Site icon Vistara News

Stars Fashion | ಬ್ಯೂಟಿ ಅವಾರ್ಡ್ಸ್‌ ರೆಡ್‌ಕಾರ್ಪೆಟ್‌: ಬಿಂದಾಸ್‌ ಗ್ಲಾಮರಸ್‌ ಡಿಸೈನರ್‌ವೇರ್‌ಗಳಲ್ಲಿ ತಾರೆಯರು

Stars Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಾಲಿವುಡ್‌ ತಾರೆಯರಾದ ದೀಪಿಕಾ ಪಡುಕೋಣೆ, ಕೃತಿ ಸನೂನ್‌, ಶಿಫಾಲಿ, ಜಾಹ್ನವಿ ಕಪೂರ್‌, ಮಿಥಾಲಿ, ಎವ್ಲಿನ್‌, ನರ್ಗೀಸ್‌ ಫರ್ಕಿ, ಅಹಾಮಾ, ಹೀನಾ ಖಾನ್‌, ತೇಜಸ್ವಿನಿ ಪ್ರಕಾಶ್‌, ರಕುಲ್‌ ಪ್ರೀತ್‌ ಸಿಂಗ್‌, ಕಾರ್ತಿಕ್‌ ಆರ್ಯನ್‌, ರಾಜ್‌ಕುಮಾರ್‌ ಯಾದವ್‌ ಸೇರಿದಂತೆ ನಾನಾ ಬಾಲಿವುಡ್‌ ತಾರೆಯರು, ಫ್ಯಾಷನ್‌ ಕ್ಷೇತ್ರದ ಸೆಲೆಬ್ರೆಟಿಗಳು ಹಾಗೂ ಬ್ಯೂಟಿ ಪ್ರಪಂಚದ ತಜ್ಞರು ಮುಂಬಯಿಯಲ್ಲಿ ನಡೆದ ಎಲ್ಲೆ ಬ್ಯೂಟಿ ಆವಾರ್ಡ್ ಸಮಾರಂಭದ ರೆಡ್‌ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿ ನೆರೆದಿದ್ದವರ ಮನ ಸೆಳೆದರು.

ರಕುಲ್‌ ಪ್ರೀತ್‌ ಸಿಂಗ್‌, ನಟಿ

ಅಂದಹಾಗೆ, ಇಲ್ಲಿ ಭಾಗವಹಿಸಿದ ತಾರೆಯರು ಒಬ್ಬರಿಗಿಂತ ಒಬ್ಬರು ಡಿಫರೆಂಟ್‌ ಆಗಿ ಕಾಣಿಸುತ್ತಿದ್ದರು. ಒಬ್ಬೊಬ್ಬರದು ಒಂದೊಂದು ಬಗೆಯ ಉಡುಗೆಗಳು. ಕೆಲವರದ್ದು ಗ್ಲಾಮರಸ್‌ ಉಡುಪಾದರೆ, ಇನ್ನು ಕೆಲವರದ್ದು ಹಾಟ್‌ ಲುಕ್‌ನಿಂದ ಸೆಳೆದಿದ್ದವು. ಮತ್ತೆ ಕೆಲವರದ್ದು ಕಣ್ಣರಳಿಸಿ ನೋಡುವಂತಹ ಡಿಸೈನ್‌ಗಳಿಂದ ಕೂಡಿದ್ದವು. ಒಟ್ಟಾರೆ, ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್‌ನ ಸೆಲೆಬ್ರಿಟಿಗಳ ರೆಡ್‌ಕಾರ್ಪೆಟ್‌ ಎಂಟ್ರಿಯಲ್ಲಿ ಕಲರ್‌ಫುಲ್‌ ಔಟ್‌ಫಿಟ್‌ಗಳು ಲೈಮ್‌ಲೈಟ್‌ನಲ್ಲಿ ಹೈಲೈಟಾದವು.

ತಾರೆಯರ ಭಿನ್ನ-ವಿಭಿನ್ನ ಔಟ್‌ಫಿಟ್ಸ್‌

ನಟಿ ದೀಪಿಕಾ ಪಡುಕೋಣೆ ವೈಟ್‌ ಶರ್ಟ್, ಬ್ಲಾಕ್‌ ಎಲಾಸ್ಟಿಕ್‌ ಬೆಲ್ಟ್‌ ಹೊಂದಿರುವಂತಹ ಐವರಿ ನೆಟ್ಟೆಡ್‌ ಅಂಬ್ರೆಲ್ಲಾ ಸ್ಕರ್ಟ್‌ನಲ್ಲಿ ಕಂಡು ಬಂದರೆ, ಕೃತಿ ಸನೂನ್‌ ಬ್ಲ್ಯೂ ಶೇಡ್‌ನ ಸ್ಯಾಟೀನ್‌ ಕಟ್‌ಔಟ್‌ ಡ್ರೆಸ್‌ನಲ್ಲಿದ್ದರು. ಹೀನಾಖಾನ್‌ ಸೀ ಬ್ಲ್ಯೂ ಶೆಡ್‌ನ ಉಡುಪಲ್ಲಿದ್ದರು. ಜಾಹ್ನವಿ ಕಪೂರ್‌ ಎಂದಿನಂತೆ ಅವರ ಪ್ರಿಯವಾದ ಶೌಲ್ಡರ್‌ಲೆಸ್‌ ಸಿಕ್ವೀನ್ಸ್‌ ಶೈಲಿಯ ಡೀಪ್‌ ಪ್ಲಂಗಿಂಗ್‌ ನೆಕ್‌ಲೈನ್‌ ಇರುವ ಮೆರ್ಮೈಡ್‌ ಗೌನ್‌ನಲ್ಲಿ ರೆಡ್‌ಕಾರ್ಪೆಟ್‌ ತುಳಿದರು. ರಕುಲ್‌ ಪ್ರೀತ್‌ ಸಿಂಗ್‌ ಕೂಡ ಬ್ಲಾಕ್‌ ಶೇಡ್‌ನ ವೇಸ್ಟ್‌ಲೈನ್‌ನಲ್ಲಿ ಬೋ ಇರುವಂತಹ ಶೋಲ್ಡರ್‌ಲೆಸ್‌ ಸ್ಲಿಟ್‌ ಗೌನ್‌ನಲ್ಲಿ ಕಾಣಿಸಿಕೊಂಡರು. ನಟಿ ಶಿಫಾಲಿ ಡಿಸೆಂಟ್‌ ವೆಲ್ವೆಟ್‌ ಡಿಸೈನರ್‌ ಕಮೀಜ್‌ನಲ್ಲಿ ಆಗಮಿಸಿದರು. ಎವ್ಲೀನ್‌ ಎಲ್ಲರಿಗಿಂತ ವಿಭಿನ್ನ ಕಾಸ್ಟ್ಯೂಮ್‌ನಲ್ಲಿಹಾಟ್‌ ಆಗಿ ಎಂಟ್ರಿ ಕೊಟ್ಟರು. ಡೀಪ್‌ ವೀ ನೆಕ್‌ ಇರುವಂತಹ ಲೆಬಾನೀಸ್‌-ಬ್ರೇಝಿಲಿಯನ್‌ ಬ್ರಾಂಡ್‌ನ ವೈಟ್‌ ಶೋಲ್ಡರ್‌ಲೆಸ್‌ಫ್ರಾಕ್‌ ಟಾಪ್‌ ಶೈಲಿಯ ಅಂಬ್ರೆಲ್ಲಾ ನೆಟ್ಟೆಡ್‌ ಗ್ಲಾಮರಸ್‌ ನೀ ಲೆಂತ್‌ ಉಡುಪಿನಲ್ಲಿ ಕಾಣಿಸಿಕೊಂಡು ನೆರೆದಿದ್ದವರ ಹುಬ್ಬೇರಿಸಿದರು. ಕಾರ್ಯಕ್ರಮದಲ್ಲಿ ಸೆಲೆಬ್ರಿಟಿ ಡಿಸೈನರ್‌ ಮಸಾಬಾ ಕೂಡ ಹಾಜರಿದ್ದರು.

ನಟರ ಸಾದಾ ಪ್ಯಾಂಟ್‌ ಸೂಟ್‌

ನಟ ರಾಜ್‌ಕುಮಾರ್‌ ಯಾದವ್‌ ವೈಟ್‌ ಮಾನೋಕ್ರೋಮ್‌ ಬ್ಲೇಝರ್‌ನಂತೆ ಕಾಣುವ ಪ್ಯಾಂಟ್‌ ಸೂಟ್‌ನಲ್ಲಿ ಎಂಟ್ರಿ ಕೊಟ್ಟರೇ, ಕಾರ್ತಿಕ್‌ ಆರ್ಯನ್‌ ಪೀಕಾಕ್‌ ಬ್ಲ್ಯೂ ಗ್ರೀನ್‌ ಶೇಡ್‌ ಮಿಶ್ರಣದ ಶೇಡ್‌ ಇರುವಂತಹ ಪ್ಯಾಂಟ್‌ ಸೂಟ್‌ನಲ್ಲಿ ಪೋಸ್‌ ನೀಡಿದರು. ಒಟ್ಟಾರೆ, ಸೆಲೆಬ್ರಿಟಿಗಳ ಈ ರೆಡ್‌ಕಾರ್ಪೆಟ್‌ ಉಡುಗೆಗಳು ಸೋ‍ಷಿಯಲ್‌ಮೀಡಿಯಾದಲ್ಲೂ ಹವಾ ಎಬ್ಬಿಸಿದವು.

ಈದನ್ನೂ ಓದಿ| Celebrity Fashion Corner | ಒರಿಗಾಮಿ ಡಿಸೈನಿಂಗ್‌ ಪರಿಚಯಿಸಿದ ವಿದ್ಯಾ ವಿವೇಕ್‌

Exit mobile version