯಾ ಪ್ರಕಾರ, ಹಿತಾ ಟ್ರಾವೆಲ್ ಫ್ಯಾಷನ್ ಸಖತ್ ಆಗಿ ಕ್ಯಾರಿ ಮಾಡಿದ್ದಾರಂತೆ.
ಸನ್‌ಗ್ಲಾಸ್ ಪ್ರಿಯೆ
ಈ ಪ್ರಯಾಣದಲ್ಲಿ ಹಿತಾರ ಇಡೀ ಔಟ್‌ಫಿಟ್‌ಗೆ ಸಾಥ್ ನೀಡಿರುವುದು ಸನ್‌ಗ್ಲಾಸ್. ಅಲ್ಲಿನ ಬಿಸಿಲ ಝಳಕ್ಕೆ ಧರಿಸಿರುವ ಔಟ್‌ಫಿಟ್‌ಗಳಿಗೆಲ್ಲಾ ಸನ್‌ಗ್ಲಾಸ್ ಮ್ಯಾಚ್ ಆಗಿದೆ. ಒಟ್ಟಿನಲ್ಲಿ, ಅವರ ಕೂಲ್ ಔಟ್‌ಫಿಟ್‌ಗಳು ಕೆಲಕಾಲ ಲೇಯರ್ ಲುಕ್‌ಗೆ ವಿರಾಮ ಹಾಕುವಂತೆ ಮಾಡಿವೆ. ಹಿತಾಳ ಟ್ರಾವೆಲ್ ಲುಕ್ಕನ್ನು ಆಕರ್ಷಕವಾಗಿಸಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Star Fashion | ಲಂಡನ್‌ನಲ್ಲಿ ನಟಿ ಕಾವ್ಯಾ ಶೆಟ್ಟಿ ಸ್ಟ್ರೀಟ್ ಫ್ಯಾಷನ್ ಸ್ಟೇಟ್‌ಮೆಂಟ್