ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟ ಪ್ರತಾಪ್ ಸಿಂಹ ರೆಡ್ಡಿ ಮೂಲತಃ ಸಾಫ್ಟ್‌ವೇರ್ ಎಂಜಿನಿಯರ್, ಈಗಾಗಲೇ ೩ ಕನ್ನಡ ಸಿನಿಮಾ ಹಾಗೂ ೧ ತಮಿಳು ಸಿನಿಮಾದಲ್ಲಿ ನಟಿಸಿದ್ದಾರೆ. ಇವರ ಸ್ತಬ್ಧ ಕನ್ನಡ ಚಿತ್ರ ಈಗಾಗಲೇ ರಿಲೀಸ್‌ಗೆ ರೆಡಿಯಾಗಿದೆ. ೭ ಹೆಸರಿನ ಸಿನಿಮಾದಲ್ಲಿ ಅಭಿನಯಿಸಲು ಸಿದ್ಧರಾಗಿದ್ದಾರೆ. ಪುಸ್ತಕ ಓದುವುದು ಸೇರಿದಂತೆ ನಾನಾ ಉತ್ತಮ ಹವ್ಯಾಸಗಳನ್ನು ಹೊಂದಿರುವ ಇವರು ಈ ಬಾರಿಯ ವಿಸ್ತಾರದ ವೀಕೆಂಡ್ ಸ್ಟೈಲ್‌ನಲ್ಲಿ ತಮ್ಮ ಫ್ಯಾಷನ್ ಹಾಗೂ ಸ್ಟೈಲ್ ಕುರಿತಂತೆ ಮಾತನಾಡಿದ್ದಾರೆ.
ವಿಸ್ತಾರ: ನಟನಾಗಿರುವ ನಿಮ್ಮ ಫ್ಯಾಷನ್ ಸ್ಟೈಲ್‌ಸ್ಟೇಟ್‌ಮೆಂಟ್ ಇತರರಿಗಿಂತ ಭಿನ್ನ ಹೇಗೆ?
ಪ್ರತಾಪ್ ರೆಡ್ಡಿ: ನಟರು ಜನ ಇಷ್ಟಪಡುವಂತಹ ಫ್ಯಾಷನ್ ಸ್ಟೇಟ್‌ಮೆಂಟ್‌ನಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ. ನಾವು ಧರಿಸುವ ಕ್ಲಾತಿಂಗ್ ಹಾಗೂ ಆಕ್ಸೆಸರೀಸ್ ನಮ್ಮ ಫ್ಯಾಷನನ್ನು ಎತ್ತಿ ಹಿಡಿಯುತ್ತದೆ. ಆಯಾ ಸಂದರ್ಭಕ್ಕೆ ತಕ್ಕಂತೆ ಧರಿಸುವ ಡ್ರೆಸ್‌ಕೋಡ್ ಮೇಲೆ ನನ್ನ ಫ್ಯಾಷನ್ ಸ್ಟೇಟ್‌ಮೆಂಟ್ ನಿರ್ಧಾರವಾಗುತ್ತದೆ. ಆತ್ಮವಿಶ್ವಾಸ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಬಿಂಬಿಸುತ್ತದೆ.
ವಿಸ್ತಾರ: ನಿಮ್ಮ ಸ್ಟೈಲ್ ಸ್ಟೇಟ್‌ಮೆಂಟ್ ಏನು?
ಪ್ರತಾಪ್ ರೆಡ್ಡಿ: ಒಂದು ಪದ ಮಾತನಾಡದೆ ನಮ್ಮ ಪರ್ಸನಾಲಿಟಿ ಹಾಗೂ ಅಟಿಟ್ಯೂಡ್ ನಮ್ಮ ಸ್ಟೈಲ್ ಸ್ಟೇಟ್‌ಮೆಂಟನ್ನು ನಿರ್ಧರಿಸುತ್ತವೆ. ಇಡೀ ಡ್ರೆಸ್‌ಕೋಡನ್ನು ಅತ್ಯುತ್ತಮವಾಗಿ ಬಿಂಬಿಸಲು ಇವು ಸಹಕಾರಿ ಎನ್ನಬಹುದು. ಇದಕ್ಕೆ ಪೂರಕ ಎಂಬಂತೆ, ಬ್ಲಾಕ್ ಹಾಗೂ ಆರೆಂಜ್ ಶೇಡ್‌ನ ಉಡುಪುಗಳು ನನ್ನ ಫೇವರೇಟ್ ಲಿಸ್ಟ್‌ನಲ್ಲಿವೆ.
ವಿಸ್ತಾರ: ನಟನಾಗಿರುವ ನೀವು ಟ್ರೆಂಡ್ ಸೆಟ್ಟರ್ ಆಗಲು ಬಯಸುತ್ತೀರಾ ಅಥವಾ ಟ್ರೆಂಡ್ ಫಾಲೋವರ್ ಆಗಲು ಇಷ್ಟಡುತ್ತೀರಾ?
ಪ್ರತಾಪ್ ರೆಡ್ಡಿ: ಟ್ರೆಂಡ್ ಸೆಟ್ಟರ್ ಆಗಲು ಬಯಸುತ್ತೀನಿ. ಲೆಜೆಂಡ್ ನಟರು ಸ್ಫೂರ್ತಿ ನೀಡಬಹುದು. ಅದನ್ನು ಸ್ವಾಗತಿಸುತ್ತೇನೆ. ಆದರೆ, ನಾನಂತೂ ಸದಾ ಟ್ರೆಂಡ್ ಸೆಟ್ಟರ್ ಆಗಲು ಬಯಸುತ್ತೇನೆ. ಮತ್ತೊಬ್ಬರ ಫ್ಯಾಷನ್ ಫಾಲೋ ಮಾಡುವುದಕ್ಕಿಂತ ನಮ್ಮ ಫ್ಯಾಷನ್ ಸೆಟ್ ಮಾಡುವುದು ಖುಷಿ ನೀಡುತ್ತದೆ. ಅದರಲ್ಲೂ ಯಂಗ್‌ಸ್ಟರ್ಸ್‌ಗೆ ಪ್ರಿಯವಾಗುವಂತಹ ಫ್ಯಾಷನ್ ಸೆಟ್ ಮಾಡಲು ಬಯಸುತ್ತೇನೆ.
ವಿಸ್ತಾರ: ಈ ವರ್ಷ ನೀವು ಫಾಲೋ ಮಾಡುತ್ತಿರುವ ಫ್ಯಾಷನ್ ರೆಸಲ್ಯೂಷನ್ ಯಾವುದು?
ಪ್ರತಾಪ್ ರೆಡ್ಡಿ: ನನಗೆ ಯಾವಾಗಲೂ ನಮ್ಮ ಸಂಸ್ಕೃತಿ ಬಿಂಬಿಸುವಂತಹ ಫ್ಯಾಷನ್ ಮೇಲೆ ಒಲವಿದೆ. ಆದರೆ, ಸೀಸನ್‌ಗೆ ತಕ್ಕಂತೆ ನಾವು ಬದಲಾಗಬೇಕಲ್ಲ! ಹಾಗಾಗಿ ಸ್ಟೈಲಿಶ್ ಲುಕ್ ನೀಡುವ ಕಂಫರ್ಟಬಲ್ ಫ್ಯಾಷನ್‌ವೇರ್‌ಗಳಿಗೆ ಹೆಚ್ಚಾಗಿ ಆದ್ಯತೆ ನೀಡುತ್ತೇನೆ. ಇವುಗಳೊಂದಿಗೆ ಸುಂದರ ಮುಗುಳು ನಗೆ ಇದ್ದರೇ ಸಾಕು. ಫ್ಯಾಷನ್ ಲುಕ್ ಕಂಪ್ಲೀಟ್ ಆದಂತೆ! ಏನನ್ನುತ್ತೀರಾ!
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Sandalwood Star fashion: ಫ್ಯಾಷನ್ ಹಬ್ ಪ್ಯಾರಿಸ್‌ನಲ್ಲಿ ನಟಿ ಮೇಘನಾ ಗಾಂವ್ಕರ್ ಆಕರ್ಷಕ ಲೇಯರ್ ಲುಕ್