Site icon Vistara News

Star travel Fashion | ಮಿಕ್ಸ್‌ ಮ್ಯಾಚ್‌ ವಿಂಟರ್‌ ಲುಕ್‌

Star travel Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಅಸ್ಸಾಂನ ಪ್ರವಾಸದಲ್ಲಿರುವ ನಟಿ ಮಾನ್ವಿತಾ ಕಾಮತ್‌, ಕಾಜಿರಂಗಾ ನ್ಯಾಷನಲ್‌ ಪಾರ್ಕ್ ಫಾರೆಸ್ಟ್‌ ಸಫಾರಿಯಲ್ಲಿ ಮಿಕ್ಸ್‌ ಮ್ಯಾಚ್‌ ವಿಂಟರ್‌ ಫಂಕಿ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದರಲ್ಲೇನು ವಿಶೇಷ ಎನ್ನುತ್ತೀರಾ! ವಿಶೇಷವಲ್ಲದಿದ್ದರೂ, ಪ್ರತಿಯೊಬ್ಬರು ಸಫಾರಿ ಲುಕ್‌ ಎಂದಾಕ್ಷಣಾ ರಫ್‌ ಹಾಗೂ ಟಫ್‌ ಲುಕ್‌ ನೀಡುವ ಕಾರ್ಗೋ ಪ್ಯಾಂಟ್ಸ್‌ , ಕ್ಯಾಮೌಫ್ಲೋಜ್‌ ಅಥವಾ ಮಿಲಿಟರಿ ಪ್ರಿಂಟ್ಸ್‌ ಇರುವ ಪ್ಯಾಂಟ್‌ ಅಥವಾ ಉಡುಪನ್ನು ಆಯ್ಕೆ ಮಾಡುತ್ತಾರೆ. ಇನ್ನುಸ್ಟಾರ್‌ ಎಂದಾಕ್ಷಾಣ ಅವರ ಡ್ರೆಸ್‌ಕೋಡ್‌ ಕೂಡ ಅವರಷ್ಟೇ ಪರ್ಫೆಕ್ಟ್‌ ಆಗಿರುತ್ತದೆ ಎಂದು ಎಲ್ಲರೂ ಅಂದುಕೊಳ್ಳುವುದು ಸಹಜ.

ಆದರೆ, ಮಾನ್ವಿತಾ ಅವರ ವಿಷಯದಲ್ಲಿ ಇದು ಉಲ್ಟಾ ಆಗಿತ್ತು. ಸಂದರ್ಭಕ್ಕೆ ಹೊಂದದ ಫಂಕಿ ಕೂಲ್‌ ವಿಂಟರ್‌ ಲುಕ್‌ ನಲ್ಲಿ ಕಾಣಿಸಿಕೊಳ್ಳುವ ಪರಿಸ್ಥಿತಿ ಅವರಿಗೆ ಎದುರಾಗಿತ್ತು. ಹೌದು. ವಿಂಟರ್‌ ಲುಕ್‌ಗೆ ಸಾಥ್‌ ನೀಡುವ ಲ್ಯಾವೆಂಡರ್‌ ಶೇಡ್‌ನ ಪುಲ್‌ ಓವರ್‌ಗೆ ಮನೆಯಲ್ಲಿ ಧರಿಸುವ ಟೆಡ್ಡಿಬೇರ್‌ ಪ್ರಿಂಟ್ಸ್‌ ಇರುವ ಪೈಜಾಮದಲ್ಲಿ ಕಾಣಿಸಿಕೊಳ್ಳುವ ಪರಿಸ್ಥಿತಿ ಎದುರಾಯಿತು.

ಆದರೆ ಅದನ್ನು ,ಮಿಕ್ಸ್‌ ಮ್ಯಾಚ್‌ ಮಾಡಿ ಫಂಕಿ ಲುಕ್‌ ನೀಡಿ ಮ್ಯಾನೇಜ್‌ ಮಾಡಿದೆ ಎಂದು ಖುದ್ದು ಮಾನ್ವಿತಾ ಅವರೇ ಹೇಳಿಕೊಂಡಿದ್ದಾರೆ. ಅವರು ಬೇಕಂತಲೆ ಈ ಔಟ್‌ಫಿಟ್‌ ಧರಿಸಲಿಲ್ಲವಂತೆ! ಮೊದಲೇ ಪ್ಲಾನ್‌ ಮಾಡಿದ್ದ ಕೆಲವು ಸಫಾರಿ ಔಟ್‌ಫಿಟ್‌ಗಳನ್ನು ಮರೆತು ಮನೆಯಲ್ಲೆ ಬಿಟ್ಟು ಬಂದಿದ್ದರ ಪರಿಣಾಮ, ಬೇರೆ ದಾರಿ ಇಲ್ಲದೇ ಸಫಾರಿ ಲುಕ್‌ ಬದಲಾಗಿ, ವುಲ್ಲನ್‌ ಪುಲ್‌ಓವರ್‌ ಹಾಗೂ ಟೆಡ್ಡಿಬೇರ್‌ ದೊಗಲೆ ಪ್ಯಾಂಟ್‌ ಧರಿಸಬೇಕಾಯಿತು ಎಂದಿದ್ದಾರೆ.

ಮಿಕ್ಸ್‌ ಮ್ಯಾಚ್‌ ಮಾಡಿದ್ದು ವರ್ಕೌಟ್‌ ಆಯ್ತು

ನಾನಂತೂ ಟ್ರಾವೆಲ್‌ಗೆಂದೇ ಸಾಕಷ್ಟು ಸೀಸನ್‌ಗೆ ಸೂಟ್‌ ಆಗುವಂತಹ ಡ್ರೆಸ್‌ಕೋಡ್‌ಗಳನ್ನು ಪ್ಯಾಕ್‌ ಮಾಡಿದ್ದೆ. ಗಡಿಬಿಡಿಯಲ್ಲಿ ಎಲ್ಲವನ್ನು ಪ್ಯಾಕ್‌ ಮಾಡಿದ್ದೇನೆ ಎಂದುಕೊಂಡುಬಿಟ್ಟೆ. ಇದರ ನಡುವೆ ನನ್ನ ಡ್ರೆಸ್‌ಗಳು ತುಂಬಿದ ಬ್ಯಾಗೇಜ್‌ ತೂಕ ೮ ಕೆ.ಜಿ ಎಕ್ಸ್‌ಟ್ರಾ ಆಗಿದ್ದಕ್ಕೂ ಏರ್‌ಪೋರ್ಟ್‌ನಲ್ಲಿ ಶುಲ್ಕ ಕೂಡ ಕಟ್ಟಿದೆ. ಇಷ್ಟಾಗಿಯೂ ಧರಿಸಲು ಪ್ಲಾನ್‌ ಮಾಡಿದ್ದ ಔಟ್‌ಫಿಟ್‌ಗಳನ್ನು ತರಲು ಮರೆತುಬಿಟ್ಟಿದ್ದೆ. ಕೊನೆಗೆ ಪುಲ್‌ಓವರ್‌ ಜೊತೆಗೆ ದೊಗಲೆಯಾಗಿರುವ ನೀಲಿಯ ಟೆಡ್ಡಿಬೇರ್‌ ಪೈಜಾಮವನ್ನು ಮಿಕ್ಸ್‌ ಮ್ಯಾಚ್‌ ಮಾಡಿ ಧರಿಸಿ ಮ್ಯಾನೇಜ್‌ ಮಾಡಿದೆ. ಅಬ್ಬಾ…ನೋಡಲು ಕೂಲಾಗಿ ಕಂಡಿತು. ಜತೆಗೆ ಸಫಾರಿಯಲ್ಲಿ ಆಕರ್ಷಕವಾಗಿಯೂ ಕಾಣಿಸಿತು ಎಂದು ಮಾನ್ವಿತಾ ಖುದ್ದು ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡು ಸಮರ್ಥಿಸಿಕೊಂಡಿದ್ದಾರೆ.

ಸ್ಟೈಲಿಸ್ಟ್‌ ಸಿಂಪಲ್‌ ಸಲಹೆ

ಟ್ರಾವೆಲಿಂಗ್‌ ಫ್ಯಾಷನ್‌ನಲ್ಲಿ ಈ ರೀತಿ ಗೊಂದಲಗಳು ಆಗುವುದು ಸಹಜ. ಆದಾಗ ಮಾನ್ವಿತರಂತೆ ಒಂದಿಷ್ಟು ವಿಷಯಗಳನ್ನು ಪಾಲಿಸಿ, ಮಿಕ್ಸ್‌ ಮ್ಯಾಚ್‌ ಮಾಡಿದಲ್ಲಿ ಆಕರ್ಷಕವಾಗಿ ಕಾಣಬಹುದು ಎಂದಿದ್ದಾರೆ ಸ್ಟೈಲಿಸ್ಟ್‌ ರಿಯಾ. ಅವರ ಪ್ರಕಾರ, ಟ್ರಾವೆಲ್‌ ಮಾಡುವಾಗ ಆದಷ್ಟೂ ಲೈಟ್‌ವೇಟ್‌ ಹಾಗೂ ಮಿಕ್ಸ್‌ ಮ್ಯಾಚ್‌ ಲೇಯರ್‌ ಲುಕ್‌ಗೆ ಸೈ ಎನ್ನುವುದು ಸರಿ ಎಂದು ಸಲಹೆ ನೀಡುತ್ತಾರೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Star Fusion Fashion | ಫಾತಿಮಾ ಸನಾ ಶೇಕ್‌ ಬ್ಯಾಕ್‌ಲೆಸ್‌ ಟಾಸೆಲ್ಸ್ ಕ್ರಾಪ್‌ ಬ್ಲೌಸ್‌

Exit mobile version